"ಮೆಡಿಟೇಷನ್ ಈಜ್ ಆಲ್ ಇನ್ ಆಲ್"

 

"ಮೆಡಿಟೇಷನ್ ಈಜ್ ಆಲ್ ಇನ್ ಆಲ್"

* ಪ್ರೈಮರಿ ಹಂತ - ಧ್ಯಾನ ಮಾಡುತ್ತಿರುತ್ತೇವೆ; ಮನಸ್ಸು ಆಗಾಗ ಚಲಿಸುತ್ತದೆ.

* ಮಿಡಲ್ ಹಂತ - ಎರಡು ಗಂಟೆಗಳು ಧ್ಯಾನದಲ್ಲಿದ್ದರೂ ಮನಸ್ಸು ಚಲಿಸುವುದಿಲ್ಲ.

* ಹೈಸ್ಕೂಲ್ ಹಂತ - ಧ್ಯಾನದಲ್ಲಿ ಅನೇಕಾನೇಕ ಅನುಭವಗಳು, ಮೂರನೆಯ ಕಣ್ಣು ತೆರೆದುಕೊಳ್ಳುವುದು.

* ಕಾಲೇಜ್ ಹಂತ - ಮಹರ್ಷಿ. ಮುಖ್ಯವಾದ ಗತಜನ್ಮಗಳು ನೋಡಿಕೊಳ್ಳುವುದು.

* ಯೂನಿವರ್ಸಿಟಿ ಹಂತ - ಬ್ರಹ್ಮರ್ಷಿ. ಎಲ್ಲಾ ತಾನೇ ಎಂದು ತಿಳಿದುಕೊಳ್ಳುವುದು.

"’ಶ್ವಾಸ ’ ಲಾಭಗಳು ಅನಂತ. ಒಂದು ಸಂಗೀತ ಸಾಧನವಿದೆ...ಆದರೆ, ಆ ವ್ಯಕ್ತಿಗೆ ಸಂಗೀತ ಬರುವುದಿಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಒಂದು ಕೊಳಲು ಇದೆ. ಒಬ್ಬ ವ್ಯಕ್ತಿಗೆ ಸಂಗೀತ ಅನುಭವ ಇದ್ದಿದ್ದರೆ ಅದೇ ಕೊಳಲಿಂದ ಅನೇಕ ಸಂಗೀತ ಸ್ವರಗಳು, ಮಧುರವಾದ ಸಂಗೀತ ಕೇಳಬಹುದು. ಹಾಗೆಯೇ ಪ್ರತಿಯೊಬ್ಬ ಮನುಷ್ಯನ ಹತ್ತಿರ ಉಸಿರು/ಶ್ವಾಸ ಇದೆ...ಅದರ ಜೊತೆ ಐಕ್ಯವಾದರೆ ಆ ಮನುಷ್ಯ ಹಂತಹಂತವಾಗಿ ಧ್ಯಾನಿ, ಋಷಿ, ಮಹರ್ಷಿ, ರಾಜರ್ಷಿ, ಬ್ರಹ್ಮರ್ಷಿಯಾಗಿ ತಯಾರಾಗುತ್ತಾನೆ"

"ಸಾಕ್ರೆಟೀಸ್, ಜೀಸಸ್ ಮುಂತಾದ ಮಹಾತ್ಮರು ಗುರಿ ತಲುಪಿದ್ದಾರೆ. ಆದ್ದರಿಂದ, ವಿಷಕೊಟ್ಟರೂ, ರಕ್ತ ಸುರಿಯುವ ಹಾಗೆ ಹಿಂಸಿಸಿದರೂ ಆನಂದವಾಗಿ ಅನುಭವಿಸಿದರು ... ಅಲ್ಲವೇ."

Go to top