"ನಮ್ಮ ಯೋಜನೆಗಳು"

 

ಯಾವ ಶಾಸ್ತ್ರ ವಿಜ್ಞಾನವಾದರೂ ಸರಿ ... ಅದರ ಪ್ರಯೋಗ ಫಲಗಳು ಸಮಾಜದಲ್ಲಿ ಎಲ್ಲಾ ವರ್ಗಗಳ ಪ್ರಜೆಗಳಿಗೆ ಸಲ್ಲಬೇಕು. ಅಲ್ಲದೆ, ಅವು ಅವರ ಜೀವನ ವಿಧಾನದಲ್ಲಿ ಉನ್ನತ ಮೌಲ್ಯದಿಂದ ಕೂಡಿದ ದೊಡ್ಡ ಬದಲಾವಣೆಯನ್ನು ತರಲಾದರೆ ಮಾತ್ರವೇ ಆ ಶಾಸ್ತ್ರಕ್ಕೆ ಸಾರ್ಥಕತೆ ಇರುತ್ತದೆ ಎನ್ನುತ್ತಾರೆ ಅನುಭವಸ್ಥರು. ಅದಕ್ಕೆ ಆಧ್ಯಾತ್ಮಿಕ ಶಾಸ್ತ್ರ ವಿಜ್ಞಾನ ಪ್ರಯೋಗ ಫಲಗಳು ಪ್ರಜಗಳೆಲ್ಲರಿಗೂ ಸಹ ಸಿಗುವಹಾಗೆ ಮಾಡಲು ಕಂಕಣವನ್ನು ಕಟ್ಟಿಕೊಂಡಿರುವ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ... ಬ್ರಹ್ಮರ್ಷಿ ಪತ್ರೀಜಿ ನೇತೃತ್ವದಲ್ಲಿ ಅನೇಕ "ಧ್ಯಾನ ಪ್ರಾಜೆಕ್ಟ್‌ಗಳನ್ನು ಆರಂಭಿಸಿತ್ತು. ಇಲ್ಲಿ ಇವುಗಳ ಮೇಲೊಂದು ವಿಶೇಷ ದೃಷ್ಟಿ ಹರಿಸಲಾಗಿದೆ.

"ಧ್ಯಾನ ವಿದ್ಯಾರ್ಥಿ - P.M.R. ಪ್ರಾಜೆಕ್ಟ್‌"

ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಪ್ರಸ್ತುತ ಪರಿಸ್ಥಿತಿಗಳಲ್ಲಿ ವಿದ್ಯಾರ್ಥಿಗಳು ಅನೇಕ ಜಟಿಲವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲಾ ರಂಗಗಳಲ್ಲೂ ಕೂಡಾ ಅವರು ಅತ್ಯುತ್ತಮವಾಗಿ ಇರುವುದೇ ಪ್ರತಿಯೊಬ್ಬರಿಗೂ ಬೇಕಾಗಿದೆ. ರ‍್ಯಾಂಕುಗಳು ಮತ್ತು ಅತ್ಯುತ್ತಮವಾದ ಫಲಿತಾಂಶಗಳನ್ನು ಸಾಧಿಸಬೇಕೆಂದು ಒಂದು ಕಡೆ ತಂದೆತಾಯಿ, ಇನ್ನೊಂದು ಕಡೆ ಉಪಾಧ್ಯಾಯರೂ ಮಕ್ಕಳ ಕುತ್ತಿಗೆಯ ಮೇಲೆ ಕುಳಿತುಕೊಳ್ಳುತ್ತಾರೆ. ಆತಂಕವನ್ನು ಉಂಟು ಮಾಡುವ ಈ ಸ್ಪರ್ಧೆಯಿಂದ ಅವರಲ್ಲಿ ಬಗೆಬಗೆಯ ಭಾವನೆಗಳಿಗೆ ಎಡೆಮಾಡಿಕೊಡುತ್ತಿದೆ. ಅದರ ಫಲವಾಗಿ ಅವರು ನಿರಾಸೆ, ನಿಸ್ಪೃಹೆ, ಗಾಬರಿ, ದ್ವೇಷ, ಅವಿಧೇಯತೆ, ಭಯ, ವಿರಕ್ತಿ ... ಮುಂತಾದ ಮಾನಸಿಕ ಖಾಯಲೆಗಳಿಗೆ ತುತ್ತಾಗಿ ಕೊನೆಗೆ ಆತ್ಮಹತ್ಯೆಯನ್ನೂ ಮಾಡಿಕೊಳ್ಳುವ ನಿಸ್ಸಹಾಯ ಸ್ಥಿತಿಗೆ ತಲುಪುತ್ತಿದ್ದಾರೆ.

ಇಂತಹ ಸವಾಲುಗಳು ಧೈರ್ಯದಿಂದ ಎದುರಿಸಬೇಕಾದರೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಆತ್ಮಶಕ್ತಿಯನ್ನು ಬೇಗ ತಿಳಿದುಕೊಳ್ಳಬೇಕು. ಅದಕ್ಕೆ ಈಗಿನ ಕಾಲದಲ್ಲಿ ಇರುವ ಆಧುನಿಕ ವಿದ್ಯಾಭ್ಯಾಸ ಮತ್ತು ಪುಸ್ತಕಗಳಿಂದ ಕಲಿತುಕೊಳ್ಳುತ್ತಿರುವ ವಿದ್ಯಾಭ್ಯಾಸ ಅವರಿಗೆ ಸ್ವಲ್ಪವೂ ಸರಿಹೋಗುವುದಿಲ್ಲ.

ಆದ್ದರಿಂದ, ಅವರ ವ್ಯಕ್ತಿತ್ವವನ್ನು ತಿದ್ದಿರೂಪಿಸಲು, ಅವರಲ್ಲಿ ಮಾನಸಿಕ ಶಕ್ತಿಯನ್ನು ಬೆಳಸಿ, ಅವರ ಬುದ್ಧಿಯನ್ನು ಅರಳಿಸಿ, ಅದರಿಂದ ವಿದ್ಯಾರ್ಥಿಯು ತನ್ನ ಕಾಲ ಮೇಲೆ ತಾನು ನಿಲ್ಲುವ ಹಾಗೆ ಮಾಡಿ, ತನ್ನಲ್ಲಿರುವ ದೈವತ್ವವನ್ನು ತಿಳಿದುಕೊಳ್ಳುವ ಹಾಗೆ ಮಾಡುವ, "ಏನಾದರೂ ಸಾಧಿಸಬಲ್ಲೆವು" ಎಂದು ವಿಶ್ವಾಸ ಗಳಿಸಿಕೊಡಬಲ್ಲ ವಿದ್ಯೆಯು ಇಂದು ನಮಗೆ ಬೇಕಾಗಿದೆ. ಅನಂತವಾದ ಆತ್ಮಶಕ್ತಿಯಿಂದ ಗುರಿಯನ್ನು ಸಾಧಿಸಬಲ್ಲ ಯುವಜನತೆಯನ್ನು ತಯಾರುಮಾಡುವ ಶಿಕ್ಷಣಾವಿಧಾನ ಬೇಕಾಗಿದೆ. ಇಂತಹ ನಿಜವಾದ ವಿದ್ಯೆಯನ್ನು ... ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕಾದರೆ ಪಾಠಶಾಲೆಗಳೆಲ್ಲಾ ತಪ್ಪದೆ ಧ್ಯಾನ ಮಂದಿರಗಳನ್ನು ಸ್ಥಾಪಿಸಬೇಕಾಗಿದೆ. ಇದಕ್ಕಾಗಿಯೇ ನಮ್ಮ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ಯಿಂದ ಆರಂಭಗೊಂಡಿರುವ ನೂತನ ಅಧ್ಯಾಯವೇ "ಧ್ಯಾನ-ವಿದ್ಯಾರ್ಥಿ, P.M.R. ಪ್ರಾಜೆಕ್ಟ್" ಈ ಪ್ರಾಜೆಕ್ಟ್‌ನ ಭಾಗವಾಗಿ ಪ್ರತಿ ಪಾಠಶಾಲೆಯಲ್ಲೂ ಮತ್ತು ಶಾಲಾಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಧ್ಯಾನವನ್ನು ಪರಿಚಯ ಮಾಡಿಸಿ ಅವರ ವಿದ್ಯಾಲಯದ ಪ್ರಾಂಗಣದಲ್ಲಿ ಪಿರಮಿಡ್‌ಗಳನ್ನು ಕಟ್ಟಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ ನಮ್ಮ ಪಿರಮಿಡ್ ಮಾಸ್ಟರ್‌ಗಳು.

"ಧ್ಯಾನ ಆರೋಗ್ಯ ಪ್ರಾಜೆಕ್ಟ್‌""

"ಆರೋಗ್ಯವೇ ಮಹಾಭಾಗ್ಯ" ಎಂದರು ಹಿರಿಯರು. ಆರೋಗ್ಯವೆಂದರೆ ಶಾರೀರಕವಾದ ಸ್ವಸ್ಥತೆ, ಮಾನಸಿಕವಾದ ಸ್ವಸ್ಥತೆ ಮತ್ತು ಆತ್ಮ ಪರವಾದ ಸ್ವಸ್ಥತೆ ... ಅದರಿಂದ ಆರೋಗ್ಯವಂತವಾದ, ಆನಂದದಾಯಕವಾದ ಸಮಾಜವನ್ನು ಸ್ಥಾಪಿಸುವುದು. ಅಷ್ಟೇ ವಿನಹ 'ಆರೋಗ್ಯ' ಎಂದರೆ 'ರೋಗಗಳು ಇಲ್ಲದೇ ಇರುವುದು ' ಎಂಬುವುದು ಅಲ್ಲವೇ ಅಲ್ಲ.

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನಲ್ಲಿರುವ ಮಾಸ್ಟರ್‌ಗಳು ಮತ್ತು ಡಾಕ್ಟರ್‌ಗಳು ಎಲ್ಲರೂ ಸೇರಿ ಆರಂಭಿಸಿದ್ದೇ ... ಈ "ಧ್ಯಾನ ಆರೋಗ್ಯ" ಪ್ರಾಜೆಕ್ಟ್. ಈ ಪ್ರಾಜೆಕ್ಟ್ ಮೂಲಕ ಎಲ್ಲಾ ಪ್ರಜೆಗಳಿಗೂ ಮೂರು ರೀತಿಯ ಆರೋಗ್ಯ ಶೀಘ್ರವಾಗಿ ಹೊಂದಲು ... ಧ್ಯಾನ ಮತ್ತು ಸಸ್ಯಾಹಾರದ ಅತ್ಯಾವಶ್ಯಕತೆಯನ್ನು ತಿಳಿಸಲಾಗುತ್ತದೆ. ಧ್ಯಾನದಿಂದ ವಿಶ್ವಶಕ್ತಿಯನ್ನು ಪಡೆಯುತ್ತಾ ಮತ್ತ್ತು ಆತ್ಮಜ್ಞಾನದಿಂದ ಕರ್ಮಗಳನ್ನು ಹೊಗಲಾಡಿಸಿಕೊಳ್ಳುವ ಹಾಗೆ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುವುದೇ ಈ ಪ್ರಾಜೆಕ್ಟ್‌ನ ಮುಖ್ಯಗುರಿ. ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದರೂ ಹೆದರಿಕೊಂಡು ನಿರಂತರವಾಗಿ ಸುತ್ತೂ ತಿರುಗುತ್ತಾ ಇನ್ನೂ ಹೆಚ್ಚು ಸಮಸ್ಯೆಗಳಲ್ಲಿ ಸಿಕ್ಕಿಕೊಂಡಿರುವವರಿಗೆ ಧ್ಯಾನ ಆರೋಗ್ಯ ಪ್ರಾಜೆಕ್ಟ್ ಒಂದು ವರವಾಗಿ ಪ್ರಜೆಗಳು ಸ್ವಸ್ಥತೆ ಪಡೆಯಲು ಸಹಾಯ ಮಾಡುತ್ತಿದೆ.

"ಧ್ಯಾನ ಗ್ರಾಮೀಣ ಪ್ರಾಜೆಕ್ಟ್‌"

ಕರ್ನಾಟಕದಲ್ಲಿರುವ ಗ್ರಾಮಗಳಲ್ಲಿ ಅನೇಕ ಜನ ಈಗಲೂ ಸಹ ... "ಆಧ್ಯಾತ್ಮಿಕತೆ ಎಂದರೆ ವಿಗ್ರಹಪೂಜೆ ಮಾತ್ರವೇ" ಎಂದುಕೊಳ್ಳುತ್ತಿದ್ದಾರೆ. ಆಧ್ಯಾತ್ಮಿಕತೆ ಎಂದರೆ "ದೀಕ್ಷೆಯಿಂದ ಕೂಡಿದ ಧ್ಯಾನ ಸಾಧನೆ" ಎಂದು ಅವರಿಗೆ ತಿಳಿಯಪಡಿಸಲು ಪ್ರತಿ ಗ್ರಾಮ ಮಟ್ಟದಲ್ಲೂ "ಪಿರಮಿಡ್ ಧ್ಯಾನ" ಬರಲೇ ಬೇಕು. ಎಲ್ಲಾ ಗ್ರಾಮಗಳಲ್ಲೂ ಅತಿಹೆಚ್ಚಾಗಿ ಪಿರಮಿಡ್‌ಗಳು ನಿರ್ಮಾಣವಾಗಬೇಕು ಮತ್ತ್ತು ಗ್ರಾಮ ಪ್ರಜೆಗಳೆಲ್ಲಾ ಸಾಮೂಹಿಕವಾಗಿ ದಿನನಿತ್ಯ ಧ್ಯಾನ ಮಾಡಿಕೊಳ್ಳುವ ದಿನಗಳು ಬರಬೇಕು. ಗ್ರಾಮಗಳಲ್ಲಿ ಎಲ್ಲರೂ ಸಹ ವೈದ್ಯಕ್ಕಾಗಿ ಪಟ್ಟಣಗಳಿಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಗ್ರಾಮ ನಿವಾಸಿಗಳು ... ಮೊದಲೇ ಬಡತನದಿಂದ ಜೀವಿಸುತ್ತಿರುವವರು. ಅಷ್ಟೇ ಅಲ್ಲದೇ ಧೂಮಪಾನ, ಮದ್ಯ ಸೇವನೆ ಮುಂತಾದ ಕೆಟ್ಟ ಅಭ್ಯಾಸಗಳಿಂದ ಇವರ ಜೀವನ ಇನ್ನೂ ಕೆಳಮಟ್ಟಕ್ಕೆ ಇಳಿಯುತ್ತಿದೆ. ಗ್ರಾಮ ಪ್ರಜೆಗಳೆಲ್ಲರಿಗೂ ಅವರವರ ಆರೋಗ್ಯ ಅವರವರ ಕೈಯ್ಯಲ್ಲೇ ಇದೆ ಎಂದು ವಿವರವಾಗಿ ತಿಳಿಯಪಡಿಸಿ, ಅವರ ಆರೋಗ್ಯವನ್ನು ಅವರೇ ಕಾಪಾಡಿಕೊಳ್ಳುವ ರೀತಿಯಲ್ಲಿ ಅವರಿಂದ ಧ್ಯಾನ ಸಾಧನೆ ಮಾಡಿಸಬೇಕು. ಬಡ ಪ್ರಜೆಗಳಿಗೆ ನಿಜವಾದ ಉಪಾಯ ಮಾರ್ಗ ಧ್ಯಾನವೇ. ಶ್ವಾಸವನ್ನು ಗಮನಿಸುವ ಮೂಲಕ ದೇಹಾರೋಗ್ಯವನ್ನು, ಬ್ರಹ್ಮಾನಂದವನ್ನೂ ಗ್ರಾಮ ಪ್ರಜೆಗಳೆಲ್ಲರೂ ಹೊಂದಬೇಕು. ಪಿರಮಿಡ್ ಮಾಸ್ಟರ್‌ಗಳು ಸುತ್ತಾಮುತ್ತಾ ಇರುವ ಗ್ರಾಮಗಳೆಲ್ಲಾ ಕೂಡಾ "ಧ್ಯಾನ ಗ್ರಾಮಗಳಾಗಿ" ರೂಪಿಸಲಿಕ್ಕಾಗಿ ಬ್ರಹ್ಮರ್ಷಿ ಪತ್ರೀಜಿಯವರ ನೂತನ ಉಪಕ್ರಮವೇ ಈ "ಧ್ಯಾನ ಗ್ರಾಮೀಣ ಪ್ರಾಜೆಕ್ಟ್‌"".".

"ಧ್ಯಾನ ಆಧ್ಯಾತ್ಮಿಕ ವ್ಯವಸಾಯ ಪ್ರಾಜೆಕ್ಟ್‌"

ರೈತರೆಲ್ಲರೂ ಧ್ಯಾನಿಗಳಾಗಿ ಬದಲಾಗಿ ತಮ್ಮ ತಮ್ಮ ಆತ್ಮಶಕ್ತಿಯನ್ನು ಹೆಚ್ಚಾಗಿ ಬೆಳೆಸಿಕೊಂಡರೆ ಫಸಲಿನ ಇಳುವರಿ ಇನ್ನೂ ಚೆನ್ನಾಗಿ ಇರುತ್ತದೆ ... ವಾತಾವರಣ ಸಹ ಅವರಿಗೆ ಅನುಕೂಲವಾಗಿ ಬದಲಾಗಿ ಸಕಾಲದಲ್ಲಿ ಮಳೆ ಬೀಳುತ್ತದೆ! ಗ್ರಾಮದ ಪ್ರಜೆಗಳಿಗೆ ಫಸಲೇ ಜೀವನಾಧಾರ. ಆದ್ದರಿಂದ, ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಪಿರಮಿಡ್ ಕೆಳಗೆ ಇರಿಸಿದ ಬೀಜಗಳನ್ನು ಉಪಯೋಗಿಸುವುದರಿಂದ ಆ ಬೀಜಗಳಿಗೆ ವಿಶ್ವಶಕ್ತಿಯ ಪ್ರಭಾವದಿಂದ ಬೀಜದಲ್ಲಿ ಶಕ್ತಿ ವೃದ್ಧಿಯಾಗಿ ಫಸಲಿನಲ್ಲಿ ಅಧಿಕ ಇಳುವರಿ ಬರುತ್ತದೆ. ವ್ಯವಸಾಯದ ಕೆಲಸಗಳಿಲ್ಲದ ಖಾಲಿ ಸಮಯದಲ್ಲಿ ... ಹೊಲ, ಗದ್ದೆಗಳಲ್ಲಿ ರೈತ ಕುಟುಂಬಗಳು ಧ್ಯಾನ ಮಾಡುವುದರಿಂದ ಗಿಡಗಳಲ್ಲಿ ಅಧಿಕಶಕ್ತಿ ಬರುತ್ತದೆ. ವ್ಯವಸಾಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆಮಾಡಿ ಸಾವಯವ ಗೊಬ್ಬರಗಳನ್ನು ಉಪಯೋಗಿಸಬೇಕು ... ಗ್ರಾಮಗಳೆಲ್ಲಾ ಹಸಿರಾಗಿ ಕಳೆಕಳೆಯಿಂದ ಇರುವಂತಾಗಿ ... ಪಟ್ಟಣ ಪ್ರಜೆಗಳೇ ಗ್ರಾಮಗಳಿಗೆ ವಲಸೆ ಹೋಗುವಹಾಗೆ ಬದಲಾಗಬೇಕೆಂಬುವುದೇ "ಧ್ಯಾನ ಆಧ್ಯಾತ್ಮಿಕ ವ್ಯವಸಾಯ ಪ್ರಾಜೆಕ್ಟ್‌" ಮೂಲಸಿದ್ಧಾಂತ.

ಫಸಲು ಸರಿಯಾಗಿ ಬರದೇ ಆತ್ಮಹತ್ಯೆ ಮಾಡುಕೊಳ್ಳುವ ರೈತರಿಗೆ ಆತ್ಮಜ್ಞಾನ ಎಂಬುವುದನ್ನು ಖಂಡಿತಾ ಕೊಡಬೇಕು. ನಾನು ಎಂಬುವುದು ಶರೀರವಲ್ಲ ... ಆತ್ಮ ಎಂದು ತಿಳಿದುಕೊಂಡಾಗ ರೈತರು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

ಆರ್ಥಿಕವಾದ ನಿಸ್ಸಹಾಯಸ್ಥಿತಿಯಲ್ಲಿ ಒಬ್ಬ ರೈತ ತಾನು ಮರಣಿಸುವುದರ ಮೂಲಕ ಬದುಕಿರುವ ತನ್ನ ಕುಟುಂಬವನ್ನು ಕೂಡಾ ಕೊಲ್ಲುವ ಪರಿಸ್ಥಿತಿಯು ಗ್ರಾಮೀಣ ಪ್ರಾಂತದಲ್ಲಿ ಇನ್ನೂ ಉಳಿದಿದೆ ಎಂದರೆ ನಮ್ಮ ದೇಶದಲ್ಲಿರುವ ವಿದ್ಯಾವಂತರೆಲ್ಲರಿಗೂ ಮತ್ತು ಆಧ್ಯಾತ್ಮಿಕ ಶಾಸ್ತ್ರವೇತ್ತರೆಲ್ಲರಿಗೂ ಇದು ನಾಚಿಕೆ ಪಡುವಂತಹ ವಿಷಯ. ಪ್ರತಿಯೊಬ್ಬರ ಪ್ರಾಣ ಪವಿತ್ರವಾದದ್ದು ... ಆತ್ಮಹತ್ಯೆಗಿಂತ ಮಹಾಪಾಪ ಮತ್ತೊಂದಿಲ್ಲ ... ಮತ್ತು ಆತ್ಮಜ್ಞಾನಕ್ಕಿಂತಾ ಮೀರಿದ ಮಹಾಜ್ಞಾನವಿಲ್ಲ.

ಗ್ರಾಮ ಪ್ರಜೆಗಳ ದಾರಿದ್ರ ಕ್ಕೆ ... ಗ್ರಾಮ ಪ್ರಜೆಗಳೇ ಬಾಧ್ಯಸ್ಥರು.

ಹಸಿರು ಬತ್ತದ ಹೊಲಗಳನ್ನು ... ಮೀನು/ಸೀಗಡಿಗಳ ಕೆರೆಗಳನ್ನಾಗಿ ಬದಲಾಯಿಸಿ, ನೀರಿನಲ್ಲಿ ಆಡಿಕೊಳ್ಳುತ್ತಿರುವ ಮೀನುಗಳನ್ನು ಹಿಡಿದು ಪೀಡಿಸುವುದು. ಅಮ್ಮನವರ ಜಾತ್ರೆ ಹೆಸರಿನಲ್ಲಿ ... ಮೂಢನಂಬಿಕೆಗಳು ... ಮೂಢವಿಶ್ವಾಸಗಳು, ಕಂದಾಚಾರಗಳು ಆಳವಾಗಿ ಬೇರೂರಿ, ಪ್ರಾಣಿಬಲಿಗಾಗಿ ಪ್ರೀತಿಯಿಂದ ಬೆಳೆಸಿದ ಕೋಳಿಗಳನ್ನು, ಮೇಕೆಗಳನ್ನು ಕಡಿದು ತಿನ್ನುವುದರಿಂದ ಅವರು ಅನೇಕ ಬಾಧೆಗಳಿಗೆ ಗುರಿ ಆಗುತ್ತಿದ್ದಾರೆ ಎಂಬುವ ಸತ್ಯವನ್ನು ಅವರಿಗೆ ತಿಳಿಯಪಡಿಸುವುದೇ "ಧ್ಯಾನ ಆಧ್ಯಾತ್ಮಿಕ ವ್ಯವಸಾಯ ಪ್ರಾಜೆಕ್ಟ್" ಮೂಲ ಗುರಿ.

"ಧ್ಯಾನ ಅಧ್ಯಾಪಕರ ಪ್ರಾಜೆಕ್ಟ್‌"

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ನೇತೃತ್ವದಲ್ಲಿ ಧ್ಯಾನ ಪ್ರಚಾರ ಮಾಡುವ ಮಾಸ್ಟರ್‌ಗಳ ಜೊತೆ ವಿದ್ಯಾರಂಗಗಳಲ್ಲಿ ವಿವಿಧ ಹಂತಗಳಲ್ಲಿ ಇರುವ ಉಪಾಧ್ಯಾಯರಿಗೆ ಸಹ ಟೀಚರ್ ಟ್ರೈನಿಂಗ್ ಕ್ಯಾಂಪುಗಳ ಮೂಲಕ ಈ ಧ್ಯಾನ ಪ್ರಚಾರ ಕಾರ್ಯಕ್ರಮಗಳು ಕೈಗೊಳ್ಳುವುದೇ "ಧ್ಯಾನ ಅಧ್ಯಾಪಕರ ಪ್ರಾಜೆಕ್ಟ್‌"

ಆತ್ಮಜ್ಞಾನದಿಂದ ಪ್ರಕಾಶಿಸುವ ಅಧ್ಯಾಪಕರು ಮಾತ್ರವೇ ವಿದ್ಯಾರ್ಥಿಯ ಆತ್ಮಸ್ಥಿತಿಯನ್ನು, ಜೀವಕಾಂತಿಯನ್ನು ಮತ್ತು ಅವನ ಜನ್ಮ ಪ್ರಣಾಳಿಕೆಯನ್ನು ಗುರ್ತಿಸಿ, ಧ್ಯಾನದ ಜೊತೆಗೆ ಒಳ್ಳೆಯ ಆತ್ಮಜ್ಞಾನದ ಅರಿವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಸತ್ಯಯುಗ ನಿರ್ಮಾಣ ಮಾಡಬಲ್ಲರು. ಆದ್ದರಿಂದ, ಈ ಸಮಾಜದಲ್ಲಿ "ಗುರು ಬ್ರಹ್ಮ" ಎನ್ನುತ್ತಾ ಅಧ್ಯಾಪಕನನ್ನು ಒಬ್ಬ ದೇವರ ಹಾಗೆ ಗೌರವಿಸುತ್ತಾ "ಧ್ಯಾನ ಅಧ್ಯಾಪಕರ ಪ್ರಾಜೆಕ್ಟ್‌" ಮೂಲಕ ಶಿಕ್ಷಕರೆಲ್ಲರಿಗೂ ಧ್ಯಾನ ಪ್ರಚಾರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ... ನಮ್ಮ ಪಿರಮಿಡ್ ಮಾಸ್ಟರ್‌ಗಳು

"ಧ್ಯಾನ ಮಹಿಳಾ ಪ್ರಾಜೆಕ್ಟ್‌"

ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೊ ಅಲ್ಲಿ ಸರ್ವಶುಭಗಳು ಸಿದ್ಧಿಸುತ್ತದೆ. ಆದ್ದರಿಂದ, ಸಮಾಜದಲ್ಲಿ ಅರ್ಧಭಾಗ ಇರುವ ಮಹಿಳೆಯರಿಗಾಗಿ "ಧ್ಯಾನ ಮಹಿಳಾ ಪ್ರಾಜೆಕ್ಟ್" ಮೂಲಕ ಧ್ಯಾನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ತ್ರೀ ಶಕ್ತಿಯನ್ನು ಸಂಪೂರ್ಣವಾಗಿ ವಿನಿಯೋಗಿಸಿಕೊಳ್ಳಲಾಗುವ ಸಮಾಜವೇ ... ಸಂಪೂರ್ಣ ಸಮಾಜ. ಆದ್ದರಿಂದ, .. ಸ್ತ್ರೀಯರಲ್ಲಿ ಸುಪ್ತವಾಗಿರುವ ಅನೇಕಾನೇಕ ಸೃಜನಾತ್ಮಕ ಶಕ್ತಿಗಳನ್ನು ಈ ಧ್ಯಾನದ ಮೂಲಕ ಹೊರತರಲಾಗುತ್ತಿದೆ. ಸ್ತ್ರೀಯರಲ್ಲಿರುವ ಪ್ರೇಮ, ಕರುಣೆ, ದ, ಸಹನೆ ಮುಂತಾದ ದಿವ್ಯಲಕ್ಷಣಗಳು ಮಾತ್ರವೇ ಪ್ರಸ್ತುತ ಕ್ಲಿಷ್ಟಪರಿಸ್ಥಿತಿಗಳಲ್ಲಿ ಸಮಾಜವನ್ನು ರಕ್ಷಿಸಬಲ್ಲ ದಿವ್ಯಾಯುಧಗಳು. ಆದ್ದರಿಂದ, ಅನೇಕಾನೇಕ ಱಧ್ಯಾನ ಮಹಿಳಾ ವಿಜಯೋತ್ಸವಗಳುಱ ನಿರ್ವಹಿಸುತ್ತಾ ಸ್ತ್ರೀಯರ ಜೊತೆ ಪುರುಷರಲ್ಲಿ ಕೂಡಾ ಸುಪ್ತವಾಗಿ ಅಡಗಿರುವ ಸ್ತ್ರೀತ್ವದ ದಿವ್ಯಲಕ್ಷಣಗಳನ್ನು ಹೊರಗೆ ತರುತ್ತಿದೆ ಈ "ಧ್ಯಾನ ಮಹಿಳಾ ಪ್ರಾಜೆಕ್ಟ್".. ಇದರ ಅಂಗವಾಗಿಯೇ, ಪ್ರಪಂಚದಲ್ಲಿ ಮೊದಲನೆಯ ಬಾರಿ, ಪೂರ್ತಿಯಾಗಿ ಮಹಿಳೆಯರಿಂದ ನಿರ್ವಹಿಸಲಾಗುವ "ದಿ ವೈಜಾಗ್ ಪಿರಮಿಡ್ ಟ್ರಸ್ಟ್‌" ಆರಂಭಿಸಿ, ಬ್ರಹ್ಮರ್ಷಿ ಪತ್ರೀಜಿ ಮಹಿಳೆಯರನ್ನು ಇನ್ನೂ ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದಾರೆ.

"ಧ್ಯಾನ ಯುವಜನತೆ ಪ್ರಾಜೆಕ್ಟ್-ಪೈಮಾ"

ಮೂಢನಂಬಿಕೆಗಳು, ಕಂದಾಚಾರಗಳು, ಹರಟೆ ಪುರಾಣಗಳು ಮತ್ತು ಮತಾಚಾರಗಳು ಯುವಜನತೆಯನ್ನು ಯುಗಯುಗಗಳಿಂದ ನಿರ್ವೀರ್ಯರನ್ನಾಗಿ ಮಾಡುತ್ತಿವೆ. ಯುವಜನತೆಯಲ್ಲಿ ಸಹಜವಾಗಿ ಇರಬೇಕಾದ ಆತ್ಮವಿಶ್ವಾಸದ ಮೇಲೆ ಎಲ್ಲಾ ಕಡೆಯಿಂದ ಅಜ್ಞಾನದ ದಾಳಿಗಳು ನಡೆದು ಯುವಜನತೆ ಎಲ್ಲಾ ಕೈಲಾಗದೆ ಇರುವ ದಡ್ಡರ ಹಾಗೆ, ಚಲನೆ ಇಲ್ಲದ ನಿಷ್ಕ್ರಿಯರಾಗಿ ತಮ್ಮ ಜನ್ಮಗಳನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಆತ್ಮಜ್ಞಾನದ ನ್ಯೂನತೆಯಿಂದ ಮುಳುಗಿ ಹೋಗುತ್ತಿರುವ ಯುವಜನತೆಗೆ ಸರಿಯಾದ ಆಧ್ಯಾತ್ಮಿಕ ಮಾರ್ಗವನ್ನು ತೋರಿಸಿ, ಅವರ ಕತ್ತಲೆಯ ಬದುಕಿನಲ್ಲಿ "ನವೀನ ಆಧ್ಯಾತ್ಮಿಕ ಬೆಳಕನ್ನು" ಬ್ರಹ್ಮರ್ಷಿ ಪತ್ರೀಜಿಯವರು ತುಂಬಿದರು.

ಯುವಕರಲ್ಲಿ ಯುವಕನ ಹಾಗೇ "ಕ್ಯಾಚ್ ಪೀಪಲ್ ಯಂಗ್" ಎನ್ನುತ್ತಾ ಮೊಳಕೆ ದೆಸೆಯಲ್ಲೇ ಯುವಜನರಿಗೆ ಸತ್ಯ, ಧರ್ಮ ಎಂಬುದನ್ನು ತಿಳಿಯಪಡಿಸುತ್ತಾ ಅವರನ್ನು ನಾಯಕರನ್ನಾಗಿ ಬೆಳೆಸುತ್ತಿರುವ ಬ್ರಹ್ಮರ್ಷಿ ಪತ್ರೀಜಿಗೆ ಪೈಮಾ ಲೋಕ ಶಿರಬಾಗಿ ಧನ್ಯವಾದಗಳನ್ನು ತಿಳಿಸುತ್ತಿದೆ!!

"ಧ್ಯಾನ ಖೈದಿ ಪ್ರಾಜೆಕ್ಟ್‌"

ತಪ್ಪು ಮಾಡಿದವನನ್ನು ಸಂಘದಿಂದ ಬಹಿಷ್ಕರಿಸಿ ತನ್ನವರಿಗೆ ದೂರವಾಗಿ.. ಜೈಲಿನಲ್ಲಿ ಖೈದಿಯಾಗಿ ಇಡುವುದರಿಂದ, ಆತನಲ್ಲಿ ತನ್ನ ಕುರಿತು ಆಲೋಚನೆಗಳು ಪ್ರಾರಂಭವಾಗಿ, ತನ್ನ ಪ್ರಸ್ತುತ ಸ್ಥಿತಿಗೆ ಮೂಲಕಾರಣಗಳನ್ನು ಹುಡುಕಿಕೊಂಡು ಮಾನಸಿಕ ಪರಿವರ್ತನೆ ಬರಬೇಕೆಂದು ನ್ಯಾಯಾಲಯಗಳು ಅವರಿಗೆ ಜೈಲುಶಿಕ್ಷೆ ವಿಧಿಸುತ್ತಿವೆ.

ಆದರೆ, ಅವರು ಆ ಖಾಲಿ ಸಮಯಗಳಲ್ಲಿ, ಮಾಡಲು ಏನೂ ಕೆಲಸವಿಲ್ಲದೆ, "idle man's mind is a devils's workshop" ತರಹ ಅಲ್ಲಿರುವ ಇತರೆ ಖೈದಿಗಳ ಜೊತೆ ಸೇರಿ ಇನ್ನೂ ಹೊಸ ಹೊಸ ದುರ್ಮಾರ್ಗದ ಯೋಚನೆಗಳನ್ನು ಮಾಡುತ್ತಾ... ಹೊರಗೆ ಬಂದ ತಕ್ಷಣ ಸರ್ಕಾರಕ್ಕೆ ಸವಾಲಾಗಿ ಮತ್ತು ಸಮಾಜಕ್ಕೆ ಕಂಟಕರಾಗಿ ಬದಲಾಗುತ್ತಿದ್ದಾರೆ. "ಇವರನ್ನು ಯಾವ ರೀತಿಯಲ್ಲಿ ಸುಧಾರಿಸಬೇಕು?" ನಿಜಕ್ಕು ಅವರನ್ನು ಅವರು ತಿಳಿದುಕೊಳ್ಳುವಹಾಗೆ, ಹೇಗೆ ಆತ್ಮದರ್ಶನ ಮಾಡಿಸುವುದು?ಎಂದು ಯೋಚಿಸಿದ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ "ಧ್ಯಾನ ಖೈದಿ ಪ್ರಾಜೆಕ್ಟ್‌" ಮೂಲಕ ರಾಜ್ಯದಲ್ಲಿರುವ ವಿವಿಧ ಕಾರಾಗಾರಗಳಲ್ಲಿ, ಮೇಲಧಿಕಾರಿಗಳ ಅನುಮತಿ ಪಡೆದು, ೪೦ ದಿನಗಳ ಧ್ಯಾನ ಮಂಡಲ ದೀಕ್ಷೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಆಂಧ್ರಪ್ರದೇಶದ ವರಂಗಲ್ ಸೆಂಟ್ರಲ್ ಜೈಲ್, ರಾಜಮಂಡ್ರಿ ಜೈಲ್, ಜನಗಾಂ ಸಬ್ ಜೈಲ್, ಕರೀಂನಗರ್ ಜಿಲ್ಲಾ ಕಾರಾಗೃಹ, ಖಮ್ಮಂ ಸಬ್ ಜೈಲ್, ಜನಗಾಮ್ ಸಬ್ ಜೈಲ್, ಚರ್ಲಪಲ್ಲಿ ಜೈಲ್ ಅಲ್ಲದೆ, ರಾಜ್ಯವ್ಯಾಪಿ ಇರುವ ಇಂತಹ ಬೇರೆ ಬೇರೆ ಕಾರಾಗೃಹಗಳಲ್ಲಿ ಅನೇಕ ಧ್ಯಾನ ಯಜ್ಞಗಳನ್ನು ನಿರ್ವಹಿಸಿ ಒಳ್ಳೆಯ ಆತ್ಮಜ್ಞಾನದಿಂದ ಕೂಡಿರುವ ಪುಸ್ತಕಗಳನ್ನು ಖೈದಿಗಳಿಗೆ ಉಚಿತವಾಗಿ ಸಿಗುವಹಾಗೆ ಮಾಡುತ್ತಿದ್ದಾರೆ.

ಈ ಪ್ರಾಜೆಕ್ಟ್ ಅಂಗವಾಗಿ ಅನೇಕ ಖೈದಿಗಳು ತಮ್ಮಲ್ಲಿ ದೊಡ್ಡ ಬದಲಾವಣೆಯನ್ನು ತಂದುಕೊಂಡು ಜೈಲ್‌ನಿಂದ ಬಿಡುಗಡೆ ಆದನಂತರ .... ಹೊರಪ್ರಪಂಚದಲ್ಲಿ ಕೂಡ ಧ್ಯಾನ ಪ್ರಚಾರಗಳನ್ನು ಕೈಗೊಂಡು, ತುಂಬಾ ಗೌರವದಿಂದ ಬಾಳ್ವೆ ನಡೆಸುತ್ತಿದ್ದಾರೆ... ಜೈಲರ್‌ಗಳ ಮತ್ತು ಪೊಲೀಸ್‌ಗಳ ಅಧಿಕಾರಿಗಳ ಮನ್ನಣೆಯನ್ನು ಪಡೆಯುತ್ತಿದ್ದಾರೆ... ಮತ್ತು ವರಂಗಲ್ ಸೆಂಟ್ರಲ್ ಜೈಲಿನಲ್ಲಿ ಱವಾಲ್ಮೀಕಿ ಪಿರಮಿಡ್‌ಱ ನಿರ್ಮಾಣ ಕೂಡಾ ನಡೆದಿದೆ! ಅಲ್ಲಿಯ ಖೈದಿಗಳು ಮತ್ತು ಪಿರಮಿಡ್ ಮಾಸ್ಟರ್‌ಗಳು ಎಲ್ಲರೂ ಈ ಧ್ಯಾನ ಖೈದಿ ಪ್ರಾಜೆಕ್ಟ್‌ಗೆ ಬೆನ್ನುಲುಬಾಗಿ ನಿಂತು ಅನೇಕ ಕಾರ್ಯಕ್ರಮಗಳನ್ನು ವಿಶೇಷವಾಗಿ ನಿರ್ವಹಿಸುತ್ತಿದ್ದಾರೆ .

Go to top