ದಿವ್ಯಾರೋಹಣಶಕೆ

 

1987-2012

ಒಂದು ಸುದೀರ್ಘವಾದ ಹಳೆಯಯುಗವನ್ನು ದಾಟಿ ಅತ್ಯುನ್ನತ ನವಯುಗವನ್ನು

ಪೂರ್ತಿಯಾಗಿ ಅತ್ಯುತ್ಸಾಹದಿಂದ ಜಿಗಿದು ಸೇರುವ

25 ವರ್ಷಗಳ ದಿವ್ಯಾರೋಹಣ ಶಕೆ

.. 1987 ನೆಯ ಇಸವಿಯಲ್ಲಿ ಪ್ರಾರಂಭವಾಗಿ 2012ನೆಯ ಇಸವಿಯಲ್ಲಿ ಮುಗಿಯುತ್ತಿದೆ.

ನಮ್ಮ ಆಕಾಶಗಂಗೆಯ ಮಧ್ಯೆದಿಂದ ಉತ್ಪನ್ನವಾಗುತ್ತಿರುವ ಉನ್ನತಮಟ್ಟದ ಶಕ್ತಿಯುತವಾದ ಫೋಟಾನ್ ಕ್ಷೇತ್ರದೊಳಗೆ ನಮ್ಮ ಸೂರ್ಯಮಂಡಲ ಪ್ರವೇಶಿಸುತ್ತಿರುವ ಊರ್ಧ್ವಗಮನ ಕಾಲವಾದ ಈ ದಿವ್ಯಾರೋಹಣ ಶಕೆ ಯ ಮುಖ್ಯ ಘಟ್ಟಗಳು....

ನಮ್ಮ ಸೂರ್ಯಮಂಡಲ ಫೋಟಾನ್ ಕ್ಷೇತ್ರದೊಳಗೆ ಪ್ರವೇಶಿಸಲು ಶುರುವಾದ ಸಮಯವು .. 1987 ರಿಂದ

ನಮ್ಮ ಸೂರ್ಯಮಂಡಲ ಸಂಪೂರ್ಣವಾಗಿ ಫೋಟಾನ್ ಕ್ಷೇತ್ರದೊಳಗೆ ಪ್ರವೇಶಿಸಿ, ಅತ್ಯುನ್ನತ ಮಟ್ಟದ ತರಂಗಗಳಲ್ಲಿ ಪರಿಪೂರ್ಣವಾಗಿ ಕ್ರೀಡಿಸಲು ಹೋಗುತ್ತಿರುವ ಸುಸಮಯವೇ .. 2012

ಈ ಆರೋಹಣಾಕ್ರಮದ ನೇಪಥ್ಯದಲ್ಲಿ ಭೂಮಿಯು ಈಗಾಗಲೇ ಉನ್ನತ ಮಟ್ಟದ ವಿಶ್ವಶಕ್ತಿಯನ್ನು ಗ್ರಹಿಸುತ್ತಾ ..

ಅತಿ ವೇಗದ ವಿಕಾಸಗಳಿಗೆ ವೇದಿಕೆಯಾಗಿ ಪ್ರಕಾಶಿಸುತ್ತಿದೆ.

ಪರಂಪರಾಗತ ಮೂರ್ಖ ಮತ-ಸಿದ್ಧಾಂತಗಳೂ, ವಾದಗಳೂ ಬೇಗಬೇಗನೆ ಆವಿಯಾಗಿ ಹೋಗುತ್ತಿವೆ

ನಿರಂಕುಶ ಧೋರಣೆಯೊಂದಿಗೆ ಕೂಡಿದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳೆಲ್ಲವೂ ಮರಳಿನ ಸೌಧ ಗಳ ಹಾಗೆ ಉರುಳಿಬೀಳುತ್ತಿವೆ.

ಬ್ರಹ್ಮರ್ಷಿ ಪತ್ರೀಜಿ

ದಿವ್ಯಾರೋಹಣ ಶಕೆ ಸಹಸ್ರದಳ ಕಮಲವಾಗಿ ಅರಳಿದ ಆಧ್ಯಾತ್ಮಿಕ ವಿಜ್ಞಾನದಿಂದ, ವಿಶ್ವಮಾನವ ಸ್ವತಂತ್ರ ಸುಮಗಳಿಂದ ...

ಒಂದು ಬ್ರಹ್ಮಾಂಡವಾದ ನವ್ಯಯುಗವು ಆವಿರ್ಭವಿಸುತ್ತಿದೆ

2012ರ ತರುವಾಯ

ಪ್ರಪಂಚದಾದ್ಯಂತ ಸಕಲ ದೇಶಗಳ ಸಾಮಾಜಿಕ - ರಾಜಕೀಯ ಆಧಿಪತ್ಯ ಜವಾಬ್ದಾರಿಗಳೆಲ್ಲವನ್ನು

ಆಧ್ಯಾತ್ಮಿಕ ಶಾಸ್ತ್ರಜ್ಞರು ಮಾತ್ರವೇ ನಿರ್ವಹಿಸುತ್ತಾರೆ.

ಈ ವಿಶ್ವವ್ಯಾಪ್ತಿ ನೂತನ ಯುಗ ಚಳವಳಿಯ ರಥಕ್ಕೆ, ಭಾರತದೇಶವು ಕೇಂದ್ರವಾಗಿಯೂ

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ - ಸಾರಥ್ಯವನ್ನು ವಹಿಸುತ್ತಿದೆ

ಕ್ರಮವಾಗಿ.....

2016ನೇ ವರ್ಷಕ್ಕೆಲ್ಲಾ

ಸುಸ್ಪಷ್ಟವಾದ ಆಧ್ಯಾತ್ಮಿಕ ಪರಿಪಾಲನೆಯನ್ನು ವಿಶ್ವದಾದ್ಯಂತ ನಾವು ನೋಡಲಿದ್ದೇವೆ.

ಸುಸಂಪನ್ನ ವೃಕ್ಷ, ಪ್ರಾಣಿ ಸಾಮ್ರಾಜ್ಯಗಳ ಸಹಚರ್ಯದೊಂದಿಗೆ ಪ್ರಕಾಶಿಸುವ ಮಾನವ ಸಮಾಜವು

ಸಮತೋಲಿತ ಭೂ ವಾತಾವರಣದೊಂದಿಗೆ ಕಂಗೊಳಿಸುತ್ತದೆ.

ಆಧ್ಯಾತ್ಮಿಕ ವ್ಯವಸಾಯ, ಆಧ್ಯಾತ್ಮಿಕ ಕ್ರೀಡೆಗಳು, ಆಧ್ಯಾತ್ಮಿಕ ಕಲೆಗಳು ..

ಇತ್ಯಾದಿ ಎಲ್ಲ ರಂಗಗಳಲ್ಲೂ ಆತ್ಮಜ್ಞಾನಿಗಳ ಪ್ರತ್ಯೇಕ ಸಂಘಗಳು ಕಾಣಿಸಿಕೊಳ್ಳುತ್ತವೆ.

2020 ನೇ ವರ್ಷಕ್ಕೆಲ್ಲಾ

ಈ ವಿಶಿಷ್ಟವಾದ ಭೂಲೋಕದಲ್ಲಿ ನಿಜವಾದ ಸ್ವರ್ಗಲೋಕವು ಸಾಕ್ಷಾತ್ಕರಿಸುತ್ತದೆ.

Go to top