" ಗತ .. ಅವಗತ .. ವಿಗತ "

 

"ಗತ" ಅಂದರೆ, ಕಳೆದುಹೋದ ನಮ್ಮ "ಭೂತಕಾಲ ಸ್ಥಿತಿ"

ಹುಟ್ಟಿದಾಗಲಿಂದಲೂ ಪ್ರಸ್ತುತ ಕಾಲದವರೆಗೂ ಮಾಡಿದ ಕಾರ್ಯಕಲಾಪಗಳ ಪಟ್ಟಿ

ಇನ್ನೂ ಹಿಂದಕ್ಕೆ ಹೋದರೆ ಹಿಂದಿನ ಜನ್ಮಗಳ ಕಥೆಗಳು ಸಹ

"ಅವಗತ" ಅಂದರೆ "ಅರ್ಥವಾಗುವುದು"

"ಅವ" ಅಂದರೆ "ಹಿಂದಕ್ಕೆ ಬರುವುದು" ಎಂದೂ ಅರ್ಥವಿದೆ

ಉದಾಹರಣೆಗೆ ಈ ಪದಗಳನ್ನು ಗಮನಿಸಿ, "ಅವರೋಹಣ" .. "ಅವತಾರ"

"ಹಿಂದಕ್ಕೆ ಬರುವುದು" ಅಂದರೆ, "ರಿವರ್ಸ್ ಗೇರ್" ಹಾಕುವುದು ಎಂದರ್ಥ

ಗತವನ್ನು "ರಿವರ್ಸ್ ಗೇರ್"ನಲ್ಲಿ ಪರಿಶೀಲಿಸಿದಾಗಲೇ

ಆ ಗತಕಾಲ ಪೂರ್ತಿಯಾಗಿ ‘ಅವಗತ’ವಾಗಿ ಇನ್ನು ‘ವಿಗತ’ ಆಗುತ್ತದೆ

"ವಿಗತ" ಅಂದರೆ "ಮಾಯವಾಗುವುದು"

‘ಗತ’ ಎನ್ನುವುದು ‘ಅವಗತ’ವಾಗಿ ‘ವಿಗತ’ ಆದಾಗಲೇ

ವರ್ತಮಾನ ಎನ್ನುವುದು ಭವಿಷ್ಯತ್ತಿಗೆ ಬಂಗಾರದ ಮಾರ್ಗ ಆಗಬಲ್ಲದು

ಗತ ಎನ್ನುವುದು ಪೂರ್ತಿಯಾಗಿ ಅವಗತವಾಗದಿದ್ದರೆ

ಆ ಗತವೇ ಪದೇ ಪದೇ ಮತ್ತೆ ಪುನರಾವೃತ್ತಿಯಾಗುತ್ತಾ ಇರುತ್ತದೆ

ಮಾಡಿದ ತಪ್ಪುಗಳು ಪುನಃ ಪುನಃ ಮಾಡುತ್ತಲೇ ಇರುವಂತಾಗುತ್ತದೆ

ನಮ್ಮ ಜೀವನದಲ್ಲಿ ಮಾಡಿದ ತಪ್ಪುಗಳನ್ನು ಮತ್ತೇ ಮತ್ತೇ ಮಾಡುತ್ತಾ ಇರುತ್ತೇವೆ

ಆದ್ದರಿಂದ, ಸದಾ "ಫಾರ್ವರ್ಡ್ ಗೇರ್"ನಲ್ಲೇ ಅಲ್ಲದೆ

ಆಗಾಗ "ರಿವರ್ಸ್ ಗೇರ್"ನಲ್ಲಿ ಕೂಡಾ ಜೀವಿಸಬೇಕು

ಅಂದರೆ, ಪ್ರತಿದಿನ ಸ್ವಲ್ಪ ಸಮಯವನ್ನು

"ಸುಮ್ಮನೇ ಕಣ್ಣುಗಳನ್ನು ಮುಚ್ಚಿಕೊಂಡು ಶ್ವಾಸವನ್ನು ಗಮನಿಸುತ್ತಾ ಕುಳಿತುಕೊಳ್ಳಲು" ಮೀಸಲಾಗಿರಿಸಬೇಕು

ಆಗ ಗತಕಾಲದಲ್ಲಿ ನಡೆದ ಪ್ರತಿಯೊಂದು ಸನ್ನಿವೇಶ ಮೊದಲು ನಮ್ಮ "ಮನೋಫಲಕ"ದಲ್ಲಿ,

ಅನಂತರ ನಮ್ಮ "ದಿವ್ಯಚಕ್ಷು"ವಿನಲ್ಲೂ, ಪುನಃ ಪುನಃ ಪ್ರತ್ಯಕ್ಷವಾಗಿ

ಸತ್ಯವೆಲ್ಲಾ ಸಂಪೂರ್ಣವಾಗಿ ಅರ್ಥವಾಗುತ್ತಾ ಇರುತ್ತದೆ

ಅರ್ಥವಾಗಿದ್ದೆಲ್ಲಾ ‘ವಿಗತ’ವಾಗುತ್ತಾ ಅಳಿಸುತ್ತಾ ಹೋಗುತ್ತದೆ

ಪೂರ್ಣವಾಗಿ ಅಳಿಸಿಹಾಕಲಾಗದ ‘ಗತ’ವು ಪದೇ ಪದೇ ವರ್ತಮಾನದಲ್ಲಿ

ಬಂದು ಪುನಃ ಪೀಡಿಸುತ್ತಾ ಇರುತ್ತದೆ.

"ರಿವರ್ಸ್ ಗೇರ್"ನಲ್ಲಿ ಸಮಯವನ್ನು ಮೀಸಲಾಗಿರಿಸುವುದು ಎಂದರೆ ಧ್ಯಾನದಲ್ಲಿ ಇರುವುದೇ ಆಗಿದೆ.

ಧ್ಯಾನದಲ್ಲಿ ಇದ್ದಾಗಲೇ ‘ಗತ’ವು ‘ಅವಗತ’ವಾಗಿ ‘ವಿಗತ’ವಾಗುತ್ತದೆ.

Go to top