"ಪ್ರಾಪಂಚಿಕ ಯೋಗ್ಯತೆ"

'ಪ್ರಾಪಂಚಿಕ ಯೋಗ್ಯತೆ' ಎನ್ನುವುದು ಯೋಗಶಾಸ್ತ್ರ

ಪರಿಚಯದ ಮೂಲಕ ಅಂಕುರಿಸಿ .. ಪ್ರಾಮಾಣಿಕ

ಧ್ಯಾನಯೋಗ ಸಾಧನೆಯ ಮೂಲಕವೇ ಸಂಪೂರ್ಣವಾಗಿ

ಬೆಳೆದು, ಫಲಿಸುತ್ತದೆ ”

ಇಂದಿನ ಕನಸುಗಳೇ ನಾಳೆಯ ವಾಸ್ತವಗಳಿಗೆ ಮೂಲಬೀಜಗಳಾಗುತ್ತವೆ.

ಕನಸುಗಳು ಸುಳ್ಳಾಗುವುದಿಲ್ಲ ...

ಭವಿಷ್ಯದಲ್ಲಿ ನಮಗೆ ಬೇಕಾಗಿರುವುದನ್ನು ಬೇಕಾದ ರೀತಿಯಲ್ಲಿ ನಾವು ಸ್ವತಹ ರೂಪಿಸಿಕೊಳ್ಳುವ ಸುತ್ತಿಗೆ, ಕುಡುಗೋಲುಗಳೇ ಇಂದು ನಾವು ಕಾಣುವ ಕನಸುಗಳು ...

ಆದರೆ, ಕೇವಲ ಚೆನ್ನಾಗಿರುವ ಕನಸುಗಳನ್ನು ಕಂಡರೆ, ಕೇವಲ ಕನಸುಗಳನ್ನು ಮಾತ್ರ ಕಾಣುತ್ತಿದ್ದರೆ ಯಾವ ಲಾಭವೂ ಇಲ್ಲ

ನಮ್ಮ ದೇಶ ಸುವರ್ಣಮಯವಾಗಿರಬೇಕೆಂದರೆ, ಅದಕ್ಕೆ ಏನು ಬೇಕೋ ಅದು ಮಾಡಬೇಕು

ದೇಶವೆಂದರೆ ಮಣ್ಣಲ್ಲ .... ಪ್ರಜೆಗಳು

ದೇಶದಲ್ಲಿರುವ ಪ್ರಜೆಗಳು ಮಣ್ಣುಹೊಡೆಯುತ್ತಾ ಇದ್ದರೆ, ದೇಶವೂ ಕೂಡ ಮಣ್ಣು ಹೊಡೆಯುತ್ತಲೇ ಇರುತ್ತದೆ. ಪ್ರಜೆಗಳು ಅಯೋಗ್ಯರಾಗಿದ್ದರೆ, ದೇಶವು ಅಯೋಮಯವಾಗಿ ಇರುತ್ತದೆ. ಪ್ರಜೆಗಳು ಯೋಗ್ಯರಾಗಿ ಇದ್ದರೇನೇ ದೇಶವು ಸುವರ್ಣಮಯವಾಗಿರುತ್ತದೆ.

* * *

’ಪ್ರಾಪಂಚಿಕ ಯೋಗ್ಯತೆ’ ಎನ್ನುವುದು ಯೋಗಶಾಸ್ತ್ರ ಪರಿಚಯದ ಮೂಲಕ ಅಂಕುರಿಸಿ ... ಪ್ರಾಮಾಣಿಕ ಧ್ಯಾನಯೋಗ ಸಾಧನೆಯ ಮೂಲಕವೇ ಸಂಪೂರ್ಣವಾಗಿ ಬೆಳೆದು, ಫಲಿಸುತ್ತದೆ .

ಭೌತಿಕ ಪರವಾದ ವಿಜ್ಞಾನದಿಂದ ಮಾತ್ರವೇ ಆದರೆ ಯೋಗ್ಯತೆ ಎನ್ನುವುದು ಎಂದಿಗೂ ಸಿದ್ಧಿಸುವುದಿಲ್ಲ ; ಕೇವಲ ಭೌತಿಕಪರವಾದ ವಿಜ್ಞಾನದಿಂದ ’ಯೋಗ್ಯತೆ’ ಎನ್ನುವುದು ಗಗನ ಕುಸುಮವೇ

ಆಧ್ಯಾತ್ಮಿಕಪರವಾದ ಧ್ಯಾನ ಅಭ್ಯಾಸದಿಂದಲೇ ಧ್ಯಾನ ಯೋಗಾನುಷ್ಠಾನದ ಮೂಲಕವೇ ಪ್ರಜೆಗಳು ಯೋಗ್ಯರಾಗಿ ಪ್ರಕಾಶಿಸುವುದು. ಒಂದು ಮಾತಿನಲ್ಲಿ ಹೇಳುವುದಾದರೆ, ಯಾವ ದೇಶವಾದರೂ ಧ್ಯಾನದೇಶವಾಗದೆ ಸುವರ್ಣದೇಶ ಆಗುವುದು ಎನ್ನುವುದು ಅಸಂಭವ.

ಮೊದಲು ಎಲ್ಲರೂ ಹಿಂಸೆಯನ್ನು ಬಿಟ್ಟುಬಿಡಬೇಕು. ಯಾರಿಗೂ ಬೇರೊಬ್ಬರನ್ನು ಹಿಂಸಿಸುವ ಹಕ್ಕು ಇಲ್ಲ. ಅಹಿಂಸಾ ಪರಮೋ ಧರ್ಮಃ ಅಂದಿದ್ದಾನಲ್ಲವೇ ಗೌತಮ ಬುದ್ಧನು.

ಬುದ್ಧನು ಹುಟ್ಟಿದ ದೇಶದಲ್ಲಿಯೇ ಎಷ್ಟು ಹಿಂಸೆಯಿದೆಯೋ ಇನ್ನಾದರೂ ’ಹಿಂಸೆ’ಯನ್ನು ಬಿಟ್ಟುಬಿಡೋಣ ಇನ್ನಾದರೂ ’ಹಂಸೆ’ಯನ್ನು ಹಿಡಿದುಕೊಳ್ಳೋಣ. ಹಿಂಸೆ ಅಂದರೆ ಪ್ರಾಣಿವಧೆ ಮತ್ತೆ ಮಾಂಸಾಹಾರ.

* * *

ನಾವು ಅನಾದಿಯಿಂದಲೂ ಭಾರತದೇಶದಲ್ಲಿ ರಾಮರಾಜ್ಯದ ಕುರಿತು ಕೇಳುತ್ತಲೇ ಇದ್ದೇವೆ. ಪ್ರತಿ ಯುಗದಲ್ಲೂ ಪ್ರಜೆಗಳು ರಾಮರಾಜ್ಯದ ಸಲುವಾಗಿ ಕನಸನ್ನು ಕಂಡಿದ್ದರು.

ರಾಮರಾಜ್ಯ ಅಂದರೆ ಒಬ್ಬ ’ರಾಮ’ ನಂಥಹ ವ್ಯಕ್ತಿಯ ಕೈಗಳಿಂದ ನಡೆಯುವ ರಾಜ್ಯ ಪ್ರಜೆಗಳ ಯೋಗಕ್ಷೇಮಗಳ ಕುರಿತು ಪೂರ್ಣವಾಗಿ ತಿಳಿದುಕೊಂಡ ರಾಜನು ನಡೆಸುವ ರಾಜ್ಯ ; ಒಬ್ಬ ರಾಜನು ಮಹಾಯೋಗಿ ಯಾಗಿರುವ ಪರಿಸ್ಥಿತಿಯಲ್ಲಿರುವ ರಾಜ್ಯ. ಆಧ್ಯಾತ್ಮಿಕತೆಯೊಂದಿಗೇ ಹುಟ್ಟಿ, ಆಧ್ಯಾತ್ಮಿಕತೆಯೊಂದಿಗೇ ಬೆಳೆದು, ಆಧ್ಯಾತ್ಮಿಕತೆಯ ಸಲುವಾಗಿಯೇ ಜೀವಿಸುವ ಯೋಗಿ ರಾಜನ ಕೈಗಳಿಂದ ನಡೆಸುವ ರಾಜ್ಯ.

’ರಾಮ’ ನಂಥಹವರು ರಾಜ್ಯದ ರಾಜನಾಗದಿದ್ದರೆ ರಾಮರಾಜ್ಯ ಬರುವುದು ಅಸಂಭವ.

ಆದ್ದರಿಂದಲೇ, ಸಾಕ್ರೆಟೀಸ್ ಮಹಾನುಭಾವನು ಹೇಳಿದ್ದಾನೆ ತತ್ವಜ್ಞಾನಿಗಳೇ ಪ್ರಜಾಪಾಲಕರಾಗಬೇಕು ಎಂದು.

ಪ್ರಜೆಗಳು ರಾಮರಾಜ್ಯವನ್ನು ಕೋರಿಕೊಳ್ಳುವುದಾದರೆ, ಆತ್ಮಜ್ಞಾನಿಗಳನ್ನೇ ಪರಿಪಾಲಕರನ್ನಾಗಿ ಆಯ್ದುಕೊಳ್ಳಬೇಕು; ಪ್ರಜೆಗಳು ಮೂರ್ಖರನ್ನು ಆಯ್ದುಕೊಂಡರೆ ಆ ಮೂರ್ಖರು ಪ್ರಜೆಗಳನ್ನು ’ಮೆಣಸಿನಕಾಯಿ ಬಜ್ಜೀ’ ಗಳನ್ನಾಗಿ ಮಾಡಿಕೊಂಡು ತಿನ್ನುತ್ತಾರೆ.

ಪ್ರಜೆಗಳು ಅವರ ವಾಸ್ತವವನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ ಎನ್ನುವುದು ಪರಮ ಸತ್ಯ. ಯಥಾ ಪ್ರಜಾ ... ತಥಾ ರಾಜಾ

ಧರ್ಮರಾಜ್ಯವು ಬೇಕೋ, ಅಧರ್ಮರಾಜ್ಯವು ಬೇಕೋ, ಆಯ್ದುಕೊಳ್ಳುವುದು ಪ್ರಜೆಗಳ ಕೈಗಳಲ್ಲಿಯೇ ಇದೆ

ಯಥಾ ರಾಜಾ ... ತಥಾ ಪ್ರಜಾ ಎನ್ನುವುದು ಆ ದಿನಗಳ ನಾಣ್ಣುಡಿ

ಯಥಾ ಪ್ರಜಾ ... ತಥಾ ರಾಜಾ ಎನ್ನುವುದು ಈ ದಿನಗಳ ನಾಣ್ಣುಡಿ

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್, ಭಾರತದ ಪ್ರಜೆಗಳೆಲ್ಲರನ್ನೂ ಧ್ಯಾನ ಪ್ರಜೆಗಳಾಗಿ, ಆತ್ಮಜ್ಞಾನ ಸಂಪನ್ನರಾಗಿ ತಿದ್ದಿತೀಡುತ್ತಿದೆ. ಅತ್ಮಜ್ಞಾನಿಗಳಾದ ಪ್ರಜೆಗಳು ತಪ್ಪದೆಯೇ ಆತ್ಮಜ್ಞಾನಿಗಳನ್ನೇ ನಾಯಕರಾಗಿ ಆಯ್ದುಕೊಳ್ಳುತ್ತಾರೆ.

ಆ ದಿನಗಳು ತುಂಬಾ ಹತ್ತಿರದಲ್ಲಿಯೇ ಇವೆ ; ಮತ್ತೆ ರಾಮರಾಜ್ಯ ಅಂದರೆ ಧರ್ಮರಾಜ್ಯ ಬಂದೇ ಬರುತ್ತದೆ. ಮತ್ತೆ ಈ ನವೀನ ಯುಗದಲ್ಲಿ - ಭಾರತದೇಶದಲ್ಲಿಯೇ ಅಲ್ಲ ಪ್ರಪಂಚವೆಲ್ಲಾ ಕೂಡ ಧರ್ಮರಾಜ್ಯವೆನ್ನುವುದು ವಿಕಸಿಸುತ್ತದೆ.

ಅದಕ್ಕೋಸ್ಕರ ಕಟ್ಟಿಕೊಂಡಿರುವ ವೀರಕಂಕಣವೇ ... ಪಿರಮಿಡ್ ಪಾರ್ಟಿ ಆಫ್ ಇಂಡಿಯಾ.

Go to top