" ಮಹಾಭಾಗ್ಯದ ವಿಶ್ವರೂಪ "

ಶಾರೀರಿಕಪರವಾಗಿ ಆರೋಗ್ಯವೇ ಮಹಾಭಾಗ್ಯ

ಮಾನಸಿಕಪರವಾಗಿ ಪ್ರಶಾಂತತೆಯೇ ಮಹಾಭಾಗ್ಯ

ಸಾಮಾಜಿಕಪರವಾಗಿ ಪ್ರಾಣಮಿತ್ರರಿರುವುದೇ ಮಹಾಭಾಗ್ಯ

ಆಧ್ಯಾತ್ಮಿಕಪರವಾಗಿ ದಿವ್ಯಚಕ್ಷುವು ಉತ್ತೇಜಿತವಾಗಿರುವುದೇ ಮಹಾಭಾಗ್ಯ

ಆಹಾರಪರವಾಗಿ ಎರಡು ಹೊತ್ತು ರುಚಿಕರವಾದ ತಿಂಡಿ ಇರುವುದೇ ಮಹಾಭಾಗ್ಯ

ಕುಟುಂಬಪರವಾಗಿ ಪರಸ್ಪರಾನುಕೂಲ ದಾಂಪತ್ಯ ಹೊಂದಿರುವುದೇ ಮಹಾಭಾಗ್ಯ

ಮನೆಯ ಆವರಣದಲ್ಲಿ ಬಗೆಬಗೆಯ ಗಿಡ, ಮರಗಳನ್ನು ಬೆಳಸಲಾಗುವುದೇ ಮಹಾಭಾಗ್ಯ

ಹಕ್ಕಿಗಳನ್ನು, ಪ್ರಾಣಿಗಳನ್ನು ಪೋಷಿಸುತ್ತಾ, ಅವುಗಳನ್ನು ಸದಾ ಸಂರಕ್ಷಣೆ ಮಾಡಲಾಗುವುದೇ ಮಹಾಭಾಗ್ಯ

ದಿನವೆಲ್ಲಾ ಕಷ್ಟಪಟ್ಟ ನಂತರ ಕೆಲವು ಗಂಟೆಗಳಾದರೂ ಸುಖವಾಗಿ ನಿದ್ದೆ ಮಾಡಲಾಗುವುದೇ ಮಹಾಭಾಗ್ಯ

ಪ್ರತಿದಿನ ಒಳ್ಳೆಯ ಸುಮಧುರ ಸಂಗೀತವನ್ನು ಕೇಳಲಾಗುವುದೇ ಮಹಾಭಾಗ್ಯ

ಸಂಗೀತವನ್ನು ಕೇಳಿ ಮೈಮರೆತು, ಆಗಾಗ, ನೃತ್ಯವನ್ನು ಮಾಡಲಾಗುವುದೇ ಮಹಾಭಾಗ್ಯ

ದಿನಕ್ಕೊಂದು ಆಟ, ಎಲ್ಲರ ಜೊತೆ ಸೇರಿ ಆಡಲಾಗುವುದೇ ಮಹಾಭಾಗ್ಯ

ಮಹಾನುಭಾವರ ಪುಸ್ತಕಗಳನ್ನು ಓದುವುದೇ ಮಹಾಭಾಗ್ಯ

ದಿನದಲ್ಲಿ ಒಂದು ಗಂಟೆಯಾದರೂ ಸಜ್ಜನರ ಜೊತೆ ಸೇರಿ ಗೋಷ್ಠಿ ನಡೆಸುವುದೇ ಮಹಾಭಾಗ್ಯ

ಬಗೆಬಗೆಯ ಕಲೆಗಳನ್ನು ಪರಿಚಯ ಮಾಡಿಕೊಳ್ಳುವುದೇ ಮಹಾಭಾಗ್ಯ

ದಿನಕ್ಕೊಂದು ಗಂಟೆಯಾದರೂ ಮೌನವಾಗಿರುವುದೇ ಮಹಾಭಾಗ್ಯ

ನಮಗೆ ಗೊತ್ತಿರುವ ವಿಷಯಗಳನ್ನು ಇತರರಿಗೆ ಹೇಳಿಕೊಡುವುದೇ ಮಹಾಭಾಗ್ಯ

ಬೆಟ್ಟಗಳಲ್ಲಿ, ಕಣಿವೆಗಳಲ್ಲಿ, ಅರಣ್ಯಗಳಲ್ಲಿ ಏಕಾಂತವಾಗಿರುವುದೇ ಮಹಾಭಾಗ್ಯ

ವಾಸಿಸುರುತ್ತಿರುವ ಮನೆಯನ್ನು ಶುಚಿಯಾಗಿ ಇಡಲಾಗುವುದೇ ಮಹಾಭಾಗ್ಯ

ಪ್ರತಿ ಸೂರ್ಯೋದಯವನ್ನು, ಪ್ರತಿ ಸೂರ್ಯಾಸ್ತವನ್ನು, ಹುಣ್ಣಿಮೆ ಪ್ರಶಾಂತತೆಯನ್ನು ..

ಪ್ರಕೃತಿ ಸೌಂದರ್ಯವನ್ನು ಕಣ್ಣಾರೆ ವೀಕ್ಷಿಸಿ ಅನುಭವಿಸಲಾಗುವುದೇ ಮಹಾಭಾಗ್ಯ

ನದೀ ಸ್ನಾನ, ಸಮುದ್ರ ಸ್ನಾನ ಅವಕಾಶ ಸಿಕ್ಕಾಗಲೆಲ್ಲಾ ಮಾಡಲಾಗುವುದೇ ಮಹಾಭಾಗ್ಯ

ಚಿಕ್ಕ ಮಕ್ಕಳ ಜೊತೆ ಎಲ್ಲಾ ಮರೆತು ಕೇಕೆ ಹಾಕುವುದೇ ಮಹಾಭಾಗ್ಯ

ಕಣ್ಣು ಮುಚ್ಚಿಕೊಂಡು "ಶ್ವಾಸದ ಮೇಲೆ ಗಮನ" ಇಡಲಾಗುವುದೇ ಮಹಾಭಾಗ್ಯ !

Go to top