"ನಮ್ಮ ದೇಶವನ್ನು ನಾವೇ ಸುಂದರವಾಗಿ ರೂಪಿಸಬೇಕು"


ಅನೇಕ ಮಹಾನುಭಾವರ ಕನಸುಗಳ ಸಾಕಾರವೇ "ಪಿರಮಿಡ್ ಪಾರ್ಟಿ ಆಫ್ ಇಂಡಿಯಾ"! ಒಳ್ಳೆಯವರೆಲ್ಲರೂ ರಾಜಕೀಯಕ್ಕೆ ದೂರವಿರುತ್ತಿದ್ದಾರೆ ಆದ್ದರಿಂದಲೇ ಭ್ರಷ್ಟಾಚಾರ, ಬಂಧುಪ್ರೀತಿ, ಅನ್ಯಾಯ ಮತ್ತೆ ಹಿಂಸಾ ಪ್ರವೃತ್ತಿಗಳು ಇಂದು ವಿಜೃಂಭಣೆಯಿಂದ ರಾಜ್ಯವಾಳುತ್ತಿದೆ.

ಒಬ್ಬ ಆತ್ಮಜ್ಞಾನಿ .. ಒಂದು ಮನೆಗೆ ಪ್ರವೇಶ ಮಾಡಿದರೆ .. ನಿಧಾನವಾಗಿ ಆ ಮನೆಯೆಲ್ಲಾ ಶಕ್ತಿಯುತವಾದಂತೆ .. ಒಬ್ಬ ಆತ್ಮಜ್ಞಾನಿ ಕೂಡಾ ಅಸೆಂಬ್ಲಿಯಲ್ಲಿಯಾಗಲಿ, ಪಾರ್ಲಿಮೆಂಟ್‌ನಲ್ಲಿಯಾಗಲಿ ಪ್ರವೇಶ ಮಾಡಿದರೆ .. ಅವು ಸಹ ದೇವಾಲಯಗಳಂತೆ ಬದಲಾಗಿ ಶಕ್ತಿಯುತವಾಗುತ್ತವೆ. ಹೊಸ ನೀರು ಬಂದರೆ .. ಹಳೆಯ ಕೊಳಚೆ ನೀರು ಹೊರಗೆ ಹೋಗುತ್ತದೆ. ವಿಶ್ವದಾದ್ಯಂತ ಧರ್ಮವು ಪ್ರಕಾಶಿಸಬೇಕು!

"ಅಹಿಂಸಾ ಪರಮೋ ಧರ್ಮಃ": ಗಂಡು ಹೆಣ್ಣನ್ನು, ತಂದೆ-ತಾಯಿಯರು ಮಕ್ಕಳನ್ನು, ಮಾನವರು ಎಲ್ಲಾ ಪ್ರಾಣಿಗಳನ್ನು ಹಿಂಸಿಸುತ್ತಿದ್ದಾರೆ. "ಅಹಿಂಸೆಯೇ ಪರಮಧರ್ಮ" ಎಂದು ಪ್ರತಿಯೊಬ್ಬರೂ ಯಾವಾಗ ತಿಳಿದುಕೊಳ್ಳುತ್ತಾರೊ ಆಗಲೇ ಧರ್ಮ ಸಂಸ್ಥಾಪನೆ ಎನ್ನುವುದು ಆಗುತ್ತದೆ. ಆ ದಿನಕ್ಕಾಗಿ ಎದುರು ನೋಡೋಣ.

"ಎದುರು ನೋಡುವುದು" ಎಂದರೆ ಕೈಗಳು ಕಟ್ಟಿಕೊಂಡು ಕುಳಿತಿರುವುದಲ್ಲ! ಕೈಗಳನ್ನು ಜೋಡಿಸಿ ಧ್ಯಾನ ಮಾಡೋಣ. ಧ್ಯಾನದಿಂದಲೇ ಎಲ್ಲಾ ಲಭ್ಯವಾಗುತ್ತದೆ. "ಮಹಾತ್ಮಾ ಗಾಂಧೀಜಿ" ಅಂತಹವರೇ ಮುಖ್ಯಮಂತ್ರಿಯಾಗಿ, ‘MP’ಯಾಗಿ 'MLA'ಯಾಗಿ ಬರಬೇಕು! ಅದೇ ನಮ್ಮ ತೀರ್ಮಾನ. ಅದಕ್ಕೆ ನಮ್ಮ ಧ್ಯಾನಶಕ್ತಿಯನ್ನು ಜೊತೆಗೂಡಿಸೋಣ. ಯೋಗಿಗಳ ಮನಸ್ಸಿನಲ್ಲಿ ಏನು ಹೊಳೆಯುತ್ತದೆಯೊ ಅದು ಆಸ್ಟ್ರಲ್ ಆಗಿ ನಿರ್ಮಾಣ ಹೊಂದಿ ಭೌತಿಕವಾಗಿ ಅವತರಿಸಿ ಸಾಮಾನ್ಯ ಪ್ರಜೆಗಳಿಗೆ ವಾಸ್ತವವಾಗಿ ಆವಿರ್ಭವಿಸುತ್ತದೆ.

ಎಲ್ಲಿಯೂ ಹಿಂಸೆ ಎನ್ನುವುದು ಇರಬಾರದು! ಯಾರೂ ಸಹ ಹಿಂಸೆಗೆ ತುತ್ತಾಗಬಾರದು. ಮಾನವನು ಯಾವ ಪ್ರಾಣಿಯನ್ನೂ ಕೊಲ್ಲಬಾರದು. ಮಾನವರೆಲ್ಲಾ ಅಮಾನವತೆಯಿಂದ ಇದ್ದಾರೆ, ಅಮಾನುಷತೆ ಹೋಗಿ "ಮಾನವತೆ" ಸಿದ್ಧಿಸಬೇಕು. ಅಮಾನುಷತೆಯವನ್ನು ಅಳಿಸುವ ಶಕ್ತಿ ಧ್ಯಾನಕ್ಕೆ ಮಾತ್ರ ಇದೆ. ಧರ್ಮವರ್ತಕರು ಮತ್ತು ಅಹಿಂಸಾತ್ಮಕರು ಆದವರೇ ರಾಜ್ಯ ಪಾಲನೆ ಮಾಡಬೇಕು. ಧ್ಯಾನ ಮಾಡದಿದ್ದರೆ ಹಿಂಸಾ ಪ್ರವೃತ್ತಿ .. ಧ್ಯಾನ ಮಾಡಿದರೆ ಅಹಿಂಸಾ ಪ್ರವೃತ್ತಿ!

ಸಮಸ್ತ ಮಾನವಜಾತಿ ಪ್ರಾಣಿಗಳನ್ನು ಹಿಂಸಿಸಿ, ಪೀಡಿಸಿ ತಿನ್ನುತ್ತಿದ್ದಾರೆ .. ಅದು ಇಲ್ಲದಿದ್ದರೆ ಪಿರಮಿಡ್ ಪಾರ್ಟಿ ಆವಿರ್ಭವಿಸುತ್ತಿರಲಿಲ್ಲ, ಪಿರಮಿಡ್ ಮಾಸ್ಟರ್ ಹುಟ್ಟುತ್ತಿರಲಿಲ್ಲ; ಮಾನವರನ್ನು ಭಗವಂತರಾಗಿ ಬದಲಾಯಿಸಲು ಪಿರಮಿಡ್ ಮಾಸ್ಟರ್ಸ್ ಹುಟ್ಟಿದ್ದಾರೆ. ಪಿರಮಿಡ್ ಮಾಸ್ಟರ್ಸ್ ರವರ ಸಂಘಟಿತ ರಾಜಕೀಯ ಏಕೀಕರಣವೇ "ಪಿರಮಿಡ್ ಪಾರ್ಟಿ!"

ಪ್ರಪಂಚವೆಲ್ಲಾ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಕಡೆ ನೋಡುವ ದಿನ ಶೀಘ್ರದಲ್ಲೆ ಬರುತ್ತದೆ. ಅನಾದಿಯಿಂದ ಆಧ್ಯಾತ್ಮಿಕ ವಿಜ್ಞಾನಿಗಳು ರಾಜಕೀಯ ರಂಗಪ್ರವೇಶ ಮಾಡಿ ದೇಶಸೇವೆಯಲ್ಲಿ ವಿಸ್ತೃತವಾಗಿ ಭಾಗವಹಿಸಿದ್ದಾರೆ ಎಂದು ಚರಿತ್ರೆ ಹೇಳುತ್ತಿದೆ. ನಾವು ನಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೇವೊ .. ಹಾಗೆ ನಮ್ಮ ದೇಶವನ್ನು ಕೂಡಾ ನಾವು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಮನೆಯನ್ನು ನಾವು ಹೇಗೆ ಶುಚಿಯಾಗಿ ರೂಪಿಸಿಕೊಳ್ಳುತ್ತಿದ್ದೇವೊ ಹಾಗೆಯೆ ಒಳ್ಳೆಯತನದಿಂದ ದೇಶವನ್ನು ಕೂಡಾ ನಾವು ರೂಪಿಸಬೇಕು.

ಮಾಂಸಾಹಾರ ತಿನ್ನುವವರು ಯಾರೂ ಸಹ ರಾಜಕೀಯ ಪದವಿಗಳಿಗೆ ಏರಬಾರದು. ರಾಕ್ಷಸ ಪ್ರವೃತ್ತಿಯಿಂದ ಕೂಡಿಕೊಂಡಿರುವ ಇಂತಹ ಹಿಂಸಾತ್ಮಕರು ಪ್ರಜೆಗಳನ್ನು ಆಳಲು ಸ್ವಲ್ಪವೂ ಅರ್ಹರಲ್ಲ. ಒಂದು ಜೀವಿಯನ್ನು ರಕ್ಷಿಸಲಾಗದವರು ದೇಶವನ್ನು ಯಾವ ರೀತಿಯಲ್ಲಿ ರಕ್ಷಿಸಬಲ್ಲವರಾಗುತ್ತಾರೆ? ಮೂಕ ಜೀವಿಗಳನ್ನು ಭಕ್ಷಿಸುವವನು, ನಮ್ಮನ್ನು ನಮ್ಮ ದೇಶವನ್ನು ಕೂಡಾ ಚೆನ್ನಾಗಿ ಭಕ್ಷಿಸಿಬಿಡುತ್ತಾನೆ. ಆದ್ದರಿಂದ, ಐದು ವರ್ಷಗಳವರೆಗೂ ದೇಶವನ್ನು ಪರಿಪಾಲಿಸುವ ಪಾಲಕರನ್ನು ಆಯ್ಕೆ ಮಾಡುವಾಗ ನಾವು ಅನೇಕ ರೀತಿಗಳಲ್ಲಿ ಯೋಚಿಸಬೇಕು!

ನೂರಾರು ವರ್ಷಗಳಿಂದ ಸಾಕ್ರೆಟೀಸ್, ಅರಿಸ್ಟಾಟಲ್, ಪ್ಲೇಟೋ, ಮಹಾತ್ಮಾ ಗಾಂಧೀ, ಬಾಲಗಂಗಾಧರ್ ತಿಲಕ್, ಲಾಲಾಲಜಪತಿರಾಯ್, ಅರಬಿಂದೋ, ವೀರಬ್ರಹ್ಮೇಂದ್ರ ಸ್ವಾಮಿ ಅಂತಹ ಮಹಾನುಭಾವರು ಕಂಡ ಕನಸುಗಳು ನಿಜವಾಗಬೇಕಾದರೆ ಆತ್ಮಜ್ಞಾನಿಗಳು ತಪ್ಪದೇ ರಾಜಕೀಯಗಳಲ್ಲಿ ಪ್ರವೇಶಿಸಬೇಕು .. ಹಿಂಸೆಯಿಲ್ಲದ ಪಾಲನೆ ತರಬೇಕು .. ಪ್ರಜೆಗಳೆಲ್ಲಾ ತಕ್ಷಣ ಧ್ಯಾನಾತ್ಮರಾಗಿ ಧರ್ಮಾತ್ಮರಾಗಿ ಬದಲಾಗಬೇಕು!

 

Go to top