" 2012 ಆಧ್ಯಾತ್ಮಿಕ ವಿಜ್ಞಾನಿಗಳ ಸಮ್ಮೇಳನದಲ್ಲಿ ಪತ್ರೀಜಿಯವರ ಸಂದೇಶಗಳು "

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರ ವರೆಗು ನಡೆದ ಆಧ್ಯಾತ್ಮಿಕ ವಿಜ್ಞಾನಿಗಳ ಸಮ್ಮೇಳನದ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ ಪಿರಮಿಡ್‌ನಲ್ಲಿ ಮತ್ತು ಸಾಯಂಕಾಲ ಕಬೀರ್ ಭವನದಲ್ಲಿ ಪತ್ರೀಜಿಯವರು ನೀಡಿದ ಸಂದೇಶಗಳುನ್ನು ಇಲ್ಲಿ ನೀಡಲಾಗಿದೆ.

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿ ಮುಖ್ಯ ಉದ್ದೇಶ ಧ್ಯಾನ ಮಾಡಿ ಅನುಭವಗಳನ್ನು ಪಡೆಯುವುದು, ಹಾಗೆ ಪಡೆದ ಅನುಭವಗಳನ್ನು ಹಂಚಿಕೊಳ್ಳುವುದು. ಧ್ಯಾನದಲ್ಲಿ ಪೂರ್ಣ ಲೀನವಾಗಬೇಕು. ಹೇಗೆಂದರೆ ನಾವು ಸಮುದ್ರವನ್ನು ಹೊರಗಿಂದ ನೋಡಿದಾಗ ಸಮುದ್ರಗರ್ಭದಲ್ಲಿರುವ ಪ್ರಾಣಿಗಳು ನಮಗೆ ಕಾಣುವುದಿಲ್ಲ. ಯಾವಾಗ ನಾವು ಸಮುದ್ರಗರ್ಭದಾಳದಲ್ಲಿ ಮುಳುಗುತ್ತೇವೊ ಅಲ್ಲಿ ನಮಗೆ ಜಲಚರ ಪ್ರಾಣಿಗಳೇ ಅಲ್ಲದೆ ಸುಂದರವಾದ ಒಂದು ಪ್ರಪಂಚವೇ ಕಾಣುತ್ತದೆ. ಕನಿಷ್ಠ ಪಕ್ಷ ನಮಗೆ ಸಮುದ್ರದಾಳಕ್ಕೆ ಹೋಗಲಾಗಲಿಲ್ಲ ಎಂದುಕೊಳ್ಳೋಣ ಸಮುದ್ರದಾಳದೊಳಗೆ ಹೋಗಿ ಬಂದವರ ಅನುಭವಗಳನ್ನಾದರೂ ತಿಳಿದುಕೊಳ್ಳಬಹುದಲ್ಲವೇ. ಹಾಗೆಯೇ, ನಾವು ಧ್ಯಾನದಲ್ಲಿ ಲೀನವಾದರೆ ನಮಗೆ ಅನೇಕಾನೇಕ ಅನುಭವಗಳು ಬರುತ್ತವೆ. ಆ ಅನುಭವಗಳನ್ನು ನಾವು ಹಂಚಿಕೊಳ್ಳಬಹುದು.

ನಾವು ಧ್ಯಾನವನ್ನು ಆಳವಾಗಿ ಮಾಡಿದಾಗ ನಮ್ಮ ಹೊರ ಪ್ರಪಂಚ ಬದಲಾಗುವುದನ್ನು ನಾವು ಕಾಣಬಹುದು. ನಮ್ಮ ಮಾತು, ನಡೆ, ನುಡಿ, ಎಲ್ಲಾದರಲ್ಲೂ ಬದಲಾವಣೆ ಕಾಣುತ್ತೇವೆ. ನಮ್ಮ ಊಟದ ಅಭ್ಯಾಸ, ನಿದ್ರೆ, ಆಲೋಚನೆಯ ರೀತಿ, ಹಣ ಸಂಪಾದಿಸುವ ರೀತಿ, ಇತರರ ಜೊತೆ ಸಂಬಂಧ-ಬಾಂಧವ್ಯ, ವಸ್ತ್ರಗಳನ್ನು ಧರಿಸುವ ವಿಧಾನ, ಕಾರ್ ಓಡಿಸುವ ರೀತಿ, ನಾವು ಹಾಡುಗಾರರಾದರೆ ಹಾಡುವ ರೀತಿ ಬದಲಾಗುತ್ತದೆ. ಎಲ್ಲಾ ವಿಷಯದಲ್ಲೂ ಸುಂದರ ಬದಲಾವಣೆ ಕಂಡು ಬರುತ್ತದೆ.

* * *

ಕೆಲವು ಕಬೀರ್ ದೋಹೆ(ಪದ್ಯ)ಗಳನ್ನು ಓದಿ ಅದರ ಭಾವಾರ್ಥವನ್ನು ತಿಳಿಸಿದರು. ಅದರಲ್ಲಿ ನೀವು ಮೀನುಗಳನ್ನು ತಿಂದು ಕಾಶಿಗೆ ಹೋಗಿ ಸತ್ತರೂ, ಒಂದುಕೋಟಿ ಹಸುಗಳನ್ನು ದಾನ ಮಾಡಿದರೂ ಸ್ವರ್ಗಲೋಕಕ್ಕೆ ಹೋಗಲಾಗುವುದಿಲ್ಲ, ನೀವು ಹೋಗುವುದು ನರಕಕ್ಕೇ ಎಂದು ತಿಳಿಸಿದರು.

ಕರ್ಮಯೋಗದ ಬಗ್ಗೆ ಹೀಗೆ ವಿವರಿಸಿದರು. ನೀವು ಇತರ ಪ್ರಾಣಿಯ ಕತ್ತನ್ನು ಕತ್ತರಿಸಿದರೇ ನಿಮ್ಮ ಕತ್ತು ಸಹ ಒಂದು ದಿನ ಕತ್ತರಿಸಲ್ಪಡುತ್ತದೆ.

* * *

ನೀವೆಲ್ಲಾ ದೇಶ-ವಿದೇಶಗಳಿಂದ ಅನೇಕ ಬೇರೆ ಬೇರೆ ಪ್ರದೇಶಗಳಿಂದ ಇಲ್ಲಿಗೆ ಹೇಗೆ ಬಂದಿರುವಿರಿ. ಹೇಗೆಂದರೆ ನೀವೆಲ್ಲಾ ಈ ದಿನ ಇಲ್ಲಿ ಈ ಪಿರಮಿಡ್ ವ್ಯಾಲಿಯಲ್ಲಿ ಬಂದು ಸೇರಬೇಕೆಂದು ಮುಂಚಿತವಾಗಿಯೆ ನಿಶ್ಚಯಿಸಿರುವಿರಿ. ಆದ್ದರಿಂದ, ಈ ದಿನ ಇಲ್ಲಿಗೆ ಬರಲಾಯಿತು. ಇಲ್ಲಿ ಈ ಕಬೀರ್ ಭವನ ಹೇಗೆ ಬಂದಿದೆ. ಹಿಂದೆ ಒಂದುದಿನ ನಮ್ಮ ಆಲೋಚನೆಗಳಿಂದ ಇಲ್ಲಿ ಕಬೀರ್ ಭವನ ಎನ್ನುವ ಚಿಕ್ಕ ಪಿರಮಿಡ್ ಕಟ್ಟಬೇಕೆಂದು ನಿಶ್ಚಯಿಸುವುದರಿಂದ ಈಗ ಈ ಪ್ರಾಂತದಲ್ಲಿ ಕಬೀರ್ ಭವನದ ನಿರ್ಮಾಣವಾಗಿದೆ. ಹಾಗೆ ಯೋಚಿಸದೆ ಇದ್ದಿದ್ದರೆ ಇಲ್ಲಿಗೆ ಕಬೀರ್ ಭವನ ಬರಲಾಗುತ್ತಿರಲಿಲ್ಲ. ಹಾಗೆಯೆ, ನಾವು ನಮ್ಮ ಮನಸ್ಸನ್ನು ಶೂನ್ಯಗೊಳಿಸಲೇಬೇಕು ಎಂದು ನಿಶ್ಚಯಿಸಿದಾಗ ಖಂಡಿತಾ ಧ್ಯಾನದಲ್ಲಿ ಆ ಶೂನ್ಯಸ್ಥಿತಿ ಲಭ್ಯವಾಗುತ್ತದೆ. ನಮ್ಮ ಬಯಕೆ ನೆರವೇರಲು ನಿಶ್ಚಯ, ಗಮ್ಯ ತುಂಬಾ ಮುಖ್ಯವಾದದ್ದು.

ನಾವು ಶೂನ್ಯಸ್ಥಿತಿಗೆ ತಲುಪಿದಾಗ ಎಲ್ಲಾ ಪ್ರಾಣಿ ಪಕ್ಷಿಗಳಲ್ಲೂ, ಎಲ್ಲಾ ಲೋಕಗಳಲ್ಲೂ ಎಲ್ಲಾ ಕಡೆ ಇರುವುದು ಒಂದೇ ಆತ್ಮತತ್ವ ಎಂದು ಅರಿತುಕೊಳ್ಳುತ್ತೇವೆ. ಅದೇ ಎನ್‌ಲೈಟೆನ್‌ಮೆಂಟ್ ಅಂದರೆ ಎಂದು ವಿವರಿಸಿದರು.
ನೀವು ನಿಮ್ಮ ಕೈಗಳನ್ನು ಆಂಟಿ ಕ್ಲಾಕ್‌ವೈಜ್ ತಿರಿಗಿಸಿದರೆ ನಿಮ್ಮ ಮನಸ್ಸು ಶೂನ್ಯಗೊಳಗಾಗುತ್ತದೆ. ಅದೇ clockwise ಸುತ್ತಿದರೆ ಮನಸ್ಸು ಶಕ್ತಿಯುತವಾಗುತ್ತದೆ. ನಮ್ಮ ಮನಸ್ಸನ್ನು ಶೂನ್ಯಗೊಳಿಸಲು ಸದಾ anti - clockwise ಸುತ್ತುತ್ತಿರಬೇಕು.

* * *

ನಮ್ಮ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳುವುದಕ್ಕೆ ಯಾವುದಾದರೂ ಒಂದು ವಿಷಯದಕಡೆ ನಿಮ್ಮ ಮನಸ್ಸನ್ನು ನಿಲ್ಲಿಸಿ. ಉದಾಹರಣೆಗೆ : ನನಗೆ foot ball ಆಟ ಗಮನಿಸುವುದೆಂದರೆ ಇಷ್ಟ. ಹಾಗೆ ಗಮನಿಸುವುದರಿಂದ ಮನಸ್ಸು ಒಂದು ಕಡೆ ಇರುತ್ತದೆ. ಇದನ್ನೆ ಏಕಾಗ್ರತೆ ಎನ್ನುತ್ತಾರೆ. ಆಗ ಸಹ ನಮ್ಮಲ್ಲಿ ತುಂಬಾ ಶಕ್ತಿ ತುಂಬಿಕೊಳ್ಳುತ್ತದೆ. ನಿಮಗೆ ಇಷ್ಟವಾದ ಕೆಲಸ ಮಾಡಿದರೆ ನಿಮ್ಮಲ್ಲಿ ಶಕ್ತಿ ಹೆಚ್ಚುತ್ತದೆ. ನಿಮಗೆ ಇಷ್ಟವಿಲ್ಲದ ಕೆಲಸ ಮಾಡಿದರೆ ನಿಮ್ಮಿಂದ ಶಕ್ತಿ ವ್ಯರ್ಥವಾಗುತ್ತದೆ. ಉದಾ : ನಿಮಗೆ ಕಚೇರಿಗೆ ಹೋಗಲು ಇಷ್ಟವಿರುವುದಿಲ್ಲ ಅಲ್ಲಿಯ ವಾತಾವರಣ ನಿಮಗೆ ಹಿಡಿಸುವುದಿಲ್ಲ ಎಂದುಕೊಳ್ಳಿ ಆಗ, ನೀವು ಆ ದಿನ ಕಚೇರಿಗೆ ಹೋಗ ಬೇಡಿ. ನಿಮಗೆ ಇಷ್ಟವಾದ ಕಡೆ ಹೋಗಿ ಇಷ್ಟವಾದ ಕೆಲಸ ಮಾಡಿದರೇ ನಿಮ್ಮಲ್ಲಿ ಶಕ್ತಿ ವೃದ್ಧಿಯಾಗುತ್ತದೆ.

ನನಗೆ ಬಿಸ್ಮಿಲ್ಲಾಖಾನ್ ಶೆಹನಾಯಿ ಆಲಿಸಲು ತುಂಬಾ ಇಷ್ಟ. ಆ ಶಹನಾಯಿ ಆಲಿಸಿದಾಗಲೆಲ್ಲಾ ನನ್ನಲ್ಲಿ ಶಕ್ತಿ ತುಂಬಿಕೊಳ್ಳುತ್ತದೆ. ಎಷ್ಟು ಹೆಚ್ಚು ಆಲಿಸುತ್ತೇನೊ ಅಷ್ಟು ಹೆಚ್ಚು ಶಕ್ತಿ ನನ್ನಲ್ಲಿ ತುಂಬುತ್ತದೆ. ನನಗೆ ಬೆಂಡೆಕಾಯಿ ಪಲ್ಯ ಇಷ್ಟ. ಆದ್ದರಿಂದ ಆ ಬೆಂಡೆಕಾಯಿ ಪಲ್ಯ ಮಾಡಿ ತಿನ್ನುವುದರಿಂದ ನನ್ನಲ್ಲಿ ತುಂಬಾ ಶಕ್ತಿ ಸಂಚಾರವಾಗುತ್ತದೆ. ಬೇರೆಯವರಿಗಾಗಿ ನೀವು ಯಾವ ಕೆಲಸ ಮಾಡಿಬೇಡಿ. ನಿಮಗಾಗಿ ನೀವು ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಾ ಹೋದರೆ ನಿಮ್ಮಲ್ಲಿ ಶಕ್ತಿ ಹೆಚ್ಚುತ್ತದೆ.

* * *

ಮಕ್ಕಳು ಸಂತೋಷದಿಂದ ಆಡಿಕೊಳ್ಳುತ್ತಿರುವಾಗ ಅವರ ಆಟ ಆಡುವುದನ್ನು ನಿಲ್ಲಿಸಬೇಡಿ. ಆ ಸಂತೋಷ ಸಮಯದಲ್ಲಿ ಆಟ ನಿಲ್ಲಿಸಿ ಓದಿಕೊ ಎಂದು ಹೇಳಬೇಡಿ. ಅವರನ್ನು ಆಡಲು ಬಿಡಿ.

ಬೇರೆಯವರು ಮಾಡುವ ಕೆಲಸ ನಮಗೆ ಇಷ್ಟವಾಗದಿದ್ದರೆ ನಾವು ಅವರಿಗೆ ಏನೂ ಹೇಳದೆ ಸುಮ್ಮನೆ ಒಂದು ಕಡೆ ಕುಳಿತು ನಿಮ್ಮ ಶ್ವಾಸವನ್ನು ಗಮನಿಸುತ್ತಿರಿ. ತಕ್ಷಣ ಅವರಿಗೆ ಅರ್ಥವಾಗುತ್ತದೆ ನಮಗೆ ಅವರೆ ಚೇಷ್ಟೆಗಳಲ್ಲಿ ಉತ್ಸಾಹವಿಲ್ಲವೆಂದು. ತಕ್ಷಣ ತಾನು ಮಾಡುವ ಆ ತಮಾಷಾ ನಿಲ್ಲಿಸಿ ಅವನು ಸಹ ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ.

ನಿಮಗೆ ನಿಮ್ಮ ಮಕ್ಕಳು ನೀವು ಯೋಚಿಸಿದ ಹಾಗೆ ಆಗ ಬೇಕೆಂದರೆ ನೀವು ಅವರಿಗೆ ಏನೂ ಹೇಳಬೇಡಿ, advice ಮಾಡಬೇಡಿ ನೀವು ಹಾಗೆ ಇರಲು ಪ್ರಯತ್ನಿಸಿ. ಆಗ ಅವರು ನಿಮ್ಮನ್ನು ನೋಡಿ ನಿಮ್ಮ ಹಾಗೆ ಬದಲಾಗುತ್ತಾರೆ. ಮಕ್ಕಳು ಓದಬೇಕೆಂದುಕೊಂಡರೆ ಅವರಿಗೆ ಓದಿಕೋ ಎಂದು ಹೇಳದೆ ನೀವು ಭಗವದ್ಗೀತೆ ಕೈಯಲ್ಲಿಟ್ಟುಕೊಂಡು ಓದುತ್ತಿರಿ. ಆಗ ಮಕ್ಕಳು ಸಹ ತಮ್ಮ ಪುಸ್ತಕಗಳನ್ನು ತೆರೆದು ಓದಲಾರಂಭಿಸುತ್ತಾರೆ. ಎಂದಿಗೂ ಮಕ್ಕಳಿಗೆ advice ಕೊಡಬೇಡಿ. ನೀವು ನಿಮ್ಮ ನಡತೆಯಿಂದ ಅವರಿಗೆ ತಿಳಿಸಿ.

* * *

ಸುಖದಲ್ಲಿದ್ದಾಗ ದೇವರನ್ನು ನೆನೆಯುವುದಿಲ್ಲ, ಎಲ್ಲರೂ ದುಃಖದಲ್ಲೇ ದೇವರನ್ನು ನೆನೆಯುತ್ತಾರೆ. ಯಾರು ಸುಖದಲ್ಲೂ ದೇವರನ್ನು ನೆನೆಯುತ್ತಾರೊ ಅವರಿಗೆ ದುಃಖ ಏಕೆ ಬರುತ್ತದೆ ಎಂದು ಕಬೀರ್‌ರವರ ಪದ್ಯದ ಭಾವಾರ್ಥವನ್ನು ತಿಳಿಸಿದರು.

* * *

ಗಾಂಧೀಜಯಂತಿ ಸಂದರ್ಭದಲ್ಲಿ ಮಾತನಾಡುತ್ತಾ ಮಹಾತ್ಮಗಾಂಧೀಜಿ heart & soul of the whole country. ನಿಮಗೆ ಪ್ರಾಣಿಗಳನ್ನು ಕೊಲ್ಲುವ ಅಧಿಕಾರವಿಲ್ಲ. ಈ ದಿನವೆ ಅಲ್ಲ ಪ್ರತಿದಿನ ಮಹಾತ್ಮಾಗಾಂಧೀಯವರನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಗಾಂಧೀಜಿಯವರ ಒಂದೇ ಒಂದು ಸಂದೇಶ ಸಸ್ಯಾಹಾರ. ಅಹಿಂಸೆ ಇಂದ ಜೀವಿಸಿ ಎಂದು ಹೇಳುತ್ತಿದ್ದರು. ಪ್ರಾಣಿಗಳನ್ನು ಅವುಗಳ ಅನುಮತಿ ಇಲ್ಲದೆ ಮುಟ್ಟುವ ಅಧಿಕಾರ ಸಹ ನಮಗಿಲ್ಲ. ನಾವು ಪ್ರಾಣಿಗಳನ್ನು ಪ್ರೀತಿಯಿಂದ ಬೇಕಾದರೆ ಮುಟ್ಟಬಹುದು. ಭೂಚರ, ಜಲಚರ, ಖೇಚರ ಪ್ರಾಣಿಗಳೆಲ್ಲಾ ನಮ್ಮ ಹತ್ತಿರ ಬರಲು ಬಯಸುತ್ತವೆ, ನಮ್ಮ ಸ್ನೇಹವನ್ನು ಪಡೆಯಲು ಹಂಬಲಿಸುತ್ತವೆ. ಆದರೆ, ನಾವು ಅವುಗಳನ್ನು ಅರ್ಥಮಾಡಿಕೊಳ್ಳದೆ ಕೊಂದು ತಿನ್ನುತ್ತಿದ್ದೇವೆ. ಇದು ತುಂಬಾ ಹಿಂಸಾಪೂರ್ವಕವಾದ ವಿಷಯ. ಅವು ನಮ್ಮನ್ನು ದೇವರಂತೆ ಕಾಣುತ್ತವೆ. ಅವು ತಮ್ಮನ್ನು ತಾವು ಉದ್ಧರಿಸಿಕೊಳ್ಳಲು ನಮ್ಮ ಸಹಾಯ ಬೇಡುತ್ತವೆ. ಆದರೆ, ನಾವು ಅವುಗಳನ್ನು ಅರ್ಥಮಾಡಿಕೊಳ್ಳದೆ ಅವುಗಳನ್ನೇ ಕೊಲ್ಲುತ್ತಿದ್ದೇವೆ. ಆ ಪ್ರಾಣಿಗಳು ಪ್ರಾಣಿ ಜನ್ಮಗಳನ್ನು ಮುಗಿಸಿ ಮಾನವ ಜನ್ಮ ಪಡೆಯಲು ಮರಣಿಸುತ್ತವೆ. ಗುಂಪುಗುಂಪಾಗಿ ಇರುವ ಆತ್ಮಗಳು ಮಾನವ ಜನ್ಮದಲ್ಲಿ ಬಂದು ಸ್ವತಂತ್ರವಾಗಿರಲು ಬಯಸುತ್ತವೆ. ಪ್ರಾಣಿಗಳಿಗೆ ಮನಸ್ಸು ಇರುವುದಿಲ್ಲ. ಅದರ ಒಳಗೊಳಗೆ ಅವು ಮಾನವಕುಲವನ್ನು ಪ್ರೀತಿಸುತ್ತಾ, ನಮ್ಮ ಪ್ರೀತಿಯನ್ನು ಪಡೆದು ತಾವು ಸಹ ಮಾನವ ಜನ್ಮ ಎತ್ತಲು ನಮ್ಮ ಸಹಾಯ ಸಹಕಾರವನ್ನು ನಿರೀಕ್ಷಿಸುತ್ತವೆ. ಮಾನವ ಕುಲ ಎಂದರೆ ಚೆನ್ನಾಗಿ ಮನಸ್ಸು ಅಭಿವೃದ್ಧಿ ಆಗಿರುವುದರಿಂದ ಪ್ರಾಣಿ ಜಾತಿಗೆ ಮನಸ್ಸು ವೃದ್ಧಿ ಆಗದಿರುವುದರಿಂದ ಅವು ನಮ್ಮ ಸಹಾಯಹಸ್ತಕ್ಕಾಗಿ ಎದುರು ನೋಡುತ್ತವೆ. ನಮ್ಮ ಮನಸ್ಸು ಚೆನ್ನಾಗಿ ಬೆಳೆದಿರುವುದರಿಂದ ನಾವು ಪ್ರಾಣಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಆ ಪ್ರಾಣಿಗಳನ್ನು ನಮ್ಮ ಮನೆಗೆ ತಂದುಕೊಂಡು ನಿಮ್ಮ ಮಕ್ಕಳನ್ನು ಪ್ರೀತಿಸಿದ ಹಾಗೆ ಅವುಗಳನ್ನು ಪ್ರೀತಿಸಿ ಅವು ತಮ್ಮ ಮನಸ್ಸನ್ನು ವೃದ್ಧಿಗೊಳಿಸಿಕೊಳ್ಳುವುದಕ್ಕೆ ಸಹಾಯ ಮಾಡಿ. ಮಾನವ ಜಾತಿಗೆ ಪ್ರಾಣಿಗಳು ಆಹಾರವಲ್ಲ. ಮಾನವಕುಲದ ಮುಖ್ಯ ಕರ್ತವ್ಯ ಪ್ರಾಣಿಜಾತಿಯನ್ನು ಕಾಪಾಡುವುದು.

ನೀವು ಸಸ್ಯಾಹಾರಿಗಳಾದರೆ ನಿಮಗೆ ಮನಶ್ಶಾಂತಿ ಅವಶ್ಯ ಲಭಿಸುತ್ತದೆ. ಒಂದು ವೇಳೆ ನೀವು ಮಾಂಸಾಹಾರಿಗಳಾದರೆ ನಿಮಗೆ ಮನಶ್ಶಾಂತಿ ಸಿಗುವುದು ಅಸಂಭವ. ಪತಿ ಸಹ ಪತ್ನಿಯನ್ನು ಅವಳ ಅನುಮತಿ ಇಲ್ಲದೆ ಮುಟ್ಟುವ ಹಾಗಿಲ್ಲ. ಹೇಗೆ ಮುಟ್ಟುವಿರಿ. ಅವರೇನೂ ನಿಮ್ಮ ಆಸ್ತಿ ಅಲ್ಲ. ಯಾರೂ ನಿಮ್ಮ ಆಸ್ತಿ ಅಲ್ಲ. ಸೇಂಟ್ ಫ್ರಾನ್ಸೆಸ್ ಅವರ ಮೇಲೆ ಎಲ್ಲಾ ಪ್ರಾಣಿ ಪಕ್ಷಿಗಳು ಅವರ ಭುಜದ ಮೇಲೆ ಬಂದು ಕುಳಿತುಕೊಳ್ಳುತ್ತಿದ್ದು. ಶ್ರೀಕೃಷ್ಣನ ಸುತ್ತಾ ಸದಾ ಗೋಪಿಕಾ ಸ್ತ್ರೀಯರು ಸ್ನೇಹ ತತ್ವದಿಂದ ಇರುತ್ತಿದ್ದರು. ಕೃಷ್ಣಕೊಳಲು ನುಡಿಸುತ್ತಿದ್ದರೆ ಎಲ್ಲಾ ಪ್ರಾಣಿಗಳು ಹತ್ತಿರ ಬಂದು ಕುಳಿತುಕೊಳ್ಳುತ್ತಿದ್ದು. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿಯಲ್ಲಿ ಪ್ರತಿಯೊಬ್ಬರಿಗೂ, ಪ್ರತಿಯೊಂದು ಪ್ರಾಣಿಗೂ ಸ್ವಾತಂತ್ರ್ಯ ನೀಡುತ್ತದೆ. ನೀವು ಇತರರಿಗೆ ಸ್ವಾತಂತ್ರ್ಯವನ್ನು ನೀಡಿದರೆ ನಿಮಗೆ ಸ್ವಾತಂತ್ರ್ಯ ಸಿಗುತ್ತದೆ. ನೀವು ಇತರರಿಗೆ ಮುಕ್ತಿ ಕೊಟ್ಟರೆ ನಿಮಗೆ ಮುಕ್ತಿ ಸಿಗುತ್ತದೆ.

ನೀವು ನಿಮ್ಮ ಪತಿಗೆ ಸ್ವಾತಂತ್ರ್ಯವನ್ನು ಕೊಟ್ಟರೆ ನಿಮಗೆ ಸಹ ಸ್ವಾತಂತ್ರ್ಯ ಸಿಗುತ್ತದೆ. ನೀವು ಯಾರು ನಿಮ್ಮ ಪತಿಯನ್ನು ಅಧೀನದಲ್ಲಿ ಇಟ್ಟುಕೊಳ್ಳಲು. ನೀವು ಈ ಗಂಡ, ಹೆಂಡತಿ ಎನ್ನುವ ಬಂಧನದಿಂದ ಮುಕ್ತರಾಗದಿದ್ದರೆ "ಪುನರಪಿ ಜನನಂ ಪುನರಪಿ ಮರಣಂ" ಚಕ್ರದಲ್ಲಿ ಸಿಲುಕಿವಿರಿ. ಎನ್‌ಲೈಟೆನ್‌ಮೆಂಟ್ ಅಂದರೆ ಎಲ್ಲಾ ಬಂಧನಗಳಿಂದ ಮುಕ್ತಿಗೊಳ್ಳುವುದು. ಇಲ್ಲಿ ಯಾವ ಸಂಬಂಧ ಬಾಂಧವ್ಯಗಳಿಲ್ಲ. ಇರುವುದು ಸ್ನೇಹತತ್ವವೆ. ಎಲ್ಲರಿಗೂ ಸ್ವಾತಂತ್ರ್ಯ ಇರಬೇಕು. ಇದು ತಿಳಿದನಂತರ ನಾನು ನನ್ನ ಎಲ್ಲಾ ಬಂಧನಗಳಿಂದ ಮುಕ್ತನಾಗಿದ್ದೇನೆ. ನಾನು ಇಲ್ಲಿಗೆ ಬಂದಾಗ ಸ್ವರ್ಗವನ್ನು ನನ್ನ ಜೊತೆ ತಂದುಕೊಂಡಿದ್ದೇನೆ. ಅಹಿಂಸೆ, ಬಂಧ ವಿಮುಕ್ತಿ ಇರುವುದರಿಂದ ನಮ್ಮಲ್ಲಿ ಸ್ವರ್ಗದ ವಾತಾವರಣವಿರುತ್ತದೆ.

ಸಮಾಜದಲ್ಲಿ ಕೆಲಸಕಾರ್ಯಗಳನ್ನು ನಡೆಸಲು ನಾವು ‘ನಾನು ಭಾರತೀಯ’, ‘ನಾನು ಕರ್ನಾಟಕದವನು’ ಎಂದು ಮುಂತಾದ ನಮ್ಮ identificationನ್ನು ನಾವು ತಿಳಿಯಪಡೆಸುತ್ತೇವೆ. ಜನ (ಗಂಡಸರು) ಹೇಳುತ್ತಾರೆ ಈಕೆ ನನ್ನ ಹೆಂಡತಿ ಎಂದು. ಯಾರೂ ಸಹ ನಾನು ಈಕೆಯ ಗಂಡ ಎಂದು ಹೇಳುವುದಿಲ್ಲ. ನೀವು ಇತರರಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ. ನಾನು ಅವಳ ಗಂಡ ಎಂದು ಹೇಳಿದರೆ ಏನಾಗುತ್ತದೆ. ಇತರರಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ನೀವು ನಿಮ್ಮ ಬಗ್ಗೆ ಹೆಮ್ಮೆ ಇಂದ ಕೊಚ್ಚಿಕೊಳ್ಳಬೇಡಿ. ಅದೇ ಎನ್‌ಲೈಟೆನ್‌ಮೆಂಟ್ ಅಂದರೆ. ಇತರರ ಪ್ರಾಮುಖ್ಯತೆಯನ್ನು ನಮ್ರತೆ ಇಂದ ಎತ್ತಿ ತೋರಿಸಿ. ಎನ್‌ಲೈಟೆನ್‌ಮೆಂಟ್ ಅಂದರೆ ಮೂರನೆಯ ಕಣ್ಣಿನ ಉತ್ತೇಜಿತವಾಗುವುದು ಸೂಕ್ಷ್ಮಶರೀರಯಾನ ಅಲ್ಲ. ಎನ್‌ಲೈಟೆನ್‌ಮೆಂಟ್ ಅಂದರೆ ಇತರರಿಗೆ ಪ್ರಾಮುಖ್ಯತೆಯನ್ನು ನೀಡಿ ಮಾತನಾಡುವುದು. ಎನ್‌ಲೈಟೆನ್‌ಮೆಂಟ್ ಎಂದರೆ ಪ್ರಾಣಿ-ಪಕ್ಷಿಗಳನ್ನು ಕೊಲ್ಲದೆ ಇರುವುದು. ಇತರರಿಗೆ ತೊಂದರೆ ಕೊಡದೆ ಇರುವುದು. ನಾನೇ ಅವಳ ಗಂಡ ಎಂದು ಹೇಳಿ ಹೆಂಡತಿಗೆ ಪ್ರಾಮುಖ್ಯತೆಯನ್ನು ನೀಡುವುದು. ಇನ್ಮುಂದೆ ಗಂಡಸರು ನಾನು ಅವಳ ಗಂಡ, ನಾನು ಈ ಮಕ್ಕಳ ತಂದೆ ಎಂದು ಹೇಳಬೇಕು. ಆಗ ನಿಮ್ಮಲ್ಲಿರುವ ಗಂಡು ಅಹಂಕಾರ ಕರಗಿ ಹೋಗುತ್ತದೆ.

ಪಿರಮಿಡ್ ಮಾಸ್ಟರ್ ಅಂದರೆ ಬುದ್ಧ ಒಳಗೆ, ಗಾಂಧೀ ಹೊರಗೆ ಇರುವವನೆ ಎಂದು ಸ್ಪಷ್ಟ ಪಡೆಸಿದರು. ಒಳಗೆ ಬುದ್ಧನ ಹಾಗೆ ಶಾಂತಿ ಇಂದ ಇರುವುದು. ಹೊರಗೆ ಗಾಂಧೀಯ ಹಾಗೆ ಸಮಾಜದ ಜವಾಬ್ದಾರಿಯನ್ನು ಗ್ರಹಿಸುವುದು ಎಂದು ತಿಳಿಸಿದರು. ನೀವು ಹೊರಗೆ ಗಾಂಧೀಯ ಹಾಗೆ ಪೂರ್ಣಜ್ಞಾನದಿಂದ ಇರಬೇಕು. ಅಂತಹವರೆ ಪ್ರಾಣಿಪಕ್ಷಿಗಳನ್ನು ಕಾಪಾಡಿ ಎನ್‌ಲೈಟೆನ್ ಮಾಸ್ಟರ‍್ಸ್ ಆಗಿ ಜೀವಿಸುತ್ತಾರೆ ಎಂದು ಪತ್ರೀಜಿ ತಿಳಿಯಪಡೆಸಿದರು.

Go to top