"ಪಿರಮಿಡ್ ಶಕ್ತಿ"

 

ಪಿರಮಿಡ್‌ಗಳಲ್ಲಿ ನಾವು ಧ್ಯಾನಮಾಡಿಕೊಳ್ಳಬೇಕು. ಧ್ಯಾನಮಾಡಿಕೊಳ್ಳಲು ಪಿರಮಿಡ್‌ಗಳನ್ನು ಕಟ್ಟಬೇಕು.

ಸಮಯ ಸಿಕ್ಕಿದಾಗೆಲ್ಲಾ ಪಿರಮಿಡ್ ಶಕ್ತಿಯನ್ನು ಉಪಯೋಗಿಸಿಕೊಳ್ಳುವುದು ಎಂಬುವುದು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿಗಳಿಗೆ ಮುಖ್ಯವಾದ ಅಂಶ (ಪಾಯಿಂಟ್).

'ಗ್ರೇಟ್ ಪಿರಮಿಡ್' ಎಂಬುವುದು ಈಜಿಪ್ಟ್‌ನಲ್ಲಿ ಧ್ಯಾನಕ್ಕಾಗಿಯೇ ನಿರ್ಮಿಸಲಾಗಿದೆ. ಇತರ ಲೋಕ ವಾಸಿಗಳು ಧ್ಯಾನಕ್ಕಾಗಿಯೇ ಅವುಗಳನ್ನು ನಿರ್ಮಿಸಿದರು. ಕರ್ನೂಲು ಬುದ್ಧಾ ಪಿರಮಿಡ್ ಧ್ಯಾನಕೇಂದ್ರ ಎಂಬುವುದು ಮೊಟ್ಟಮೊದಲನೆಯ ಭಾರತದೇಶದ ಪಿರಮಿಡ್ ಧ್ಯಾನ ಕೇಂದ್ರ . ಈಗ ಅನೇಕ ಪಿರಮಿಡ್ ಧ್ಯಾನ ಕೇಂದ್ರಗಳು ಬಂದಿವೆ. ಮತ್ತು ಪಿರಮಿಡ್‌ಗಳನ್ನು ಕ್ಯಾಪ್‌ಗಳ ಹಾಗೆ ಮಾಡಿಕೊಂಡು ಅದರಲ್ಲಿ ನಾವು ಧ್ಯಾನ ಮಾಡಿಕೊಳ್ಳಬಹುದು. 'ರೂಫ್‌ಟಾಪ್' ನಲ್ಲಿ ನಾವು ಪಿರಮಿಡ್ ನಿರ್ಮಿಸಿಕೊಳ್ಳಬಹುದು.

ದೊಡ್ಡ ದೊಡ್ಡ ಧ್ಯಾನ ಕೇಂದ್ರಗಳೆಲ್ಲಾ ಪಿರಮಿಡ್ ಆಕಾರಗಳಲ್ಲೇ ಬರಬೇಕು. ಪಿರಮಿಡ್ ಶಕ್ತಿ ಕುರಿತು ಅನೇಕ ಒಳ್ಳೆ ಪುಸ್ತಕಗಳು ಬಂದಿವೆ. ಪ್ರಪಂಚ ವ್ಯಾಪ್ತಿಯಾಗಿ ಇದು 'ಪಿರಮಿಡ್ ಯುಗ' ... ಮತ್ತೆ ಇದು 'ಧ್ಯಾನ ಯುಗ' ಇದು 'ಆನಾಪಾನಸತಿ' ಯುಗ ಮತ್ತು ಇದು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮಾಸ್ಟರ್‌ಗಳ ಯುಗ; ಆದ್ದರಿಂದ, ತಪ್ಪದೇ ಪಿರಮಿಡ್‌ಗಳನ್ನೇ ನಿರ್ಮಿಸಬೇಕು.

ಇನ್ನುಮುಂದೆ ಬರುವ ಕಾಲಗಳಲ್ಲಿ ಮಂದಿರಗಳು ಇರುವುದಿಲ್ಲ, ದೇವಾಲಯಗಳು ಇರುವುದಿಲ್ಲ. ಮಸೀದಿಗಳು ಇರುವುದಿಲ್ಲ, ಚರ್ಚುಗಳು ಇರುವುದಿಲ್ಲ ... ಪಿರಮಿಡ್‌ಗಳೇ ಇರುತ್ತವೆ. ಇದನ್ನು ತಿಳಿದುಕೊಳ್ಳಿ. ಎಷ್ಟು ಬೇಗ 'ಪಿರಮಿಡ್ ಸಂಸ್ಕೃತಿ' (ಕಲ್ಚರ್) ಪ್ರವೇಶಿಸಿದರೆ ಅಷ್ಟು ಬೇಗ ನಾವು ನಿಜವಾದ ಆಧ್ಯಾತ್ಮಿಕ ಶಾಸ್ತ್ರಜ್ಞರಾಗುತ್ತೇವೆ.

Go to top