ಸ್ಪಿರಿಚ್ಯುವಲ್ ಸೈನ್ಸ್ - ಆಧ್ಯಾತ್ಮಿಕ ವಿಜ್ಞಾನ ಶಾಸ್ತ್ರ

"ಮಾನವನ ಮನಸ್ಸು" ಬೇರೆ .. "ಮಾನವನ ಜೀವನ" ಬೇರೆ

"ಮಾನವನ ಮನಸ್ಸು" ಸುತ್ತಮುತ್ತಾ ಇರುವ ಸಮಾಜದಿಂದ ಮತ್ತು ಸುತ್ತಮುತ್ತಾ ಇರುವ ವಾತಾವರಣದಿಂದ ಉದ್ಭವಿಸುತ್ತದೆ

ಅಷ್ಟೇಅಲ್ಲದೆ, ಅದು ಭೌತಿಕ ಶರೀರಕ್ಕೆ ಹೊಂದಿದ "ಜ್ಞಾನೇಂದ್ರಿಯ ಚೌಕಟ್ಟುನಲ್ಲಿ" ಕೂಡಾ ಅಧಿಕವಾಗಿ ತಿರುಗುತ್ತಾ ಇರುತ್ತದೆ.

ಅಂದರೆ, ನಾವು ಯಾವುದನ್ನು ಹೆಚ್ಚಾಗಿ ನೋಡುತ್ತೇವೆಯೋ .. ಯಾವುದು ಹೆಚ್ಚಾಗಿ ಕೇಳಿಸಿಕೊಳ್ಳುತ್ತೇವೆಯೋ ..

ಯಾವುದು ಹೆಚ್ಚಾಗಿ ರುಚಿ ನೋಡುತ್ತೇವೆಯೋ .. ಅದರ ಸುತ್ತಲೇ ನಮ್ಮ ಮನಸ್ಸು ಹೆಚ್ಚಾಗಿ ಪರಿಭ್ರಮಿಸುತ್ತಾ ಇರುತ್ತದೆ.

ಆದರೆ, "ಮಾನವನ ಜೀವನ" ಮಾತ್ರ ಗತಜನ್ಮಗಳ ಕರ್ಮಗಳ ಮೂಲಗಳಿಂದ ಉದ್ಭವಿಸುತ್ತದೆ.

ಪ್ರಸ್ತುತ, ವರ್ತಮಾನ ಜೀವನ .. ಗತಜನ್ಮಗಳ "ಅನಂತರದ ಪುಟ"ವೇ (ಭಾಗವೇ) ಆದ್ದರಿಂದ,

"ಅದಕ್ಕೂ ಮುಂದೆ ಇರುವ ಭಾಗಗಳು(ಪುಟಗಳು)" ಅರ್ಥವಾಗದಿದ್ದರೆ "ವರ್ತಮಾನದ ಪುಟ(ಭಾಗ)" ಅರ್ಥವಾಗಲಾರದು ..

"ಮಾನವನ ಆತ್ಮವತ್-ಜೀವನವನ್ನು" ಅರ್ಥ ಮಾಡಿಕೊಂಡರೆ ಮಾತ್ರವೇ "ಮಾನವನ ಮನಸ್ಸಿ"ನ ಮೇಲೆ ಆಧಿಪತ್ಯ ಲಭಿಸುತ್ತದೆ.

 

ಪ್ರತಿಯೊಬ್ಬ ಮಾನವನ ಜೀವನ ಕೂಡಾ ಮೇಲಿನ ಲೋಕಗಳಲ್ಲಿ ಇರುವ...

ಆತ್ಮ ಆಯಾಮಗಳಲ್ಲಿರುವ... "ಮೂಲಾತ್ಮ"

"ಮತ್ತೊಂದು ವಿಹಾರಯಾತ್ರೆ" ಎಂದು, "ಮತ್ತೊಂದು ವಿಜ್ಞಾನ ಯಾತ್ರೆ" ಎಂದು ಅರ್ಥ ಮಾಡಿಕೊಂಡಾಗಲೇ

ಮನಸ್ಸಿನ ತೀವ್ರತರ ಪ್ರಭಾವದಿಂದ ನಾವು ಕ್ಷೇಮವಾಗಿ, ಸುರಕ್ಷಿತವಾಗಿ ಹೊರಬಲ್ಲವರಾಗುತ್ತೇವೆ!

ವಾಸ್ತವವಾಗಿ ನೋಡಿದರೆ ಇಹಲೋಕದಲ್ಲಿ ತಾತ್ಕಾಲಿಕವಾಗಿ ಜೀವಿಸುತ್ತಿದ್ದರೂ ನಾವು "ಆತ್ಮಲೋಕವಾಸಿಗಳೇ"

ವಾಸ್ತವವಾಗಿ ನೋಡಿದರೇ (ನಿಜಕ್ಕೂ) ಇಹಲೋಕದಲ್ಲಿ ಭೌತಿಕಕಾಯದಲ್ಲಿ ವಾಸಮಾಡುತ್ತಿರುವ ಒಂದು "ಸನಾತನ ಮೂಲಾತ್ಮ"ವೇ ನಾವು.

 

ಅನೇಕಾನೇಕ ಜನ್ಮಗಳ ಕರ್ಮಗಳ, ಕರ್ಮಫಲಗಳ, ಸಂಸ್ಕಾರಗಳ, ಸಂಕಲ್ಪಗಳ ಪ್ರಭಾವಗಳಿಂದ ಕೂಡಿದ್ದೇ

"ಈ ವರ್ತಮಾನ ಜೀವನ".

ಬಗೆಬಗೆಯ ವೈವಿಧ್ಯಗಳಿಂದ ತುಂಬಿರುವ "ಮೂಲಾತ್ಮ"ದ ನಿಜವಾದ ಆಯಾಮಗಳಿಂದ

ಜನಿಸಿದ ಪ್ರತಿಯೊಂದು ವರ್ತಮಾನ ಮಾನವ ಜೀವನವು ತಕ್ಕಡಿಯ ಒಂದು ಕಡೆ ಇದ್ದರೆ,

ಮಾನವನ ಸಗಟು ಸಾಮಾಜಿಕ, ಮಾನಸಿಕ ಸಾಮೂಹಿಕ ಕ್ಷೇತ್ರ ಅದೇ ತಕ್ಕಡೆಯ ಮತ್ತೊಂದು ಕಡೆ ಇದ್ದು,

ಈ ಎರಡರಕ್ಕೂ ನಡುವೆ ಅಂತ್ಯವಿಲ್ಲದ ಸಮರ!

"ಮನಸ್ಸಿನ" ಬಗೆಬಗೆಯ ಸಂಘರ್ಷಣೆಗಳಿಂದ ..

"ಮನಸ್ಸಿನ" ನಿರಂತರ ಅಲೆದಾಟದಿಂದ (ತೂಗಾಟ)

ಎಡಬಿಡದೆ, ವಿರಾಮವಿಲ್ಲದೆ ಹಾರಿಬರುತ್ತಿರುವ ಉತ್ತುಂಗ ತರಂಗಗಳ ಭೀಕರ ಸಾಗರದಂಥ ಸ್ಥಿತಿಯಿಂದ

ಕ್ಷೇಮವಾಗಿ, ಸುರಕ್ಷಿತವಾಗಿ ಹೊರಬರಬೇಕಾದರೆ

"ಮಾನವ ಆತ್ಮ-ಜೀವನವನ್ನು" ಕುರಿತು ಅರ್ಥ ಮಾಡಿಕೊಳ್ಳಬೇಕು

ಅದಕ್ಕಾಗಿ ಪ್ರತಿ ಮಾನವನೂ "ಆತ್ಮಶಾಸ್ತ್ರ", "ಆಧ್ಯಾತ್ಮಿಕ ವಿಜ್ಞಾನಶಾಸ್ತ್ರ",

"ಧ್ಯಾನಶಾಸ್ತ್ರ".. ಮುಂತಾದವನ್ನು ಕುರಿತು ಖಂಡಿತವಾಗಿ ತಿಳಿದುಕೊಳ್ಳಬೇಕಾದ್ದೆ!

ನಮ್ಮ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಮೂಲಕ ಆವಿರ್ಭವಿಸಿದ

"ಭಾರತೀಯ ಆಧ್ಯಾತ್ಮಿಕ ವಿಜ್ಞಾನಿಗಳ ಒಕ್ಕೂಟ (IFSS)" ಮೂಲಕ

"ಸ್ಪಿರಿಚ್ಯುವಲ್ ಸೈನ್ಸ್ " ನ್ನು .. "ಆಧ್ಯಾತ್ಮಿಕ ಶಾಸ್ತ್ರವನ್ನೂ" ನಮ್ಮ ದೇಶವ್ಯಾಪಿಯನ್ನಾಗಿ, ವಿಶ್ವವ್ಯಾಪಿಯನ್ನಾಗಿಸುತ್ತಿದ್ದೇವೆ

ಈ ದಿಸೆಯಲ್ಲಿ ವಿಸ್ತಾರವಾಗಿ ಕೆಲಸಮಾಡುತ್ತಿರುವ ನಮ್ಮ ವಿಶಿಷ್ಟ ಪಿರಮಿಡ್ ಮಾಸ್ಟರ್‌ಗಳಿಗೆ ವಿಶೇಷವಾದ ಅಭಿನಂದನೆಗಳು!

ಈಗಾಗಲೇ, ಆಧ್ಯಾತ್ಮಿಕ ವಿಜ್ಞಾನಿಗಳ ಜಾಗತಿಕ ಸಮ್ಮೇಳನಗಳನ್ನು (GCSS) ಐದು ಬಾರಿ

ಬೆಂಗಳೂರಿನ ಪಿರಮಿಡ್ ವ್ಯಾಲಿಯಲ್ಲಿ ನಡೆಸಲಾಗಿದೆ!

ಈಗಾಗಲೇ ‘ಭಾರತೀಯ ಆಧ್ಯಾತ್ಮಿಕ ವಿಜ್ಞಾನಿಗಳ ಒಕ್ಕೂಟದ (IFSS) ಏಳು ಸಮ್ಮೇಳನಗಳನ್ನು

ದೇಶಾದ್ಯಂತ್ಯ .. ಏಳು ನಗರಗಳಲ್ಲಿ .. ನಡೆಸಲಾಗಿದೆ!

ಇನ್ನು ಮುಂದೆ, ಪ್ರತಿಯೊಬ್ಬರೂ ಮಾನವನ ಆತ್ಮ-ಜೀವನವನ್ನು ಅರಿತುಕೊಳ್ಳುವಂತಾಗಲಿ

ಇನ್ನು ಮುಂದೆ, ಪ್ರತಿಯೊಬ್ಬರ ಮನಸ್ಸಿನ ಮೇಲೆ ವಿಜಯವನ್ನು ಹೇರಳವಾಗಿ ಪಡೆಯುವಂತಾಗಲಿ

ಇನ್ನು ಮುಂದೆ, ಪ್ರತಿಯೊಬ್ಬ ಪ್ರಾಪಂಚಿಕ ಮೇಧಾವಿ ಕೂಡಾ ಒಬ್ಬ "ಸ್ಪಿರಿಚ್ಯುವಲ್ ಸೈಂಟಿಸ್ಟ್" ಆಗುವಂತಾಗಲಿ

Go to top