"ಸೋಲಾಪೂರ್‌ನಲ್ಲಿಪತ್ರೀಜಿಕಾನ್ಸೆಪ್ಟ್‌ಗಳು"

 

"ಬಾಯಿಯನ್ನು ಕಟ್ಟಿಹಾಕಿದರೆ ಮೌನ .. ಅದರಿಂದ ನಮ್ಮ ಶಕ್ತಿಯನ್ನು ಉಳಿತಾಯ ಮಾಡಿದಹಾಗಾಗುತ್ತದೆ". "ಮಹಾತ್ಮಾ ಗಾಂಧೀಜಿ ವಾರದಲ್ಲಿ ಒಂದು ದಿನ ಮೌನವಾಗಿರುತ್ತಿದ್ದರು.

"ಮನಸ್ಸನ್ನು ಮೌನವಾಗಿ .. (ಅಂದರೆ ಆಲೋಚನೆಗಳು ಇಲ್ಲದೇ) .. ಇಡುವುದೇ ಧ್ಯಾನ; ಪ್ರತಿಯೊಬ್ಬರೂ ಅವರ ಆರೋಗ್ಯ, ಪ್ರಶಾಂತತೆ, ಆಧ್ಯಾತ್ಮಿಕತೆ, ಬೆಳವಣಿಗೆಗಾಗಿ ಮಾಡಬೇಕಾಗಿದ್ದು ಧ್ಯಾನವೇ.

ನಲವತ್ತು ದಿನಗಳು ಧ್ಯಾನ ಮಾಡಿದರೆ ’ ಧ್ಯಾನಿ ’ ಆಗುತ್ತಾರೆ

ಇನ್ನೂ ನಲವತ್ತು ದಿನಗಳು ಧ್ಯಾನ ಮಾಡಿದರೆ ’ ಯೋಗಿ ’ ಆಗುತ್ತಾರೆ

ಇನ್ನೂ ನಲವತ್ತು ದಿನಗಳು ಧ್ಯಾನ ಮಾಡಿದರೆ ’ ಋಷಿ ’ ಆಗುತ್ತಾರೆ

ಇನ್ನೂ ನಲವತ್ತು ದಿನಗಳು ಧ್ಯಾನ ಮಾಡಿದರೆ ’ ಮಹರ್ಷಿ ’ ಆಗುತ್ತಾರೆ

ಇನ್ನೂ ನಲವತ್ತು ದಿನಗಳು ಧ್ಯಾನ ಮಾಡಿದರೆ ’ ಬ್ರಹ್ಮರ್ಷಿ ’ ಆಗುತ್ತಾರೆ

 

"ಭೌತಿಕಶರೀರ" - ಕಿರು ಬೆರಳು

ಮಾತಾಪಿತಾನುಸಾರಿಣಿ - ಕನ್ನಡಿಯಲ್ಲಿ ನೋಡಬಹುದು.

"ಮನಸ್ಸು" - ಉಂಗುರದ ಬೆರಳು

ಸಾಮಾಜಾನುಸಾರಿಣಿ - ಮಾಡುವ ಕರ್ಮಗಳಿಂದ ತಿಳಿಯುತ್ತದೆ.

"ಬುದ್ಧಿ" - ಮಧ್ಯೆ ಬೆರಳು

ಕರ್ಮಾನುಸಾರಿಣಿ - ಗುರುಗಳಿಗೆ ತಿಳಿಯುತ್ತದೆ.

"ಆತ್ಮ" - ತೋರು ಬೆರಳು

ಸರ್ವಾತ್ಮಾನುಸಾರಿಣಿ - ಧ್ಯಾನದಲ್ಲಿ ಸಿಗುತ್ತದೆ.

"ಸರ್ವಾತ್ಮ" - ಹೆಬ್ಬೆರಳು

ಯಾವ ’ಅನುಸಾರಿಣಿ’ ಅಲ್ಲ - ನೋಡಲು ಏನೂ ಇಲ್ಲ..

ಏಕೆಂದರೆ, ಆತ್ಮವೇ ಸರ್ವಾತ್ಮ ಆದ್ದರಿಂದ.

"ಪರಮಾತ್ಮರು ಅನೇಕರು; ಸರ್ವಾತ್ಮ ಒಂದೇ. ನಿಸ್ವಾರ್ಥದಿಂದ ಮಹಾತ್ಮರಾಗುತ್ತಾರೆ. ಧ್ಯಾನದಿಂದ, ಆತ್ಮಾನುಭವದಿಂದ, ಬ್ರಹ್ಮಾತ್ಮಾನುಭವದಿಂದ ’ ಪರಮಾತ್ಮ ’ರಾಗುತ್ತಾರೆ. ಆದ್ದರಿಂದ ಎಲ್ಲರೂ ಧ್ಯಾನ ಮಾಡಬೇಕು".

"ಮೌನ ಶ್ರೇಷ್ಠವಾದದ್ದು. ಭಜನೆ ಶ್ರೇಷ್ಠವಾದದ್ದು. ಆದರೆ, ಧ್ಯಾನ ಎಲ್ಲದಕ್ಕಿಂತಾ ಶ್ರೇಷ್ಠವಾದದ್ದು. ಧ್ಯಾನ ಮಾಡಿದ ದಿನ ಅತಿ ಶ್ರೇಷ್ಠವಾದ ದಿನ. ಧ್ಯಾನವನ್ನು ಕುರಿತು ಎಲ್ಲರಿಗೂ ಹೇಳಿ ಪುಣ್ಯದ ಗಂಟು ಕಟ್ಟಿಕೊಳ್ಳಬೇಕು. ಮಾಂಸ ತಿನ್ನುವುದು ಬಿಡಿ ಎಂದು ಹೇಳಿದರೆ ಪುಣ್ಯ. ನಿಮ್ಮ ಹಣ ನಿಮ್ಮ ನಿಮ್ಮ ಸಂಸಾರದ್ದು. ಆದರೆ, ನಿಮ್ಮ ವಾಕ್ಕು ಪ್ರಪಂಚದ್ದು. ಆದ್ದರಿಂದ, ಈ ವಾಕ್ಕನ್ನು ಧ್ಯಾನ, ಜ್ಞಾನವನ್ನು ಕುರಿತು ಹೇಳಲು ಉಪಯೋಗಿಸಿದರೆ ಎಷ್ಟು ಪುಣ್ಯವೊ. ಈ ಪುಣ್ಯವನ್ನು ಮಾತ್ರವೇ ನಾವು ಸಾಯುವಾಗ ನಮ್ಮ ಜೊತೆ ತೆಗೆದುಕೊಂಡು ಹೋಗುತ್ತೇವೆ".

* * *

"ಆಧ್ಯಾತ್ಮಿಕತೆ ಅಂದರೆ ನಮ್ಮನ್ನು ಕುರಿತು ತಿಳಿದುಕೊಳ್ಳುವುದು. ಹೇಗೆ ಆನೆಯ ಬಾಲದಿಂದ ಹಿಡಿದು ತಲೆಯವರೆಗೂ ತಿಳಿದುಕೊಂಡರೇನೆ ಆನೆಯನ್ನು ಕುರಿತು ತಿಳಿಯುತ್ತದೆಯೊ, ಹಾಗೆಯೇ, ನಮ್ಮ ಭೌತಿಕ ಶರೀರವಲ್ಲದೆ ಸೂಕ್ಷ್ಮಶರೀರವನ್ನು ಕುರಿತು ತಿಳಿದುಕೊಂಡರೇನೆ ನಮ್ಮ ಪೂರ್ಣ ಸ್ವರೂಪ ತಿಳಿದುಕೊಂಡ ಹಾಗೆ. ಕೇವಲ ನಮ್ಮ ಭೌತಿಕ ಶರೀರವನ್ನು ಕುರಿತು ಮಾತ್ರ ನಮಗೆ ತಿಳಿದರೆ, ಕೇವಲ ನಮ್ಮ ಬಾಲವನ್ನು ಕುರಿತು ಮಾತ್ರ ನಮಗೆ ತಿಳಿದಹಾಗಿರುತ್ತದೆ. ಈ ದಿನದಿಂದ ನಾವೆಲ್ಲರೂ ನಮ್ಮ ಪೂರ್ಣಸ್ವರೂಪವನ್ನು ತಿಳಿದುಕೊಳ್ಳುವ ಗುರಿಯನ್ನು ಇಟ್ಟುಕೊಳ್ಳೋಣ.

 

ಸ್ಥೂಲಶರೀರ - ಆನೆಯ ಬಾಲ

ಸೂಕ್ಷ ಶರೀರ - ಆನೆಯ ಕಾಲುಗಳು

ಕಾರಣಶರೀರ - ಆನೆಯ ಹೊಟ್ಟೆ

ಮಹಾಕಾರಣಶರೀರ - ಆನೆಯ ಕುಂಭಸ್ಥಳ

 

"ಜೀವನದಲ್ಲಿ ಸಫಲತೆ ಹೊಂದಬೇಕಾದರೆ ಮಹಾಕಾರಣ ಶರೀರದಲ್ಲಿ ವಿಸ್ತರಿಸಬೇಕು. ಬ್ರಹ್ಮಾಂಡ ನಮ್ಮ ವಿರಾಟ್‌ಶರೀರ. ಇದೇ ’ ಅಹಂ ಬ್ರಹ್ಮಾಸ್ಮಿ ’ ಅಂದರೆ. ಸ್ಥೂಲಶರೀರದಿಂದ ಬ್ರಹ್ಮಾಂಡದವರೆಗು ಎಲ್ಲಾ ಅನುಭವಕ್ಕೆ ಬರಬೇಕಾದರೆ ಧ್ಯಾನ ಒಂದೇ ಮಾರ್ಗ. ಆಕಾಶತತ್ವವನ್ನು ಹೊಂದಬೇಕಾದರೆ ವಾಯುತತ್ವವಾದ ಶ್ವಾಸವನ್ನು ಹಿಡಿದುಕೊಳ್ಳಬೇಕು. ಅದಕ್ಕೇ ಶ್ವಾಸದ ಜೊತೆ ಸೇರಿದ್ದರೆ ಮುಕ್ತಿಮಾರ್ಗ. ಅದೇ ತೀರ್ಥಯಾತ್ರೆ. ಮುಕ್ತಿಮಾರ್ಗ ಕಾಶಿಯಲ್ಲಿ, ಹಿಮಾಲಯಗಳಲ್ಲಿ ಇಲ್ಲ. ಶ್ವಾಸದಲ್ಲಿದೆ. ಶ್ವಾಸಾನುಸಂಧಾನ, ಅಂದರೆ, ಶ್ವಾಸದ ಮೇಲೆ ಗಮನವಿಟ್ಟು ಮುಕ್ತರಾಗಬೇಕು.

Go to top