"ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್"

  

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟನ್ನು ಬ್ರಹ್ಮರ್ಷಿ ಪತ್ರೀಜಿಯವರು ಸ್ಥಾಪಿಸಿದ್ದಾರೆ. ಹಳೆಯ ಮತಗಳಿಂದ ಬೇರ್ಪಟ್ಟು ಹೊಸ ನವ ಆಧ್ಯಾತ್ಮಿಕ ವಿಭಾಗವನ್ನು, ಸಸ್ಯಾಹಾರದ ವಿಶಿಷ್ಟತೆಯನ್ನು ಮತ್ತು ಪಿರಮಿಡ್ ಶಕ್ತಿಯ ಜಾಗೃತಿಯನ್ನು ಪ್ರಪಂಚದಾದ್ಯಂತ ಎಲ್ಲರಿಗೂ ತಿಳಿಯುವ ಹಾಗೆ ಮಾಡುವುದೇ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ನ ಗುರಿ. ಈ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ವಿಶ್ವಾದ್ಯಾಂತ ನವ ಯುಗ ಆಧ್ಯಾತ್ಮಿಕ ಕ್ರಾಂತಿಯಲ್ಲಿ ಭಾಗವಾಗಿದೆ. ಈ ಕ್ರಾಂತಿಯು ಸಮಸ್ತ ಮಾನವಕುಲವನ್ನು ಅಹಿಂಸ ಮತ್ತು ಸಸ್ಯಾಹಾರದ ಕಡೆಗೆ ನಡೆಸುತ್ತಾ ಎಲ್ಲರನ್ನೂ ಮಾಸ್ಟರ್‌ಗಳಾಗಿ ತಯಾರಿಸುವುದಕ್ಕೆ ಆರಂಭಿಸಲಾಗಿದೆ.

Go to top