"ತ್ರಿತತ್ವಂ"

"ಮಿತ್ರರು" ಎಂದರೆ, ಮಿತ್ರತ್ವ ಹೊಂದಿರುವವರು; "ಸ್ವಾಮಿಗಳು" ಎಂದರೆ ಸ್ವಾಮಿತ್ವದಲ್ಲಿ ಇರುವವರು; "ದೇವರುಗಳು" ಎಂದರೆ ದೈವತ್ವದಲ್ಲಿ ಇರುವವರು.

ಈ ಮೂರು ವಿಷಯಗಳು.. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ಗೆ "ತ್ರಿಮೂರ್ತಿಗಳು" ಇದ್ದಂತೆ.

ನಾವು ನಮ್ಮ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಎನ್ನುವ ಮಹಾದೇವಾಲಯದಲ್ಲಿ ಮೂರು ವಿಗ್ರಹಗಳನ್ನು ತ್ರಿಮೂತ್ರಿಗಳಂತೆ ಪ್ರತಿಷ್ಠಾಪನೆ ಮಾಡಿದೆವು. ಅವೇ ‘ಮಿತ್ರತ್ವ’ ಎನ್ನುವ ವಿಗ್ರಹ .. ‘ಸ್ವಾಮಿತ್ವ’ ಎನ್ನುವ ವಿಗ್ರಹ .. ‘ದೈವತ್ವ’ ಎನ್ನುವ ವಿಗ್ರಹ. ಆದ್ದರಿಂದ, ಈ ಮೂರು ತತ್ವಗಳು ನಮಗೆ ಆರಾಧ್ಯ ದೈವಗಳು.

ನಾವು ಮಿತ್ರತ್ವವನ್ನು ಆರಾಧಿಸುವವರು .. ಮಿತ್ರತ್ವವನ್ನು ಸಾಧನೆ ಮಾಡುವವರು .. ಮಿತ್ರತ್ವವನ್ನು ಆಚರಿಸುವವರು.. ಮಿತ್ರತ್ವವನ್ನು ಅಭ್ಯಾಸ ಮಾಡುವವರು .. ಮಿತ್ರತ್ವವನ್ನು ಎಲ್ಲರಿಗೂ ತೋರಿಸುವವರು .. ಮಿತ್ರತ್ವವನ್ನು ಎಲ್ಲರಿಗೂ ಬೋಧಿಸುವವರು .. ಮತ್ತು ಮಿತ್ರತ್ವವನ್ನು ಎಲ್ಲರಿಗೂ ಹೇಳಿಕೊಡುವವರು.

* * *

ನಾವು ಸ್ವಾಮಿತ್ವವನ್ನು ಆರಾಧಿಸುವವರು .. ಸ್ವಾಮಿತ್ವವನ್ನು ಬೋಧಿಸುವವರು .. ಸ್ವಾಮಿತ್ವವನ್ನು ವಿಶ್ಲೇಷಿಸುವವರು .. ಸ್ವಾಮಿತ್ವವನ್ನು ವಿವರಿಸುವವರು .. ಸ್ವಾಮಿತ್ವವನ್ನು ಪ್ರಚಾರ ಮಾಡುವವರು .. ಸ್ವಾಮಿತ್ವವನ್ನು ಪ್ರಸಾರ ಮಾಡುವವರು .. ಮತ್ತು ಸ್ವಾಮಿತ್ವದಲ್ಲೇ ಜೀವಿಸುವವರು.

ಹಾಗೆಯೇ, ನಾವು ನಮ್ಮ ದೈವತ್ವವನ್ನು ಆರಾಧಿಸುವವರು .. ಇತರರ ದೈವತ್ವವನ್ನು ಆರಾಧಿಸುವವರು .. ನಮ್ಮ ದೈವತ್ವವನ್ನು ನಾವು ಅರಿತುಕೊಳ್ಳುವವರು .. ಇತರರ ದೈವತ್ವವನ್ನು ತಿಳಿದಿಕೊಂಡಿರುವವರು .. ನಮ್ಮ ದೈವತ್ವವನ್ನು ಬೋಧಿಸುವವರು .. ಪ್ರಕಟಿಸುವವರು, ಪ್ರಚಾರ ಮಾಡುವವರು, ಪ್ರಸಾರ ಮಾಡುವವರು ಮತ್ತು ದೈವತ್ವದಲ್ಲಿ ಜೀವಿಸುವವರು.

ಅದಕ್ಕೆ ನಾವು .. "ಮೈ ಡಿಯರ್ ಫ್ರೆಂಡ್ಸ್ .. ಮೈಡಿಯರ್ ಮಾಸ್ಟರ‍್ಸ್ ಅಂಡ್ ಮೈಡಿಯರ್ ಗಾಡ್ಸ್" ಎಂದು ನಮ್ಮ ಪ್ರವಚನವನ್ನು ಪ್ರಾರಂಭಿಸುತ್ತಾ .. ವಿಶ್ವದಲ್ಲೆಲ್ಲಾ ಧ್ಯಾನ ಹೇಳಿಕೊಡುತ್ತೇವೆ. ವಿಶ್ವದಲ್ಲೆಲ್ಲಾ ಧ್ಯಾನವಿದ್ಯೆ ಹೇಳಿಕೊಡುತ್ತೇವೆ. ಪ್ರಜೆಗಳೆಲ್ಲರನ್ನೂ "ಧ್ಯಾನದಲ್ಲಿ ಕುಳಿತುಕೊಳ್ಳಿ" ಎನ್ನುತ್ತೇವೆ.

"ಮಿತ್ರರು" ಎಂದರೆ ಮಿತ್ರತ್ವವನ್ನು ಮೂರ್ತೀಭವಿಸಿದವರು. "ಸ್ವಾಮಿಗಳು" ಸ್ವಾಮಿತ್ವಕ್ಕೆ ಪ್ರತೀಕವಾದವರು .. ಮತ್ತು "ದೇವರುಗಳು" ಅಂದರೆ ದೈವತ್ವದಲ್ಲಿ ಇರುವವರು.

ಪರಲೋಕದಲ್ಲಿ ಇರುವಾಗ ನಾವು ಮೌಲಿಕವಾಗಿ ಈ ಮೂರರ ಸ್ವರೂಪ. ಆದರೆ, ಈ ಭೂಲೋಕಕ್ಕೆ ಬಂದಾಗ ಸ್ವಲ್ಪ ಮರೆತುಹೋದೆವು! ಮರಳಿ ಪುನಃ ನಮ್ಮ "ಸ್ವಸ್ವರೂಪ"ದಿಂದ, ಅಂದರೆ, ಈ "ತ್ರಿಮೂರ್ತಿತ್ವ"ದಿಂದ ಅನುಸಂಧಾನವಾಗಿ ಇಹಲೋಕದಲ್ಲಿ ಪುನಃ ಮಿತ್ರರರಾಗಬೇಕು, ಸ್ವಾಮಿಗಳಾಗಬೇಕು ಮತ್ತು ದೇವರುಗಳಾಗಬೇಕು.

* * *

ಬಾಲ್ಯದಲ್ಲಿ ನಾನು ಎಲ್ಲರಲ್ಲೂ ಇರುವ ಮಿತ್ರತ್ವವನ್ನು ಆರಾಧಿಸುತ್ತಿದ್ದೆ .. ಮತ್ತೆ ಅವರ ಜೊತೆ ಮಿತ್ರತ್ವವನ್ನು ಬಯಸುತ್ತಿದ್ದೆ. ಆದರೆ, ಆಗ ನನಗೆ ಧ್ಯಾನ ಮತ್ತು ಆತ್ಮಜ್ಞಾನ ಇರಲಿಲ್ಲ. ಆದ್ದರಿಂದ, ‘ಸ್ವಾಮಿತತ್ವ’, ‘ದೈವತ್ವ’ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಆದರೆ, ಧ್ಯಾನದಲ್ಲಿ ಬಂದನಂತರ ನನ್ನ ಸ್ವಾಮಿತ್ವ ನನಗೆ ಅರ್ಥವಾಯಿತು .. ಹಾಗೆಯೇ, ಎಲ್ಲರಲ್ಲೂ ಇರುವ ಸ್ವಾಮಿತ್ವವೂ ಅರ್ಥವಾಯಿತು .. ನನ್ನ ದೈವತ್ವ ನನಗೆ ಅರ್ಥವಾಯಿತು, ಹಾಗೆಯೇ, ಎಲ್ಲರ ದೈವತ್ವವೂ ಅರ್ಥವಾಯಿತು; ಆಗ ನನ್ನ ಮಿತ್ರತ್ವ ಹೆಚ್ಚಾಗಿ ಹತ್ತರಷ್ಟು ಅಧಿಕವಾಗಿ ಬೆಳೆದು ಈ ದಿನ ಈ ರೀತಿಯಲ್ಲಿ ವಿಶ್ವವ್ಯಾಪ್ತಿಯಾಗಿದೆ!

* * *

ಹುಟ್ಟಿದ ಪ್ರತಿಯೊಬ್ಬ ಬಾಲಕ ಕೂಡಾ ಮೂಲಭೂತವಾಗಿ ಒಂದು ಒಳ್ಳೆಯ ಹೂವು. ಮಿತ್ರತ್ವದಿಂದ ಕೂಡಿಕೊಂಡಿರುವ ಹೂವು. ಆದರೆ, ಆತನಿಗೆ ಧ್ಯಾನ, ಆತ್ಮಜ್ಞಾನ ಇಲ್ಲದಿರುವುದರಿಂದ ಮಿತ್ರತ್ವವನ್ನು ಕಳೆದುಕೊಂಡಿರುವುದರಿಂದ ಬೆಳೆದನಂತರ ಅವನಿಗೆ ಎಲ್ಲರೂ ಶತ್ರುಗಳೇ ಉಳಿದಿರುತ್ತಾರೆ. ಇನ್ನು ಜೀವನವೆಲ್ಲಾ ಪುಕ್ಕಲನಂತೆ ಬದುಕುತ್ತಾನೆ .. ಸ್ವಾಮಿತ್ವ ಇಲ್ಲದೇ ಬದುಕುತ್ತಾನೆ... "ನನ್ನ ಕೈಯಲ್ಲಿ ಏನೂ ಇಲ್ಲ" ಎಂದುಕೊಂಡು ದೀನತೆಯಿಂದ ಬದುಕುತ್ತಾನೆ. ತನ್ನ ಕೈಯಲ್ಲೇ ಎಲ್ಲಾ ಇರುವಾಗ "ನನ್ನ ಕೈಯಲ್ಲಿ ಏನೂ ಇಲ್ಲ" ಎಂದುಕೊಳ್ಳುತ್ತಿದ್ದಾನೆಂದರೆ, ಅವನು, ತನ್ನ ಸ್ವಾಮಿತತ್ವವನ್ನು ತಾನು ಕಳೆದುಕೊಂಡಿದ್ದಾನೆ ಎಂದರ್ಥ.

"ನನ್ನ ವಾಸ್ತವವನ್ನು ನಾನು ಸೃಷ್ಟಿಸಿಕೊಳ್ಳುತ್ತಿದ್ದೇನೆ .. ಹಾಗೆಯೇ, ಅವರ ವಾಸ್ತವವನ್ನು ಅವರೇ ಸದಾ ಸೃಷ್ಟಿಸಿಕೊಳ್ಳುತ್ತಿದ್ದಾರೆ" ಎನ್ನುವ ಪ್ರಧಾನ ಅರಿವಿನ ಹೆಸರೇ "ಸ್ವಾಮಿತ್ವ".

"‘ಅನ್ಯಾಯ, ವಿಷಾದ ಎನ್ನುವುದು ಇದೆ’ ಎಂದು ನೀವು ಎಷ್ಟು ಗಾಢವಾಗಿ ನಂಬಿದರೆ, ವಾಸ್ತವವಾಗಿ ಅಷ್ಟು ಅಜ್ಞಾನ ನಿಮಗಿದೆ ಎಂದರ್ಥ ಎನ್ನುತ್ತಾರೆ ಮಹಾಜ್ಞಾನಿ ರಿಚಾರ್ಡ್ ಬಾಕ್.

"ಇಷ್ಟು ಅನ್ಯಾಯ ನಡೆಯುತ್ತಿದೆ, ಇಷ್ಟು ಹೀನಸ್ಥಿತಿಯಲ್ಲಿದೇವೆ" ಎಂದು ನಾವು ಎಷ್ಟು ಅಂದುಕೊಳ್ಳುತ್ತಿದ್ದೇವೊ ಅಷ್ಟು ನಮಗೆ ಆತ್ಮಜ್ಞಾನದ ಕೊರತೆ ಇದೆ ಎಂದು ಅರ್ಥ.

"ನಮ್ಮ ಜೀವನದ ನಾಟಕದ ಕೃತಿಕಾರರು ನಾವೇ. ನಮ್ಮ ಜನ್ಮಕ್ಕೆ ನಾವೇ ಕಾರಣಕರ್ತರು .. ಮತ್ತು ನಮ್ಮ ಸೃಷ್ಟಿಗೆ, ನಮ್ಮ ಸ್ಥಿತಿಗೆ, ನಮ್ಮ ಲಯಕ್ಕೆ ನಾವೇ ಕಾರಕರು, ಪ್ರತಿ ಜನ್ಮ ಒಂದು ಸೃಷ್ಟಿ, ಪ್ರತಿ ಜನ್ಮ ಒಂದು ಸ್ಥಿತಿ, ಪ್ರತಿಯೊಂದು ಮರಣ ಒಂದು ಲಯ. ಹುಟ್ಟುವುದು ಸೃಷ್ಟಿ, ಬೆಳೆಯುವುದು ಸ್ಥಿತಿ, ಮರಣಿಸುವುದು ಲಯ. ಆದ್ದರಿಂದ, ಆ ಸೃಷ್ಟಿ, ಸ್ಥಿತಿ, ಲಯಕಾರಕರು ನಾವೇ ಎನ್ನುವ "ಸ್ವಾಮಿತ್ವ" ತಿಳಿದುಕೊಂಡಾಗ .. ನಮಗೆ ಆ ಜ್ಞಾನ ಬಂದಾಗ... ನಮಗೆ ಎಂತಹ ಮುಕ್ತಿ ಸಿಗುತ್ತದೋ ಹೇಳಲಾಗುವುದಿಲ್ಲ.

"ಅವರವರ ಕರ್ಮಗಳಿಗೆ ಅವರವರೇ ಹೊಣೆಗಾರರು", "ಅವರವರ ಕರ್ಮಗಳಿಗೆ ಅವರವರೇ ಸೃಷ್ಟಿಕರ್ತರು" ಎನ್ನುವುದೇ "ಸ್ವಾಮಿತ್ವ"ದ ಮೌಲಿಕ ಅರಿವು.

ಇನ್ನೂ ನೋಡಿದರೆ "ನೀನು ನಿಜಕ್ಕೂ ಶರೀರವೇ ಅಲ್ಲ; ಆತ್ಮ ಪದಾರ್ಥ; ನೀನು ಶಾಶ್ವತವಾದ ಅನಂತವಾದ ಆತ್ಮ. ನಾನು ಸಹ ಅದೇ. ನಾನು ಒಬ್ಬ ದೈವ. ನೀನು ಒಬ್ಬ ದೈವ ಎನ್ನುವುದೇ "ದೈವತ್ವ"ದ ಮೌಲಿಕವಾದ ಅರಿವು. ಈ ಮೌಲಿಕವಾದ ಅರಿವನ್ನು ನಾವು ಆರಾಧಿಸುತ್ತಿರುವವರು. ಆದ್ದರಿಂದಲೇ, ಪಿರಮಿಡ್ ಮಾಸ್ಟರ್‌ಗಳೆಲ್ಲರೂ ಸದಾ "ತ್ರಿಮೂರ್ತಿ ತತ್ವ"ದಲ್ಲಿ ಇರುತ್ತೇವೆ.

* * *

"ಮಿತ್ರತ್ವ", "ಸ್ವಾಮಿತ್ವ" ಮತ್ತು "ದೈವತ್ವ"ಗಳ .. ಕುರಿತು ನಾವು ನಮ್ಮ ಧ್ಯಾನಾಭ್ಯಾಸದಲ್ಲಿ ಮಾತ್ರವೇ ತಿಳಿದುಕೊಳ್ಳುತ್ತೇವೆ. ನಾವು ಎಷ್ಟು ಧ್ಯಾನ ಮಾಡುತ್ತೇವೋ ಅಷ್ಟು ಹೆಚ್ಚಾಗಿ ನಮ್ಮಲ್ಲಿ ಮಿತ್ರತ್ವ ತತ್ವ ವಿಜೃಂಭಿಸಿ, ನಮ್ಮಲ್ಲಿರುವ ನಮ್ಮ ಸ್ವಾಮಿತ್ವ ಪ್ರಕಟಿತವಾಗಿ, ನಮ್ಮಲ್ಲಿರುವ ದೈವತ್ವ ನಮ್ಮ ಅರಿವಿಗೆ ಬರುತ್ತದೆ. ಧ್ಯಾನ ಎನ್ನುವುದು ಬಹಳ ಮೂಲಭೂತವಾದುದು.

ಧ್ಯಾನ ಮಾಡಿದರೆ ತತ್ಫಲಿತಗಳು. ಧ್ಯಾನ ಮಾಡದೇ ಇದ್ದರೆ ತತ್ಫಲಿತಗಳು. ಊಟ ಮಾಡಿದರೆ ಒಂದು ರೀತಿಯ ಫಲಿತ .. ಊಟ ಮಾಡದೇ ಇದ್ದರೆ ಮತ್ತೊಂದು ರೀತಿಯ ಫಲಿತ. ಮಿತ್ರತ್ವ ಮಾಡಿದರೆ ಒಂದು ರೀತಿಯ ಫಲಿತ .. ಮಾಡದಿದ್ದರೆ ಮತ್ತೊಂದು ವಿಧವಾದ ಫಲಿತ. ಆದ್ದರಿಂದ, ಇದು ಎಲ್ಲಾ ಕಾರಣ-ಕಾರ್ಯ ಸಂಬಂಧದಿಂದ ನಡೆಯುತ್ತಿರುತ್ತದೆ.

* * *

ಧ್ಯಾನಮೂಲಂ ಇದಂ ಮಿತ್ರತ್ವಂ.. ಧ್ಯಾನಮೂಲಂ ಇದಂ ಸ್ವಾಮಿತ್ವಂ.. ಧ್ಯಾನ ಮೂಲಂ ಇದಂ ದೈವತ್ವಂ..

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆದಿಶಕ್ತಿಯು ಹೇಗೆ ತಾಯಿಯೋ, ಹಾಗೆ, ಈ ಮೂರಕ್ಕೂ ಸಹ "ಧ್ಯಾನ". ಧ್ಯಾನ ಎನ್ನುವುದೇ ತಾಯಿ, "ಆದಿಶಕ್ತಿ". ನಾವು ಪುರಾಣಗಳನ್ನು ಕೇಳಿದ್ದೇವೆ .. ಆದರೆ, ಅವುಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ಅನಿಸುತ್ತದೆ. ಆದರೆ, ಧ್ಯಾನ ಮಾಡಿದ ನಂತರ ಅರ್ಥಮಾಡಿಕೊಂಡಿದ್ದೇವೆ ಎಂದು ಅನಿಸುತ್ತದೆ.

* * *

ಇದೆಲ್ಲಾ ಸಾಧನಾಶಾಸ್ತ್ರ. ಕೇವಲ "ಸಿದ್ಧಾಂತಶಾಸ್ತ್ರ" ಅಲ್ಲ. "ಮಿತ್ರತ್ವ" ಎನ್ನುವುದು ಥಿಯರಿ ಅಲ್ಲ .. ಪ್ರಾಕ್ಟಿಕಲ್ ಕೋರ್ಸು. ಪ್ರಾಣಿಕೋಟಿಯ ಜೊತೆ ಮಿತ್ರತ್ವವನ್ನು ಮಾಡಬೇಕು. "ಸ್ವಾಮಿತ್ವ" ಎನ್ನುವುದು ನಮ್ಮಲ್ಲಿ ನಾವು ನಿರೂಪಿಸಿಕೊಳ್ಳಬೇಕು. ಆದ್ದರಿಂದ, "ಧ್ಯಾನ" ಎನ್ನುವುದು ಪ್ರಾಕ್ಟಿಕಲ್ ಕೋರ್ಸು. ಸಿದ್ಧಾಂತ ಅರಿವು ಎನ್ನುವುದು ಬೀಜ ಮಾತ್ರ; ಆದರೆ, ಅಭ್ಯಾಸ ಎನ್ನುವುದು ಪ್ರೌಢ ಪ್ರಬಂಧ ಮಾತ್ರವಾಗಿರಬೇಕು.

"ನೀನು ಸರಿಯಾಗಿ ಹಾಡುತ್ತಿಲ್ಲ .. ಶ್ರುತಿಯಲ್ಲಿಲ್ಲ" ಎನ್ನುತ್ತಾ ಶ್ರುತಿ ಇದೆಯೋ ಇಲ್ಲವೋ ಎಂದು ಒಂದು ನಿಮಿಷದಲ್ಲಿ ಹೇಳಿಬಿಡುತ್ತೇವೆ. ತ್ರಿಮೂರ್ತಿ ತತ್ವ ಮೂರ್ತೀಭವಿಸಿದರೆ ಮಾತ್ರವೇ ಜೀವನ ‘ಶ್ರುತಿ’ಯಲ್ಲಿ, ‘ಲಯ’ದಲ್ಲಿ ಇರುತ್ತದೆ.

* * *

2500 ವರ್ಷಗಳ ಹಿಂದೆ ಗೌತಮಬುದ್ಧನು "ನಾನು ಪುನಃ ಬರುತ್ತೇನೆ .. ಮೈತ್ರೇಯ ಬುದ್ಧನಾಗಿ" ಎಂದು ಸಮಸ್ತ ಮಾನವಕುಲಕ್ಕೆ ಮಾತುಕೊಟ್ಟರು. "ಮೈತ್ರಿ" ಎನ್ನುವ ಪದಕ್ಕೆ ಎಷ್ಟು ಪ್ರಾಮುಖ್ಯತೆ, ಪ್ರಾಧಾನ್ಯತೆ ನೀಡಿದರೋ ಇದರಿಂದ ತಿಳಿದುಕೊಳ್ಳಬಹುದು. ನಾವೆಲ್ಲಾ ಭೂಮಂಡಲದಲ್ಲಿ ಇದ್ದೇವೆ. ಆದ್ದರಿಂದ, ಭೂಮಂಡಲದಲ್ಲಿ ಇರುವ ಪ್ರಾಣಿಕೋಟಿ ಎಲ್ಲಾ ಕೂಡ ಪರಸ್ಪರ ಮಿತ್ರರೇ.

* * *

ಭೂಮಂಡಲದಲ್ಲಿ ಎಷ್ಟು ಸವಾಲುಗಳಿರುತ್ತವೆಯೋ, ಎಷ್ಟು ಸಮಸ್ಯೆಗಳು ಇರುತ್ತವೆಯೋ, ಶರೀರಧಾರಣೆ ಮಾಡಿದಾಗಿನಿಂದ ಏನಾಗುತ್ತದೆಯೋ, ಹೇಗೆ ಇರುತ್ತದೆಯೋ .. ಎಲ್ಲರೂ ಎಲ್ಲಾ ತಿಳಿದು ಬಂದಿರುವವರೇ. ಏನೂ ತಿಳಿಯದೇ ಬಂದಿರುವವರು ಯಾರೂ ಇಲ್ಲ! ಎಲ್ಲರೂ ಇಷ್ಟದಿಂದಲೇ ಹುಟ್ಟಿದ್ದಾರೆ, ಹುಟ್ಟುತ್ತಲೇ ಇರುತ್ತಾರೆ. ಯಾವ ಕೆಲಸ ಮಾಡಿದರೂ ಯಾರು ಎಲ್ಲಿ ಮಾಡಿದರೂ ತಮ್ಮ ಇಚ್ಛೆಯಂತೆ, ಸ್ವತಂತ್ರವಾಗಿ ಇರುತ್ತಾರೆ. ಆದ್ದರಿಂದ, ಇದರ ಹೆಸರು "ಸ್ವಾಮಿತ್ವ".

"ಸ್ವಾಮಿ" ಎಂದರೆ ಗಡ್ಡವನ್ನು ಬೆಳೆಸಿಕೊಂಡಿರುವವರಲ್ಲ. ಪ್ರತಿಯೊಬ್ಬರು ಸ್ವಾಮಿಯೇ, ಪ್ರತಿಯೊಂದು ಪ್ರಾಣಿಯೂ ಸ್ವಾಮಿಯೇ. "ಸ್ವಾಮಿ" ಆಗದಿರುವ ಯಾವ ಪ್ರಾಣಿಯೂ ಸೃಷ್ಟಿಯಲ್ಲಿ ಇಲ್ಲ.

* * *

ಒಬ್ಬನು ಮೌನವಾಗಿ ಇರಬೇಕೆಂದುಕೊಳ್ಳುತ್ತಾನೆ. ಇನ್ನೂ ಕೆಲವರಿಗೆ ಸುಮ್ಮನೆ ಮಾತನಾಡುವುದಿಷ್ಟ. ತಿಳಿದಿದ್ದರೂ, ತಿಳಿಯದೇ ಇದ್ದರೂ ಅವನು ಮಾತನಾಡುತ್ತಲೇ ಇರುತ್ತಾನೆ. ಅಕ್ಕ-ಪಕ್ಕದವರು ಕೇಳಿಸಿಕೊಂಡರೂ, ಕೇಳಿಸಿಕೊಳ್ಳದೇ ಇದ್ದರೂ ಅವನ ಮಾತುಗಳೇ ಅವನಿಗೆ ತುಂಬಾ ಆನಂದವನ್ನು ನೀಡುತ್ತಿರುತ್ತದೆ. ನಾವು ಒಂದು ವಿಷಾದ ಭರಿತವಾದ ಸಿನಿಮಾ ನೋಡಲು ಹೋಗುತ್ತೇವೆ .. ಅಂತಹ ಸಿನಿಮಾಗಳಲ್ಲಿ ಹೀರೋಯಿನ್ ಸದಾ ಅಳುತ್ತಲೇ ಇರುತ್ತಾಳೆ.

ಅಂತಹ ರೋದನೆಯ ಸಿನಿಮಾ ನೋಡಲು ಎಲ್ಲರು ಹೋಗುತ್ತಾರೆ. ಅದು ಅವರಿಗೆ ಇಷ್ಟ. ಹೀರೋಯಿನ್ ಕಷ್ಟಪಡುತ್ತಿದ್ದರೇ ನೋಡಿ ಅಳುತ್ತಿರುತ್ತಾರೆ. ಮರುದಿನ ಪುನಃ ಹೋಗಿ ಅಳುತ್ತಾರೆ. "ಅಳಲು ಸಿನಿಮಾಗೆ ಯಾಕೆ ಹೋಗಬೇಕು?" ಅಂದರೆ .. ಅದು ನಮಗೆ ಚೆನ್ನಾಗಿದೆ. ಆದ್ದರಿಂದ, ಹಣ ಖರ್ಚು ಮಾಡಿ ಅಳುವುದಕ್ಕೆ ಸಿನಿಮಾ ನೋಡಲು ಹೋಗುತ್ತೇವೆ ಅಥವಾ ಅನೇಕ ಟಿ.ವಿ. ಸೀರಿಯಲ್‌ಗಳಲ್ಲಿ ಅತ್ತೆಸೊಸೆ ಹೊಡೆದಾಡುತ್ತಿರುತ್ತಾರೆ. ಅಂತಹ ದೃಶ್ಯ ನೋಡಲು ಎಷ್ಟು ಇಷ್ಟವೋ.

ಇದರ ಮೂಲಕ ಅಂತರ್ಲೀನವಾಗಿರುವ ಜೀವನದ ನಾಟಕೀಯ ತತ್ವವನ್ನು ತಿಳಿದುಕೊಳ್ಳುತ್ತಾ, ಇಲ್ಲಿ ಇರುವಾಗಲೇ ನಿರ್ವಾಣ ಸ್ಥಿತಿಯನ್ನು ಹೊಂದಬೇಕು. ಈ ಲೋಕದಲ್ಲಿ ರಾಜಕೀಯವಾಗಿ ತಾತ್ಕಾಲಿಕ ಶತ್ರುತ್ವವಿದೆ. ಅದು ಸಹ ನಾವು ಮೇಲಿನಲೋಕಗಳಿಂದ ಕೇಳಿ ತಂದುಕೊಂಡಿದ್ದೇ. ಏಕೆಂದರೆ, ಸ್ವಲ್ಪ ಕಾಲಕ್ಕಾಗಿ ನಡೆಯುವ ಆ ಘರ್ಷಣೆಗಳು ಮತ್ತು ತಿಕ್ಕಾಟಗಳು .. ಒಂದು ಆತ್ಮವಿಕಾಸಕ್ಕೆ ಸಹಾಯವಾಗುತ್ತದೆ.

"ನಮ್ಮ ಇಹಲೋಕ ಧ್ಯೇಯ ಹೇಗಿರಬೇಕು?" ಎಂದರೆ ಮೇಲಿನಲೋಕಗಳಲ್ಲಿ ಹೇಗೆ ಮಿತ್ರತ್ವ ಇದೆಯೋ, ಕೆಳಗಿನ ಲೋಕದಲ್ಲಿ ಕೂಡಾ ಹಾಗೇ ಇರಬೇಕು. ಆ ಮಿತ್ರತ್ವವನ್ನು ಇಲ್ಲಿಗೆ ಇಳಿಸಬೇಕು .. ಅದೇ ಆತ್ಮಜ್ಞಾನ, ಅದೇ ಧ್ಯಾನ, ಅದೇ ಸಹೃದಯತೆ.

"ಮಿತ್ರತ್ವ" ಎನ್ನುವುದು ಈ ದಿನ ಈ ಪ್ರಪಂಚದಲ್ಲಿ ಅಡಗಿಹೋಗಿದೆ, ಲುಪ್ತವಾಗಿಬಿಟ್ಟಿದೆ, ಅದೃಶ್ಯವಾಗಿ ಬಿಟ್ಟಿದೆ. ಆದ್ದರಿಂದ ಎಲ್ಲರೂ ಅಳುತ್ತಿದ್ದಾರೆ. ತಾವೂ ಅಳುತ್ತಾ ಎಲ್ಲರನ್ನೂ ಅಳಿಸುತ್ತಿದ್ದಾರೆ.

ಗೌತಮಬುದ್ಧನು "ಎಲ್ಲಾ ಕಡೆ ದುಃಖವಿದೆ" ಎನ್ನುವ ಆರ್ಯ ಸತ್ಯವನ್ನು ಕಂಡುಕೊಂಡಾಗ "ಅದು ಮಿತ್ರತ್ವದ ಅಭಾವದಿಂದ ಬಂದಿದೆ" ಎಂದು ಕೂಡಾ ತಿಳಿದುಕೊಂಡಿದ್ದಾನೆ. ರಾಜ ಪ್ರಜೆಗಳಿಗೆ ಮಿತ್ರನಲ್ಲ .. ಪ್ರಜೆಗಳು ರಾಜನಿಗೆ ಮಿತ್ರರಲ್ಲ .. ಗಂಡಸರು ಹೆಂಗಸರಿಗೆ ಮಿತ್ರರಲ್ಲ .. ಹೆಂಗಸರಿಗೆ ಗಂಡಸರು ಮಿತ್ರರಲ್ಲ. ಎಲ್ಲಾಕಡೆ ಶತ್ರುತ್ವವಿದೆ .. ಅದರಿಂದ ದುಃಖ ಬಂದಿದೆ. ಎಲ್ಲಾಕಡೆ ಅರಾಜಕತೆ, ಉಗ್ರವಾದ, ಕೌರವರು ಪಾಂಡವರ ಬಗ್ಗೆ ಉಗ್ರವಾದ. ರಾವಣಾಸುರನು ಸೀತೆಯ ಬಗ್ಗೆ .. ಟೆರ್ರರಿಜಂ. ಮಾನವರು ಪ್ರಾಣಿಗಳ ಬಗ್ಗೆ ತೋರಿಸುವ ಟೆರ್ರರಿಜಂ. ಈ ಮಿತ್ರತ್ವ ಎನ್ನುವುದು ಲುಪ್ತವಾಗಿ ಹೋಗಲು ಕಾರಣ ನಮ್ಮ ದೈವತ್ವವನ್ನು, ನಮ್ಮ ಅನಂತ ಆತ್ಮತತ್ವವನ್ನು ನಾವು ಮರೆತು ಹೋಗಿರುವುದೇ.

ಅನಂತರ ನಮ್ಮ ಸ್ವಾಮಿತ್ವವನ್ನು ಕೂಡಾ ಮರೆತು "ನನ್ನ ಜೀವನ ನನ್ನ ಕೈಯಲ್ಲಿ ಇಲ್ಲವೇನೋ .. ಮೇಲಿರುವನ ಕೈಯಲ್ಲಿ ಇದೆಯೇನೋ" ಎಂದುಕೊಳ್ಳುತ್ತಾ ನಿರ್ವೀರ್ಯಸ್ಥಿತಿಯಲ್ಲಿ ಇದ್ದೇವೆ. ನಮ್ಮ ದೈವತ್ವವನ್ನು ಮರೆತ್ತಿದ್ದೇವೆ. ಆದ್ದರಿಂದ, ನಮ್ಮ ಸ್ವಾಮಿತ್ವ ಪಲ್ಟಿ ಹೊಡೆದಿದೆ. ಈಗ ಪುನಃ "ಮೈಡಿಯರ್ ಫ್ರೆಂಡ್ಸ್ .. ಮೈ ಡಿಯರ್ ಮಾಸ್ಟರ‍್ಸ್ .. ಅಂಡ್ ಮೈಡಿಯರ್ ಗಾಡ್ಸ್" ಎನ್ನುವ ಈ ಮೂರರ ಸಂಬೋಧನೆಗಳಿಂದ, ಧ್ಯಾನ ಕೇಂದ್ರಗಳ ಕೃಷಿಯ ಮೂಲಕ .. ನಮ್ಮ ಧ್ಯಾನ ಪ್ರಚಾರದ ಮೂಲಕ, ನಮ್ಮ ಸಕಲ ಕಾರ್ಯಕ್ರಮಗಳ ಮೂಲಕ .. ನಮ್ಮ ಧ್ಯಾನ ಪ್ರಚಾರದ ಮೂಲಕ, ನಮ್ಮ ಸಕಲ ಕಾರ್ಯಕ್ರಮಗಳ ಮೂಲಕ .. ನಮ್ಮ ಭೂಮಿಯ ಮೇಲೆ ತ್ರಿಮೂರ್ತಿತತ್ವವನ್ನು ಪುನಃ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಿದ್ದೇವೆ.

* * *

ಡಿಯರ್ ಫ್ರೆಂಡ್ಸ್.. ಡಿಯರ್ ಮಾಸ್ಟರ‍್ಸ್... ಡಿಯರ್ ಗಾಡ್ಸ್.. ಧ್ಯಾನದಿಂದ ನಾವು ಮಿತ್ರತ್ವವನ್ನು ಪುನಃ ಪಡೆಯುತ್ತೇವೆ. ನಮ್ಮ ಸ್ವಾಮಿತ್ವವನ್ನು ಪುನಃ ಹೊಂದಿಸಿಕೊಳ್ಳುತ್ತೇವೆ .. ನಮ್ಮ ದೈವತ್ವವನ್ನು ಪುನಃ ಹೊಂದಿಸಿಕೊಳ್ಳುತ್ತೇವೆ.

ಕೆಲವರು ಕೇಳುತ್ತಿರುತ್ತಾರೆ "ನಾವು ಏತಕ್ಕಾಗಿ ಧ್ಯಾನಕ್ಕೆ ಬರಬೇಕು? ನಮಗೇನು ಅವಶ್ಯಕತೆ ಇದೆ? ಅದರಿಂದ ಏನು ಲಾಭ? ಧ್ಯಾನ ಮಾಡದಿದ್ದರೆ ನಮಗೆ ಆಗುವ ನಷ್ಟವೇನು? ನಾವೆಲ್ಲಾ .. ಚೆನ್ನಾಗೇ ಇದ್ದೀವಲ್ಲ.." ಎನ್ನುತ್ತಾರೆ.

ಭವಿಷ್ಯತ್ತಿನಲ್ಲಿ ರೋಗಗಳು ಬರದೇ ಇರುವುದಕ್ಕಾಗಿ ಲಸಿಕೆ ‘ಸೂಜಿಯನ್ನು’ ಹಾಕಿಸಿಕೊಂಡಿದ್ದೀರಲ್ಲವೇ. ಹಾಗೆಯೇ, ಸುಖದಲ್ಲಿರುವಾಗಲೇ ಭವಿಷ್ಯತ್ತಿನಲ್ಲಿ ದುಃಖ ಬರದೇ ಇರಲು ವರ್ತಮಾನದಲ್ಲಿ ಧ್ಯಾನಸಾಧನೆ ಪ್ರಾರಂಭಿಸಬೇಕು. ಆಗಲೇ ಭವಿಷ್ಯತ್ತಿನಲ್ಲಿ ನಮ್ಮ ಸುಖ ಅಲುಗಾಡದೇ ಇರುತ್ತದೆ.

* * *

ಅನ್ನಮಾಚಾರ್ಯರು "ನಾನಾಟಿ ಬದುಕು ನಾಟಕವು" ಎನ್ನತ್ತಾ "ಬಾಲ್ಯ, ಯವ್ವನ, ವೃದ್ಧಾಪ್ಯ, ಸಾವು ಎನ್ನುವ ನಾಲಕ್ಕು ದಿನಗಳ ಬದುಕೇ ನಾಟಕ" ಎಂದರು.

ನಾನು ಒಂದು ಕಾಲದಲ್ಲಿ ಬಾಲಕನಾಗಿದ್ದೆ. ಆ ನಾಟಕಗಳನ್ನಾಡಿದೆ. ಗೋಲಿ ಆಟಗಳಾಡಿದೆ. ಈಗ ಧ್ಯಾನ ಪ್ರವಚನಗಳನ್ನು ನೀಡುತ್ತಾ ಈ ನಾಟಕವನ್ನು ಆಡುತ್ತಿದ್ದೇನೆ. ನಾಳೆ ಮುದುಕನಾಗಿ ಒಂದು ಮೂಲೆಯಲ್ಲಿ ಮಲಗಿರುತ್ತೇನೆ. ಹೋಗುವ ಸಮಯ ಬರುತ್ತದೆ .. ಹೋಗುತ್ತೇನೆ. ಮೇಲೆ ಲೋಕಗಳಿಗೆ ಹೋದರೇ ಅಲ್ಲಿ "ಭಲೇ ನಾಟಕ ಆಡಿದ್ದೀಯ. ಚೆನ್ನಾಗಿ ಆಡಿದ್ದೀಯ. ನಮ್ಮನ್ನು ರಂಜಿಸಿದ್ದೀಯ, ನಿನ್ನ ಸ್ವಾಮಿತ್ವವನ್ನು ನೀನು ತುಂಬಾ ಚೆನ್ನಾಗಿ ರಕ್ಷಿಸಿಕೊಂಡಿದ್ದೀಯ, ನಿನ್ನ ದೈವತ್ವವನ್ನು ತುಂಬಾ ಚೆನ್ನಾಗಿ ಪ್ರಕಟಿಸಿಕೊಂಡಿರುವೆ. ನಿನ್ನ ಮಿತ್ರತ್ವವನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಬಂದಿರುವೆ" ಎಂದು ನನಗೆ ಖಂಡಿತವಾಗಲೂ ಪುಸ್ತಕಗಳನ್ನು ಕೊಡುತ್ತಾರೆ.

ಇಲ್ಲದಿದ್ದರೆ "ಏನಯ್ಯಾ ಹಾಗೆ ದರಿದ್ರವಾಗಿ ಆಕ್ಟಿಂಗ್ ಮಾಡಿರುವೆ? ಎಲ್ಲಾ ಮರೆತುಬಿಟ್ಟಯೇನು? ನಿನಗಾಗಿ ನೀನು ಏಕೆ ಧ್ಯಾನ ಮಾಡಲಿಲ್ಲ? ನೀನು ದಿನನಿತ್ಯಾ ಮನೆಯಿಂದ ಕಛೇರಿಗೆ ಹೋಗುವ ದಾರಿಯಲ್ಲಿ ‘ಪಿರಮಿಡ್ ಧ್ಯಾನ ಕೇಂದ್ರ’ ಇತ್ತಲ್ಲವಾ. ಅದರೊಳಗೆ ನೀನು ಏತಕ್ಕಾಗಿ ಹೋಗಲಿಲ್ಲ? ನಿನಗೆ ಕರಪತ್ರ ಸಹ ಕೊಟ್ಟಿದ್ದೇನೆ. ಏತಕ್ಕಾಗಿ ಧ್ಯಾನ ಮಾಡಲಿಲ್ಲ? ಛೆ ಛೆ .. ಏನಯ್ಯಾ ನಿನ್ನ ಜನ್ಮವೆಲ್ಲಾ ವ್ಯರ್ಥಗೊಳಿಸಿರುವೆ" ಎನ್ನುತ್ತಾ ಪ್ರಶ್ನೆಗಳಸುರಿ ಮಳೆಯನ್ನೇ ಸುರಿಸುತ್ತಾರೆ.

"ಏನೋ .. ಹಾಗೆ ಆಗ್ಹೋಯಿತು ಸಾರ್..ಇನ್ನೊಂದು ಛಾನ್ಸ್ ಕೊಡಿಸುತ್ತೀರಾ.. ಇನ್ನೊಂದು ಜನ್ಮ ತೆಗೆದುಕೊಳ್ಳುತ್ತೇನೆ" ಅಂದರೆ .. ಯಾರು ಕೊಡುತ್ತಾರೆ ನಮಗೆ ಛಾನ್ಸ್?

ಆದ್ದರಿಂದ, ಡಿಯರ್ ಫ್ರೆಂಡ್ಸ್.. ಡಿಯರ್ ಮಾಸ್ಟರ‍್ಸ್.. ಡಿಯರ್ ಗಾಡ್ಸ್.. "ಪ್ರಿಯ ಮಿತ್ರರೇ" ಅಂದಾಗ ಮಿತ್ರತ್ವಯೋಗ. "ಪ್ರಿಯ ಮಾಸ್ಟರ್‌ಗಳೇ" ಎಂದಾಗ ಜ್ಞಾನಯೋಗ. ಪ್ರಿಯ ದೇವರುಗಳೇ ಅಂದಾಗ ಧ್ಯಾನಯೋಗ..

ಧ್ಯಾನದಲ್ಲೇ "ನಾನು ಶರೀರವಲ್ಲ ಆತ್ಮ. ನಾನು ಕೇವಲ ಮಾನವ ಮಾತ್ರನಲ್ಲ, ನಾನು ವಿರಾಟ್ ಸ್ವರೂಪನು" ಎಂದು ತಿಳಿದುಕೊಳ್ಳುತ್ತೇವೆ.

ಖುಷಿಗಾಗಿ ಪ್ರಕೃತಿಯಲ್ಲಿ ವಿಹಾರ ಯಾತ್ರೆಗಾಗಿ .. "ರಾಮೇಶ್ವರ", "ಮಾನಸಸರೋವರ", "ಕೈಲಾಸಪರ್ವತ", "ಹಿಮಾಲಯಗಳು" ಇಲ್ಲಿಗೆ ಹೋಗಬಹುದು. ಆದರೆ, ದೈವತ್ವ ತಿಳಿದುಕೊಳ್ಳಬೇಕಾದರೆ ಮಾತ್ರ ಮನೆಯಲ್ಲೇ ಕುಳಿತುಕೊಂಡು ಧ್ಯಾನ ಮಾಡಬೇಕು; ಆ ಧ್ಯಾನದಿಂದ ಪುನಃ ನಾವು ನಮ್ಮ ದೈವತ್ವವನ್ನು ನೆನೆಸಿಕೊಳ್ಳಬೇಕು .. ಸ್ವಾಮಿತ್ವವನ್ನು ಮರಳಿ ಪಡೆಯಬೇಕು .. ಆ ಲೋಕ ಕಲ್ಯಾಣಕರವಾದ ಮಿತ್ರತ್ವವನ್ನು ಪುನಃ ಹೊಂದಬೇಕು.

Go to top