ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿಯ ಲಾಂಛನ

"ಇದರ ಅರ್ಥವೇನು?"

 

ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯೂ ಸಹ ಶಕ್ತಿ-ಚೈತನ್ಯ (Energy), ಪ್ರಜ್ಞೆ (Consciousness) ಮತ್ತು ವಿವೇಕಗಳ (Wisdom) ಒಂದು ಸಮೂಹ!

ಆದರೆ, ಈ ಮೂರರ ಭಾಗಾಂಶಗಳ (ಪ್ರಮಾಣಗಳ) ವ್ಯತ್ಯಾಸದಿಂದ, ಬೇರೆ ಬೇರೆ ಜೀವಿಗಳು, ಬೇರೆ ಬೇರೆ ಸಾಮರ್ಥ್ಯದಲ್ಲಿ ಸಹ ವಿಭಿನ್ನತೆ ಉಂಟಾಗಿದೆ. ನಾವು ಕ್ರಮೇಣ ನಮ್ಮ ಶಕ್ತ್ತಿಯನ್ನು, ಜ್ಞಾನವನ್ನು ವೃದ್ಧಿಗೊಳಿಸಿ, ಅದರಿಂದ ಅವುಗಳಿಗೆ ಆಧಾರವಾದ ಪೂರ್ಣಚೈತನ್ಯವನ್ನು, ಆತ್ಮಾನಂದವನ್ನು ಪಡೆಯಬೇಕು.

ತ್ರಿಭುಜಾಕಾರ ಮಧ್ಯೆಯಲ್ಲಿರುವ ಚಿಹ್ನೆಗಳಿಗೆ ಅರ್ಥ ಹೀಗಿದೆ: ಕೆಳಗಿನಿಂದ ಕ್ರಮವಾಗಿ ಸ್ವಾಧ್ಯಾಯ-ಧ್ಯಾನ. ಇವುಗಳ ಆಧಾರದ ಮೇಲೆ ಮೇಲಿರುವ 'ಜ್ಯೋತಿ' ಅಂದರೆ, ಪೂರ್ಣಾತ್ಮ ಸಾಕ್ಷಾತ್ಕಾರವನ್ನು ಸಾಧಿಸಬೇಕು!

ಇದೇ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಪ್ರಾಮಾಣಿಕ ಸಂಕೇತ, ಲಾಂಛನದ (ಎಂಬ್ಲಮ್) ಅರ್ಥ.

 

ಸೊಸೈಟಿ ಲಾಂಛನ

ಸೊಸೈಟಿ ಲಾಂಛನದಲ್ಲಿ ಈ ಕೆಳಗಿನ ವಿಶೇಷಗಳಿವೆ.

೧.ತ್ರಿಭುಜ ೨. ತ್ರಿನೇತ್ರದಿಂದ ಇರುವ ಧ್ಯಾನಿ

೩. ಪದಗಳು - Energy - ಶಕ್ತಿ-ಚೈತನ್ಯ, Consciousness - ಪ್ರಜ್ಞೆ, Wisdom - ವಿವೇಕ

ಪೂರ್ಣಾತ್ಮಕ್ಕೆ ಪ್ರತೀಕ ಈ ತ್ರಿಭುಜ, ಈ ಕೆಳಗಿರುವ ಭೂಮಿಯ ಮೇಲಿರುವ ಜೀವಾತ್ಮಕ್ಕೆ ಪೂರ್ಣಾತ್ಮದಿಂದ ಸಂಪೂರ್ಣ ಜ್ಞಾನವನ್ನು ಹೊಂದುವುದೇ ಆಧ್ಯಾತ್ಮಿಕ ಶಾಸ್ತ್ರದ ಮುಖ್ಯವಾದ ಉದ್ದೇಶ. ಈ ಪೂರ್ಣಾತ್ಮ " Three in one " ತರಹದವನು. ಈ ಪೂರ್ಣಾತ್ಮ ಮಾಡುವವನನ್ನು, ತಿಳಿದುಕೊಳ್ಳುವವನನ್ನು, ಆಲೋಚಿಸುವವನನ್ನು ಹೊಂದಿರುತ್ತದೆ. ’ಪೂರ್ಣಾತ್ಮ’ದಿಂದ ಪಾತ್ರವಹಿಸುವವನು ಈ ಭೂಮಿಯ ಮೇಲೆ ’ಜೀವಾತ್ಮ’ ರೂಪದಲ್ಲಿ ಬರುತ್ತದೆ. ಈ ಪೂರ್ಣಾತ್ಮನನ್ನು " ಸೈಖ್ Psyche " ಎಂದು ಸಹ ಕರೆಯುತ್ತಾರೆ. ಧ್ಯಾನದಲ್ಲಿ ನಮ್ಮ ಪೂರ್ಣಾತ್ಮನನ್ನು " ಸದಾ ಕದಲುತ್ತಿರುವ... Pulsating... " ತ್ರಿಭುಜವಾಗಿ, 3-D ಪಿರಮಿಡ್‌ನ ಹಾಗೆ ಒಂದು ಕೋನದಲ್ಲಿ ನೋಡುತ್ತೇವೆ.

ಲಾಂಛನದಲ್ಲಿ ಧ್ಯಾನ ಮಾಡುತ್ತಿರುವ ವ್ಯಕ್ತಿಯನ್ನು ಚಿತ್ರೀಕರಿಸಿದ್ದಾರೆ. ಸೊಸೈಟಿಯ ಮುಖ್ಯ ಉದ್ದೇಶ ಧ್ಯಾನ ಪ್ರಚಾರ! ದಿವ್ಯಜ್ಞಾನ ಪ್ರಕಾಶಕ್ಕೆ Highest Enlightenment ಮಾರ್ಗ ಧ್ಯಾನದಿಂದಲೇ ಸಾಧ್ಯವಾಗುತ್ತದೆ.

ಈ ಚಿತ್ರದಲ್ಲಿರುವ ಧ್ಯಾನಿ ಭೂ-ಭೌತಿಕ ಮಟ್ಟಕ್ಕಿಂತಾ ಮೇಲ್ಮಟ್ಟದಲ್ಲಿದ್ದಾನೆ. ಏಕೆಂದರೆ, ಧ್ಯಾನ ಮಾಡಿದರೆ, ಧ್ಯಾನದಲ್ಲಿ ನಾವು ಭೂಮಿಯ ಆಕರ್ಷಣೆಯನ್ನು ದಾಟಲು ಅನುಕೂಲವಾದ ಶರೀರಧಾರಿಗಳಾಗುತ್ತೇವೆ. ಧ್ಯಾನದಲ್ಲಿ ಸ್ಥೂಲಶರೀರದಿಂದ ಸೂಕ್ಷ್ಮಶರೀರಗಳು ಬಿಡುಗಡೆಯಾಗಿ, ಅನಾಯಾಸವಾಗಿ ಸ್ವತಂತ್ರವಾಗಿ ಪ್ರಯಾಣಿಸುತ್ತವೆ. ಸೂಕ್ಷ್ಮಶರೀರಯಾನ ಎನ್ನುವುದು ಸಾಧಿಸಬೇಕಾದ ಮಹಾ ಗುರಿಗಳಲ್ಲಿ ಒಂದು.

ಧ್ಯಾನ ಎಂದರೆ ಅಂತರೇಂದ್ರಿಯಗಳನ್ನು ಚೈತನ್ಯಗೊಳಿಸುವುದು! ನಮ್ಮ ಅಂತರೇಂದ್ರಿಯಗಳ ಸಂಪೂರ್ಣತಾ ಚಿಹ್ನೆಯೇ ತ್ರಿನೇತ್ರ/ದಿವ್ಯಚಕ್ಷುವು.

ಧ್ಯಾನದಲ್ಲಿ ನಿಧಾನಕ್ಕೆ ದಿವ್ಯಚಕ್ಷುವು ಉತ್ತೇಜಿತವಾಗಿ, ಅದರ ಅತ್ಯುನ್ನತ ಹಂತದಲ್ಲಿ ಆಕಾಶಿಕ್ ರೆಕಾರ್ಡ್ಸ್‌ನ್ನು ಸ್ಪಷ್ಟವಾಗಿ ನೋಡಬಹುದು. ಅಂದರೆ, ಪರಿಪೂರ್ಣ ದಾರ್ಶನಿಕತೆ; ಅಂದರೆ, ದಿವ್ಯದೃಷ್ಟಿಯನ್ನು ಹೊಂದುವುದು ಎಂದರ್ಥ. ಋಷಿ ಅಂದರೆ, ’ದೃಷ್ಟ’. ಅಂದರೆ, ದಿವ್ಯದೃಷ್ಟಿ ಹೊಂದಿರುವವನು. ಅವನು ಏನನ್ನು ದರ್ಶಿಸುತ್ತಾನೆ? ಅವನು ಮಹತ್ತರವಾದ ಅತೀತ ಸ್ಥಿತಿಯನ್ನು ನೋಡುತ್ತಾನೆ. ಈ ಸೃಷ್ಟಿಯಲ್ಲಿ ಇತರ ಆವರ್ತನದಲ್ಲಿರುವ (ಫ್ರೀಕ್ವೆನ್ಸಿಯಲ್ಲಿರುವ) ಅನೇಕ ವಿಶ್ವಗಳನ್ನು ದರ್ಶಿಸಬಲ್ಲನು. ಈ ಭೂತಲದಲ್ಲಿ ನಡೆಯುವ ಎಲ್ಲಾ ಕಾರ್ಯಗಳನ್ನು ಅದರ ಹಿಂದಿರುವ ಕಾರಣಗಳನ್ನು ತುಂಬಾ ಸ್ಪಷ್ಟವಾಗಿ ನೋಡಬಲ್ಲನು.

ಅವನು ಹೇಗೆ ನೋಡಬಲ್ಲನು? ಆತನು ತನ್ನ ದಿವ್ಯನೇತ್ರದಿಂದ ನೋಡಬಲ್ಲನು. ಈ ದಿವ್ಯನೇತ್ರವನ್ನು ಸಂಪಾದಿಸುವುದೇ ಅಭಿವೃದ್ಧಿ ಸಾಧಿಸಿದ ಆತ್ಮಗಳು ಮಾಡಬೇಕಾದ ಮುಖ್ಯವಾದ ಗುರಿಸಾಧನೆ.


ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯೂ ಸಹ ’ಶಕ್ತಿ-ಚೈತನ್ಯ’, ’ಪ್ರಜ್ಞೆ’ ಮತ್ತು ’ವಿವೇಕ’ಗಳ ಸಮೂಹವೇ! ಆದರೆ, ಈ ಮೂರು ಭಾಗಗಳ ಪ್ರಮಾಣದಲ್ಲಿರುವ ವ್ಯತ್ಯಾಸಗಳಿಂದ ಜೀವಗಳ ಸಾಮರ್ಥ್ಯ ವ್ಯಕ್ತವಾಗುತ್ತದೆ.

ನಾವು ಕ್ರಮೇಣ ನಮ್ಮ ಶಕ್ತಿಯನ್ನೂ, ಜ್ಞಾನವನ್ನೂ ಬೆಳಸಿಕೊಂಡು, ಅದರಿಂದ ಅದಕ್ಕೆ ಆಧಾರವಾದ ಚೈತನ್ಯವನ್ನೂ, ಆತ್ಮಾನಂದವನ್ನೂ ಪಡೆಯಬೇಕು.

ತ್ರಿಭುಜಾಕಾರ ನಡುವೆ ಇರುವ ಚಿಹ್ನೆಗಳಿಗೆ ಅರ್ಥವೇನೆಂದರೆ, ಕೆಳಗಿನಿಂದ ಮೊದಲನೆಯದಾಗಿ, ಪುಸ್ತಕಗಳೆಂದರೆ ಸ್ವಾಧ್ಯಾಯ; ಎರಡನೆಯದು ಕುಳಿತುಕೊಂಡಿರುವ ಧ್ಯಾನಿ ಮತ್ತು ಧ್ಯಾನ. ಇದರ ಆಧಾರವಾಗಿ ಮೇಲಿರುವ ಜ್ಯೋತಿಯನ್ನು ಎಂದರೆ ಪೂರ್ಣಾತ್ಮನನ್ನು ತಲುಪಬೇಕು. ಅಂದರೆ, ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಬೇಕು.

* * *

ನಾವೆಲ್ಲಾ ಶಕ್ತಿ-ಚೈತನ್ಯ, ಪ್ರಜ್ಞೆ ಮತ್ತು ವಿವೇಕಗಳ ಸಮೂಹವೆ! ಈ ಅಸ್ತಿತ್ವ ಒಟ್ಟಾರೆಯಾಗಿ ಕೂಡಾ ಈ ಮೂರೇ! ಅಂದರೆ, ಶಕ್ತಿ-ಚೈತನ್ಯ, ಪ್ರಜ್ಞೆ ಮತ್ತು ವಿವೇಕಗಳ ಸಮೂಹಮಯವೇ! ಅಷ್ಟೇ ವಿನಹ ಮತ್ತೇನು ಅಲ್ಲ. ಈ ಮೂರು ಸುಮಾರು ಸರಿಸಮವಾಗಿ ಪರಸ್ಪರ ಅಂಟಿಕೊಂಡಿವೆ.

ನಾವು ಎಷ್ಟು ಶಕ್ತಿವಂತರಾದರೆ ಅಷ್ಟು ಚೈತನ್ಯವಂತರಾಗುತ್ತೇವೆ. ತಕ್ಷಣವೆ ಜ್ಞಾನವನ್ನು ಹೊಂದುತ್ತೇವೆ. ನಮಗೆ ಹೆಚ್ಚು ಜ್ಞಾನವಿದ್ದರೇ, ಇನ್ನೂ ಅಧಿಕವಾಗಿ ಚೈತನ್ಯವಂತರಾಗುತ್ತಾ, ಇನ್ನೂ ಹೆಚ್ಚಾಗಿ ಶಕ್ತಿವಂತರಾಗುತ್ತೇವೆ. ಹಾಗೆಯೇ ಉಳಿದ ವಿಷಯಗಳಲ್ಲಿ ಸಹ.

ಜನ್ಮಪರಂಪರೆಗಳ ಪರಮಾರ್ಥ ನಮ್ಮ ಶಕ್ತಿಯನ್ನು, ಚೈತನ್ಯವನ್ನು, ಜ್ಞಾನವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿಯೇ! ಅದೇ ವಿಕಸನ (ಪ್ರಗತಿ) ಕ್ರಮ!

Go to top