"ಆಶ್ಚರ್ಯವತ್ ಪಶ್ಯತಿ..."

" ಗೀತಾ ಶ್ಲೋಕ "

"ಆಶ್ಚರ್ಯವತ್ಪಶ್ಯತಿ ಕಶ್ಚಿದೇನಮಾಶ್ಚರ್ಯವದ್ವದತಿ ತಥೈವ ಚಾನ್ಯಃ|
ಆಶ್ಚರ್ಯವಚ್ಚೆ ನ ಮನ್ಯಃ ಶೃಣೊತಿ ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್||"

"ಒಬ್ಬ ಮಹಾಪುರುಷನು ಮಾತ್ರವೇ... ಆತ್ಮವನ್ನು ಆಶ್ಚರ್ಯಕರವಾಗಿ ನೋಡುತ್ತಾನೆ. ಇನ್ನೊಬ್ಬ ಮಹಾತ್ಮನು ಆತ್ಮತತ್ವವನ್ನು ಆಶ್ಚರ್ಯಪಡುತ್ತಾ ವರ್ಣಿಸುತ್ತಾನೆ. ಇನ್ನೊಬ್ಬ ಮಹಾಪುರುಷನು ಆ ವಿಷಯಗಳನ್ನು ಆಶ್ಚರ್ಯವಾಗಿ ಕೇಳಿಸಿಕೊಳ್ಳುತ್ತಾನೆ... ಹೀಗೆ ಕೇಳಿಸಿಕೊಳ್ಳುವವರಲ್ಲಿ ಕೆಲವರು ಆತ್ಮವನ್ನು ಕುರಿತು ಏನೂ ತಿಳಿದುಕೊಳ್ಳುವುದಿಲ್ಲ".

-ಭಗವದ್ಗೀತೆ 2-29

ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ... ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ... ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ ನಾವು ಭೇಟಿಯಾಗುತ್ತಲೇ ಇದ್ದೇವೆ.

ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ... ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ... ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ ನಾವು ಸದಾ ಧ್ಯಾನ ಮಾಡುತ್ತಲೇ ಇದ್ದೇವೆ.

ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ... ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ... ಜನ್ಮ ಜನ್ಮಗಳಲ್ಲಿ... ಲೋಕ ಲೋಕಗಳಲ್ಲಿ ನಾವು ಸಂಭ್ರಮ ಸಮಾರಂಭಗಳನ್ನು ಆಚರಿಸುತ್ತಲೇ ಇದ್ದೇವೆ.

ಶ್ರೀಕೃಷ್ಣ ಅರ್ಜುನನೊಂದಿಗೆ ಹೇಳುತ್ತಿದ್ದಾನೆ: "ಅರ್ಜುನಾ ಯೋಗಿಗಳೆಲ್ಲರೂ ಆಶ್ಚರ್ಯದಿಂದ ನೋಡುತ್ತಿರುತ್ತಾರೆ; ಅನೇಕ ಲೋಕಗಳನ್ನು... ಅನೇಕ ದೃಶ್ಯಗಳನ್ನು... ಅನೇಕ ಮಾಸ್ಟರ್‌ಗಳನ್ನು... ಅನೇಕ ಅನುಭೂತಿಗಳನ್ನು... ಅನೇಕ ಆನಂದಗಳನ್ನು... ಅನೇಕ ತಲಗಳನ್ನು ನೋಡುತ್ತಿರುತ್ತಾರೆ. ಆಶ್ಚರ್ಯವತ್ ಪಶ್ಯತಿ", ಇನ್ನೂ ಕೆಲವರು ಆಶ್ಚರ್ಯದಿಂದ ಉಳಿದವರಿಗೆ ಏನೇನೋ ಹೇಳುತ್ತಾರೆ: ‘ನನಗೆ ಆ ಯೋಗಿ ಕಾಣಿಸಿಕೊಂಡ’, ‘ನನ್ನ ಕೈ ಹಿಡಿದುಕೊಂಡು ಆಲೋಕಕ್ಕೆ ಕರೆದುಕೊಂಡು ಹೋದ’... ‘ನನಗೆ ಆ ಫಲ ನೀಡಿದ’... ‘ನನಗೆ ಅನೇಕ ಆಶ್ಚರ್ಯಕರವಾದದ್ದನ್ನೆಲ್ಲಾ ತೋರಿಸಿದ’... ‘ನನಗೆ ತುಂಬಾ ತಿಳಿವಳಿಕೆಯನ್ನು ಬೋಧಿಸಿದ’... ‘ನನಗೆ ತುಂಬಾ ಆನಂದವನ್ನು ನೀಡಿದ’... ಎಂದು, ಆಶ್ಚರ್ಯವತ್ ವದತಿ.

"ಉಳಿದವರೆಲ್ಲಾ ಆಶ್ಚರ್ಯದಿಂದ ಕೇಳಿಸಿಕೊಳ್ಳುತ್ತಾರೆ, ಆತನು ಆ ಲೋಕವನ್ನು ಸುತ್ತಿಬಂದನಂತೆ... ಆ ಮಾಸ್ಟರ್‌ನ ಭೇಟಿ ಆದನಂತೆ... ಮೂರನೇ ಕಣ್ಣು ತೆರೆದುಕೊಂಡಂತೆ... ಈ ವಿಧವಾಗಿ ಯೋಗಿಗಳು ಧ್ಯಾನ ಸ್ಥಿತಿಯಲ್ಲಿ ಅನುಭವಿಸಿ, ದರ್ಶಿಸಿ ಆನಂದದಿಂದ ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಾರೆ, ಆಶ್ಚರ್ಯವತ್ ಶೃಣೋತ."

"ಆಶ್ಚರ್ಯವತ್ ಪಶ್ಯತಿ"
"ಆಶ್ಚರ್ಯವತ್ ವದತಿ"
"ಆಶ್ಚರ್ಯವತ್ ಶೃಣೋತಿ"

ಕೃಷ್ಣ ಅರ್ಜುನನಿಗೆ ಹೇಳುತ್ತಿದ್ದಾನೆ...

ಆಶ್ಚರ್ಯದಿಂದ ನೋಡುತ್ತಾರೆ... ಕಣ್ಣುಗಳೆರಡನ್ನೂ ಮುಚ್ಚಿಕೊಂಡು ಆಶ್ಚರ್ಯದಿಂದ ನೋಡುತ್ತಾರೆ... ಅದೇ ಆಶ್ಚರ್ಯವತ್ ಪಶ್ಯತಿ, "ಪಶ್ಯತಿ"... ಅಂದರೆ ನೋಡುವುದು ಆಶ್ಚರ್ಯದಿಂದ ಹೇಳುತ್ತಾರೆ... ಕಣ್ಣುಗಳನ್ನು ಮುಚ್ಚಿಕೊಂಡು ಆಶ್ಚರ್ಯದಿಂದ ನೋಡಿದ್ದನ್ನು ಅಷ್ಟೇ ಆಶ್ಚರ್ಯದಿಂದ ಹೇಳುತ್ತಾರೆ, ಅದೇ ಆಶ್ಚರ್ಯವತ್ ವದತಿ. ಉಳಿದವರೆಲ್ಲರೂ... ಋಷಿಗಳು ಹೇಳುವ ಅನುಭವಗಳನ್ನು ತುಂಬಾ ಆಶ್ಚರ್ಯದಿಂದ ಕೇಳಿಸಿಕೊಳ್ಳುತ್ತಾರೆ, ಆಶ್ಚರ್ಯವತ್ ಶೃಣೋತಿ.

ನಮಗೆ ಇನ್ನೊಬ್ಬರ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ಅವರವರ ಸಮಸ್ಯೆಗಳನ್ನು ಅವರವರೇ ನೋಡಿಕೊಳ್ಳಬೇಕು, ನಮ್ಮ ಸಮಸ್ಯೆಗಳನ್ನು ಬಾಯಿ ಮುಚ್ಚಿಕೊಂಡು ನಾವೇ ಅನುಭವಿಸಬೇಕು. ನಮ್ಮ ಧ್ಯಾನ, ಜ್ಞಾನ ಬಾಯಿಬಿಟ್ಟು ಎಲ್ಲರಿಗೂ ಹೇಳಬೇಕು.

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನಲ್ಲಿ ಒಬ್ಬರ ಸಮಸ್ಯೆಗಳನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುವ ಆಚಾರವಿಲ್ಲ. ಅವರವರ ಸಮಸ್ಯೆ ಅವರವರದೇ. ಪಿರಮಿಡ್ ಮಾಸ್ಟರ‍್ಸ್ ಭೇಟಿಯಾದರೇ ಧ್ಯಾನಾನುಭವಗಳನ್ನು ಹಂಚಿಕೊಳ್ಳಬೇಕು ಅಷ್ಟೇ.
ಭೀಷ್ಮನು ಶರಶಯ್ಯೆಯ ಮೇಲೆ ಹಾಯಾಗಿದ್ದ. ನಮಗೆಲ್ಲಾ ಎ.ಸಿ ರೂಮ್‌ಗಳಿವೆ. ಆದರೂ, ನಾವು ಹಾಯಾಗಿಲ್ಲ. ಒಂದು ಕಡೆ ರಕ್ತ ಸುರಿಯುತ್ತಿದ್ದರೂ ಬಾಣಗಳ ಹಾಸಿಗೆಯ ಮೇಲೆ ಹಾಯಾಗಿದ್ದ, ಭೀಷ್ಮನು ಧರ್ಮರಾಜನಿಗೆ ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡೆ ಬೋಧಿಸಿದನು. ಎ.ಸಿ ರೂಮ್‌ನಲ್ಲಿ ಕುಳಿತುಕೊಂಡಲ್ಲ ಬಾಣಗಳ ಹಾಸಿಗೆಯ ಮೇಲೆ ಅದು ಪಿರಮಿಡ್ ಮಾಸ್ಟರ‍್ಸ್ ಅಂದರೆ.

ನಮ್ಮ ಸಮಸ್ಯೆಗಳನ್ನು ಯಾರಿಗೂ ಹೇಳಬಾರದು. ಇತರರ ಸಮಸ್ಯೆಗಳನ್ನು ನಾವು ಕೇಳಬಾರದು. ನಮಗೆ ಸಾವಿರಾರು ಸಮಸ್ಯೆಗಳು ಇರಬಹುದು. ಯಾರು ಬಂದು ಕೇಳಿದರೂ... ನಾವು ಹೇಗಿದ್ದರೂ... ಯಾವ ಪರಿಸ್ಥಿತಿಗಳಲ್ಲಿ ಇದ್ದರೂ ಜ್ಞಾನ ಬೋಧನೆ ಮಾಡಬೇಕಾಗಿದ್ದೇ.

"ಜೀವನ ಒಂದು ಮಹಾನಾಟಕ"

ಪ್ರತಿ ಒಂದು ಜನ್ಮದಲ್ಲೂ ಸಮಸ್ಯೆಗಳಿರುತ್ತವೆ. ನಮ್ಮ ಪಾತ್ರವನ್ನು ನಾವು ನಿರ್ವಹಿಸುತ್ತೇವೆ. ಒಂದು ಜನ್ಮದಲ್ಲಿ ಹೀರೋ ಆಗಿ... ಒಂದು ಜನ್ಮದಲ್ಲಿ ವಿಲನ್‌ಆಗಿ... ಒಂದು ಜನ್ಮದಲ್ಲಿ ಹೆಣ್ಣಾಗಿ... ಒಂದು ಜನ್ಮದಲ್ಲಿ ಗಂಡಾಗಿ... ಒಂದು ಜನ್ಮದಲ್ಲಿ ಕುಷ್ಠರೋಗಿಯಾಗಿ... ಒಂದು ಜನ್ಮದಲ್ಲಿ ಕುಂಟನ ಹಾಗೆ... ಒಂದು ಜನ್ಮದಲ್ಲಿ ಕುರುಡನ ಹಾಗೆ... ಅನೇಕ ರೋಲ್ಸ್... ಪಾತ್ರಗಳಿರುತ್ತವೆ.

ಅಭಿಮನ್ಯು ಸಾಯುತ್ತಿದ್ದ, ಕೃಷ್ಣ ಬಂದು ಕಾಪಾಡಿದನಾ? ಯಾವ ಕೃಷ್ಣನೂ ಬಂದು ಕಾಪಾಡುವುದಿಲ್ಲ. ಎಲ್ಲಾ ನಾಟಕ ಪ್ರತಿ ಜನ್ಮದಲ್ಲೂ ಒಂದು ವಿಶಿಷ್ಟ ನಾಟಕವಾಡುತ್ತೇವೆ ಜೀವನ ಒಂದು ಮಹಾನಾಟಕ.

ಜೀವನ ಎಂಬುವ ನಾಟಕ ಮುಗಿದನಂತರ ಮೇಲೆ ಲೋಕಗಳಿಗೆ ಹೋಗುತ್ತೇವೆ. ಭೂಲೋಕದಲ್ಲಿ ನಾವು ಮಾಡಿದ ನಾಟಕವೆಲ್ಲಾ "ಸೀನ್" ಮೇಲೆ ‘ಸೀನ್’ ತೋರಿಸುತ್ತಾರೆ. ಅದು ನೋಡುತ್ತಾ... "ಅಯ್ಯೋ ಹಾಗೆ ಮಾಡಿದ್ದೀನಾ?"... "ಈ ತಪ್ಪು ಮಾಡಿದ್ದೇನೆ"... "ಹಾಗೆ ಹಿಂಸೆ ಕೊಟ್ಟಿದ್ದೀನಾ?"... "ಶೃತಿ ಸರಿಯಾಗಿಲ ಲಯ ತಪ್ಪಿದೆ" ಎಂದು ತಿಳಿದುಕೊಂಡು ಪುನಃ ಒಂದು ನೂತನ ಜೀವನ ನಾಟಕಕ್ಕೆ ಸಿದ್ಧರಾಗುತ್ತೇವೆ.

ಒಂದೊಂದು ಪಾತ್ರ... ಒಂದೊಂದು ನಾಟಕ... ಆಡುತ್ತಿದ್ದರೇ ನಮ್ಮ ಸಾಮರ್ಥ್ಯ ಇನ್ನೂ ಹೆಚ್ಚಾಗಿ ಬೆಳೆಯುತ್ತಿರುತ್ತದೆ.
"ಜೀವನ ಒಂದು ನಾಟಕ" ಎಂದು ಯಾವಾಗ, ಹೇಗೆ ತಿಳಿದುಕೊಳ್ಳುತ್ತೇವೆ? ಧ್ಯಾನದಿಂದ ಸತ್ಯ ತಿಳಿಯುತ್ತದೆ ಧ್ಯಾನದಿಂದ. ಧ್ಯಾನ ಮಾಡದೇ ಹೋದರೆ "ಜೀವನ ಒಂದು ನಾಟಕ" ಎಂಬುವ ಯಥಾರ್ಥ ಮರೆತು ಹೋಗುತ್ತೇವೆ. "ನಾವು ಆತ್ಮ ಪದಾರ್ಥ" ಎಂಬುವ ಸತ್ಯವನ್ನು ಮರೆತು ಹೋಗುತ್ತೇವೆ, "ಶರೀರವೇ ನಾವು" ಎಂದುಕೊಳ್ಳುತ್ತೇವೆ.

ಮಿತ್ರರೇ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಏತಕ್ಕಾಗಿ ಜನ್ಮ ತಾಳಿದೆ ಎಂದರೆ ಪ್ರತಿ ಒಬ್ಬರಿಗೂ "ಜೀವನ ನಾಟಕ" ಎಂದು ತಿಳಿಸಲಿಕ್ಕಾಗಿ. ನಾವು ಇತರರ ಮೇಲೆ ಅವಲಂಬಿಸದೇ ಇರಲಿಕ್ಕಾಗಿ. ನಮ್ಮ ಕಾಲುಗಳ ಮೇಲೆ ನಾವು ನಿಲ್ಲಲ್ಲಿಕ್ಕಾಗಿ. ಆ ತರಹದ ಸಹಾಯ ಮಾಡಲು ಹುಟ್ಟಿದೆ. ಯಾರೂ ಸಹ ಇನ್ನೊಬ್ಬರ ಕಾಲುಗಳ ಮೇಲೆ ಆಧಾರಪಡಬಾರದು.

Go to top