"ಯೋಗದ ಅನಷ್ಠಾನದಿಂದಲೇ ಯೋಗ್ಯತೆ"

 

"ಇಂದಿನ ಕನಸುಗಳೇ ನಾಳಿನ ವಾಸ್ತವಗಳಿಗೆ ಮೂಲ ಬೀಜಗಳಾಗುತ್ತವೆ"!

ಭವಿಷ್ಯತ್ತಿನಲ್ಲಿ ನಮಗೆ ಬೇಕಾಗಿರುವುದನ್ನು .. ನಮಗೆ ಬೇಕಾಗಿರುವ ರೀತಿಯಲ್ಲಿ ನಾವೇ ಸ್ವಯಂ ರೂಪಿಸಿಕೊಳ್ಳುವ ಸುತ್ತಿಗೆ, ಕುಡುಗೋಲು .. ಇಂದು ನಾವು ಕಾಣುವ ಕನಸುಗಳು!

ಆದರೆ, ನಮ್ಮ ದೇಶ ಸ್ವರ್ಣಸದೃಶವಾಗಬೇಕಾದರೆ ಕೇವಲ ಒಳ್ಳೆಯ ಕನಸುಗಳನ್ನು ಕಾಣುತ್ತಲೇ ಇದ್ದರೆ ಏನೂ ಉಪಯೋಗವಿಲ್ಲ! ಅದಕ್ಕೆ ಏನುಬೇಕೊ ಅದು ಕಷ್ಟಪಟ್ಟು ಮಾಡಬೇಕು!

"ದೇಶವೆಂದರೆ ಮಣ್ಣು ಅಲ್ಲ .. ಪ್ರಜೆಗಳು"

ದೇಶದಲ್ಲಿರುವ ಪ್ರಜೆಗಳು ಮಣ್ಣುಪಾಲಾದರೆ ದೇಶ ಕೂಡಾ ಮಣ್ಣಿನ ಪಾಲಾಗುತ್ತದೆ .. ಮತ್ತೆ ದೇಶದಲ್ಲಿರುವ ಪ್ರಜೆಗಳು ಅಯೋಗ್ಯರಾದರೆ ದೇಶದ ಪರಿಸ್ಥಿತಿ ಕೂಡಾ ಅಯೋಮಯವಾಗಿರುತ್ತದೆ.

"ಯೋಗ್ಯತೆ" ಎನ್ನುವುದು ನಮ್ಮಲ್ಲಿ ಯೋಗಶಾಸ್ತ್ರ ಪರಿಚಯದ ಮೂಲಕ ಅಂಕುರಿಸಿದೆ .. ಧ್ಯಾನಯೋಗಸಾಧನೆಯ ಮೂಲಕ ಸಂಪೂರ್ಣವಾಗಿ ವೃದ್ಧಿಸಿ, ಫಲಿಸುತ್ತದೆ! ಕೇವಲ ಭೌತಿಕ ಪರವಾದ ಶಾಸ್ತ್ರವಿಜ್ಞಾನದಿಂದ

ಮಾತ್ರವೆ. ಆದರೆ "ಯೋಗ್ಯತೆ" ಎನ್ನುವುದು ಎಂದಿಗೂ ಸಿದ್ಧಿಸುವುದಿಲ್ಲ.

ಆಧ್ಯಾತ್ಮಿಕ ಪರವಾದ "ಧ್ಯಾನ ಅಭ್ಯಾಸ" ದ ಮೂಲಕವೇ, "ಧ್ಯಾನ ಯೋಗಾನುಷ್ಠಾನದ" ಮೂಲಕವೇ ಪ್ರಜೆಗಳು ಯೋಗ್ಯರಾಗಿ ಬಾಳಬಲ್ಲವರಾಗುತ್ತಾರೆ.

ಮೊದಲು ಎಲ್ಲರೂ ಹಿಂಸೆಯನ್ನು ಬಿಟ್ಟುಬಿಡಬೇಕು! ಯಾರಿಗೂ ಮತ್ತೊಬ್ಬರನ್ನು ಹಿಂಸಿಸುವ ಹಕ್ಕು ಇಲ್ಲ! "ಅಹಿಂಸಾ ಪರಮೋ ಧರ್ಮಃ" ಎಂದು ಗೌತಮ ಬುದ್ಧರು ಹೇಳಿದರು! ಆದರೆ, ಬುದ್ಧರು ಹುಟ್ಟಿದ ದೇಶದಲ್ಲೇ ತುಂಬಾ ಹಿಂಸೆ ನಡೆಯುತ್ತಿದೆ! ಅಹಿಂಸಾ ಮೂರ್ತಿಯಾದ ಬುದ್ಧರ ವಾರಸುದಾರರಾದ ನಾವು ಇನ್ನು ಮುಂದಾದರೂ "ಹಿಂಸೆ"ಯನ್ನು ತ್ಯಜಿಸಿಬಿಡೋಣ .. "ಹಂಸ"ವನ್ನು ಹಿಡಿಯೋಣ! "ಹಿಂಸೆ" ಎಂದರೆ "ಪ್ರಾಣಿವಧೆ" ಮತ್ತೆ "ಮಾಂಸ ಭಕ್ಷಣೆ".

ಅನಾದಿಯಿಂದಲೂ ನಾವು ಭಾರತ ದೇಶದಲ್ಲಿ "ರಾಮರಾಜ್ಯ"ವನ್ನು ಕೇಳಿಸಿಕೊಳ್ಳುತ್ತಲೇ ಇದ್ದೇವೆ. ಪ್ರತಿಯೊಂದು ಯುಗದಲ್ಲೂ ಪ್ರಜೆಗಳು "ರಾಮರಾಜ್ಯ"ಕ್ಕಾಗಿಯೇ ಕನಸು ಕಂಡಿದ್ದಾರೆ. "ರಾಮರಾಜ್ಯ" ಎಂದರೆ "ಒಬ್ಬ ರಾಮನಂತಹ ರಾಜನ ಕೈಯಲ್ಲಿ ನಡೆಸಲಾಗುವ ರಾಜ್ಯ" .. "ಪ್ರಜೆಗಳ ಯೋಗಕ್ಷೇಮಗಳನ್ನು ಕುರಿತು ಪೂರ್ತಿಯಾಗಿ ತಿಳಿದಿರುವ ರಾಜನ ಕೈಯಲ್ಲಿರುವ ರಾಜ್ಯ. ಅದು ಒಬ್ಬ ರಾಜ ಮಹಾಯೋಗಿಯಾದ ಪರಿಸ್ಥಿತಿಯಲ್ಲಿ ಇರುವ ರಾಜ್ಯ. ಆಧ್ಯಾತ್ಮಿಕತೆಗಾಗಿಯೇ ಜೀವಿಸುವ ‘ಯೋಗಿರಾಜ’ನ ಕೈಯಲ್ಲಿ ನಡೆಸಲಾಗುವುದೇ ರಾಮರಾಜ್ಯ!

"ರಾಮನಂತಹವನು" ರಾಜ್ಯದ ರಾಜನಾಗದಿದ್ದರೆ "ರಾಮರಾಜ್ಯ" ಬರುವುದು ಅಸಂಭವ! ಅದಕ್ಕೆ ಸಾಕ್ರಟೀಸ್ ಮಹಾನುಭಾವರು .. "ತತ್ವವೇತ್ತರೇ ಪಾಲಕರಾಗಬೇಕು" ಎಂದರು, ಪ್ರಜೆಗಳು ರಾಮರಾಜ್ಯವನ್ನು ಬಯಸುವಂತವರಾದರೇ ಅವರು ಆತ್ಮಜ್ಞಾನಿಗಳನ್ನೇ ಪರಿಪಾಲಕರಾಗಿ ಆಯ್ಕೆ ಮಾಡುತ್ತಿರಲೇಬೇಕು.

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಎಲ್ಲಾ ಪ್ರಜೆಗಳನ್ನು ಧ್ಯಾನ ಪ್ರಜೆಗಳಾಗಿ, ಆತ್ಮಜ್ಞಾನ ಸಂಪನ್ನರಾಗಿ ರೂಪಿಸುತ್ತಿವೆ! ಆತ್ಮಜ್ಞಾನರಾದ ಪ್ರಜೆಗಳು ತಪ್ಪದೇ ಆತ್ಮಜ್ಞಾನರಾದ ಮೇಧಾವಿಗಳನ್ನೇ ಪರಿಪಾಲಕರಾಗಿ ಆಯ್ಕೆ ಮಾಡುತ್ತಾರೆ.

ಆ ದಿನ ತುಂಬಾ ಹತ್ತಿರದಲ್ಲೇ ಇದೆ; ಪುನಃ "ರಾಮರಾಜ್ಯ" ಅಂದರೆ, "ಧರ್ಮರಾಜ್ಯ" ಬಂದೇ ಬರುತ್ತದೆ. ಪುನಃ ಈ ಹೊಸಯುಗದಲ್ಲಿ .. ಭಾರತ ದೇಶದಲ್ಲೇ ಅಲ್ಲ ಪ್ರಪಂಚದಾದ್ಯಂತ ಕೂಡಾ "ಧರ್ಮರಾಜ್ಯ" ತುಂಬಿ ತುಳುಕುತ್ತದೆ. ಅದಕ್ಕಾಗಿ ನಾವು ಕಟ್ಟಿಕೊಂಡಿರುವ ಕಂಕಣವೇ .. "ಪಿರಮಿಡ್ ಪಾರ್ಟಿ ಆಫ್ ಇಂಡಿಯಾ"!

 

Go to top