"ಆನಂದ ಶಾಸ್ತ್ರ"

* ಪಿರಮಿಡ್ ಧ್ಯಾನ

* ಬ್ರಾಹ್ಮಣ ಭೋಜನ

* ಕರ್ತವ್ಯ ದೀಕ್ಷೆ

* ಎಂಜಾಯ್‌ಮೆಂಟ್ ಸೈನ್ಸ್

 

"ಪಿರಮಿಡ್ಧ್ಯಾನ"

 

ಮನಶ್ಶಾಂತಿ ಇಲ್ಲದೆ ಆತ್ಮಕ್ಕೆ ಆನಂದವಿಲ್ಲ. ಮನಶ್ಶಾಂತಿ ಇಲ್ಲದವನಿಗೆ ಆನಂದ ಎಲ್ಲಿದೆ ? ಎಂತಹ ಧನವಂತರಾದರೂ, ಶ್ರೀಮಂತರಾದರೂ ಹಣ ಎಂಬುವುದು ಆತ್ಮಕ್ಕೆ ಸಾಸಿವೆ ಕಾಳಿನಷ್ಟು ಸಹ ಶಾಂತಿಯನ್ನು ಕೊಡಲಾರದು. ಅರ್ಥಮನರ್ಥ ಎಂದರಲ್ಲವೇ ಶಂಕರಾಚಾರ್ಯರು. ಸೂಜಿಯ ರಂಧ್ರದಿಂದ ಒಂದು ಒಂಟೆಯಾದರೂ ತೂರಬಹುದೇನೊ ಆದರೆ, ಒಬ್ಬ ಶ್ರೀಮಂತನು ಮಾತ್ರ ದೇವರ ರಾಜ್ಯದಲ್ಲಿ ... ಅಂದರೆ, ’ ಶಾಂತಿ ರಾಜ್ಯ ’ದಲ್ಲಿ ... ಅಂದರೆ, ’ ಆನಂದ ರಾಜ್ಯ ’ದಲ್ಲಿ ಪ್ರವೇಶಿಸಲಾರ ಎಂದು ಏಸು ಪ್ರಭುವು ಹೇಳಿದ್ದಾರಲ್ಲವೆ.

ಆದ್ದರಿಂದ, ಆನಂದ ಧನವಂತನಿಗಲ್ಲ ... ಧ್ಯಾನವಂತನಿಗೇ ಆನಂದ.

ಆದ್ದರಿಂದ, ಆನಂದ ಶಾಸ್ತ್ರ ... ಎಂಜಾಯ್‌ಮೆಂಟ್ ಸೈನ್ಸ್‌ನಲ್ಲಿರುವ ಪ್ರಧಾನ ಭಾಗ ಧ್ಯಾನ. ಮತ್ತೆ ಧ್ಯಾನವೆಂದರೆ ಪಿರಮಿಡ್ ಧ್ಯಾನವೇ ’ ಧ್ಯಾನ ’ವಲ್ಲವೇ.

ಇನ್ನು ಎರಡನೆಯದು...

 

"ಬ್ರಾಹ್ಮಣಭೋಜನ"

" ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ "

"ಬ್ರಹ್ಮಜ್ಞಾನ ಇರುವವನೇ ಬ್ರಾಹ್ಮಣ"

ಜನ್ಮತಹ ಎಲ್ಲರೂ ಶೂದ್ರರೇ. ಬ್ರಹ್ಮಜ್ಞಾನ ಇರುವವನೇ ಬ್ರಾಹ್ಮಣನು. ನಾನು ಶರೀರ ಎಂದು ತಿಳಿದುಕೊಂಡಿರುವವರು ಅಬ್ರಾಹ್ಮಣರು ... ಬ್ರಾಹ್ಮಣೇತರರು ... ಶೂದ್ರರು.

"ಒಬ್ಬ ಬ್ರಾಹ್ಮಣನು...’ ಬಗೆಬಗೆಯ ಆತ್ಮಸ್ಥಿತಿಗಳಲ್ಲಿ ಎಲ್ಲದಕ್ಕಿಂತಾ ಉನ್ನತಸ್ಥಿತಿಯಲ್ಲಿ ಇರುವವನೇ ಒಬ್ಬ ಬ್ರಾಹ್ಮಣನು... " an Enlightened Master" ಎಂದರ್ಥ.

ಇನ್ನು " ಭೋಜನ "...

` ಭೋಜನ ’ ಎಂದರೆ ’ ಆಹಾರ ’. ಆಹಾರ ಎಂಬುವುದು ದೇಹಕ್ಕೆ ಬೇರೆ ... ದೇಹಿಗೆ ಬೇರೆ. ದೇಹಕ್ಕೆ ಪದಾರ್ಥ ಆಹಾರ... ಮತ್ತೆ ದೇಹಿಗೆ ... ಆತ್ಮಕ್ಕೆ ... ಜ್ಞಾನ ... ನವರಸಗಳು ಆಹಾರವಾಗುತ್ತವೆ.

ಉದಾಹರಣೆಗೆ ನಾವು ಸೇವಿಸುವ ಆಹಾರದಲ್ಲಿರುವ ’ ಪದಾರ್ಥ ’ ದೇಹಕ್ಕೆ ಆಹಾರವಾದರೇ ಅದರಲ್ಲಿರುವ ’ರುಚಿ’ ಮಾತ್ರ ಆತ್ಮಕ್ಕೆ ಪುಷ್ಟಿ ನೀಡುತ್ತದೆ.

ಸದಾ ಸುವಾಸನೆಗಳನ್ನು ಹೀರುತ್ತಿರಬೇಕು. ಮನೆಯಲ್ಲೆಲ್ಲಾ ಅಗರಬತ್ತಿಗಳಿಡಬೇಕು. ಶರೀರಕ್ಕೆ ಸುಗಂಧವನ್ನು ಹಚ್ಚಿಕೊಳ್ಳಬೇಕು. ಸದಾ ಒಳ್ಳೆಯ ಸಂಗೀತಗಳನ್ನು ಕೇಳಿಸಿಕೊಳ್ಳುತ್ತಿರಬೇಕು. ಒಳ್ಳೆಯ ಸಂಭಾಷಣೆಗಳನ್ನು ಕೇಳುತ್ತಿರಬೇಕು. ಆತ್ಮಪರವಾದ ವಿಷಯಗಳನ್ನೇ ಕೇಳಿಸಿಕೊಳ್ಳುತ್ತಿರಬೇಕು. ಒಬ್ಬರಿಂದೊಬ್ಬರು ಸುಸಂಪನ್ನವನ್ನು ಮಾಡಿಕೊಳ್ಳುವ ಮಾತುಗಳನ್ನೇ ಕೇಳಬೇಕು.Five Star ಆಹಾರವನ್ನೇ ಸ್ವೀಕರಿಸಬೇಕು. ಭೋಜನ ಶುಚಿಯಾಗಿ, ರುಚಿಯಾಗಿ ಮಾಡಿಕೊಳ್ಳಬೇಕು. ಇದೆಲ್ಲಾ ಬ್ರಾಹ್ಮಣ ಭೋಜನ ಎಂದರ್ಥ.

ನಾವು ನಮ್ಮ ಜ್ಞಾನೇಂದ್ರಿಯಗಳಿಂದ ಆತ್ಮವತ್ ಭೋಜನವನ್ನು ಸ್ವೀಕರಿಸುತ್ತಿರುತ್ತೇವೆ. ಈ ಆತ್ಮವತ್ ಭೋಜನದಲ್ಲಿ ಶ್ರದ್ಧೆಯನ್ನು ತೋರಿಸಿದರೆ ... ನಮ್ಮ ಆನಂದ ಇನ್ನೂ ಹೆಚ್ಚು ಅಭಿವೃದ್ಧಿಯಾಗುತ್ತದೆ.

ಒಬ್ಬ ಶೂದ್ರನಾಗಿ ಜ್ಞಾನೇಂದ್ರಿಯಗಳನ್ನು ಉಪಯೋಗಿಸಿಕೊಳ್ಳದೇ ಒಬ್ಬ ಬ್ರಾಹ್ಮಣನ ಹಾಗೆ ಉಪಯೋಗಿಸಿಕೊಳ್ಳಬೇಕು ಎಂದರ್ಥ.

* * *

ಜೀವನು ತನ್ನ ಶರೀರ ವ್ಯವಹಾರಗಳನ್ನು ಕರ್ಮೇಂದ್ರಿಯಗಳನ್ನು ಉಪಯೋಗಿಸಿ ನಡೆಸುತ್ತಿರುತ್ತಾನೆ. ಕಣ್ಣುಗಳು, ಮೂಗು, ನಾಲಿಗೆ, ಕಿವಿಗಳು, ಚರ್ಮ ಈ ಜ್ಞಾನೇಂದ್ರಿಯಗಳಿಂದ ಆತ್ಮ ವ್ಯವಹಾರಗಳನ್ನು ನಡೆಸಿಕೊಳ್ಳುತ್ತಿರುತ್ತಾನೆ.

ಕಣ್ಣುಗಳು: ಕಣ್ಣುಗಳಿಂದ ಒಳ್ಳೆಯ ಸುಂದರ ದೃಶ್ಯಗಳನ್ನು ಅಂದರೆ ಸೂರ್ಯೋದಯ, ಸೂರ್ಯಾಸ್ತಮ, ಮನೋಹರ ಪ್ರಕೃತಿ ದೃಶ್ಯಗಳು ನೋಡುತ್ತಾನೆ.

ಮೂಗು: ಒಳ್ಳೆಯ ಸುಗಂಧಭರಿತ ಸುವಾಸೆನಗಳನ್ನು ಆಘ್ರಾಣಿಸುವುದು.

ನಾಲಿಗೆ: ರುಚಿಕರವಾದ ಶಾಕಾಹಾರವನ್ನು ತಿನ್ನುತ್ತಾನೆ. ಅಂದರೆ, ನಿಷ್ಠೆಯಿಂದ ಮಾಡಿರುವ ಸುಬ್ರಾಹ್ಮಣ ಸಾತ್ವಿಕ ಅಡುಗೆ ಎಂದು ಅರ್ಥ. ರುಚಿಕರವಾದ ಫಲಗಳೆಂದರ್ಥ.

ಕಿವಿಗಳು: ಕಿವಿಗಳಿಂದ ಒಳ್ಳೆಯ ಸಂಗೀತವನ್ನು ಕೇಳಿಸಿಕೊಳ್ಳುತ್ತಾನೆ ವಿನಹ ಸರಿಯಲ್ಲದ ಸಂಗೀತವನ್ನು ಕೇಳಿಸಿಕೊಳ್ಳುವುದಿಲ್ಲ, ಹೇಗೆಂದರೆ, ಬಿಸ್ಮಿಲ್ಲಾಖಾನ್ ಷಹನಾಯಿ ಅಥವಾ ಎಮ್.ಎಸ್.ಸುಬ್ಬಲಕ್ಷಿ ಸಂಗೀತ ತರಹದ್ದು.

ಎಲ್ಲಾ ಕರ್ಮೇಂದ್ರಿಯಗಳಿಂದಲೂ, ಜ್ಞಾನೇಂದ್ರಿಯಗಳಿಂದಲೂ ಗ್ರಹಿಸುವ ಭೋಜನವನ್ನು ಬ್ರಾಹ್ಮಣ ಭೋಜನ.

ಇನ್ನು ಕರ್ತವ್ಯ ದೀಕ್ಷೆ.

"ಕರ್ತವ್ಯದೀಕ್ಷೆ"

ಕರ್ತವ್ಯ ಎಂದರೆ, ಮಾಡಬೇಕಾಗಿರುವ ಕಾರ್ಯ ... ಕೈಹಿಡಿಯಬೇಕಾದ ಧರ್ಮ...

ಧರ್ಮ ಎಂಬುವುದು ಅತ್ಯಂತ ನೇರವಾಗಿ ಆನಂದಕ್ಕೆ ಕಾರಣಭೂತವಾಗುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಅಧರ್ಮ ಎಂದರೆ ಮಾಡಬಾರದ್ದು ... ಅಧರ್ಮನು ಎಂದರೆ ಮಾಡಬಾರದ್ದನ್ನು ಮಾಡುವವನು.

ಮಾಡಬೇಕಾದ್ದನ್ನು ಮಾಡಿದರೆ ... ಆನಂದ

ಮಾಡಬಾರದ್ದನ್ನು ಮಾಡಿದರೆ ... ದುಃಖ

ಕರ್ತವ್ಯನಿಷ್ಠನಾದರೆ ... ಆನಂದ

ಕರ್ತವ್ಯಗಳನ್ನು ವಿಸ್ಮರಿಸಿದರೆ ...ದುಃಖ

ಕರ್ತವ್ಯಗಳು ಎರಡು ಬಗೆಯದ್ದು...

 

೧. ಕುಟುಂಬ ಪರವಾದದ್ದು ೨. ಸಮಾಜಪರವಾದದ್ದು .

ಕರ್ತವ್ಯವನ್ನು ಮರೆಯುವವರು ’ ಅಪರಾಧಿ ’ಯಾಗಿ ಭಾವಿಸುತ್ತಾರೆ, ಆಗಿಂದಾಗ ಕರ್ತವ್ಯಗಳನ್ನು ಪಾಲಿಸುವವರಿಗೆ ’ಅಪರಾಧಿ ಕಾನ್ಷಿಯಸ್‌ನೆಸ್’ ಇರುವುದಿಲ್ಲ. ಅವರು ಸದಾ ’ ಹಾಯಾಗಿ ’ ಇರುತ್ತಾರೆ.

ಆದ್ದರಿಂದ, ಆನಂದಶಾಸ್ತ್ರದಲ್ಲಿ ಮೂರನೆಯ ಪ್ರಧಾನ ಭಾಗವೇ ಕರ್ತವ್ಯ ದೀಕ್ಷೆ.

Go to top