"ಲೋಕಾಃ ಸಮಸ್ತಾ ಸುಖಿನೋಭವಂತು"


"ಮನಸ್ಸು ಎನ್ನುವುದು ಮಾಯಾಮೃಗ...
... ಮನಸ್ಸನ್ನು ಮನಸ್ಸಿನಿಂದ ಸಾಯಿಸಿದರೆ ಮನಸ್ಸಿಗೆ ಅದು ಮೋಕ್ಷ" ಎಂದಿದ್ದಾರೆ ಮಹಾಯೋಗಿ ವೇಮನ.
"ಬಂಧಕ್ಕೆ, ಮೋಕ್ಷಕ್ಕೆ ಮನಸ್ಸೇ ಕಾರಣ" ಎಂದು ಉಪನಿಷತ್ತಿನಲ್ಲಿದೆ.
"The Mind in itself makes a hell of a heaven and heaven of a hell"
ಎಂದಿದ್ದಾನೆ ಜಾನ್ ಮಿಲ್ಟನ್.
"ಮನಸ್ಸಿನೊಳಗಿನ ಮರ್ಮವನ್ನು ತಿಳಿದುಕೋ" ಎಂದಿದ್ದಾರೆ ಶ್ರೀ ತ್ಯಾಗರಾಜರು
"ಯದ್ಭಾವಂ ತದ್ಭವತಿ"
"As You Think So It Becomes" ಎನ್ನುವುದು ಸನಾತನ ಆಧ್ಯಾತ್ಮಿಕ ಸತ್ಯ.
"ಮನಸ್ಸು" ಎನ್ನುವುದು ನಿರಂತರ ಆಲೋಚನೆಗಳ ಹುತ್ತ .. ಲೆಕ್ಕವಿಲ್ಲದಷ್ಟು ಹುಚ್ಚು ಆಲೋಚನೆಗಳ ಬುಟ್ಟಿ ಹೆಚ್ಚಾಗಿ

ಹಾನಿಕಾರಕ ಆಲೋಚನೆಗಳು, ಕಡಿಮೆ ಲಾಭಕಾರಕ ಆಲೋಚನೆಗಳು .. ಇವೆರೆಡರ ಸಂಗಮವೇ "ಮನಸ್ಸು"
ಆದರೆ, ನಾವು ಯಾವಾಗ ಆನಾಪಾನಸತಿ ಅಭ್ಯಾಸದಿಂದ ಧ್ಯಾನ ಪ್ರಾರಂಭಿಸುತ್ತೇವೋ
ಯಾವಾಗ ಸ್ವಾಧ್ಯಾಯ, ಸಜ್ಜನ ಸಾಂಗತ್ಯ ಇತ್ಯಾದಿಗಳಿಂದ ಜ್ಞಾನವನ್ನು ಸಮೀಕರಿಸಿಕೊಳ್ಳುತ್ತೇವೋ
"ಮನಸ್ಸಿನ ಮಹಾಶುದ್ಧೀಕರಣ" ಆಗಲೇ ಪ್ರಾರಂಭವಾಗುತ್ತದೆ
"ಮನಸ್ಸಿನ ಹುತ್ತ"ದಲ್ಲಿ ಕೆಲಸಕ್ಕೆಬಾರದ ಆಲೋಚನಗಳೆಂಬ ’ಕಳೆ’ಯನ್ನು
ತೆಗೆದು ಹಾಕುವುದು ಜರುಗುತ್ತದೆ.
"ಮನಸ್ಸೆಂಬ ಬುಟ್ಟಿ"ಯೊಳಗಿನ "ಕೆಲಸಕ್ಕೆಬಾರದ ಹಾನಿಕಾರಕ, ವ್ಯರ್ಥಆಲೋಚನೆಗಳನ್ನು ಕಿತ್ತುಹಾಕಲಾಗುತ್ತದೆ"
ಇದರಿಂದ ಆಲೋಚನೆಗಳ ಹುತ್ತದ ಮತ್ತು ಆಲೋಚನೆಗಳ ಬುಟ್ಟಿಯ ಪೂರ್ಣ ಶುದ್ಧೀಕರಣ ಜರುಗುತ್ತದೆ
ಉಳಿದಿರುವ ಲೋಕಕಲ್ಯಾಣಕರ ಆಲೋಚನೆಗಳಿಂದ ಮಹಾಲೋಕಕಲ್ಯಾಣ ಜರುಗುತ್ತದೆ
"ದೇಹಶುದ್ಧಿ" ಎನ್ನುವುದು ನೀರಿನಿಂದ ಮಾತ್ರ ಜರುಗುತ್ತದೆ .. ಎಂಬುದು ಎಲ್ಲರಿಗೂ ತಿಳಿದಿದೆ
ಆದರೆ "ಮನೋಶುದ್ಧಿ ಅಥವಾ ಆತ್ಮಸಿದ್ಧಿ"ಎನ್ನುವುದು ಮಾತ್ರ
ಕೇವಲ ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯ ಇತ್ಯಾದಿಗಳಿಂದ ಮಾತ್ರ ಸಾಧ್ಯ
ಆದ್ದರಿಂದ
ಹೆಚ್ಚಾಗಿ ಆನಾಪಾನಸತಿ ಧ್ಯಾನಸಾಧನೆಯಲ್ಲಿ ಮುಳುಗೋಣ
ಹೆಚ್ಚಾಗಿ ಸ್ವಾಧ್ಯಾಯ, ಸಜ್ಜನ ಸಾಂಗತ್ಯಗಳನ್ನು ಮಾಡೋಣ
ಹೆಚ್ಚಾಗಿ ಲೋಕಕಲ್ಯಾಣದ ಕಾರ್ಯಕರ್ತರಾಗೋಣ

"ಲೋಕಾಃ ಸಮಸ್ತಾ ಸುಖಿನೋಭವಂತು"

Go to top