"ಯೋಗ, ಯೋಗಿ, ಯೋಗೀಶ್ವರ"

"ನಮ್ಮ ಪ್ರಧಾನಿ ಮೋದಿಯವರಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ. 180 ದೇಶಗಳಲ್ಲಿ ಎಲ್ಲರೂ ಏಕಾಭಿಪ್ರಾಯಕ್ಕೆ ಬಂದು ಯೋಗದಿನವನ್ನು ಆಚರಿಸುತ್ತಿರುವುದು ತುಂಬಾ ಒಳ್ಳೆಯ ವಿಷಯ". ಯೋಗವೆನ್ನವುದು ಯಾವ ಮತಕ್ಕೂ ಸಂಬಂಧಿಸಿಲ್ಲ. ಯೋಗವೆನ್ನುವುದು ‘ಮಾನವ ಅಭಿವೃದ್ಧಿ’ ಮತಕ್ಕೆ ಸಂಬಂಧಿಸಿದ್ದು. ಮಾನವನ ಬುದ್ಧಿ, ಚೇತನ ಇವುಗಳ ವಿಕಾಸಕ್ಕೆ ಸಂಬಂಧಿಸಿದ್ದು.

ಒಬ್ಬ ವಿಶ್ವಮಾನವನು, ಆತನು ಆತ್ಮಪರವಾಗಿ ಅಭಿವೃದ್ಧಿ ಹೊಂದಲು, ವಿಕಾಸಹೊಂದಲು ಯೋಗ ಅತ್ಯಗತ್ಯ. "ಯೋಗಕ್ಕೆ ದೇಶ, ಪ್ರಾಂತ್ಯದೊಂದಿಗೆ ಸಂಬಂಧವಿಲ್ಲ!"

ಉದಾಹರಣೆಗೆ ಒಂದು ಆನೆ ನಿಮಗೆ ಬೇಕು ಎಂದುಕೊಳ್ಳೋಣ. ಒಬ್ಬನು ಆನೆಯ ಬಾಲ ತೋರಿಸುತ್ತಾನೆ, ಆಗ ಅದು ಆನೆಯೇ ಹೌದೋ, ಅಲ್ಲವೊ?

ಆನೆಯೂ ಹೌದು, ಆದರೆ ಪೂರ್ತಿ ಆನೆಯಲ್ಲ, ಆನೆಯ ಒಂದುಭಾಗ. ಇನ್ನೊಬ್ಬ ಸೊಂಡಿಲು ತೋರಿಸುತ್ತಾನೆ, ಆದರೆ ಆ ಬಾಲಕ್ಕೆ, ಸೊಂಡಿಲಿಗೆ ಸಂಬಂಧವೇ ಇಲ್ಲ. ಬಾಲದ ರಚನೆಯೇ ಬೇರೆ, ಸೊಂಡಿಲ ರಚನೆಯೇ ಬೇರೆ. ಅದರ ಕೆಲಸ ಬೇರೆ ಇದರ ಕೆಲಸವೇ ಬೇರೆ-ಹಾಗೆಯೇ ಕಿವಿಗಳು, ನಾಲ್ಕು ಸ್ತಂಭಗಳಂತಹ ಕಾಲುಗಳು. ಹಾಗೇ ಯೋಗವೆಂದರೆ, ಪ್ರತಿಯೊಬ್ಬರೂ ಒಂದೊಂದು ವಿಧವಾಗಿ ವ್ಯಾಖ್ಯಾನಿಸುತ್ತಾರೆ. ಎಲ್ಲರೂ ಹೇಳುವುದೂ ಸರಿಯೇ, ಎಲ್ಲರೂ ಆನೆಯನ್ನೇ ನೋಡಿ ಹೇಳುತ್ತಿದ್ದಾರೆ.

ನಾವು ಪೂರ್ತಿ ಆನೆಯನ್ನೇ ನೋಡಿದರೆ, ಪೂರ್ತಿಸ್ವರೂಪವನ್ನು ನಾವು ಗ್ರಹಿಸಿದಂತೆ. ಭಿನ್ನ ಭಿನ್ನ ಭಾಗಗಳಿವೆ, ಒಂದು ಭಾಗಕ್ಕೆ ಇನ್ನೊಂದು ಭಾಗಕ್ಕೆ ಸಂಬಂಧವೇ ಇಲ್ಲ. ಮಾನವ ಶರೀರ ಇದೆ ಎಂದುಕೊಳ್ಳಿ, ಹೃದಯವಿದೆ, ಲಿವರ್ ಇದೆ, ಶ್ವಾಸಕೋಶವಿದೆ, ಅಸ್ಥಿಪಂಜರದ ರಚನೆಯಿದೆ. ಇದೆಲ್ಲಾ ಸೇರಿದರೆನೇ ಮನುಷ್ಯ. ಹಾಗೆಯೇ ಯೋಗದಲ್ಲೂ. ಉದಾಹರಣೆಗೆ ನಾದಯೋಗ ನಾವು ಸಂಗೀತದೊಂದಿಗೆ ಇದ್ದರೆ, ಅದು ನಾದಯೋಗ, ನಾವು ಪುಸ್ತಕದೊಂದಿಗೆ ಇದ್ದೇವೆಂದುಕೊಳ್ಳಿ ಭಗವದ್ಗೀತೆಯಂತಹ ಪುಸ್ತಕ ಓದಿದರೆ ಅದು ಸ್ವಾಧ್ಯಾಯಯೋಗ, ಜ್ಞಾನಯೋಗವಾಗುತ್ತದೆ. ಹಾಗೆಯೇ ನಾವು ಆಸನಗಳು ಹಾಕಿದ್ದೇವೆ ಎಂದುಕೊಳ್ಳಿ, ಅದು ಹಠಯೋಗ, ಹಾಗೇ ಭಕ್ತಿಯೋಗ ಎನ್ನುತ್ತೇವೆ. ಮೀರಾಬಾಯಿ ಶ್ರೀಕೃಷ್ಣನಲ್ಲಿ ಲಯವಾದಳು. ಶ್ರೀಕೃಷ್ಣನನ್ನು ತನ್ನಲ್ಲಿ ಲಯಗೊಳಿಸಿದಳು ತಾನು ಕೃಷ್ಣನಲ್ಲಿ ಲಯವಾದಳೋ, ಶ್ರೀಕೃಷ್ಣನನ್ನು ತನ್ನಲ್ಲಿ ಲಯಗೊಳಿಸಿದಳೋ, ಆದರೆ ಅದೇ ಭಕ್ತಿಯೋಗವಾಯಿತು. ಅಂದರೆ ಒಂದು ಇನ್ನೊಂದರಲ್ಲಿ ಲಯವಾದರೆ ಯೋಗ.

ನಾನು ಸಂಗೀತ ಕಲಿಯುತ್ತಿದ್ದೇನೆ. ನಾನು ಸಂಗೀತದೊಂದಿಗೆ ಒಂದಾಗಿದ್ದರೆ ಅದು ನಾದಯೋಗ, ಅದಕ್ಕೆ ಮೊದಲು ಆ ಸಂಗೀತವೆಂದರೆ ಗೊತ್ತಿಲ್ಲ.
ಹಾಡುತ್ತಾ ಇದ್ದೇನೆ, ಸಂಗೀದೊಂದಿಗೆ ಇದ್ದೇನೆ ಎಂದರೆ ನಾದಯೋಗ!
ಆಸನಗಳನ್ನು ಹಾಕುತ್ತಿದ್ದೇನೆ, ಶರೀರದೊಂದಿಗೆ ಇದ್ದೇನೆ ಎಂದರೆ ಅದು ಹಠಯೋಗ!

ಶ್ವಾಸದೊಂದಿಗೆ ಒಂದಾಗಿ ಇದ್ದರೆ ಅದು ಪ್ರಾಣಾಯಾಮವಾಗಿದೆ. ನಮ್ಮ ಆತ್ಮದೊಂದಿಗೆ ಒಂದಾಗಿದ್ದರೆ, ಅದು ಧ್ಯಾನಯೋಗ, ರಾಜಯೋಗವಾಗುತ್ತದೆ. ಆತ್ಮವೆನ್ನುವುದು ನಿಜವಾದ ಸ್ವರೂಪ, ಆನೆಯ ಒಂದು ಪೂರ್ಣರೂಪದಂತೆ. ಆತ್ಮದರ್ಶನ ಒಂದೇಸಾರಿ ಆಗುವುದಿಲ್ಲವಾದ್ದರಿಂದ ವಿವಿಧ ಹಂತದಲ್ಲಿ ನಾವು ಅದನ್ನು ಕಾಣಬಹುದು. ಯಾರಾದರೂ ಡೆಲ್ಲಿಗೆ ಹೋಗಬೇಕೆಂದರೆ ಮೊದಲು ಮನೆಗೆ ಹೋಗಿ ತಮ್ಮ ಲಗೇಜ್ ತೆಗೆದುಕೊಂಡು ರೈಲ್ವೇ ಸ್ಟೇಷನ್, ಅಥವಾ ವಿಮಾನ ನಿಲ್ದಾನಕ್ಕೆ ಹೋಗಬೇಕು. ಅಲ್ಲಿ ಆ ವಾಹನಕ್ಕಾಗಿ ಕಾದು ಕುಳಿತರೆ ಅದು ಬರುತ್ತದೆ. ಆ ನಂತರ ನಾವು ಡೆಲ್ಲಿ ಸೇರುತ್ತೇವೆ, ಅಲ್ಲಿ ಗಮ್ಯವಿದೆ.

ಆನೆಯೆಲ್ಲಾ ಬೇಕು. ಬಾಲವೂ ಇರಬೇಕು, ಸೊಂಡಿಲೂ ಇರಬೇಕು. ಜ್ಞಾನೇಂದ್ರಿಯಗಳು, ಕಮೇಂದ್ರಿಯಗಳು ಎಲ್ಲವೂ ಸೇರಿದರೇನೆ ಒಂದು ಆತ್ಮಕ್ಕೆ ಪರಿಪೂರ್ಣತೆ. ಮುಖ್ಯವಾಗಿ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ್ನು ನಾನು ಸ್ಥಾಪಿಸಿದ್ದೇನೆ. ದೇಶ ವಿದೇಶಗಳಲ್ಲೆಲ್ಲಾ ಇದೆ. ಪ್ರತಿಯೊಂದು ಕಡೆ ಪಿರಮಿಡ್ ಕಾಣುತ್ತದೆ. ಪಿರಮಿಡ್‌ನಲ್ಲಿ ಎಲ್ಲರೂ ಕಣ್ಣುಮುಚ್ಚಿ ಶ್ವಾಸದ ಮೇಲೆ ಗಮನವಿಟ್ಟು ಧ್ಯಾನ ಮಾಡುವುದು ನಿಮಗೆ ಕಾಣಿಸುತ್ತದೆ. ಇದೇನೆಂದರೆ ಚದರಂಗದ ಆಟದಲ್ಲಿ ಒಂದು ರಾಜ, ಮಂತ್ರಿ, ಒಂಟೆ, ಕುದುರೆ, ಆನೆ ಹದಿನಾರು ಮಂದಿ ಇರುತ್ತಾರೆ, ಎಲ್ಲಕ್ಕಿಂತ ಮುಖ್ಯ ರಾಜ. ರಾಜನ ಬಳಿಗೆ ಹೋದೆವೆಂದುಕೊಳ್ಳಿ, ಆಗ ಆಟ ಮುಗಿಯುತ್ತದೆ. ಹಾಗೆಯೇ ಯಾರು ಧ್ಯಾನಯೋಗಕ್ಕೆ ಬರುತ್ತಾರೋ, ಆಗ ಯೋಗವೆನ್ನುವ ಆಟ ಮುಗಿದಂತೆ. ನದಿಗಳೆಲ್ಲಾ ಸಮುದ್ರಕ್ಕೆ ಸೇರುತ್ತವೆಯಲ್ಲಾ ಹಾಗೆಯೇ ಇದು.

"ನದೀ ನಾಮ್ ಸಾಗರೋ ಗತಿ", ಎಲ್ಲಾ ಯೋಗಗಳೂ ಬಂದು ಧ್ಯಾನಯೋಗದಲ್ಲಿ ಬಂದು ಸೇರುತ್ತವೆ. ಗಂಗೆ, ಯಮುನೆ, ಗೋದಾವರಿ, ನರ್ಮದ, ಕೃಷ್ಣಾ ಎಲ್ಲಾ ನದಿಗಳು ಎಲ್ಲೆಲ್ಲೋ ಹುಟ್ಟಿವೆ. ಆದರೆ ಅವೆಲ್ಲಾ ಬಂದು ಸಮುದ್ರಕ್ಕೆ ಬಂದು ಸೇರುತ್ತವೆ.

ವಿಧವಿಧವಾದ ಯೋಗಗಳೆಲ್ಲಾ, ಎಲ್ಲೆಲ್ಲೋ ಹುಟ್ಟಿವೆ. ಆದರೆ ಲಯವಾಗುವುದು ಧ್ಯಾನವೆಂಬ ಸಮುದ್ರದಲ್ಲಿ. ಅದರ ಹೆಸರೇ "ಧ್ಯಾನಯೋಗ".

ಧ್ಯಾನಯೋಗದಲ್ಲಿ ನೀವು ನಿಮ್ಮೊಂದಿಗೆ ಒಂದಾಗಿರುತ್ತೀರಾ. ನಿಮ್ಮ ಶರೀರದೊಂದಿಗೆ ಏಕವಾಗುವುದು ಬೇರೆ, ಸಂಗೀತದೊಂದಿಗೆ ಏಕವಾಗುವುದು ಬೇರೆ, ನಿಮ್ಮ ಜ್ಞಾನದೊಂದಿಗೆ, ಪುಸ್ತಕಗಳೊಂದಿಗೆ ಒಂದಾಗಿರುವುದು ಬೇರೆ ಆದರೆ ನೀವು ನಿಮ್ಮೊಂದಿಗೆ ಒಂದಾಗಿರುವುದು ಧ್ಯಾನಯೋಗ ಎನ್ನುತ್ತೇವೆ. ಯೋಗಗಳಿಗೆ ರಾಜ ಎನ್ನುತ್ತೇವೆ. ಆ ಧ್ಯಾನ ಯೋಗವನ್ನು ಮುವ್ವತ್ತು ವರ್ಷಗಳ ಹಿಂದೆ ನಾನು ನನ್ನ ವಶವಾಗಿಸಿಕೊಂಡೆನು. ನಂತರ ಇದನ್ನು ಎಲ್ಲರಿಗೂ ಪರಿಚಯಿಸಿದೆನು.

ಭಗವದ್ಗೀತೆಯಲ್ಲಿ ಏನು ಹೇಳಿದೆಯೆಂದರೆ, "ಸಮತ್ವಂ ಯೋಗ ಉಚ್ಚತೆ" ಎಂದಿದ್ದಾನೆ. ಯೋಗವೆಂದರೆ, ಎಲ್ಲರನ್ನೂ, ಎಲ್ಲವನ್ನೂ ಸಮವಾಗಿ ನೋಡು ಎಂದು ಇದರ ಅರ್ಥ. ಶೀತೋಷ್ಣಗಳನ್ನು, ಮಾನಾವಮಾನಗಳನ್ನು, ಜಯಾಪಜಯವನ್ನು, ಸಮವಾಗಿ ನೋಡುವುದೇ ಯೋಗವಾಗುತ್ತದೆ ಎಂದು ಶ್ರೀಕೃಷ್ಣ ಹೇಳುತ್ತಾನೆ. ಅದು ಯಾವ ಯೋಗ ಎಂದರೇ ಸಮತ್ವ ಯೋಗ. ಆದರೆ ನಾವು ಕೆಲವರನ್ನು ತುಂಬಾ ಹೀನಾವಾಗಿ, ಕೆಲವರನ್ನು ಉಚ್ಛಸ್ಥಿತಿಯಲ್ಲಿ ನೋಡುತ್ತೇವೆ. ಇನ್ನೊಂದು ಕಡೆ ಏನು ಹೇಳಿದ್ದಾನೆ? "ಯೋಗಃ ಚಿತ್ತವೃತ್ತಿ ನಿರೋಧಃ" ಎಂದು ಪತಂಜಲಿ ಹೇಳಿದ್ದಾರೆ. "ಅಥಃ ಯೋಗಾನು ಶಾಸನಂ" ಎಂದು ಮೊದಲು ಪತಂಜಲಿ ಹೇಳಿದ್ದಾರೆ. ಈಗ "ಯೋಗವೆನ್ನುವ ಶಿಸ್ತುಕ್ರಮಕ್ಕೆ ಬಾರಯ್ಯ" ಎಂದು ಹೇಳುತ್ತಾರೆ. ಪ್ರತಿಯೊಬ್ಬರೂ ದುಃಖದಲ್ಲಿ ಇರುತ್ತಾರೆ. ಸ್ವಾಮೀಜಿ ನಾನು ದುಃಖದಲ್ಲಿದ್ದೇನೆ. ನನ್ನ ಗಂಡ ಸತ್ತು ಹೋದ, ನಮ್ಮಮ್ಮ ಸತ್ತು ಹೋದರು ನಾನೇನು ಮಾಡಲಿ? ನನ್ನ ಮಗ ಸತ್ತು ಹೋದ ಎನ್ನುತ್ತಾರೆ. ಅವರನ್ನು ನಾವು ಮತ್ತೆ ಹೇಗೆ ಪಡೆದುಕೊಂಡು ಬರುತ್ತೇವೆ? ಸಾಧ್ಯವಿಲ್ಲ. ಆದರೆ ಅವರು ಮೇಲಿನ ಲೋಕದಲ್ಲಿ ಇದ್ದಾರೆ. ಅವರನ್ನು ನಾವು ಭೇಟಿಮಾಡಬಹುದು, ಮಾತನಾಡಬಹುದು. ಅದು ಧ್ಯಾನಯೋಗದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ನಾವು ಮನಸ್ಸನ್ನು ಶೂನ್ಯಮಾಡಿಕೊಳ್ಳಬೇಕು. ಪತಂಜಲಿಯ ಮೊದಲ ಸೂತ್ರ: "ಅಥಃ ಯೋಗಾನು ಶಾಸನಂ ಎರಡನೆಯದು ಯೋಗಃ ಚಿತ್ತವೃತ್ತಿ ನಿರೋಧಃ" ಯೋಗವೆಂದರೆ ಚಿತ್ತವೃತ್ತಿಗಳನ್ನು ನಿರೋಧಿಸುವುದು, ನಿಲ್ಲಿಸುವುದು, ಯೋಗಶಾಸ್ತ್ರವೆಂದರೆ ಪತಂಜಲಿಯದೇ. ನಮ್ಮ ಮನಸ್ಸು ಯಾವಾಗಲೂ ಫ್ಯಾನ್ ತಿರುಗಿದಂತೆ ತಿರುಗುತ್ತಿರುತ್ತದೆ. ಆಗ ನಾವು ಅದನ್ನು switch off ಮಾಡಬೇಕು. ಲೈಟ್ ಯಾವಾಗಲೂ ಉರಿಯುತ್ತಿರುತ್ತದೆ, ಅದರ ಅವಶ್ಯಕತೆ ಇಲ್ಲದಿರುವಾಗ ಲೈಟ್ ಉರಿಯುತ್ತಿದ್ದರೆ. ಅದು ವಿದ್ಯುತ್ ಅಪವ್ಯಯವೇ ಅಲ್ಲವೇ?

ಹಾಗೆಯೇ ನಾವು ಧ್ಯಾನಯೋಗವಿಲ್ಲದೇ, ಯೋಗವಿಲ್ಲದೇ ನಮ್ಮ ಶಕ್ತಿಯನ್ನು ಅಪವ್ಯಯ ಮಾಡುತ್ತಿದ್ದೇವೆ. ಶೇ.90ರಷ್ಟು ಶಕ್ತಿ ಅಪವ್ಯಯವಾಗಿ ಆಗ ನಾವು ಕೆಲಸಕ್ಕೆ ಬಾರದ ವಿಷಯಗಳನ್ನು ಆಲೋಚಿಸುತ್ತಾ, ಕೆಲಸಕ್ಕೆ ಬಾರದ್ದನ್ನು ತಿನ್ನುತ್ತಾ, ಕೆಲಸಕ್ಕೆ ಬಾರದ್ದನ್ನು ನೋಡುತ್ತಾ, ಕೇಳುತ್ತಾ (ಯೋಗವಿಲ್ಲದೇ) ಪ್ರತಿಮನುಷ್ಯ ಶೇ.90ರಷ್ಟು ಶಕ್ತಿಯನ್ನು ಅಪವ್ಯಯಗೊಳಿಸುತ್ತಿದ್ದಾನೆ.

ಆದ್ದರಿಂದ ನಾದಯೋಗವೋ, ಜ್ಞಾನಯೊಗವೋ, ಸ್ವಾಧ್ಯಾಯಯೋಗವೋ, ಭಕ್ತಿಯೋಗವೋ, ರಾಜಯೋಗವೋ, ಯಾವುದೋ ಒಂದು ಯೋಗದಲ್ಲಿದ್ದರೆ, ನಿನ್ನ ಸಮಯ ವ್ಯರ್ಥವಾಗುವುದಿಲ್ಲ. ಫ್ಯಾನು, ಲೈಟ್ ವ್ಯರ್ಥವಾಗಿ ಉರಿಯುತ್ತಿದ್ದರೆ, ಕರೆಂಟ್ ಬಿಲ್ ಹೆಚ್ಚಾಗಿ ಬರುವಂತೆ. ನಮ್ಮ ವ್ಯರ್ಥ ಆಲೋಚನೆಗಳಿಂದ ಕಲಾಪಗಳಿಂದ ರೋಗಗಳು ಬಂದು ಔಷಧಿ ಮಾತ್ರೆಗಳ ಬಿಲ್ ಬರುತ್ತದೆ.

****

ಪ್ರಶ್ನೆ: ಗುರೂಜಿ ನಾವು ಯೋಗದ ಬಗ್ಗೆ ಮಾತನಾಡುತ್ತಿದ್ದೇವೆ, ಪತಂಜಲಿಯ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಪೂರ್ತಿಯಾಗಿ ಸ್ವದೇಶಿಯವೇ, ಭಾರತೀಯವಾದದ್ದೇನಾ? ಇದನ್ನು ನಾವು ವಿಶ್ವವ್ಯಾಪ್ತವಾಗಿ ಎಲ್ಲರಿಗೂ ಅನುಕೂಲ ಎಂದು ಹೇಗೆ ಹೇಳುತ್ತೇವೆ?

ಪತ್ರೀಜಿ: ನೀವು ಕೇವಲ ವಿಶ್ವ, ಭಾರತ ಎಂದು ಹೇಳುತ್ತಿದ್ದೀರಿ. ಆದರೆಲೆಕ್ಕವಿಲ್ಲದಷ್ಟು ಬೇರೆ ಬೇರೆ ಗ್ರಹಗಳೂ ಇವೆ, ಕ್ಷೀರಪಥಗಳೂ ಇವೆ. ಅಲ್ಲಿ ಅಸಂಖ್ಯಾತವಾದ ಮನುಕುಲಗಳೆಲ್ಲಾ ಇವೆ. ಪ್ರತಿ ಗ್ರಹದಲ್ಲೂ, ಗೆಲಾಕ್ಸಿಯಲ್ಲೂ ಇಂತಹ ಭೂಗ್ರಹವಿದೆ. ಯೋಗ ಎಲ್ಲರಿಗೂ ಸಂಬಂಧಿಸಿದೆ. ಈ ಭಾರತಕ್ಕೆ, ಭೂಗ್ರಹಕ್ಕೆ ಮಾತ್ರ ಯೋಗ ಸಂಬಂಧಿಸಿರುವುದಲ್ಲ. ಎಲ್ಲರಿಗೂ ಸಂಬಂಧಿಸಿದ್ದು. ಸನಾತನವಾದದ್ದು. ಆದರೆ ಭಾರತದಲ್ಲಿ ಸ್ವಲ್ಪ ಹೆಚ್ಚಾಗಿ ಪ್ರಬಲವಾಗಿ ಬೇರೂರಿದೆ. ಅದಕ್ಕಾಗಿ ನಾವು ಈ ಭೂಮಂಡಲದಲ್ಲಿ ಯೋಗವನ್ನು ಪ್ರತಿನಿಧಿಸುತ್ತಿದ್ದೇವೆ.

ಪ್ರಶ್ನೆ: ಪತ್ರೀಜಿ ಸಾಧಾರಣವಾಗಿ ಯಾರಾದರೂ ಏನನ್ನಾದರೂ ಅಭಿಮಾನಿಸಿದರೂ, ಆದರಿಸಿದರೂ, ಆಚರಿಸಿದರೂ, ಅದರಲ್ಲಿ ಉನ್ನತ ಸ್ಥಿತಿಗೆ ಹೋದರೂ, ಅದರಿಂದ ಪ್ರಯೋಜನವನ್ನು ಆಶಿಸುತ್ತಾರೆ. ಅದು ಲೌಕಿಕವಾಗಿರಬಹುದು, ಅಲೌಕಿಕವಾಗಬಹುದು. ಯೋಗವನ್ನು ಏನು ಆಶಿಸುತ್ತಾ ಮಾಡಿದರೆ ಉತ್ತಮ ಫಲಿತಗಳು ಬರುತ್ತದೆ? ಸಾಧಾರಣವಾಗಿ ಕೆಲವರು ತಮ್ಮ ಮಾನಸಿಕ ನೋವುಗಳು ತೊಲಗಿಹೋಗಬೇಕೆಂದೋ, ಶಾರೀರಿಕ ನೋವುಗಳು ತೊಲಗಬೇಕೆಂದೋ ಆಶಿಸುತ್ತಾರೆ.

ಪತ್ರೀಜಿ: ಎಲ್ಲವೂ, ತಲೆನೋವಿನಿಂದ ಕ್ಯಾನ್ಸರ್‌ವರೆಗೂ ಎಲ್ಲವೂ, ಡಿಪ್ರೆಷನ್‌ನಿಂದ ಆರಂಭಿಸಿ ನನ್ನ ಗತಜನ್ಮಗಳು ನಾನು ನೋಡಿಕೊಳ್ಳಬೇಕು ಎನ್ನುವವರೆಗೂ, ನೀವು ಏನಾದರೂ ಹೇಳಿ ಅದಕ್ಕೆ ಕಾರಣ ಯೋಗವೇ ಉತ್ತರ. ಕೆಲವರು ಬಂದು ಸ್ವಾಮೀಜಿ ತಲೆನೋವು ಎನ್ನುತ್ತಾರೆ. ಆಗ “ಹೌದಾ! ಕಣ್ಣೆರೆಡು ಮುಚ್ಚೆ, ಕೈಗಳೆರೆಡೂ ಒಂದರಲ್ಲಿ ಒಂದನ್ನು ಸೇರಿಸು, ಕದಲದೇ ಕುಳಿತುಕೋ, ಶ್ವಾಸದ ಮೇಲೆ ಗಮನವಿಡು. ಐದು ನಿಮಿಷದಲ್ಲಿ ತಲೆನೋವು ಹೋಗುತ್ತದೆ.”ಎಂದು ನಾನು ಹೇಳುತ್ತೇನೆ.

ಕೆಲವರು ತಮಗೆ ಕ್ಯಾನ್ಸರ್ ಎನ್ನುತ್ತಾರೆ. ಆಗಲೂ ಅದೇ ಕೆಲಸ (ಪ್ರೋಸೆಸ್). ಮೂರು ತಿಂಗಳ ಕಾಲ ಧ್ಯಾನವನ್ನು ಪ್ರತಿದಿನ 2-3 ಗಂಟೆಗಳಷ್ಟು ಕಾಲ ಮಾಡು ನಿನ್ನ ಕ್ಯಾನ್ಸರ್ ಹೋಗುತ್ತದೆ. ಅಂದರೆ ಏನಾದರೂ ಸರಿ ಹೋಗುತ್ತದೆ ಎನ್ನುತ್ತೇನೆ. ಕೆಲವರು ನನ್ನ ಬಳಿ ಬಂದು ಸ್ವಾಮೀಜಿ ನನ್ನ ಗತಜನ್ಮಗಳು ನೋಡಿಕೊಳ್ಳಬೇಕು. "ಬಾ ಕುಳಿತುಕೋ ಕಣ್ಣೆರೆಡೂ ಮುಚ್ಚು". "ಬುದ್ಧನು ನೋಡಿದ್ದಾನೋ ಇಲ್ಲವೋ?" .. ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನ ನೊಂದಿಗೆ ಹೇಳಿದ್ದಾನೆ. "ಬಹೂನಿ ಮೈ ವ್ಯತಿತಾನಿ ಜನ್ಮಾನಿ ತವಚಾರ್ಜುನ ತಾನ್ಯಹಂ ವೇದ ಸರ್ವಾಣಿ ನತ್ವಂ ವೇದ ಪರಂತಪ ಅಂದರೆ ಅರ್ಜುನ ನಾನು ನೀನು ಎಷ್ಟೋ ಜನ್ಮಗಳನ್ನು ತಳೆದಿದ್ದೇವೆ. ಅದೆಲ್ಲಾ ನನಗೆ ಗೊತ್ತು ನಿನಗೆ ಗೊತ್ತಿಲ್ಲ" ಈತನಿಗೆ ಹೇಗೆ ಗೊತ್ತು? ಎಂದರೆ ಕೃಷ್ಣ ಯೋಗೀಶ್ವರ ಕೇವಲ ಯೋಗಿ ಅಲ್ಲ "ಮಾಸ್ಟರ್ ಆಫ್ ಮಾಸ್ಟರ್ಸ್". ಮಾಸ್ಠರ್ ಅಂದರೆ ಯೋಗಿ, ಮಾಸ್ಟರ್ ಆಫ್ ಮಾಸ್ಟರ್ಸ್ ಎಂದರೆ ಯೋಗೀಶ್ವರ. ’ಮದರ್ ಎಂದರೆ ತಾಯಿ’. ಗ್ರಾಂಡ್ ಮದರ್ ಎಂದರೆ ’ತಾಯಿಗೆ ತಾಯಿ’. ಆದ್ದರಿಂದ ಯಾವ ಸಮಸ್ಯೆಯಾದರೂ ಅದಕ್ಕೆ ಮಾರ್ಗ ಂiಗವೇ. ಆದರೆ ಕೆಲವರು ಯೋಗವೆಂದರೆ ಆಸನ ಎಂದುಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಅಷ್ಟೇ ತಿಳಿದಿರುವುದು. ಹೀಗೆ ವಿಭಾಗಗಳಾಗಿ ನೋಡುತ್ತಿದ್ದಾರೆ. ಈ ಮೊದಲೇ ಆನೆಯ ಕಥೆ ಹೇಳಿದ್ದೇವಲ್ಲಾ ಹಾಗೆ. ಹಾಗೆಯೇ ಧ್ಯಾನ ಮಾಡಿದರೆ ಎಲ್ಲಾ ಸರಿಹೋಗುತ್ತದೆ ಎಂದು ಹೇಳಿಕೊಂಡಿದ್ದೇವೆ. ಇದಕ್ಕೆ ಒಂದಕ್ಕೊಂದು ಪೂರಕವಾಗುವ ವಿಧವಾಗಿ ನಾವು ಆಸನಗಳಾಗಲಿ ಪ್ರತಿಯೊಂದು ಇದಕ್ಕೆ ಪೂರಕವಾಗುತ್ತದೆ. ಅದು ಒಂದಾದಾಗ ಫಲಿತಾಂಶ ಬೇಗ ಬರುತ್ತದೆ. ಅದು ಅವರವರ ಇಷ್ಟಕ್ಕೆ ಬಿಟ್ಟಿರುತ್ತದೆ.

ಪ್ರಶ್ನೆ: ಪ್ರಾರಂಭ ದಶೆಯಲ್ಲಿ (ಹಂತ) ಸಾಧಕರಿಗೆ ತುಂಬಾ ಸಂದೇಹಗಳಿರುತ್ತದೆ. ಯಾವಾಗ ಮಾಡಬೇಕು? ಹೇಗೆ ಮಾಡಬೇಕು? ಎಲ್ಲಿ ಕುಳಿತುಕೊಳ್ಳಬೇಕು? ಹೇಗೆ ಕುಳಿತುಕೊಳ್ಳಬೇಕೆಂದು ಸಂದೇಹ ಬರುತ್ತದೆ?

ಪತ್ರೀಜಿ: ಆಗ ನಾನು ಏನು ಹೇಳುತ್ತೇನೆಂದರೆ, ನನ್ನ ಗುರಿ ಏನೆಂದರೆ, ಆನೆಗೆ ಕುಂಭಸ್ಥಳದಂತೆ. ನನಗೆ ಧ್ಯಾನಯೋಗ. ಚದುರಂಗದಲ್ಲಿ ರಾಜನಂತೆ ನನ್ನ ಧ್ಯಾನ. ನಾನು ಎಲ್ಲಕ್ಕಿಂತ ಮುಖ್ಯವಾದದನ್ನೇ ಹಿಡಿದಿದ್ದೇನೆ. ಅದರ ಹೆಸರೇ ಆನೆಯ ಕುಂಭಸ್ಥಳ. ಯಾವ ಅಂಗವನ್ನು ಹೊಡೆದರೂ, ಅನೆಯ ಕುಂಭಸ್ಥಳವನ್ನೇ ಮತ್ತೆ ಹೊಡೆಯಬೆಕು. ಹಾಗೆಯೇ ಧ್ಯಾನ ಯೋಗದಲ್ಲಿ ಯಾವಾಗಲಾದರೂ ಧ್ಯಾನ ಮಾಡಬಹುದು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ನಿಮ್ಮಿಷ್ಟ ನಿಮ್ಮದು. ಎಲ್ಲಾದರೂ ಕುಳಿತುಕೊಳ್ಳಬಹುದು? ಹೇಗೆ ಕುಳಿತುಕೊಳ್ಳಬೇಕು. ನಿಮಿಗಿಷ್ಟ ಬಂದ ಹಾಗೆ ಕುಳಿತುಕೊಳ್ಳಿ. ’ಸ್ಥಿರ ಸುಖ ಆಸನಃ’ ಎಂದಿದ್ದಾರೆ ಪತಂಜಲಿ.
ನೀನು ಕುಳಿತುಕೊಂಡ ಆಸನ ಸ್ಥಿರವಾಗಿರಬೇಕು ಸುಖವಾಗಿರಬೇಕು. ಆಗ ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಮೊದಲು ಆಸನ, ನಂತರ ಪ್ರಾಣಾಯಾಮ. ಪ್ರಾಣಾಯಾಮ ಎಂದರೆ. ಶ್ವಾಸದೊಂದಿಗೆ ಮನಸ್ಸು ಏಕವಾಗುವುದು. ಹಠಯೋಗ ಪ್ರಾಣಾಯಾಮವಿದೆ, ರಾಜಯೋಗ ಪ್ರಾಣಾಯಾಮವೂ ಇದೆ. ಹಠಯೋಗದಲ್ಲಿ ಕುಂಭಕ, ಪೂರಕ, ರೇಚಕಗಳು ಇವೆ. ಹೀಗೆ ವಿಧವಿಧವಾದ ನಿಷ್ಪತ್ತಿಗಳಲ್ಲಿ ಮಾಡುವುದು ಇದೆ. ಆದರೆ ರಾಜಯೋಗ ಪ್ರಾಣಾಯಾಮದಲ್ಲಿ ಸುಮ್ಮನೆ ಉಸಿರಾಟವನ್ನು ಗಮನಿಸುತ್ತಾ ಇರುವುದು. ಇದನ್ನು ಸುಖಮಯ ಪ್ರಾಣಾಯಮ ಎನ್ನುತ್ತಾರೆ. ಸುಖಮಯ ಆಸನದಲ್ಲಿದ್ದರೆ ಆಗ ಚಿತ್ತವೃತ್ತಿ ನಡೆಯುತ್ತದೆ. ಆ ಯೋಗಕ್ಕೆ ಮಹಾಮಾರ್ಗ, gate way ಎಂದರೆ ಈ ಶ್ವಾಸಾನುಸಂಧಾನವೇ. ಯೋಗಃ ಚಿತ್ತವೃತ್ತಿ ನಿರೋಧಃ ಇದು ಮಾಡಿದಾಗ ಅದು ಆಗುತ್ತದೆ. ಆ ಚಿತ್ತವೃತ್ತಿಯನ್ನು ನಿಲ್ಲಿಸುವುದೇ ಯೋಗ.

ಪ್ರಶ್ನೆ: ಈ ಮೊದಲು ನೀವು ನಮ್ಮಲ್ಲಿ ನಾವು ಒಂದಾಗುವುದು ಅಂದಿರಲ್ಲಾ, ಅಂದರೆ, ನಾವು ಹೊರಗಿನ, ವಸ್ತುಗಳು, ಆಕೃತಿಗಳು, ಮನುಷ್ಯರಿಂದ ನಮ್ಮ ಗಮನವನ್ನು ನಿಲ್ಲಿಸಿ ಮತ್ತೆ ನಮ್ಮಲ್ಲಿ ನಾವು ಒಂದಾಗುವುದೇ?

ಪತ್ರೀಜಿ: ನಮ್ಮಲ್ಲಿ ನಾವು ಒಂದಾಗುವುದಲ್ಲ, ನಮ್ಮನ್ನು ನಾವು ತಿಳಿಯುವುದು. ಬೇರೆಯವರನ್ನು ನಾವು ಭೇಟಿಯಾಗುತ್ತೇವೆ. ಆದರೆ ನಮ್ಮನ್ನು ನಾವು ತಿಳಿಯುವುದಿಲ್ಲ. ಹೊರಗೆ ಭೇಟಿಯಾಗುವಿಕೆ ಇರುತ್ತದೆ, ಒಳಗೆ ತಿಳಿದುಕೊಳ್ಳುವುದು ಇರುತ್ತದೆ. ನಮ್ಮನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ ಎಂದರೆ, ಈ ಉಗುರನ್ನು ನೋಡಿ ಉಗುರೇ ನಾವು ಎಂದುಕೊಂಡಿದ್ದೇವೆ. ಆದರೆ ಈ ಉಗುರಿನ ಹಿಂದೆ ಬೆರಳಿದೆ, ಬೆರಳಿನ ಜೊತೆ ಕೈಯ್ಯಿದೆ, ಅದರ ಜೊತೆ ಶರೀರವಿದೆ. ಧ್ಯಾನ ಯೋಗಕ್ಕೆ ಮೊದಲು ಇದೆಲ್ಲಾ ನಾನೇ, ನಾನು ಉಗುರು ಮಾತ್ರ ಎಂದುಕೊಳ್ಳುತ್ತೇವೆ.. ಧ್ಯಾನಕ್ಕೆ ಬಂದನಂತರನಾನು ಇಡೀ ಶರೀರ ಎಂದು ತಿಳಿದುಕೊಳ್ಳುತ್ತೇವೆ,. ಮಮಾತ್ಮ ಸರ್ವಭೂತಾತ್ಮ ಎಂದು ತಿಳಿದುಕೊಳ್ಳುತ್ತೇವೆ. ಧ್ಯಾನ ಯೋಗಕ್ಕೆ ಬಂದ ನಂತರ. ನಾನೇ ಎಲ್ಲಾ ಕಡೆ ಇದ್ದೇನೆ ಎಂಬುದು ತಿಳಿದುಬರುತ್ತದೆ. . ’ಈಗ ನಿಮ್ಮ ಶರೀರದಲ್ಲಿರುವುದು ನಾನೇ, ನನ್ನ ಶರೀರದಲ್ಲಿರುವುದೂ ನೀವೇ’ ಎಂದು ನಮಗೆ ಅನುಭವಕ್ಕೆ ಬರುತ್ತದೆ. ಧ್ಯಾನ ಯೋಗದ ಒಂದು ಪರಾಕಾಷ್ಠೆಯಲ್ಲಿ ಇದೆಲ್ಲಾ ಸಾಧ್ಯವಾಗುತ್ತದೆ.

ಪ್ರಶ್ನೆ: ಗುರೂಜಿ, ಈಗ ಧ್ಯಾನದಲ್ಲಿ, ಶ್ವಾಸದ ಮೇಲೆ ಗಮನ ನಿಲ್ಲಲು ಆಹಾರ ವಿಹಾರಗಳು ಹೇಗೆ ಸಹಾಯಕವಾಗುತ್ತದೆ ಎನ್ನುತ್ತೀರಿ?

ಪತ್ರೀಜಿ: ಯಾವಾಗಲೂ ನಾವು ಸಾತ್ವಿಕ ಆಹಾರದಲ್ಲಿ ಇರಬೇಕು. ಅದಕ್ಕೆ ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾರೆ. ತಾಮಸಿಕ ಆಹಾರವಿದೆ, ಇದು ತಮೋಗುಣವನ್ನು ಬೆಳೆಸುತ್ತದೆ. ರಾಜಸಿಕ ಆಹಾರವಿದೆ, ಇದು ರಜೋಗುಣವನ್ನು ಬೆಳೆಸುತ್ತದೆ. ನಮಗೆ ಬೇಕಾಗಿರುವುದು ಸಾತ್ವಿಕ ಆಹಾರ, ಮುಖ್ಯವಾಗಿ ಶಾಕಾಹಾರವನ್ನೇ ತೆಗೆದುಕೊಳ್ಳಬೇಕು. ಮಾಂಸಾಹಾರ ತಿನ್ನುವುದನ್ನು ಬಿಡುವವರೆಗೂ ಅವರಿಗೆ ಸಮಸ್ಯೆಗಳು ತಪ್ಪುವುದಿಲ್ಲ. ಏಕೆಂದರೆ ಅದೆಲ್ಲಾ ತಾಮಸಿಕ, ಮಹಾ ತಾಮಸಿಕ ಆಹಾರ. ರಾಕ್ಷಸಾಹಾರ. ಅದನ್ನು ತಿನ್ನುವುದರಿಂದ ರಾಕ್ಷಸತ್ವ ಬೆಳೆಯುತ್ತದೆ. ಅಂದರೆ ದೈವತ್ವಕ್ಕೆ ಸ್ಥಳವೆಲ್ಲಿ? ಒಬ್ಬ ದಕ್ಷಿಣ ಧ್ರುವಕ್ಕೆ ಹೋಗಬೇಕು, ಆದರೆ ಅವನು ಮಾಂಸವನ್ನು ’ತಿಂದು’ ಉತ್ತರ ಧ್ರುವಕ್ಕೆ ಹೋಗುತ್ತಿದ್ದಾನೆ. ನೀನು ಧ್ಯಾನ ಮಾಡದಿದ್ದರೂ, ಮಾಡಿದರೂ ಯೋಗದಲ್ಲಿ ಒಳ್ಳೆಯ ಸ್ಥಿತಿಗೆ ಬರಲು ಪ್ರತಿ ಮನುಷ್ಯ ಶಾಕಾಹಾರಿಯಾಗಬೇಕು. "ಅಹಿಂಸಾ ಪರಮೋ ಧರ್ಮಃ" ಆದರೆ ಮಾಂಸಾಹಾರವು ಹಿಂಸೆ ಅಲ್ಲವೇ, ಮೀನನ್ನು ಹಿಡಿದರೆ ಹಿಂಸೆಯೇ ಅಲ್ಲವೇ ಅದನ್ನು ಕೊಂದು ಕತ್ತರಿಸಿ, ಒಗ್ಗರಣೆ ಹಾಕಿ .. ಅದೆಲ್ಲಾ ಮೃಗತ್ವದ ವ್ಯವಹಾರ ನಾವು ನಾಗರಿಕರು, ದೈವೀ ಸಂಪತ್ತು ನಮಗೆ ಬೇಕು. ನಿನಗೆ ಶಾಂತಿ ಬೇಕೆಂದರೆ ನೀನು ಸಾತ್ವಿಕ ಅಹಾರವನ್ನು ತೆಗೆದುಕೋ. ನಿನ್ನೊಳಗೆ ಚಿಕನ್, ಮಟನ್ ಹಾಕಿದರೆ ನಿನಗೆ ಯೋಗವು ಬರುವುದಿಲ್ಲ. ಆದ್ದರಿಂದ ಹೊಟ್ಟೆಯೊಳಗೆ ಯಾವಾಗಲೂ ಸಾತ್ವಿಕ ಆಹಾರವಿರಬೇಕು. "ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು!! ಯುಕ್ತ ಸಪ್ನಾವ ಬೋಧಸ್ಯ ಯೋರ್ಗೋಭವತಿ ದುಖಃ" ಯೋಗದಿಂದ ದುಃಖ ಹರಣವಾಗುತ್ತದೆ ಎಂದು ಕೃಷ್ಣನು ಹೇಳಿದ್ದಾನೆ. ಅದಕ್ಕಾಗಿ ನಾವು "ವಿಶ್ವ ಯೋಗ" ದಿನವನ್ನು, ಅಂದರೆ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸುತ್ತಿದ್ದೇವೆ. . ಯೋಗವಿಲ್ಲದಿದ್ದರೆ ದುಖಃದಲ್ಲಿದ್ದೀಯೇ ಎಂದು ಅರ್ಥ.
ಸರಿಯಾದ ಆಹಾರ, ಸರಿಯಾದ ವಿಹಾರ, ಸರಿಯಾದ ಕ್ರಿಯೆ, ಸರಿಯಾದ ನಿದ್ರೆ, ಸರಿಯಾದ ಬೋಧೆ, ಅಂದರೆ ಧ್ಯಾನ ಇವೆಲ್ಲಾ ಸರಿಯಾಗಿದ್ದರೆ ಅದೇ ಯೋಗ. ಹಿತವಾದ ಆಹಾರವನ್ನು ಮಿತವಾಗಿ ತೆಗೆದುಕೊಳ್ಳುವುದು. ಎಂದು ಯೋಗದ ಬಗ್ಗೆ ಹೇಳಿದ್ದಾರೆ.

Go to top