"ಉತ್ತಮೋತ್ತಮಗಳು ಉಚ್ಛ್ವಾಸ ನಿಶ್ವಾಸಗಳು"

 

"ಉತ್ತಮೋತ್ತಮರು ಉಚ್ಛಾ ಸ ನಿಶ್ವಾಸ

ಲಯಬದ್ಧವಾಗಿ ಸಾಗುವುದನ್ನು ತಿಳಿದುಕೊಂಡು ತಾನು ಬ್ರಹ್ಮನಾಗುವುದು

ಮುಸುಕಿನಲ್ಲಿ ಶಿವನು ಅಡಗಿದ್ದಾನಯ್ಯಾ

ಕಾಳಿಕಾಂಬ ಹಂಸ ಕಾಳಿಕಾಂಬ"

 

ಪ್ರಿಯ ಸ್ನೇಹಿತರೇ, ಇನ್ನೂ ಅರ್ಥವಾಗಲಿಲ್ಲವೇ ವೀರಬ್ರಹ್ಮೇಂದ್ರ ಸ್ವಾಮಿ ಏನು ಹೇಳಿದರೆಂದು. ನಮ್ಮ ದೇಹದಲ್ಲಿರುವ ಆ ದಿವ್ಯ ತೇಜಸ್ಸು ಏನಿದೆಯೊ ಅದೇ ಶ್ವಾಸ - ಅದೇ ನಮ್ಮ ಉಚ್ಛ್ವಾಸ, ನಿಶ್ವಾಸ. ಆ ತೀರ್ಥವನ್ನು ಸೇವಿಸಬೇಕು. ಅಲ್ಲಿ ನಾವು ತಲುಪಬೇಕು. ನಾವು ಮುಕ್ತಿಹೊಂದುವ ಮಾರ್ಗ ಅಲ್ಲೇ ಇದೆ.

 

ಉತ್ತಮೋತ್ತಮರು ಉಚ್ಛ್ವಾಸ ನಿಶ್ವಾಸಗಳು. ನಮ್ಮ ’ ದೇಹವೇ ದೇವಾಲಯ ’; ’ ಜೀವನೇ ದೇವನು ’; ’ ಆತ್ಮೇ ಪರಬ್ರಹ್ಮ ’ವಲ್ಲವೇ. ’ ಶ್ವಾಸವೇ ಗುರುವು ’ ಎನ್ನುತ್ತಿದ್ದಾನೆ. ಉತ್ತಮೋತ್ತಮರು ಉಚ್ಛ್ವಾಸ ನಿಶ್ವಾಸಗಳು-ನಮ್ಮ ಶರೀರದಲ್ಲೇ ಇವೆ. ಅದೇ ಒಳ್ಳೆಯ ತೀರ್ಥ, ಆ ತೀರ್ಥವನ್ನೇ ಸೇವಿಸೋಣ. ಎರಡು ಕಣ್ಣುಗಳನ್ನೂ ಮುಚ್ಚಿಕೊಳ್ಳೋಣ. ಶ್ವಾಸದ ಮೇಲೆ ಗಮನವಿಡೋಣ. ಇದನ್ನೇ ಗೌತಮ ಬುದ್ಧನು ’ ಆನಾಪಾನಸತಿ ’ ಎಂದಿದ್ದಾನೆ. ವೀರಬ್ರಹ್ಮೇಂದ್ರಸ್ವಾಮಿ ಉಚ್ಛ್ವಾಸ ನಿಶ್ವಾಸ ಲಯಬದ್ಧವಾಗಿ ಸಾಗುವುದನ್ನು ತಿಳಿದುಕೊಂಡು ತಾನು ಬ್ರಹ್ಮನಾಗುವುದು ಎಂದನು. ಯಾವಾಗ ನಾವು ’ಶ್ವಾಸದ ಮೇಲೆ ಗಮನ’ ಇಡುತ್ತೇವೆಯೋ ತಕ್ಷಣ ಚಿತ್ತವೃತ್ತಿಗಳ ನಿರೋಧವಾಗಿ ಮನಸ್ಸು ಶೂನ್ಯವಾಗಿ, ಮಹಾಪರಿಶೂನ್ಯವನ್ನು ಹೊಂದಿ ನಾವು ಆತ್ಮಪದಾರ್ಥವೆಂದೂ, ಅನಂತರ ಎಲ್ಲಾ ಕಡೆ ವ್ಯಾಪಿಸಿರುವ ಸರ್ವವ್ಯಾಪ್ತವಾದ ಆತ್ಮಪದಾರ್ಥ ನಾವೇ ಎಂದು ತಿಳಿದುಕೊಳ್ಳುತ್ತೇವೆ. ಅದೇ ’ ಅಹಂ ಬ್ರಹ್ಮಾಸ್ಮಿ ’ ಮೈಡಿಯರ್ ಫ್ರೆಂಡ್ಸ್, ಮೈಡಿಯರ್ ಮಾಸ್ಟರ್ಸ್, ಅಂಡ್ ಮೈಡಿಯರ್ ಗಾಡ್ಸ್, ಶಿವನು ಈ ಶ್ವಾಸದ ಮುಸುಕಿನಲ್ಲೇ ಇದ್ದಾನೆ. ಆ ಶ್ವಾಸದ ಜೊತೆ ಕೂಡಿ ಇದ್ದರೆ, ಮುಸುಕು ತೊಲಗಿಸಿದರೆ ’ಜೀವನೇ ಶಿವನು’ ಎಂದು ನಾವು ತಿಳಿದುಕೊಳ್ಳುತ್ತೇವೆ. ’ ಅಹಂ ಬ್ರಹ್ಮಾಸ್ಮಿ ’; ’ ಶಿವೋಹಂ ’ ಎಂದು ತಿಳಿದುಕೊಳ್ಳುತ್ತೇವೆ.

 

ಉತ್ತಮೋತ್ತಮರು. ಉತ್ತಮರೇ ಅಲ್ಲ ಉತ್ತಮರಲ್ಲಿ ಉತ್ತಮರು. ಆ ಮುಸುಕು ತೆಗೆಯಬೇಕು, ಆ ಬುರಖಾ ತೆಗೆಯಬೇಕು. ಪರದೆ ತೆಗೆಯಲಾಗುವುದಿಲ್ಲವೇ ? ಅಂದರೆ, ಯಾರೋ ಬಂದು ತೆಗೆಯುವುದಿಲ್ಲ. ನಮ್ಮ ಪರದೆಯನ್ನು, ನಮ್ಮ ಬುರಖಾವನ್ನು, ನಮ್ಮ ಮುಸುಕನ್ನು ನಾವೇ ತೆಗೆಯಬೇಕು. ಬೆಳಗ್ಗೆಯಾಗಲೀ, ಮಧ್ಯಾಹ್ನವಾಗಲೀ, ಸಾಯಂಕಾಲವಾಗಲೀ, ರಾತ್ರಿಯಾಗಲೀ ನಮ್ಮ ಮನೆಯಲ್ಲೇ ನಾವು ಕುಳಿತುಕೊಂಡು ಪರದೆಯನ್ನು ಸರಿಸಬೇಕು. ಮೈಡಿಯರ್ ಫ್ರೆಂಡ್ಸ್, ಯಾವ ಶ್ರೀಶೈಲಕ್ಕೋ ಹೋಗಬೇಕಾಗಿಲ್ಲ, ಯಾವ ತಿರುಪತಿಗೂ ಹೋಗಬೇಕಾಗಿಲ್ಲ. ಯಾವ ಮಕ್ಕಾ ಮಸೀದಿಗಾಗಲೀ, ಯಾವ ಕಾಶೀಗಾಗಲೀ, ಯಾವ ಜೆರೂಸಲೆಂಗಾಗಲೀ ಹೋಗಬೇಕಾಗಿಲ್ಲ.

 

ನಮ್ಮ ಎರಡು ಕಣ್ಣುಗಳನ್ನೂ ಮುಚ್ಚಿಕೊಂಡು, ಎರಡು ಕೈಗಳನ್ನೂ ಜೋಡಿಸಿಕೊಂಡು ಉಚ್ಛ್ವಾಸ ನಿಶ್ವಾಸಗಳು, ಉತಮೋತ್ತಮವಾದ ಉಚ್ಛ್ವಾಸ ನಿಶ್ವಾಸಗಳು, ಇದೇ ಅಲ್ಲವೇ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಅವರ ಮೂಲ ಸಿದ್ಧಾಂತ. ನೋಡಿದಿರಾ, ಎಲ್ಲಾದರೂ ಸತ್ಯ ಒಂದೇ." ಏಕಂ ಸತ್ ವಿಪ್ರಾ ಬಹುಧಾ ವದಂತಿ". ಇದನ್ನೇ ಅನ್ನಮಾಚಾರ್ಯರವರು "ಉಸಿರಿನಲ್ಲಿ ದೇವರಿದ್ದಾನೆ ಯೋಗೀಂದ್ರರಿಗೆ" ಎಂದನು. " ಶರೀರದ ಉಸಿರಿನಲ್ಲಿ ಗಣಿ ಇದೆ" ಎಂದರಲ್ಲವೇ. ಆದ್ದರಿಂದ, "ಉತ್ತಮೋತ್ತಮವಾದ ಉಚ್ಛ್ವಾಸ ನಿಶ್ವಾಸ ಆಗು ಹೋಗುಗಳನ್ನು ಗಮನಿಸಿ ನಾವು ಬ್ರಹ್ಮರಾಗೋಣ" ಎಂದು ವೀರಬ್ರಂಹ್ಮೆಂದ್ರಸ್ವಾಮಿ ನಮಗೆ ಬಾಳೇಹಣ್ಣು ಸುಲಿದು ಬಾಯಲ್ಲಿಟ್ಟ ಹಾಗೆ ವಿವರಿಸಿ ಸುಲಭ ರೀತಿಯಲ್ಲಿ ತಿಳಿಸಿದರು. ಇದು ತುಂಬಾ ಮುಖ್ಯವಾದ ಪದ್ಯ ಮೈಡಿಯರ್ ಫ್ರೆಂಡ್ಸ್.

Go to top