2012 ಬುದ್ಧ ಪೂರ್ಣಿಮೆ ಮಹೋತ್ಸವದಲ್ಲಿ ಪತ್ರೀಜಿಯ ಸಂದೇಶ

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಧ್ಯಾನಕ್ಕೆ ಅಂಕಿತ, ಆತ್ಮಜ್ಞಾನಕ್ಕೆ ಅಂಕಿತ. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ‘ಎನ್‌ಲೈಟೆನ್‌ಮೆಂಟ್’ಗೆ ಮೀಸಲಾಗಿದೆ.

ಎನ್‌ಲೈಟೆನ್‌ಮೆಂಟ್ ಅಂದರೆ, ನೀವು ಮಾಡಿದ ಅಥವಾ ಮಾಡದಿರುವ ಯಾವುದೇ ಕೆಲಸದ ಬಗ್ಗೆಯಾಗಲೀ, ಹಾಗೆಯೇ, ಇತರರು ಮಾಡಿದ ಅಥವಾ ಮಾಡದಿರುವ ಯಾವುದೇ ಕೆಲಸದ ಬಗ್ಗೆ - ನಿಮಗೆ ಎಂದಿಗೂ ಪಶ್ಚಾತ್ತಾಪ ಭಾವನೆ ಇರಬಾರದು. ಇದುವೇ ಎನ್‌ಲೈಟೆನ್‌ಮೆಂಟ್. ಏನಾದರೊಂದು ಸಂಭವಿಸಿದಾಗ, ಇದು ಹೀಗಾಗಿಹೋಯಿತಲ್ಲಾ ಎಂದು ನೀವು ದುಃಖಿಸಿದರೆ ನೀವು ಎನ್‌ಲೈಟನ್ಡ್ ಅಲ್ಲ.

ರಿಚರ್ಡ್ ಬಾಕ್‌ರವರು ಹೇಳಿರುವಂತೆ "ನಿಮ್ಮ ಅಜ್ಞಾನವು - ಅನ್ಯಾಯ ಮತ್ತು ದುರಂತಗಳ ಕುರಿತು ನಿಮ್ಮ ನಂಬಿಕೆ ಎಷ್ಟು ಆಳವಾಗಿದೆ ಎಂಬುದರ ಕುರುಹಾಗಿದೆ."

ನೀವು ಅನ್ಯಾಯ ಮತ್ತು ದುರಂತಗಳನ್ನು ಎಲ್ಲೆಲ್ಲಿಯೂ ಕಾಣುತ್ತಿದ್ದೀರಿ ಎಂದರೆ ನೀವು ಜ್ಞಾನೋದಯ ಹೊಂದಿಲ್ಲವೆಂದರ್ಥ. ನಡೆಯುತ್ತಿರುವ ಎಲ್ಲಾ ಕೆಲಸಗಳು ಮತ್ತಷ್ಟು, ಇನ್ನಷ್ಟು ಉತ್ತಮವಾಗಿ ನಡೆಯುವಂತೆ ಮಾಡುವುದೇ ಧ್ಯಾನಿಗಳಾಗಿ ನಾವು ಮಾಡಬೇಕಾದ ಕರ್ತವ್ಯವಾಗಿದೆ. ನಮ್ಮ ಪಾತ್ರ ಇರುವುದೂ ಅಲ್ಲೇ. ಇಲ್ಲೇ, ಈ ಹಂತದಲ್ಲಿಯೇ ನಮ್ಮ ಧ್ಯಾನವು ಮಧ್ಯಪ್ರವೇಶಿಸುವುದು. ಇಲ್ಲಿಯೇ ‘ಸ್ವಾಧ್ಯಾಯ’ ಮಧ್ಯಪ್ರವೇಶಿಸುವುದು. ಈ ಹಂತದಲ್ಲಿಯೇ ‘ಸಜ್ಜನ ಸಾಂಗತ್ಯ’ದ ಮಹತ್ವ ಇರುವುದು. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಹೆಚ್ಚುಹೆಚ್ಚು ಧ್ಯಾನಕ್ಕೆ, ಹೆಚ್ಚುಹೆಚ್ಚು ಸ್ವಾಧ್ಯಾಯಕ್ಕೆ, ಹೆಚ್ಚುಹೆಚ್ಚು ಸಜ್ಜನಸಾಂಗತ್ಯಕ್ಕಾಗಿಯೇ ಸಮರ್ಪಿತಗೊಂಡಿದೆ.

ಈ ವಿಶ್ವದಲ್ಲಿ ಈಗ ಇರುವ ಮತ್ತು ಆಗಿಹೋಗಿರುವ ಎಲ್ಲಾ ಮಾಸ್ಟರ್‌ಗಳ ಪುಸ್ತಕಗಳನ್ನು ನಾವು ಓದಬೇಕು. ನಮಗೆ ಸಾಧ್ಯವಾದಷ್ಟು ನಾವು ಈಗಿರುವ ಎಲ್ಲಾ ಮಾಸ್ಟರ್‌ಗಳನ್ನು ಭೇಟಿಮಾಡಬೇಕು. ನಮಗೆ ಯಾವಾಗ ಸಾಮಾಜಿಕ ಕೆಲಸಗಳಿರುವುದಿಲ್ಲವೋ ಆಗ ನಮ್ಮ ಸ್ವಂತ ಏಳಿಗೆಗಾಗಿ ನಾವು ಹೆಚ್ಚುಹೆಚ್ಚು ಧ್ಯಾನ ಮಾಡಬೇಕು. ಕಣ್ಣುಗಳನ್ನು ಮುಚ್ಚಿಕೊಂಡು ಉಸಿರಿನ ಜೊತೆಗೆ ಒಂದಾಗಿರುವುದೇ ಸ್ವಂತವಾದ ಬದ್ಧತೆ. ನಿಮ್ಮ ಸಮಯವನ್ನು ನೀವು ವ್ಯರ್ಥ ಮಾಡುತ್ತಿರುವಿರೆಂದರೆ ನೀವು ಜ್ಞಾನೋದಯ ಹೊಂದಿಲ್ಲವೆಂದರ್ಥ. ನಮ್ಮನ್ನು ನಾವು ಸದೃಢಗೊಳಿಸಿಕೊಳ್ಳಲು ಅಥವಾ ಸಮಾಜಕ್ಕೆ ಸಹಾಯ ಮಾಡಲು ನಮ್ಮ ಸಮಯದ ಪ್ರತಿಯೊಂದು ಕ್ಷಣವೂ ಬೆಲೆ ಬಾಳುವಂತಹುದ್ದು, ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು. ಸಮಯವನ್ನು ವ್ಯರ್ಥ ಮಾಡುವಷ್ಟು ಸಮಯವಿಲ್ಲ.

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಈ ವಿಶ್ವದಲ್ಲಿರುವ ಎಲ್ಲಾ ಮಾಸ್ಟರ್‌ಗಳನ್ನು, ವಿಜ್ಞಾನಿಗಳನ್ನು ಸ್ವಾಗತಿಸುತ್ತಿದೆ. ಪ್ರತಿಯೊಬ್ಬ ವಿಜ್ಞಾನಿಯೂ ಆಧ್ಯಾತ್ಮಿಕ ವ್ಯಕ್ತಿಯೇ ಮತ್ತು ಪ್ರತಿಯೊಬ್ಬ ಆಧ್ಯಾತ್ಮಿಕ ವ್ಯಕ್ತಿಯೂ ವಿಜ್ಞಾನಿಯೇ. ನೀವು ವಿಜ್ಞಾನಿ ಆಗದಿದ್ದಲ್ಲಿ ಆಧ್ಯಾತ್ಮಿಕ ಜೀವಿ ಆಗಲಾರಿರಿ. ಹಾಗೆಯೇ, ಆಧ್ಯಾತ್ಮಿಕ ಜೀವಿ ಆಗದಿದ್ದಲ್ಲಿ, ವಿಜ್ಞಾನಿ ಆಗಲಾರಿರಿ. ಇವೆರಡು ಒಟ್ಟಾಗಿ ಸಾಗುತ್ತಿರುತ್ತವೆ.

ಮೈ ಡಿಯರ್ ಫ್ರೆಂಡ್ಸ್, ಮಾಸ್ಟರ‍್ಸ್, ಗಾಡ್ಸ್ ಅಂಡ್ ಮೈತ್ರೇಯ ಬುದ್ಧಾಸ್ .. ಈ ಬುದ್ಧಪೂರ್ಣಿಮೆಯಲ್ಲಿ ಭಾಗವಹಿಸುವವರೆಲ್ಲರೂ ಗೌತಮ ಬುದ್ಧರೇ..

* ಬುದ್ಧತ್ವ ಬಂದನಂತರ ಏನಾಗುತ್ತದೆ ಅಂದರೆ?.. ಬುದ್ಧತ್ವ ಬಂದವರು ಖುಷಿಯಿಂದ ಚಪ್ಪಾಳೆ ಹೊಡೆಯುತ್ತಾರೆ.. ಅಷ್ಟೇ. ಸೆಲಬ್ರೇಷನ್ಸ್.. ಸೆಲಬ್ರೇಷನ್ಸ್.. ಸೆಲಬ್ರೇಷನ್ಸ್..

* ಬುದ್ಧತ್ವ ಬರುವುದಕ್ಕಿಂತಾ ಮುಂಚೆ ದುಃಖದಲ್ಲಿ ಜೀವಿಸುತ್ತಾರೆ.

* ಬುದ್ಧತ್ವ ಬಂದನಂತರ ಉತ್ಸವದಲ್ಲಿ ಜೀವಿಸುತ್ತಾರೆ. ದುಃಖ ಹೋಗಿ ಉತ್ಸವ ಬರಬೇಕು.. ಬುದ್ಧರ ಹಾಗೆ ಆಗದಿದ್ದರೆ ಜೀವನದಲ್ಲಿ ಉತ್ಸವ ಇರುವುದಿಲ್ಲ..

* ನಾವು ಏತಕ್ಕಾಗಿ ಹುಟ್ಟಿದ್ದೇವೆಯೋ.. ಅದಕ್ಕಾಗಿ ಜೀವಿಸುವುದೇ ಬುದ್ಧತ್ವ .. ಏತಕ್ಕಾಗಿ ಹುಟ್ಟಿದ್ದೇವೆಯೋ.. ಏನು ಮಾಡಬೇಕೆಂದು ಹುಟ್ಟಿದ್ದೇವೆಯೋ.. ತಿಳಿದುಕೊಳ್ಳುವುದೇ ಬುದ್ಧತ್ವ.. ನಾವು ಯಾವ ಉದ್ದೇಶ ಇಟ್ಟುಕೊಂಡು ಹುಟ್ಟಿದ್ದೇವೆಯೋ.. ಆ ಕೆಲಸ ಪೂರ್ತಿಮಾಡಿದನಂತರವೇ ಶರೀರ ತ್ಯಜಿಸಿ ಮೇಲಕ್ಕೆ ಹೋಗಬೇಕು..?
* ಪಿರಮಿಡ್ ಮಾಸ್ಟರ‍್ಸ್ ಏತಕ್ಕಾಗಿ ಹುಟ್ಟಿದ್ದಾರೆಂದರೆ ಪ್ರಪಂಚದಲ್ಲಿ ಇರುವ ಎಲ್ಲರನ್ನೂ ಪಿರಮಿಡ್ ಮಾಸ್ಟರ‍್ಸ್ ಆಗಿ ತಯಾರು ಮಾಡಲು ಹುಟ್ಟಿದ್ದಾರೆ..

‘ಪಿರಮಿಡ್ ಮಾಸ್ಟರ‍್ಸ್’ ಅಂದರೆ ?

1."ಪಿರಮಿಡ್ ಮಾಸ್ಟರ‍್ಸ್ ಅಂದರೆ ಸಾದಾ.. ಸೀದಾ ಮನುಷ್ಯ" ಅಷ್ಟೇ ವಿನಹ ತನಗೆ ತಾನು ಪ್ರತ್ಯೇಕವಾಗಿ ನೋಡಿಕೊಂಡರೆ ಅವರು ಪಿರಮಿಡ್ ಮಾಸ್ಟರ‍್ಸ್ ಅಲ್ಲ.

2.ಜಗತ್ ಗುರು ಆದಿಶಂಕರಾಚಾರ್ಯರು ಹೇಳಿದಹಾಗೆ .. ಹೊಟ್ಟೆ ಹೊರೆಯಲು ಪ್ರತ್ಯೇಕ ವೇಷಧಾರಣೆ.. ಪ್ರತ್ಯೇಕ ವಸ್ತ್ರಧಾರಣೆ... ಎಲ್ಲಾ ಮೂರ್ಖತನವೇ. ಅದಕ್ಕೇ ಪಿರಮಿಡ್ ಮಾಸ್ಟರ‍್ಸ್ ಕಾಷಾಯ ವಸ್ತ್ರಗಳನ್ನು ಧರಿಸುವುದಿಲ್ಲ.

3.ಪಿರಮಿಡ್ ಮಾಸ್ಟರ‍್ಸ್ ಅಂದರೆ ಸಸ್ಯಾಹಾರಿಗಳು. ಪಿರಮಿಡ್ ಮಾಸ್ಟರ‍್ಸ್ ಅಂದರೆ ಸಾಧುಗಳು.. ಅಹಿಂಸಾ ಮೂರ್ತಿಗಳು. ಮಾಂಸಾಹಾರಿಗಳೆಲ್ಲರನ್ನೂ ಸಸ್ಯಾಹಾರಿಗಳಾಗಿ ಬದಲಾಯಿಸಲಿಕ್ಕಾಗಿ .. ಕಾಷಾಯ ವಸ್ತ್ರಧಾರಿಗಳೆಲ್ಲರನ್ನೂ ಸಾಧಾರಣ ಮನುಷ್ಯರಾಗಿ ರೂಪಿಸಲಿಕ್ಕಾಗಿ ಪಿರಮಿಡ್ ಮಾಸ್ಟರ‍್ಸ್ ಹುಟ್ಟಿದ್ದಾರೆ..

4.ವೈರಾಗ್ಯಕ್ಕೆ ಎಡೆಕೊಡದೆ ವೈಭೋಗಕ್ಕೆ ಮೀಸಲಾದ ಮೂರ್ತಿಗಳು ಪಿರಮಿಡ್ ಮಾಸ್ಟರ‍್ಸ್.

5.ಪಿರಮಿಡ್ ಮಾಸ್ಟರ‍್ಸ್ ಅಂದರೆ ಧ್ಯಾನಿಗಳು ... ಸಂಸಾರದಲ್ಲಿರುತ್ತಲೇ ನಿರ್ವಾಣವನ್ನು ಹೊಂದಬಹುದು. ಪಿರಮಿಡ್ ಮಾಸ್ಟರ್‌ಗಳೆಲ್ಲರನ್ನೂ ನೋಡಿ ವೈರಾಗ್ಯದಲ್ಲಿರುವವರೆಲ್ಲರೂ ವೈಭೋಗಕ್ಕೆ ಬರುತ್ತಾರೆ.

6.ನೋ ಡಾಕ್ಟರ್.. ನೋ ಮೆಡಿಸನ್ ಎಂದು ತಿಳಿದುಕೊಂಡಿರುವವರೇ ಪಿರಮಿಡ್ ಮಾಸ್ಟರ‍್ಸ್.

7. ‘ಸಾವು ಇಲ್ಲ’ ಎಂದು ತಿಳಿದುಕೊಂಡಿರುವವರೇ ಪಿರಮಿಡ್ ಮಾಸ್ಟರ‍್ಸ್.

8.ಎಲ್ಲರನ್ನೂ ಸಮಾನವಾಗಿ ನೋಡುವವರೇ ಪಿರಮಿಡ್ ಮಾಸ್ಟರ‍್ಸ್.

9.We are against worship ... only friendship.

10.ಎಲ್ಲಾ ಕಡೆ ಪಿರಮಿಡ್‌ಗಳನ್ನು ನಿರ್ಮಿಸುವವರೇ ಪಿರಮಿಡ್ ಮಾಸ್ಟರ‍್ಸ್

11.ಗೌತಮ ಬುದ್ಧನು ಹೇಳಿದ ಮೈತ್ರಿ, ಕರುಣ, ಮುದಿತ, ಉಪೇಕ್ಷಗಳನ್ನು ಆಚರಿಸುವವರೇ ಪಿರಮಿಡ್ ಮಾಸ್ಟರ‍್ಸ್..

ನಮಗಿಂತಾ ಧನಿಕರ ಜೊತೆ ‘ಮೈತ್ರಿ’.. ನಮಗಿಂತಾ ಧನ ಕಡಿಮೆ ಇರುವವರ ಬಗ್ಗೆ ‘ಕರುಣೆ..’ ನಮಗಿಂತಾ ಆಧ್ಯಾತ್ಮಿಕತೆಯಲ್ಲಿ ಹೆಚ್ಚಾಗಿರುವವರ ಜೊತೆ ‘ಹರ್ಷ’, ನಮಗಿಂತಾ ಕಡಿಮೆ ಆಧ್ಯಾತ್ಮಿಕತೆಯಲ್ಲಿ ಇರುವವರ ಜೊತೆ ‘ಉಪೇಕ್ಷೆ’ ಹೊಂದಿರಬೇಕು ಎಂದು ಪಿರಮಿಡ್ ಮಾಸ್ಟರ‍್ಸ್ ಲಕ್ಷಣಗಳನ್ನು ವಿವರವಾಗಿ ತಿಳಿಸಿದರು.

2012 ಎಂದರೆ ಏನು? ಈಗ ಇರುವ, 2 ಜೊತೆ D N A , 12 ಜೊತೆ D N A ಆಗುತ್ತದೆ. ಯಾವಾಗ ನಾವು ಝೀರೊ ಆಗುತ್ತೇವೊ, ಬುದ್ಧ ಆಗುತ್ತೇವೊ ಆಗ 2. ಜೊತೆ D N A - 12 ಜೊತೆD N Aಆಗುತ್ತದೆ. ಈಗಿರುವ 3 ಆಯಾಮದ ಎಲ್ಲಾ ಜೀವಿಗಳು 2012ಕ್ಕೆ, 4 ಆಯಾಮದ ಜೀವಿಗಳಾಗಲಿದ್ದಾರೆ.

"21 - 12 - 2012 ಗೆ ಮಾಯನ್ ಕ್ಯಾಲೆಂಡರ್ ಸಮಾಪ್ತವಾಗುತ್ತದೆ. ಮಾಯನ್ ಅಂದರೆ ಮಾಯೆ, ಕ್ಯಾಲೆಂಡರ್ ಅಂದರೆ ಕಾಲಮಿತಿ (time frame). The illusion in the time frame ends in the minds of every person. ಇದೇ ಮಾಯನ್ ಕ್ಯಾಲೆಂಡರ್ ಸಮಾಪ್ತವಾಗುವುದೆಂದರೆ. ಅದೇ ಕಲಿಯುಗಾಂತ. ಕಲಿಯುಗ ಅಂದರೆ ನಾವು ‘ಸಮಯದಲ್ಲಿ’ ಸಿಕ್ಕಿಹಾಕಿಕೊಂಡಿರುವುದು. ‘ನಾನು ಶರೀರ’ ಎಂದುಕೊಂಡರೆ ನಾವು ಇನ್ನೂ ಕಾಲಿಮಿತಿಯಲ್ಲೇ ಇದ್ದೇವೆ. ಯಾವಾಗ ‘ನಾನು ಆತ್ಮ’ ಎನ್ನುವ ತಿಳಿವಳಿಕೆ ಬರುತ್ತದೊ ಆಗ ನಾವು ಕಾಲಮಿತಿಯಿಂದ ಹೊರಬರುತ್ತೇವೆ. 21-12-2012ಗೆ ಹೆಚ್ಚುಜನ ಈ ಮಾಯೆಯಿಂದ ಹೊರಬರಲಿದ್ದಾರೆ" ಎಂದು ತುಂಬಾ ವಿವರವಾಗಿ ತಿಳಿಸಿದರು.

Go to top