ಯೋಗ ಪರಂಪರೆ

 

ಯೋಗ ಪರಂಪರೆ ಯಲ್ಲಿ ನಮಗೆ ಸಾಧಾರಣವಾಗಿ ನಾಲ್ಕು ಯೋಗಗಳಿವೆಯೆಂದು-ಅವು 'ಕರ್ಮಯೋಗ' ಎಂದು, 'ಭಕ್ತಿಯೋಗ' ಎಂದು, 'ರಾಜಯೋಗ' ಎಂದು, 'ಜ್ಞಾನಯೋಗ' ಎಂದು-ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಸಾಧಾರಣವಾದ ವಿಜ್ಞಾನ ಎಲ್ಲಾ ಸಮಯದಲ್ಲೂ ನಿಜವಾದ ವಿಜ್ಞಾನ ಆಗಿರಬಹುದು, ಆಗದೇನೂ ಇರಬಹುದು. ಇಲ್ಲಿ ಮಾತ್ರ ಅದು 'ನಿಜವಾದ ವಿಜ್ಞಾನ'ವಲ್ಲ; ಏಕೆಂದರೆ, 'ಭಕ್ತಿಯೋಗ' ಎಂಬುವುದು ನಿಜಕ್ಕು ಇಲ್ಲವೇ ಇಲ್ಲ. ಕೃಷ್ಣನ ವಿಗ್ರಹವನ್ನು ಪೂಜಿಸುವುದು, ಜೀಸಸ್ ಕ್ರೈಸ್ಟ್ ಚಿತ್ರಪಟವನ್ನು ಪೂಜಿಸುವುದು ಎಂಬುವುದು 'ಭಕ್ತಿಯೋಗ'ವಾಗಿ ನಡೆಯುತ್ತಿದೆ, ಆದರೆ, ಅದು ಒಂದು ಭಕ್ತಿ ಮೂರ್ಖತಾ ವಿಶೇಷವೇ ವಿನಹ, 'ಭಕ್ತಿಯೋಗ' ಮಾತ್ರ ಅಲ್ಲವೇ ಅಲ್ಲ. ನಿಜಕ್ಕೂ ಹೇಳಬೇಕಾದರೇ, 'ಭಕ್ತಿಯೋಗ' ಎಂಬುವುದು ಇಲ್ಲವೇ ಇಲ್ಲ.

ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ

ಎಂದು ಹೇಳಲಾಗಿದೆ. ಅಂದರೆ, 'ಸ್ವಸ್ವರೂಪ' ದಿಂದ ಅನುಸಂಧಾನ ಮಾಡಿಕೊಳ್ಳುವುದೇ 'ಭಕ್ತಿಯೋಗ' ಎಂದರು. ಆದ್ದರಿಂದ, ಇಲ್ಲಿ ಅದು ಇನ್ನೊಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ನಮ್ಮ ಸ್ವಸ್ವರೂಪವೇನೊ ಎಂಬುದನ್ನು ಮುಂಚಿತವಾಗಿ ತಿಳಿದುಕೊಂಡು ಅದರ ಜೊತೆ ಐಕ್ಯವಾಗಿರುವುದೇ ಭಕ್ತಿ ಎಂದು ಹೇಳಲಾಗಿದೆ. ಆದ್ದರಿಂದ, ಪ್ರಜೆಗಳು ಸಾಮಾನ್ಯವಾಗಿ ತಿಳಿದಿರುವ ಆ ಭಕ್ತಿಯೋಗ ಎಂಬುವುದು ಇಲ್ಲವೇ ಇಲ್ಲವೆಂದು ಪಿರಮಿಡ್ ಧ್ಯಾನ ಪ್ರಪಂಚಕ್ಕೆಲ್ಲಾ, ಪಿರಮಿಡ್ ಜ್ಞಾನ ಪ್ರಪಂಚಕ್ಕೆಲ್ಲಾ ಗೊತ್ತಿದೆ. ಸೃಷ್ಟಿಯಲ್ಲಿರುವ ಯೋಗಿಗಳೆಲ್ಲರಿಗೂ ತಿಳಿದಿದೆ. ಆದರೆ, ಮಾನವರಿಗೆ ಮಾತ್ರ ತಿಳಿಯದು, ತಿಳಿಸಬೇಕಾದ ಜವಾಬ್ದಾರಿ ಪಿರಮಿಡ್ ಮಾಸ್ಟರ್‌ಗಳೆಲ್ಲರಿಗೂ ಇದೆ. ಆದ್ದರಿಂದ, ಈ ನಾಲ್ಕು ಯೋಗಗಳಲ್ಲಿ 'ಭಕ್ತಿಯೋಗ' ಎಂಬುವುದು ತೆಗೆದರೆ ಇನ್ನು ಉಳಿದಿರುವುದು 'ಕರ್ಮಯೋಗ', 'ಜ್ಞಾನಯೋಗ', 'ರಾಜಯೋಗ'.

Go to top