"ಆತ್ಮಜ್ಞಾನ ಹೊಂದದ ಜೀವನ ವ್ಯರ್ಥ"

ಪ್ರತಿ ವ್ಯಕ್ತಿ ಬಾಯಿಯಿಂದ ಪ್ರಾಪಂಚಿಕ ವಾಕ್ಕುಗಳಲ್ಲದೇ ಆಧ್ಯಾತ್ಮಿಕ ವಾಕ್ಕುಗಳು ಬರಬೇಕು.

ಎಲ್ಲರಿಗೂ ಬಾಯಿ ಇದ್ದರೂ ಸಹ ಬಕಾಸುರನ ಹಾಗೆ ಅಲ್ಲದೆ ಬುದ್ಧನ ಹಾಗೆ ಜೀವಿಸಬೇಕು. ಸಾಧನೆಯಿಂದಲೇ ಆತ್ಮಜ್ಞಾನ ಪ್ರಾಪ್ತವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಧ್ಯಾನ ಸಾಧನೆ ಮಾಡಬೇಕು. ಸಂಗೀತ ಹಾಡಲು ಬರದೇ ಇದ್ದರೆ ಗಂಟಲು ವ್ಯರ್ಥ, ಆತ್ಮಜ್ಞಾನ ಇಲ್ಲದಿದ್ದರೇ ಜೀವನ ವ್ಯರ್ಥ. 'ನಾನೇ ಆತ್ಮ' ಎಂದು ತಿಳಿದುಕೊಳ್ಳುವುದೇ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದೆಂದರೆ. ಶ್ವಾಸಾನುಸಂಧಾನದಿಂದಲೇ ಆತ್ಮಾನುಭವ ಸಾಧ್ಯ: ನಮಗೆ ಅತ್ಯಂತ ಹತ್ತಿರದಲ್ಲಿರುವ ಪ್ರಕೃತಿ ಶ್ವಾಸ; ಪ್ರಕೃತಿಯಲ್ಲಿ ವಿಲೀನವಾಗುವುದು ಎಂದರೆ ಶ್ವಾಸದಲ್ಲಿ ವಿಲೀನ ಹೊಂದುವುದು.

Go to top