"ಆತ್ಮಚೈತನ್ಯ"

" ರಾಮಾಯಣವನ್ನು ಮೂರು ಮಾತುಗಳಲ್ಲಿ ’ಕಟ್ಟುವುದು, ಹೊಡೆಯುವುದು, ತರುವುದು’ ಎಂದು ಜನಗಳು ಹೇಳುವುದು ಸವ್ರೇ ಸಾಮಾನ್ಯ ... ’ ಕಟ್ಟುವುದು ’ ಎಂದರೆ ಶರೀರವನ್ನು ಕಟ್ಟುವುದು, ಎಂದರೆ ಕೈ ಕಾಲು ಮಡಚಿಕೊಂಡು ಒಂದು ಕಡೆ ಕುಳಿತುಕೊಳ್ಳುವುದು, ’ ಹೊಡೆಯುವುದು ’ ಎಂದರೆ ನಮ್ಮ ಆಲೋಚನೆಗಳನ್ನು ಹೊಡೆಯುವುದು, ಹೊಡೆಯುವುದು ಎಂದರೆ ಅಲೋಚನಾರಹಿತ ಸ್ಥಿತಿಗೆ ಬರಲು ಪ್ರಯತ್ನಿಸುವುದು, ’ ತರುವುದು ’ ಎಂದರೆ ಧ್ಯಾನ ಮಾಡಿ ವಿಶ್ವಶಕ್ತಿಯನ್ನು ಪಡೆಯುವುದು.

’ ಧ್ಯಾನ ’ ಎಂದರೆ ವಿಶ್ವಶಕ್ತಿಯನ್ನು ಆವಾಹನೆ ಮಾಡಿ, ನಾಡಿಮಂಡಲ ಶುದ್ಧಿಯಾಗಿ, ದಿವ್ಯಚಕ್ಷುವು ಉತ್ತೇಜಿತವಾಗಿ, ಸೂಕ್ಷ್ಮ ಶರೀರಯಾನ ಮಾಡುವುದು ಕ್ರಮೇಣವಾಗಿ ಆತ್ಮಜ್ಞಾನವನ್ನು ಹೊಂದಿ, ಆತ್ಮಾರಾಮನನ್ನು ಪೂರ್ಣವಾಗಿ ಕಂಡುಕೊಳ್ಳುವುದು.

ಪ್ರತಿಯೊಬ್ಬರೂ ಪ್ರತಿದಿನಾ ಧ್ಯಾನ ಮಾಡಬೇಕು. ತಿಳಿವಳಿಕೆ ಬಂದ ವಯಸ್ಸಿನಿಂದಲೇ ಮಕ್ಕಳು ಧ್ಯಾನ ಪ್ರಾರಂಭಿಸಬೇಕು. ವಿದ್ಯಾರ್ಥಿಗಳು, ಸ್ತ್ರೀಯರು, ಪುರುಷರು, ವೃದ್ಧರು ಕೂಡಾ ಪ್ರತಿದಿನ ಅವರವರ ವಯಸ್ಸಿಗೆ ತಕ್ಕಹಾಗೆ, ಯಾರಿಗೆ ಎಷ್ಟು ವಯಸ್ಸು ಇದೆಯೋ ಅಷ್ಟು ನಿಮಿಷಗಳು ಒಮ್ಮೆಗೆ ಧ್ಯಾನ ಮಾಡಬೇಕು. ಪ್ರತಿದಿನ ಧ್ಯಾನ ಮಾಡುವುದರಿಂದ ಎಲ್ಲಾ ರೋಗಗಳಿಂದ ವಿಮುಕ್ತರಾಗುವುದೇ ಅಲ್ಲದೇ, ನಿಜಕ್ಕೂ ವ್ಯಾಧಿಗಳೇ ಇಲ್ಲದೆ, ವ್ಯಾಧಿಗಳು ಬರದಂತೆ ತಡೆಗಟ್ಟಿ ಜೀವಿಸಬಹುದು.

ಹತ್ತು ಸಾವಿರ ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಪಿರಮಿಡ್‌ಗಳನ್ನು ನಿರ್ಮಿಸಿದರೆಂದೂ, ಅವು ಅದ್ಭುತ ವಿಶ್ವಶಕ್ತಿ ಆವಾಹನ ಕ್ಷೇತ್ರಗಳೆಂದು ಪ್ರಯೋಗಾತ್ಮಕವಾಗಿ ತಿಳಿದುಕೊಂಡಿರುವ ನಾವು ಧ್ಯಾನಕ್ಕೆ ಪಿರಮಿಡ್ಡನ್ನು ಜೋಡಿಸಿ ಎಲ್ಲರಿಂದಲೂ ಧ್ಯಾನ ಮಾಡಿಸುತ್ತಿದ್ದೇವೆ.

ಅನಾವಶ್ಯಕವಾದ ಮಾತುಗಳನ್ನು ಮಾತನಾಡಿ ಶಕ್ತಿಯನ್ನು ವ್ಯರ್ಥಮಾಡಬಾರದು. ನಮ್ಮಲ್ಲಿರುವ ಶಕ್ತಿಯಿಂದ ಒಳ್ಳೆಯ ಮಾತುಗಳನ್ನು ಮಾತನಾಡಿ, ಒಳ್ಳೆಯ ಕೆಲಸಗಳನ್ನು ಮಾಡಲು ಉಪಯೋಗಿಸಬೇಕು. ಧ್ಯಾನವನ್ನು ಮಾಡಿ ಇನ್ನೂ ಹೆಚ್ಚು ವಿಶ್ವಮಯ ಪ್ರಾಣಶಕ್ತಿಯನ್ನು ಪ್ರತಿಯೊಬ್ಬರೂ ಹೊಂದಿ ಬಹಳ ಶಕ್ತಿವಂತರಾಗಬೇಕು. ಆತ್ಮವಂತರಾಗಬೇಕು. ಯಾರು ಧ್ಯಾನವನ್ನು ಮಾಡುತ್ತಾರೆಯೊ ಅವರು ‘ಆತ್ಮಚೈತನ್ಯ’ದಲ್ಲಿರುತ್ತಾರೆ. ಯಾರು ಧ್ಯಾನ ಮಾಡುವುದಿಲ್ಲವೋ ಅವರು ಮನಸ್ಸಿನ ಮಟ್ಟದಲ್ಲೇ ಇರುತ್ತಾರೆ. ಬುದ್ಧಿಯ ಜೊತೆ ಇರುವುದಿಲ್ಲ.

ಮನಸ್ಸುವತ್ ಮನುಷ್ಯನು ರಾವಣಾಸುರನು, ಆತ್ಮವತ್ ಶ್ರೀರಾಮನು. ಮನಸ್ಸು ಹೇಳಿದ ಮಾತು ಕೇಳಿ ರಾವಣನು ಸೀತೆಯನ್ನು ಎತ್ತಿಕೊಂಡು ಹೋದರೆ, ಆತ್ಮಜ್ಞಾನ ಇರುವ ರಾಮನು ರಾವಣಾಸುರನನ್ನು ಕೊಂದು ಸೀತೆಯನ್ನು ಕರೆದುಕೊಂಡು ಬರುತ್ತಾನೆ. ಆಂಜನೇಯಸ್ವಾಮಿಯಿಂದಲೇ ರಾಮನಿಗೆ ಸೀತೆಯ ಹಾದಿ ತಿಳಿದಹಾಗೆ, ಶ್ವಾಸದಿಂದಲೇ ಪ್ರತಿ ವ್ಯಕ್ತಿ ಆತ್ಮಾರಾಮನನ್ನು ತನ್ನಲ್ಲೇ ಕಂಡುಕೊಳ್ಳುತ್ತಾನೆ. ಮನಸ್ಸುವತ್ ಕಿಷ್ಕಿಂಧಾಕಾಂಡ ... ಧ್ಯಾನಸಾಧನಾವತ್ ಸುಂದರಾಕಾಂಡ. ವಾಲ್ಮೀಕಿ ರಾಮಾಯಣದಲ್ಲಿ ಧ್ಯಾನವನ್ನು ಕುರಿತು ವಿವರವಾಗಿ ವಿವರಿಸಿದ್ದಾರೆ.

ಧ್ಯಾನದಿಂದ ಪ್ರತಿಯೊಬ್ಬ ವ್ಯಕ್ತಿ ಆತ್ಮಾರಾಮನಾಗುತ್ತಾನೆ. ನಾರಾಯಣನಾಗುತ್ತಾನೆ. ನಲವತ್ತು ದಿನಗಳು ಧ್ಯಾನ ಚೆನ್ನಾಗಿ ಮಾಡಿದರೆ ಪ್ರತಿಯೊಬ್ಬ ವ್ಯಕ್ತಿ ಎನ್‌ಲೈಟೆನ್ ಆಗುತ್ತಾನೆ. ನಮ್ಮ ಹತ್ತಿರ ಕಾಸ್ಮಿಕ್ ಟಿ.ವಿ. ಇದೆ. ‘ಥರ್ಡ್ ಐ’ ಎಂದರೆ ಅದೇ. ‘ಥರ್ಡ್ ಐ’ಯಿಂದ ಸೃಷ್ಟಿ ಹಾಗೂ ಭೂತ, ಭವಿಷ್ಯತ್, ವರ್ತಮಾನಗಳೆಲ್ಲಾ ತಿಳಿಯುತ್ತವೆ.

Go to top