ಅಭಿತ್ಥರೇಥ ಕಲ್ಯಾಣೇ - ಶುಭಸ್ಯ ಶೀಘ್ರಂ

ಖಚಿತವಾಗಿ ತಿಳಿದುಕೊಂಡರೆ .. ನಿರಂತರ ಕೃಷಿಮಾಡುವವರಾದರೆ ..
ಪ್ರತಿಯೊಬ್ಬರೂ ಒಬ್ಬ ಐನ್‌ಸ್ಟೀನ್‌ನಂತೆ ಆಗಬಲ್ಲರು
ಪ್ರತಿಯೊಬ್ಬರೂ ಒಬ್ಬ ಲಿಯೊನಾರ್ಡೋ ಡಾ ವಿಂಚಿಯ ಹಾಗೆ ಆಗಬಲ್ಲರು
ಪ್ರತಿಯೊಬ್ಬರೂ ಒಬ್ಬ ಮದರ್ ಥೆರಿಸಾರಂತೆ ಆಗಬಲ್ಲರು
ಪ್ರತಿಯೊಬ್ಬರೂ ಒಬ್ಬ ಮಹಾತ್ಮಾ ಗಾಂಧೀಜಿಯಂತೆ ಆಗಬಲ್ಲರು
ಪ್ರತಿಯೊಬ್ಬರೂ ಒಬ್ಬ ಆದಿಶಂಕರಾಚಾರ್ಯರಂತೆ ಆಗಬಲ್ಲರು
ಪ್ರತಿಯೊಬ್ಬರೂ ಒಬ್ಬ ಏಸು ಪ್ರಭುವಿನಂತೆ ಬದಲಾಗಬಲ್ಲರು
ಪ್ರತಿಯೊಬ್ಬರೂ ಒಬ್ಬ ಗೌತಮ ಬುದ್ಧನಂತೆ ಜೀವಿಸಬಲ್ಲರು
ಪ್ರತಿಯೊಬ್ಬರೂ ಒಬ್ಬ ವೇದವ್ಯಾಸರಂತೆ ಸಾಧಿಸಬಲ್ಲರು
ಯಾರಾದರೂ ಒಬ್ಬರು ಒಂದು ದೊಡ್ಡ ಕಾರ್ಯ ಮಾಡಿದರೆ ಅದರ ಅರ್ಥ
"ಉಳಿದವರೆಲ್ಲರೂ ಕೂಡಾ ಆ ಕೆಲಸವನ್ನು ಮಾಡಬಲ್ಲರು" ಎಂದು ..
ಇದನ್ನೇ "ಉಪಮಾನ ಪ್ರಮಾಣ" ಎನ್ನುತ್ತೇವೆ
ಪ್ರತಿಯೊಬ್ಬರಲ್ಲಿಯೂ ಎಲ್ಲಾ ಶಕ್ತಿಗಳೂ ಕಾಣದಂತೆ ಅಡಗಿವೆ
ಆದರೆ, ಅವು ಪ್ರಕಟವಾಗಲು, ಯಥಾರ್ಥವಾಗಿ ರೂಪಾಂತರಗೊಳ್ಳಲು
ಬೇಕಾಗಿರುವುದೇನೆಂದರೆ, "ಆತ್ಮವಿಶ್ವಾಸ" .. "ತೀವ್ರವಾಂಛೆ" .. "ಲೋಕಕಲ್ಯಾಣ ಆಶಯ"
"ವಿಶ್ವಾಸ" ಎಂದರೆ ನಮ್ಮ .. ಮತ್ತು ಇತರರ .. ಆತ್ಮಶಕ್ತಿಯ ಬಗ್ಗೆ ನಮಗಿರುವ "ಅಖಂಡ ನಂಬಿಕೆ"
"ವಿಶ್ವಾಸ" ಎನ್ನುವುದು ಅತ್ಯಂತ ಪ್ರಬಲವಾದ ಮೂಲಭೂತವಾದ ಮಹಾಶಕ್ತಿ!
ಯೋಗೀಶ್ವರರ, ಪರಮಾತ್ಮರ ಆತ್ಮಶಕ್ತಿಯ ಬಗ್ಗೆ ನಂಬಿಕೆ ಎನ್ನುವುದು "ಭಕ್ತಿ ಯೋಗ"ವಾದರೇ
ನಮ್ಮ ಸ್ವಂತ ಆತ್ಮಶಕ್ತಿಯ ಬಗ್ಗೆ ನಂಬಿಕೆ ಎನ್ನುವುದು "ಧ್ಯಾನಯೋಗ/ಜ್ಞಾನಯೋಗ" ಆಗುತ್ತದೆ
ನಮ್ಮ ಆತ್ಮವಿಶ್ವಾಸ ಯಾವ ಕಡೆ ಸರಿಯುವುದೋ ಆ ಕಡೆಯೇ ನಮ್ಮ ಜೀವನ ವಿಶೇಷವಾಗಿ ಪ್ರಸರಿಸುತ್ತದೆ
ಆತ್ಮವಿಶ್ವಾಸ ಇದ್ದರೆ ಏನಾದರೂ ಮಾಡಬಲ್ಲೆವು
"ಶ್ವಾಸಗಮನಧ್ಯಾನಸಾಧನೆ"ಯಿಂದ ನಮ್ಮ ಆತ್ಮದೊಂದಿಗೆ ನಾವು ಎಷ್ಟು ಜೊತೆಯಾಗಿರುತ್ತೇವೋ
ಅಷ್ಟು ನಮ್ಮ ಆತ್ಮವಿಶ್ವಾಸ ಎನ್ನುವುದು ವಿಜೃಂಭಿಸುತ್ತಾ ಇರುತ್ತದೆ
"ಸಾಸಿವೆ ಕಾಳಿನಷ್ಟು ಆತ್ಮವಿಶ್ವಾಸ ಇದ್ದರೆ ಪರ್ವತಗಳನ್ನು ಸಹ ಕದಲಿಸಬಹುದು" ಎಂದಿದ್ದಾರೆ ಏಸುಪ್ರಭು.
ಆತ್ಮವಿಶ್ವಾಸದೊಂದಿಗೆ "ತೀವ್ರ ವಾಂಛೆ" ಎನ್ನುವುದು ಕೂಡಾ ಅತ್ಯಂತ ಮುಖ್ಯ
ಇವೆರಡೂ ಜೊತೆಯಾದರೆ ಅಸಾಧ್ಯಗಳೆಲ್ಲಾ ಅತಿ ಸಹಜವಾಗಿ ಸುಸಾಧ್ಯಗಳು ಆಗುತ್ತವೆ
ಆತ್ಮವಿಶ್ವಾಸದೊಂದಿಗೆ .. ಮತ್ತು ತೀವ್ರವಾಂಛೆಯೊಂದಿಗೆ ..
"ಲೋಕಕಲ್ಯಾಣ ಆಶಯ" ಎನ್ನುವುದು ಕೂಡ ಸೇರಿಸಿದರೆ ಜೀವನ ಇನ್ನೂ ಚರಿತಾರ್ಥ ಆಗುತ್ತದೆ
* * *
ಇಂದಿನ "ಸರಿಯಾದ ಮಕ್ಕಳೇ" ನಾಳಿನ ಮಹಾಪೌರರು .. ಇಂದಿನ "ಸರಿಯಾದ ಮಕ್ಕಳೇ" ನಾಳಿನ
ಮಹಾಕಲಾಕಾರರು
ಇಂದಿನ "ಸರಿಯಾದ ಮಕ್ಕಳೇ" ನಾಳಿನ ಮಹಾಶಾಸ್ತ್ರಜ್ಞರು .. ಇಂದಿನ "ಸರಿಯಾದ ಮಕ್ಕಳೇ" ನಾಳಿನ ಮಹಾಯೋಗಿಗಳು
ವಿದ್ಯಾಲಯಗಳೆಲ್ಲಾ ಕ್ರಮವಾಗಿ .. ಪ್ರತಿ ವಿದ್ಯಾರ್ಥಿಗೆ, ವಿದ್ಯಾರ್ಥಿನಿಗೆ
ಸರಿಯಾದ ಧ್ಯಾನ ವಿದ್ಯೆಯನ್ನೂ, ಸರಿಯಾದ ಧ್ಯಾನಭ್ಯಾಸವನ್ನು ಶಾಸ್ತ್ರೀಯವಾಗಿ ನೀಡಬೇಕು
ಪ್ರತಿ ವಿದ್ಯಾಲಯದಲ್ಲೂ ಕೂಡಾ
"ಆನಾಪಾನಸತಿ-ಧ್ಯಾನವಿದ್ಯೆ"ಯನ್ನು ಕಲಿಸುವ ಪ್ರತ್ಯೇಕ ಉಪಾಧ್ಯಾಯ ಇರಲೇಬೇಕು
ಅಷ್ಟೇಅಲ್ಲದೆ, ಪ್ರತಿ ವಿದ್ಯಾಲಯ ಅಹಿಂಸಾ ಧರ್ಮವನ್ನು ಬೋಧಿಸಬೇಕು
ಮತ್ತು ಶುದ್ಧ ಸಾತ್ವಿಕ ಶಾಕಾಹಾರವನ್ನು ದೈನಂದಿನ ಭೋಜನ ವಿಧಾನವಾಗಿ ಜಾರಿಗೊಳಿಸಬೇಕು
ಮಾಂಸಭಕ್ಷಣೆಗೋಸ್ಕರ "ಪಕ್ಷಿ/ಮತ್ಸ್ಯ ಇತ್ಯಾದಿ ಪ್ರಾಣಿಗಳ ವಧೆ" ಎನ್ನುವುದು ಪ್ರಾಣಿ ಕೋಟಿಯ ಮೇಲೆ
ಮಾನವಕುಲದ "ಮಹಾ-ಅತ್ಯಾಚಾರ"
"ಅತ್ಯಾಚಾರ" ಯವುದೋ, "ಶಿಷ್ಟಾಚಾರ" ಯಾವುದೋ .. ವಿದ್ಯಾಥಿಗಳೆಲ್ಲರೂ ಕ್ರಮವಾಗಿ ತಿಳಿದುಕೊಂಡಿರಬೇಕು
ಪ್ರಾಪಂಚಿಕ ವಿದ್ಯೆಗಳೆಲ್ಲಕ್ಕಿಂತ ಮೂಲಭೂತವಾದದ್ದು .. ಮತ್ತು ಮುಖ್ಯವಾದದ್ದು .. "ಆಧ್ಯಾತ್ಮಿಕ ವಿದ್ಯೆ"
"ಆಧ್ಯಾತ್ಮಿಕ ವಿದ್ಯೆಯಿಂದಲೇ" ವಿಭಿನ್ನ ಸಂಸ್ಕೃತಿಯವರು, ವಿಭಿನ್ನ ಜಾತಿಮತದವರು
ಒಬ್ಬರಿಗೊಬ್ಬರು ಹೊಂದಿಕೊಂಡು ಸರಿಯಾದ ಸಂಘ-ಜೀವನವನ್ನು ಅನುಭವಿಸಬಲ್ಲರು
"ಆಧ್ಯಾತ್ಮಿಕ ಶಾಸ್ತ್ರ" ಎನ್ನುವುದೇ ಆರೋಗ್ಯಶಾಸ್ತ್ರಕ್ಕೆ ಮೂಲ
"ಆಧ್ಯಾತ್ಮಿಕ ಜೀವನ" ಎನ್ನುವುದೇ ಆನಂದ ಜೀವನಕ್ಕೆ ಸೋಪಾನ
"ಅಭಿತ್ಥರೇಥ ಕಲ್ಯಾಣೇ .. ಮಂಗಳದಾಯಕವಾದ ಕರ್ಮಗಳನ್ನು ಮಾಡಲು ಸಿದ್ಧರಾಗಬೇಕು"
ಎಂದಿದ್ದಾನೆ ಬುದ್ಧನು
"ಗಿಡವಾಗಿ ಬಗ್ಗದ್ದು .. ಮರವಾಗಿಯೂ ಬಗ್ಗದು"
"A Stich in time .. saves nine"
"ಆಲಸ್ಯಂ ಅಮೃತಂ ವಿಷಂ"
ಶುಭಸ್ಯ ಶೀಘ್ರಂ

Go to top