"ಅನುಭವವೇ ಜ್ಞಾನ"

 

ಸಹನೆಯಿಂದ ನಾವು ಸಾಧನೆ ಮಾಡುತ್ತಾ ಮಾಡುತ್ತಾ ಇದ್ದರೆ ಅನೇಕ ಅನುಭವಗಳು ಬರುತ್ತವೆ. ಒಳಗಿನ ಶಕ್ತಿ ಸಂಚಾರವಾಗುತ್ತದೆ. ಶಕ್ತಿಕ್ಷೇತ್ರ ಉತ್ತೇಜಿತವಾಗುತ್ತದೆ. ಮೂರನೆಯ ಕಣ್ಣಿನಲ್ಲಿ ಕೆಲವು ಬಣ್ಣಗಳು ಕಾಣಿಸಿಕೊಳ್ಳುತ್ತದೆ, ಮರಗಳು ಕಾಣುತ್ತವೆ, ದೇವಸ್ಥಾನಗಳು ಕಾಣುತ್ತವೆ, ಗಡ್ಡದವರು ಕಾಣಿಸಿಕೊಳ್ಳುತ್ತಾರೆ, ಯಾರು ಯಾರೋ ಮರಣಿಸಿದವರೆಲ್ಲಾ ಕಾಣಿಸಿಕೊಳ್ಳುತ್ತಾರೆ. ಅವರು ಪ್ರಾರಂಭದಲ್ಲಿ ಏನೋ ಮಾತನಾಡಲು ಪ್ರಯತ್ನಿಸುತ್ತಾರೆ. ನಮಗೆ ಕೇಳಿಸುವುದಿಲ್ಲ. ಅವರು ಮಾತನಾಡುತ್ತಿರುತ್ತಾರೆ. ಆದರೆ, ನಮಗೆ ಕೇಳಿಸದು. ಏಕೆಂದರೆ, ನಮ್ಮ ಹತ್ತಿರ ತಕ್ಕ ಶಕ್ತಿ ಇರುವುದಿಲ್ಲ. ನಂತರ ನಿಧಾನಕ್ಕೆ ಕೇಳಿಸಲಾರಂಭಿಸುತ್ತದೆ. ತದನಂತರ ಸೂಕ್ಷ್ಮಶರೀರದಿಂದ ನಮ್ಮನ್ನ ಅವರು ಎಲ್ಲಾ ಲೋಕಗಳು ತಿರುಗಿಸುತ್ತಾರೆ. ನಮ್ಮ ಜನ್ಮಗಳೆಲ್ಲಾ ತೋರಿಸುತ್ತಾರೆ. ಇವುಗಳನ್ನೇ ಅನುಭವ ಎಂದಿದ್ದೇವೆ. ಈ ಅನುಭವವೇ ಜ್ಞಾನ .

ಜನ್ಮಗಳಿವೆ ಎಂದು ಹೇಳಿ ಪುಸ್ತಕಗಳನ್ನು ಓದಿ, ಗ್ರಂಥಗಳಿಂದ ತಿಳಿದುಕೊಳ್ಳುವುದಲ್ಲ. ಧ್ಯಾನ ಸಾಧನೆಯಲ್ಲಿ ದಿವ್ಯಚಕ್ಷುವನ್ನು ಉತ್ತೇಜಿತಮಾಡಿಕೊಂಡು ನಮ್ಮ ಜನ್ಮಗಳೆಲ್ಲಾ ನಾವು ನೋಡಬೇಕು - ಅದೇ ಅನುಭವ. ಅದೇ ಜ್ಞಾನ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ :

ಬಹೋನಿ ಮೇ ವ್ಯತೀತಾನಿ ಜನ್ಮಾನಿ ತವಚಾರ್ಜುನ
ತಾನ್ಯಹಂ ವೇತ್ತಿ ಸರ್ವಾಣಿ ನ ತ್ವಂ ವೇತ್ತ ಪರಂತಪಃ

ಅರ್ಜುನಾ! ನೀನು, ನಾನು ಅನೇಕ ಜನ್ಮಗಳನ್ನು ಎತ್ತಿದ್ದೇವೆ. ನನಗೆ ನನ್ನ ಜನ್ಮಗಳೆಲ್ಲಾ ತಿಳಿದಿದೆ. ನಿನಗೆ ಏನೂ ತಿಳಿಯದು .

ಕೃಷ್ಣನಿಗೆ ಹೇಗೆ ತಿಳಿದಿದೆ ? ಅವರು ಎರಡು ಕಣ್ಣುಗಳನ್ನು ಮುಚ್ಚಿಕೊಂಡು ಶ್ವಾಸದ ಮೇಲೆ ಗಮನವಿಟ್ಟು ಬಾಲ್ಯದಿಂದಲೂ ಅನೇಕ ಗಂಟೆಗಳ ಕಾಲ ಧ್ಯಾನದಲ್ಲಿ ಕುಳಿತಿದ್ದ. ಸಾಂದೀಪ ಮಹರ್ಷಿ ಹತ್ತಿರವೇ ಎಲ್ಲಾ ಕಲಿತುಕೊಂಡ. ಆದರೆ, ನಾವು ಚಿಕ್ಕಂದಿನಿಂದಲೂ ಏನೂ ಕಲಿತುಕೊಂಡಿಲ್ಲ; ದೊಡ್ಡವರಾದ ನಂತರವೂ ಸಹ ಕಲಿತುಕೊಂಡಿಲ್ಲ. ನಾವು ಸಾಯುವವರೆಗೂ ಕಲಿತುಕೊಳ್ಳುವುದಿಲ್ಲ, ಹಾಗಿದೆ ನಮ್ಮ ದರಿದ್ರ ಜೀವನಗಳು. ಜ್ಞಾನವಿಲ್ಲದೇ ಬೆಳೆಯುತ್ತಿದ್ದೇವೆ. ಜ್ಞಾನವಿಲ್ಲದೇನೆ ಸಾಯುತ್ತಿದ್ದೇವೆ. ಮತ್ತೆ ಮತ್ತೆ ಜನ್ಮಿಸುತ್ತಿದ್ದೇವೆ. ಪುನರಪಿ ಜನನಂ ಪುನರಪಿ ಮರಣಂ ಎಲ್ಲಿಯ ತನಕ ನಾವು ಜ್ಞಾನಪರವಾಗಿ ಬೆಳೆಯುವುದಿಲ್ಲವೊ, ಎಲ್ಲಿಯವರೆಗೂ ಜ್ಞಾನದಿಂದ ನಾವು ಸಾಯುವುದಿಲ್ಲವೊ ಅದುವರೆಗೂ ಈ ಜನ್ಮ ಪರಂಪರೆ ಮುಂದುವರೆಯುತ್ತಲೇ ಇರುತ್ತದೆ.

ಅನುಭವವೇ ಜ್ಞಾನ. ಭಗವದ್ಗೀತ ಪಾರಾಯಣದಿಂದ ಬರುವುದು ಜ್ಞಾನವಲ್ಲ. ಬೈಬಲ್ ಓದುವುದರಿಂದ ಬರುವುದು ಜ್ಞಾನವಲ್ಲ. ಅನುಭವದಿಂದ ಬಂದಿದ್ದೇ ಜ್ಞಾನ. ಅನುಭವವೇ ಜ್ಞಾನ. ಆದ್ದರಿಂದ, ಕೃಷ್ಣನು ಏನು ಹೇಳಿದನೆಂದರೆ, ತಂದೆ ಅರ್ಜುನಾ ಯೋಗಿಯಾಗು - ಯೋಗೀಭವ ಅರ್ಜುನ ... ಎಂದು.

ತಪಸ್ವಿಭ್ಯೋಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ
ಕರ್ಮಿಭ್ಯಶ್ವಾಧಿಕೋ ಯೋಗೀ, ತಸ್ಮಾತ್ ಯೋಗೀ ಭವಾರ್ಜುನ

ಆದ್ದರಿಂದ, ಯೋಗ ಎಂದರೆ ಸಾಧನೆ - ಯೋಗಸಾಧನೆ, ಧ್ಯಾನಸಾಧನೆ, ಯೋಗ ಅಂದರೆ ಮಿಲನ - ಶ್ವಾಸದ ಜೊತೆ ಮಿಲನ. ಶ್ವಾಸದ ಜೊತೆ ಬೆರೆತರೆ ಉಳಿದ ಎಲ್ಲದರ ಹತ್ತಿರ ಅದೇ ಕರೆದುಕೊಂಡು ಹೋಗುತ್ತದೆ.

Go to top