" ಸ್ವರ್ಗದಂಥಾ ಧ್ಯಾನ ಧಾಮ .. ಹೊಸ ಶಂಬಲ "

"2003 .. ರಿಂದ .. 2013 "

.. ಹತ್ತು ವರ್ಷಗಳು ..

"ಬೆಂಗಳೂರು ನಗರದ ಸುತ್ತಮುತ್ತಲಿನಲ್ಲಿ .. ಎಲ್ಲಿಯೋ .. PSSMನ ಒಂದು ಬೃಹತ್ ಪಿರಮಿಡ್ ಬರುತ್ತದೆ"

ಎಂಬ ಒಂದು ಪರಿಕಲ್ಪನೆ, ಐಡಿಯಾ 2000ರಲ್ಲಿ ಮನಸ್ಸಿನಲ್ಲಿ ಹುಟ್ಟಿತು ..

2003ರ ಸಾಲಿನಲ್ಲಿ .. ಈ ಪರಿಕಲ್ಪನೆಯು ವಾಸ್ತವಗೊಳ್ಳಲು ಆರಂಭಿಸಿತು.

2013ರ ಸಾಲಿನಲ್ಲಿ .. ಈ ಐಡಿಯಾ ಸಂಪೂರ್ಣವಾಗಿ, ಸ್ಪಷ್ಟವಾಗಿ ವಾಸ್ತವಗೊಂಡಿತು.

ಮೂಲದಲ್ಲಿ ಒಂದು ಐಡಿಯಾ ಮಾತ್ರವೇ ಆಗಿದ್ದದ್ದು ಈಗ

"ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್" ಆಗಿದೆ.

PSSM ನ ಹಿರಿಮೆಯನ್ನು ಇಡೀ ವಿಶಾಲ ಪ್ರಪಂಚಕ್ಕೆ ಎತ್ತಿತೋರಿಸಲು ಇರುವ ಒಂದು ಸಿದ್ಧಮಾದರಿ ಎಂದರೆ, ಅದು

"ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್"

ಭಾರತದ ಮತ್ತು ಇತರ ದೇಶಗಳ ಅನ್ವೇಷಕರು ಇಲ್ಲಿಗೆ ಬಂದು ಭೇಟಿನೀಡಿ,

ಉಳಿದುಕೊಂಡು, ‘ಆನಾಪಾನಸತಿ ಎಂಬ ಉಸಿರಾಟವನ್ನು ಗಮನಿಸುವ ಧ್ಯಾನವನ್ನು ಕಲಿತು, ಅಭ್ಯಾಸ ಮಾಡಬಹುದು.

"ಮೈತ್ರೇಯ ಬುದ್ಧ ಎಂಬ ಬೃಹತ್ ಪಿರಮಿಡ್"ನ

ಪ್ರಕಾಂಡ ಶಕ್ತಿಚೈತನ್ಯಗಳನ್ನು ಬಳಸಿಕೊಂಡು

ಗುಡ್ಡಗಾಡಿನ, ಶಾಂತಿಯುತ, ನೆಮ್ಮದಿಯ ಮತ್ತು ಪ್ರಶಾಂತವಾಗಿರುವ ಸುಂದರ ಪ್ರಕೃತಿಯ

ಒಂದು ಅನುಭೂತಿಯನ್ನು "ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್" ಒದಗಿಸುತ್ತದೆ ..,

PSSM ನಲ್ಲಿ ವಾರ್ಷಿಕವಾಗಿ ನಡೆಯುವ "ಬುದ್ಧ ಪೂರ್ಣಿಮೆ ಆಚರಣೆಗಳು"

2004 ರಿಂದ ಇಲ್ಲಿಯೇ ನಡೆಯುತ್ತಾ ಬಂದಿವೆ.

ಮತ್ತು, ಪಿರಮಿಡ್ ವ್ಯಾಲಿಯಂಥ ಅತ್ಯಂತ ಪ್ರಶಸ್ತವಾದ ಸ್ಥಳದಲ್ಲಿ 2008ರಿಂದಲೂ

"ಆಧ್ಯಾತ್ಮಿಕ ವಿಜ್ಞಾನಿಗಳ ಜಾಗತಿಕ ಸಮ್ಮೇಳನ"ಗಳನ್ನು ನಡೆಸಲಾಗುತ್ತಿದೆ.

ಈಗ, ವಿಶ್ವದ ಬಹುತೇಕ ಆಧ್ಯಾತ್ಮಿಕ ವಿಜ್ಞಾನಿಗಳಿಗೆ

"ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್" ತಮ್ಮ ತವರುಮನೆ ಇದ್ದಂತೆ. ಅಷ್ಟೊಂದು ಪ್ರಸಿದ್ಧ ಮತ್ತು ಚಿರಪರಿಚಿತ.

ತನ್ನ ಅತ್ಯುನ್ನತ ಸಾಧನೆ ಕುರಿತು ಇಡೀ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ಗೆ ಹೆಮ್ಮೆಯಿದೆ

ಈ "ಸ್ವರ್ಗದಂಥಾ ಧ್ಯಾನ ಧಾಮ .. ಹೊಸ ಶಂಬಲ"ವನ್ನು ನಿರ್ಮಿಸಲು ಕಳೆದ ಹಲವಾರು ವರ್ಷಗಳಿಂದ ಅವಿಶ್ರಾಂತವಾಗಿ ಶ್ರಮಿಸಿರುವ

ಎಲ್ಲಾ ಪಿರಮಿಡ್ ಮಾಸ್ಟರ್‌ಗಳಿಗೆ ಅಭಿನಂದನೆಗಳು.

Go to top