" ಈ - ಬುಕ್ಸ್ "


" ಆನಾಪಾನಸತಿ "

" ಆನಾಪಾನಸತಿ " ಎಂಬುದು ಗೌತಮ ಬುದ್ಧ 2500 ವರ್ಷದ ಹಿಂದೆ ಪಾಳಿ ಭಾಷೆಯಲ್ಲಿ ಉಪಯೋಗಿಸಿದ ಪದ. ಪಾಳಿ ಭಾಷೆಯಲ್ಲಿ 'ಆನ' ಎಂದರೆ 'ಉಚ್ಛ್ವಾಸ', 'ಅಪಾನ' ಎಂದರೆ 'ನಿಶ್ವಾಸ', 'ಸತಿ' ಎಂದರೆ 'ಕೂಡಿಕೊಂಡಿರುವುದು'.

ಆದುದರಿಂದ, ಆನಾಪಾನಸತಿ ಅಂದರೆ 'ಶ್ವಾಸದೊಂದಿಗೆ ನಾವು ಕೂಡಿಕೊಂಡಿರುವುದು' ಅಥವ 'ಶ್ವಾಸದ ಮೇಲೆ ಗಮನ'. ಈ ಆನಾಪಾನಸತಿ ಎಂಬುದು ಎಲ್ಲಾ ಋಷಿಗಳು ಮತ್ತು ಎಲ್ಲಾ ಯೋಗಿಗಳು ನೀಡಿರುವ ಒಂದು ಅದ್ಭುತವಾದ ವರ

ಆನಾಪಾನಸತಿ - ಸರ್ವರೋಗ ನಿವಾರಿಣಿ

ಆನಾಪಾನಸತಿ - ಸರ್ವಭೋಗಕಾರಿಣಿ

ಆನಾಪಾನಸತಿ - ಸರ್ವಜ್ಞಾನ ಪ್ರಸಾದಿನಿ


" ಆರೋಗ್ಯ ಒಂದು ದಿವ್ಯ ವರ "

ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವುದು ಮೌಲಿಕವಾಗಿ, ಮೂಲಭೂತವಾಗಿ ಶಾರೀರಿಕ ಆರೋಗ್ಯ. ಮನುಷ್ಯನ ಜೀವನವೆಲ್ಲಾ ಭೌತಿಕತೆಯ ಮೇಲೆ, ಭೌತಿಕ ಶರೀರದ ಮೇಲೆ ಆಧಾರಪಟ್ಟಿದೆ. ಭೌತಿಕ ಶರೀರವಾಗಿಯೇ ಇಲ್ಲಿ ವಿರಾಜಿಸುತ್ತಿದ್ದಾನೆ.

ಆದಕಾರಣ, ಈ ಭೌತಿಕ ಶರೀರ ಯಾವಾಗಲೂ ಆರೋಗ್ಯವಾಗಿಯೂ, ಶಕ್ತಿವಂತವಾಗಿಯೂ, ಚುರುಕಾಗಿಯೂ ಇದ್ದರೇನೇ ಮಾನವನ ಜೀವನ ಆರಾಮವಾಗಿ, ಆನಂದವಾಗಿ ಸುಖವಾಗಿ ಇರುತ್ತದೆ. ಶರೀರವನ್ನು ಕುರಿತು ಸರಿಯಾದ ಅರಿವು ಅಂದರೆ ಈ ಭೌತಿಕ ಕಾಯವೆಂದರೆ ಏನೆಂದು ಯಾವಾಗ ಮನುಷ್ಯನಿಗೆ ತಿಳಿಯುತ್ತದೆಯೋ, ಆಗಲೇ ಅದ್ಭುತವಾಗಿ ತನ್ನ ಆರೋಗ್ಯವನ್ನು ತಾನೇ ರಕ್ಷಿಸಿಕೊಂಡು, ಬೆಳೆಸಿಕೊಂಡು ಶಕ್ತಿವಂತನಾಗಿ ತನಗೆ ತಾನು ಇರಬಹುದು. ಎಷ್ಟು ವರ್ಷಗಳಾದರೂ, ಎಷ್ಟು ಯುಗಗಳಾದರೂ ಬದುಕಬಲ್ಲನು.


"ಆನಂದವೇ ಬ್ರಹ್ಮ"

ಮಾನವನ ಜೀವನವು ಏತಕ್ಕಾಗಿದೆ? ಅದು ಮೌಲಿಕವಾದ ಪ್ರಶ್ನೆ. ನಾವು ಏತಕ್ಕಾಗಿ ಬದುಕಬೇಕು? ನಾವು ಏತಕ್ಕಾಗಿ ಬದುಕುತ್ತಿದ್ದೇವೆ? ಈ ಜೀವನ ಏತಕ್ಕಾಗಿದೆ? ಈ ಚಿತ್ರವಿಚಿತ್ರವಾದ ಪ್ರಕೃತಿಯ ನಿರ್ಮಾಣವು ಏತಕ್ಕಾಗಿ? ಇಷ್ಟೆಲ್ಲಾ ಬಗೆಬಗೆಯ ಜೀವರಾಶಿಗಳು ಏಕೆ? ಈ ಸೃಷ್ಟಿ ಕಾರ್ಯವು ಹೇಗಾಗುತ್ತಿದೆ? ಇವೆಲ್ಲಾ ಮೊಲಭೂತ ಪ್ರಶ್ನೆಗಳು. ಎಷ್ಟೋ ಜನ ಮೇಧಾವಿಗಳು, ಎಷ್ಟೋ ಜನ ಯೋಗಿಗಳು, ಋಷಿಗಳು, ದಾರ್ಶನಿಕರು ಎಲ್ಲರೂ ಯುಗಯುಗಳಿಂದ ಈ ಬಗೆಯ ಪ್ರಶ್ನೆಗಳನ್ನು ಕೇಳಿಕೊಂಡು, ಅನೇಕ ರೀತಿಯ ಪರಿಶೋಧನೆಗಳನ್ನು ಮಾಡಿ, ಧ್ಯಾನ ಸಾಧನೆಯನ್ನು ಮಾಡಿ, ಜ್ಞಾನ ಚರ್ಚೆಯನ್ನು ಮಾಡಿ ತಿಳಿದುಕೊಂಡ ಮೌಲಿಕ ಸಮಾಧಾನವೇನೆಂದರೆ 'ಈ ಜೀವನವೆಂಬುದು ಆನಂದದಿಂದ ಇರಲು, ನಿತ್ಯವು ಸುಖವಾಗಿ ಇರಲು' ಎಂಬುದೇ ಇವರೆಲ್ಲರೊ ಸಹ ತಿಳಿದುಕೊಂಡ ಪರಮಸತ್ಯವಾಗಿದೆ. ಭಾರತದೇಶದ ವೇದಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದುದು 'ಆನಂದ'ವಾದ್ದರಿಂದ 'ಆನಂದವೇ ಬ್ರಹ್ಮ' ಎಂದು ಹೇಳಲಾಗಿದೆ. ಯಾವಾಗಲೂ ಆನಂದದಿಂದ ಇರುವುದೇ ಅತ್ಯಂತ ಶ್ರೇಷ್ಠವಾದುದು ಎಂದು: 'ಆನಂದವೇ ಬ್ರಹ್ಮ' ಎಂಬುದಾಗಿ ವೇದಗಳು ನಮಗೆ ಬೋಧಿಸುತ್ತವೆ. "ಅನುಕ್ಷಣವೂ, ಪ್ರತಿ ಸಂದರ್ಭದಲ್ಲೂ, ಎಲ್ಲಾ ಸ್ಥಿತಿಗಳಲ್ಲೂ, ಯಾವ ರೀತಿಯಾಗಿ ಆನಂದದಿಂದ ಜೀವಿಸಬೇಕು" ಎಂಬುದನ್ನು ಆನಂದ ಶಾಸ್ತ್ರವು ಬೋಧಿಸುತ್ತದೆ.


" ಧ್ಯಾನಾನುಭವಗಳು "

ಧ್ಯಾನ ಮಾಡಿದರೆ ಧ್ಯಾನಾನುಭವಗಳು ಬರುತ್ತವೆ. ಹ್ಯೆದರಾಬಾದ್ ಹೋದರೆ ಹ್ಯೆದರಾಬಾದ್ ಅನುಭವಗಳು ಬರುತ್ತವೆ, ಮುಂಬ್ಯೆಗೆ ಹೋದರೆ ಮುಂಬ್ಯೆ ಅನುಭವಗಳು ಬರುತ್ತವೆ, ಕೋಲ್ಕತ್ತಗೆ ಹೋದರೆ ಕೋಲ್ಕತ್ತ ಅನುಭವಗಳು ಬರುತ್ತವೆ. ಹಾಗೆಯೇ ಧ್ಯಾನ ಮಾಡಿದರೇನೆ ಧ್ಯಾನ ಅನುಭವಗಳು ಬರುತ್ತವೆ. ಹಾಯಾಗಿ ಕುಳಿತು, ಕ್ಯೆಗಳೆರಡೂ ಕ್ರಾಸ್ ಮಾಡಿಕೊಂಡು, ಕಾಲುಗಳೆರಡು ಕಟ್ಟಿಕೊಂಡು, ಬಾಯಿ ಮುಚ್ಚಿಕೊಂಡು, ಕಣ್ಣುಮುಚ್ಚಿ, ಮಸ್ತಿಷ್ಕವನ್ನು " ಸ್ವಿಚ್ ಆಫ್ " ಮಾಡಿಕೊಂಡು, ಶ್ವಾಸದ ಮೇಲೆ ಗಮನವಿಟ್ಟರೆ, ಆಲೋಚನಾರಹಿತ ಸ್ಥಿತಿಗೆ ಬಂದು ತಲುಪುತ್ತೇವೆ. ಆಗ ಧ್ಯಾನಾನುಭವಗಳು ಪ್ರಾರಂಭವಾಗುತ್ತವೆ. ಮೊದಲು ಆಲೋಚನೆಗಳು ಬರುತ್ತದೆ. ಅವನ್ನು ಆಗಿಂದಾಗಲೇ " ಕಟ್ " ಮಾಡಿ ಮತ್ತೆ " ಶ್ವಾಸದ ಮೇಲೆ ಗಮನ " ಇಡುತ್ತಿದ್ದರೆ ನಿಧಾನವಾಗಿ ಆಲೋಚನೆಗಳು ಕಡಿಮೆಯಾಗುತ್ತಾ ಕೊನೆಗೆ ಆಲೋಚನಾ-ರಹಿತ-ಸ್ಥಿತಿ ಬರುತ್ತದೆ. ಆಗ ಧ್ಯಾನಾನುಭವಗಳು ಪ್ರಾರಂಭವಾಗುತ್ತವೆ.

ಅಂತರ್ ದೃಶ್ಯಗಳು ಕಾಣಿಸುತ್ತವೆ, ಅಂತರ್ ನಾದಗಳು, ಧ್ವನಿಗಳು, ಶಬ್ಧಗಳು ಕೇಳಿಸಲಾರಂಭಿಸುತ್ತೇವೆ, ಅಂತರ್ ಯಾನ ಮಾಡುತ್ತೇವೆ. ಶರೀರ ಹಗುರವಾಗಿ ಆಗುವುದು, ಶರೀರ ಭಾರವಾದಂತಾಗುವುದು, ಬಗೆಬಗೆಯ ಬಣ್ಣಗಳು ಕಾಣಿಸುತ್ತವೆ, ಶರೀರದಲ್ಲಿನ ಎಲ್ಲಾ ಭಾಗದಲ್ಲೂ ಮುಖ್ಯವಾಗಿ ಬೆನ್ನು ಭಾಗದಲ್ಲಿ ವಿಪರೀತವಾಗಿ ನೋವುಗಳು ಬರುತ್ತವೆ, ಸೂಕ್ಮ ಶರೀರ ನೃತ್ಯ ಮಾಡಲು ಪ್ರಾರಂಭಿಸುತ್ತದೆ, ಎಲ್ಲೋ ಹಾರಿಹೋಗುತ್ತಿರುವ ಅನುಭವ ಉಂಟಾಗುತ್ತದೆ, ದಿವ್ಯಚಕ್ಷು ತೆರೆದುಕೊಳ್ಳುತ್ತದೆ.


" ಧ್ಯಾನದ ಲಾಭಗಳು "

ಧ್ಯಾನ ಮಾಡಿದರೆ ಎಲ್ಲಾ ಲಾಭಗಳೇ. ಧ್ಯಾನ ಮಾಡಿದರೆ A to Z ಎಲ್ಲಾ ಲಾಭಗಳೇ. ಧ್ಯಾನ ಮಾಡಿದರೆ ಲಕ್ಷಾಂತರ, ಕೋಟ್ಯಾಂತರ ಲಾಭಗಳು. " ಧ್ಯಾನ "ವೆಂದರೆ ಮನಸ್ಸಿಗೆ ವಿಶ್ರಾಂತಿ. ಮನಸ್ಸಿಗೆ ವಿಶ್ರಾಂತಿ ಲಭಿಸಿದಾಗ, ಶರೀರದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಆಗ ಎಲ್ಲಾ ಲಾಭಗಳೆ.

ವೃದ್ಧಾಪ್ಯದ ಛಾಯೆಯೇ ಇರದು, ಎಷ್ಟು ಬೇಕೆಂದರೆ ಅಷ್ಟು ಆಯಸ್ಸು, ಅನಾರೋಗ್ಯ ಇರುವುದಿಲ್ಲ, ಸರ್ವರೋಗ ನಿವಾರಿಣಿ, ನಿಮ್ಮನ್ನು ನೀವೇ ಚೆನ್ನಾಗಿ ನೋಡಿಕೊಳ್ಳಬಹುದು, ಕೆಟ್ಟ ಅಭ್ಯಾಸಗಳು ಹೋಗುತ್ತವೆ, ವಿದ್ಯಾರ್ಥಿಗಳಿಗೆ ಏಕಗ್ರತೆ ಹೆಚ್ಚುತ್ತದೆ, ನೆನಪಿನ ಶಕ್ತಿ ಹೆಚ್ಚುತ್ತದೆ, ಧ್ಯಾನದಿಂದ ಮನಃಶಾಂತಿ, ಕೆಲಸದಲ್ಲಿ ಕೌಶಲ್ಯ, ಭಾವೋದ್ವೇಗಗಳ ಮೇಲೆ ನಿಯಂತ್ರಣ, ಯಾವ ಪರಿಸ್ಥಿತಿಯಲ್ಲೂ ಕುಗ್ಗಿ ಹೋಗುವುದಿಲ್ಲ, ಸಮಯ ನಿರರ್ಥಕವಾಗದು, ಅನೇಕಾನೇಕ ಶರೀರಗಳು ಉತ್ತೇಜಿತವಾಗುತ್ತವೆ, ಬ್ರಹ್ಮಾನಂದ ಬರುತ್ತದೆ, ನಾವು ಬ್ರಹ್ಮರ್ಷಿ ಆಗುತ್ತೇವೆ, ಮಿತ್ರಲಾಭ ಮುಂತಾದವುಗಳನ್ನು ಹೊಂದುತ್ತೇವೆ.


" ವಾಕ್ ಕ್ಷೇತ್ರ "

ಮಾನವನ ಜೀವನ ಎಂಬುದು ತ್ರಿಕ್ಷೇತ್ರಮಯ. ಭಾವನಾ ಕ್ಷೇತ್ರ, ವಾಕ್ ಕ್ಷೇತ್ರ, ಕ್ರಿಯಾ ಕ್ಷೇತ್ರ. ವಾಕ್ ಕ್ಷೇತ್ರ ಅಂದರೆ ನಮ್ಮ ವಾಕ್ಕುಗಳ ಕ್ಷೇತ್ರ; ನಮ್ಮ ಮಾತುಗಳ ಕ್ಷೇತ್ರ. ವಾಕ್ ಗಳು ಅಂದರೆ ಆಂಗ್ಲ ಭಾಷೆಯಲ್ಲಿ words. ಜೀಸಸ್ ಕ್ರ್ಯೆಸ್ಟ್ ಹೇಳಿದ್ದಾರೆ " What goes into the mouth, that does not defileth a person but, what comes out of the mouth that defileth a person " ಎಂದಿದ್ದಾರೆ. " ಬಾಯೊಳಗೆ ಏನು ಹೋಗುತ್ತದೆಯೋ ಅದು ಮಾನವನನ್ನು ನಾಶಮಡದು, ಮಾನವ ಬಾಯಿಂದ ಯಾವುದು ಹೊರಗಡೆ ಬರುತ್ತದೆಯೋ ಅದು ಮಾನವನನ್ನು ನಾಶಮಾಡುತ್ತದೆ ". ಅಂದರೆ, ವಾಕ್ ಪ್ರಪಂಚ, ವಾಕ್ಕುಗಳು. ವಾಕ್ ಪ್ರಪಂಚವನ್ನೇ ಸರಿಪಡಿಸಿಕೊಳ್ಳಬೇಕು. ಇದೇ ಪ್ರಧಾನ ಪ್ರಬೋಧ. ಎರಡನೆಯ ಕ್ಷೇತ್ರವಾದ ವಾಕ್ ಕ್ಷೇತ್ರ, ಜ್ಞಾನಕ್ಷೇತ್ರ, ಬುದ್ಧಿಕ್ಷೇತ್ರ ಅಲ್ಲಿ ಸಂಪೂರ್ಣವಾಗಿ ಸರಿ ಮಾಡಿಕೊಳ್ಳಬೇಕು.ನಮ್ಮ ವಾಕ್ಕುಗಳು ಸತ್ಯ ವಾಕ್ಕುಗಳಾಗಿ ಇರಬೇಕು. ಶಾಸ್ತ್ರ - ಧೋರಣೆಯಲ್ಲಿ ಇರುವ ವಾಕ್ಕುಗಳಿರಬೇಕು. ನಾವು ಸರಿಯಾಗಿ ನಡೆದುಕೊಳ್ಳಬೇಕಾದ್ದು, ನಮ್ಮನ್ನು ನಾವು ಸರಿಮಾಡಿಕೊಳ್ಳಬೇಕಾದ್ದು ವಾಕ್ ಕ್ಷೇತ್ರದಲ್ಲಿ.


" ಎನ್‌ಲೈಟನ್‌ಮೆಂಟ್ ಅಂದರೇ? "

' ಎನ್‌ಲೈಟನ್‌ಮೆಂಟ್ ' ಎಂದರೆ ಒಂದು ವಿಸ್ತೃತವಾದ ಮನೋದೃಷ್ಟಿಯುಳ್ಳ ಮಾನವೀಯ ವ್ಯವಹಾರದ ರೀತಿ "ಯಲ್ಲಿ ವ್ಯವಹರಿಸಬಹುದು.

ಪ್ರಪಂಚದಲ್ಲಿ ಒಟ್ಟಾರೆ ಮನುಷ್ಯ ' ಹುಟ್ಟುತ್ತಾನೆ ', ' ಬೆಳೆಯುತ್ತಾನೆ ', ' ತಿನ್ನುತ್ತಾನೆ ', ' ನಿದ್ದೆ ಹೋಗುತ್ತಾನೆ ', ' ಸಾಯುತ್ತಾನೆ '. ಅಷ್ಟೇ ಹೊರತು, ತನ್ನ ಜೀವನವನ್ನು ತಾನು ವಿಶೇಷವಾಗಿ ವಿಶ್ಲೇಷಿಸುವುದಿಲ್ಲ. " ಏನೋ ಒಂದು ಸಾಮಾಜಿಕವಾಗಿ ", " ಏನೋ ಒಬ್ಬ ಸಂಘ ಜೀವಿ "ಯಾಗಿಯೇ ಇರುತ್ತಾನೆಯೇ ಹೊರತು ಒಬ್ಬ ವಿಲಕ್ಷಣವಾದ ಸಭ್ಯ ಸಾಮಾಜಿಕನಾಗಿ ಇರಲು ನಿರ್ಧರಿಸಲಾರ. ಆದರೆ, ಒಬ್ಬ ಬೆಳೆದ ಮಾನವ, ಒಬ್ಬ ಪರಿಣಿತಿಹೊಂದಿದ ಮಾನವ " ನಾನು ಯಾವ ವಿಧವಾಗಿ ಜೀವಿಸಬೇಕು? ", " ಯಾವ ವಿಧವಾದ ಜೀವನ ರೀತಿ ಸರಿಯಾದುದು? " ಎಂದು ತಿಳಿದುಕೊಳ್ಳುವುದಕ್ಕೆ ಒದ್ದಾಡುತ್ತಾ, ಅದರಿಂದಾಗಿಯೇ ಆ ಪದ್ಧತಿ ಕೂಡ ತಿಳಿದುಕೊಂಡು ಆ ವಿಧವಾಗಿ ಜೀವಿಸುತ್ತಾನೆ - ಆ ವ್ಯಕ್ತಿಗೆ " ಎನ್‌ಲೈಟನ್‌ಮೆಂಟ್ ಇದೆ " ಎಂದು ನಾವು ಹೇಳಬಹುದು.


" ಜೀಸಸ್ ಕ್ರೈಸ್ಟ್ "

ಜೀಸಸ್ ಹೇಳಿದ್ದಾರೆ, " I am the son of God ", " ನಾನು ದೇವರ ಪುತ್ರ " ಎಂದು ನಿಗರ್ವಿಯಾಗಿ ಹೇಳಿದ್ದಾರೆ. ಪ್ರತಿಯೊಬ್ಬರೂ ದೇವರ ಪುತ್ರನಾಗಲೇಬೇಕು. ನಾವೆಲ್ಲರೂ ಕೂಡ ಭೌತಿಕವಾದ ' ತಾಯಿ ' ಪುತ್ರರಾಗಿ, ' ತಂದೆ 'ಯ ಪುತ್ರರಾಗಿ ನಮ್ಮನ್ನು ನಾವು ಗುರ್ತಿಸಿಕೊಳ್ಳುತ್ತೇವೆ. ವಾಸ್ತವವಾಗಿ ನಾವೆಲ್ಲರೂ ದಿವ್ಯಾತ್ಮ ಪುತ್ರರೆ. ಇದು ಜೀಸಸ್ ತಿಳಿದುಕೊಂಡಿದ್ದರು. ನಾವು ಕೂಡ ತಿಳಿದಕೊಳ್ಳಬೇಕು. ಜೀಸಸ್ ಹೇಗೆ ತಿಳಿದುಕೊಂಡರು? ದೇವರ ರಾಜ್ಯದಲ್ಲಿ ಅರ್ಥಾತ್ ' ಒಳಗಡೆ ' ಇರುವುದನ್ನು ತಿಳಿದುಕೊಂಡಿದ್ದರು. ನಾವು ಅದೇ ವಿಧವಾಗಿ ತಿಳಿದುಕೊಳ್ಳಬೇಕು. " I and You are one " ನಾನು ನೀನು ಒಂದೇ " ಎಂದೂ ಸಹ ಹೇಳಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ಸಹ ದೇವರ ಮಗನೇ. " ಒಬ್ಬ ಜೀಸಸ್ ಮಾತ್ರ ದೇವರ ಮಗ; ಮಿಕ್ಕವರೆಲ್ಲ ಮಾನವ ಪುತ್ರರು " ಎನ್ನುವುದು ಪೂರ್ಣ ಅಸತ್ಯ " I am the son of God and I and You are one " ನಾನು ನೀನು ಒಂದೇ - ಎನ್ನುವ ಏಕತ್ವವನ್ನು ಬೋಧಿಸಿದ್ದಾರೆ.


" ಮಾಧವ ಸೆವೆಯೇ ಮಾನವ ಸೇವೆ "

ಮಿತ್ರರೇ! ' ಸೇವೆ ' ಎಂಬುದು ಒಂದು ಆತ್ಮದ ಚರಿತ್ರೆಯಲ್ಲಿ ಎಷ್ಟೋ ಜನ್ಮಗಳ ನಂತರ ಆರಂಭವಾಗುತ್ತದೆ. ಮೊಟ್ಟಮೊದಲಿಗೆ ಮನುಷ್ಯ ತನ್ನ ಬಗ್ಗೆ ತಾನು ನೋಡಿಕೊಳ್ಳುತ್ತಾ, ತನ್ನ ತಿಂಡಿ, ತನ್ನ ಕುಡಿತ, ತನ್ನ ನಿದ್ರೆ, ತನ್ನ ಸ್ವಂತ ಭೋಗಗಳಲ್ಲೇ ಹೊಡೆದುಕೊಂಡು ಹೋಗುತ್ತಿರುತ್ತಾನೆ. ಅಂದರೆ, ತಮೋಗುಣದಲ್ಲಿ ಕೊಚ್ಚಿ ಹೋಗುತ್ತಿರುತ್ತಾನೆ. ತರುವಾಯ ರಜೋಗುಣದಲ್ಲಿ " ಎಲ್ಲರೂ ನನ್ನ ಕೈಕೆಳಗೆ ಕೆಲಸ ಮಾಡಬೇಕು, ನಾವೇ ರಾಜನಾಗಬೇಕು. " ಈ ವಿಧವಾಗಿ ಕೆಲವು ಜನ್ಮಗಳು ಕುಂಭಕರ್ಣನಂತೆ ಮತ್ತೆ ಕೆಲವು ಜನ್ಮಗಳು ರಾವಣಾಸುರನ ಹಾಗೆ ಇದ್ದರೆ, ರಾವಣಾಸುರ ಎಲ್ಲಿ ಸೇವೆ ಮಾಡಿದ್ದಾನೆ? ಕುಂಭಕರ್ಣ ಯಾರಿಗೆ ಸೇವೆ ಮಾಡಿದ್ದ? ತಿಂದು ತೇಗಿ ಮಲಗುವುದೊಂದನ್ನು ಬಿಟ್ಟರೆ ಇವರ ಜೀವನದಲ್ಲಿ ' ಸೇವೆ ' ಎಲ್ಲಿದೆ? ಅಂದರೆ ಏನು? ಪ್ರತಿಯೊಂದು ಆತ್ಮಕ್ಕೂ ಸಹ, ಒಟ್ಟು ನೂರು ಜನ್ಮಗಳಿರುತ್ತವೆ ಎಂದು ಅಂದುಕೊಳ್ಳಿ, 30 ಜನ್ಮಗಳು ತಮೋಗುಣದಲ್ಲೂ, 30 ಜನ್ಮಗಳು ರಜೋಗುಣದಲ್ಲೂ ಹೋಗುತ್ತವೆ. ಶೇಕಡಾ ಅರವತ್ತು ಜನ್ಮಗಳು ' ಸೇವೆ ' ಇಲ್ಲದೆಯೇ ಹೋಗುತ್ತವೆ. ತರುವಾಯ 30 -40 ಶೇಕಡದಲ್ಲೇ ಈ ' ಸೇವಾ ಕಾರ್ಯಕ್ರಮ ' ಆರಂಭವಾಗುತ್ತದೆ.


" ಮುಕ್ತಿ ಮಾರ್ಗ "

" ಮುಕ್ತಿ "; " ಮಾರ್ಗ " ಎನ್ನುವ ಪದಗಳಲ್ಲಿ " ಆಧ್ಯಾತ್ಮಿಕತೆ " ಎಲ್ಲವೂ ಇದೆ. ಮೊದಲನೆಯ ಪದ " ಮುಕ್ತಿ ". ಎರಡನೆಯದು " ಮಾರ್ಗ ". " ಮಾರ್ಗ " ಅಂದರೆ ಎಲ್ಲರಿಗೂ ತಿಳಿದಿದೆ. ಆದರೆ, " ಮುಕ್ತಿ " ಎಂದರೆ ಏನೋ ಯಾರಿಗೂ ತಿಳಿಯದು. ಮೊಟ್ಟಮೊದಲಿಗೆ " ಮುಕ್ತಿ " ಅಂದರೆ ಏನೆಂದು ತಿಳಿದುಕೊಳ್ಳೋಣ. ನಂತರ ಅದನ್ನು ಸಾಧಿಸಲಿಕ್ಕೆ " ಮಾರ್ಗ "ವ ಕುರಿತು ತಿಳಿದುಕೊಳ್ಳೋಣ. ಆಗ ಆ " ಮಾರ್ಗ "ದಲ್ಲಿ ನಾವು ಪಯಣಿಸಿದರೆ " ಮುಕ್ತಿ " ಹೊಂದುತ್ತೇವೆ. " ಮುಕ್ತಿ " ಅಂದರೂ, " ಮೋಕ್ಷ " ಅಂದರೂ, " ನಿಶ್ರೇಯಸ್ಸು " ಅಂದರೂ, " ಅಪವರ್ಗ " ಅಂದರೂ, " ಸಾಲ್ವೇಷನ್ " ಅಂದರೂ, ಲಿಬರೇಷನ್ ಅಂದರೂ ... ಇವೆಲ್ಲವೂ ಸಹ ಒಂದೇ ಪದದ ಪರ್ಯಾಯ ಪದಗಳು.

" ಪ್ರಪಂಚದಲ್ಲಿ ಪೂರ್ಣವಾಗಿ ದುಃಖ ಹೋಗಬೇಕು ". " ಪ್ರಪಂಚದ ದುಃಖ ಅವರ ದುಃಖ ಆದ್ದರಿಂದ ... ಅವರು ದುಃಖದಿಂದ ದೂರವಾಗಿ ಹೋಗಬೇಕಾದರೆ ... ಪ್ರಪಂಚದಲ್ಲಿನ ಒಟ್ಟು ದುಃಖವೆಲ್ಲ ಹೋಗಬೇಕು. ಆಗಲೇ ಅವರ ದುಃಖ ಹೋಗುತ್ತದೆ ".

ಆದ್ದರಿಂದ ವ್ಯಕ್ತಿ ಪರವಾಗಿ ನಮಗೆ ದುಃಖ ಹೋದರೆ " ಮುಕ್ತಿ ", ನಮ್ಮ ಅಕ್ಕಪಕ್ಕದವರ ದುಃಖ ಹೋದರೆ ನಮಗೆ " ಪರಿಮುಕ್ತಿ ", ಪ್ರಪಂಚದಲ್ಲಿನ ದುಃಖ ಹೋದರೆ ಆಗ ನಮಗೆ " ಮಹಾಪರಿಮುಕ್ತಿ ".


" ಪಿರಮಿಡ್ ಜ್ಞಾನ ನವರತ್ನಗಳು "

ಈ ಕೆಳಗಿನ ಒಂಬತ್ತು ರತ್ನಗಳು - ಒಂಬತ್ತು ಪರಿಪೂರ್ಣವಾದ ಸತ್ಯಗಳು.

* ಮೊದಲನೆಯದು - " ಎಲ್ಲಾ ನಾನೇ "

* ಎರಡನೆಯದು - " ಜೀವವೇ ದೇವರು "

* ಮೂರನೆಯದು - " ದೇಹವೇ ದೇವಾಲಯ "

* ನಾಲ್ಕನೆಯದು - " ಶ್ವಾಸವೇ ಗುರು "

* ಐದನೆಯದು - " ಸಮಯವೇ ಸಾಧನೆ "

* ಆರನೆಯದು - " ಸಹನೆಯೇ ಪ್ರಗತಿ "

* ಏಳನೆಯದು - " ಅನುಭವವೇ ಜ್ಞಾನ "

* ಎಂಟನೆಯದು - " ದಾನವೇ ಧರ್ಮ "

* ಒಂಬತ್ತನೆಯದು - " ಧರ್ಮವೇ ಪುಣ್ಯ "


"ನವ ವಿಧ ಧರ್ಮಗಳು"

"ಧರ್ಮೋ ರಕ್ಷತಿ ರಕ್ಷಿತಃ" - ಯಾರಿಂದಾದರೆ ಧರ್ಮವು ರಕ್ಷಿಸಲಾಗುತ್ತದೋ .. ಅವರಿಂದ ರಕ್ಷಿಸಿದಂತಹ ಧರ್ಮವು ಮತ್ತೆ ಅವರನ್ನೇ ರಕ್ಷಿಸುತ್ತದೆ. ಈ ಸೃಷ್ಟಿಯಲ್ಲಿ ಯಾವುದು ಸರಿಯಾದುದೊ .. ಅದನ್ನು ’ಧರ್ಮ’ ಎನ್ನುತ್ತೇವೆ. ಧರ್ಮಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುತ್ತಾ .. ಸಂಪೂರ್ಣ ಅರಿವಿನಿಂದ ಅದನ್ನು ಆಚರಿಸುತ್ತಾ .. ಈ ಭೂಮಿ ಮೇಲೆ ನಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳೋಣ. ಜೀವನದಲ್ಲಿ ನಮಗೆ ಅಭಿವೃದ್ಧಿ ಬೇಕೆಂದರೂ, ನಮಗೆ ಪ್ರಗತಿ ಬೇಕಾದರೂ, ನಮಗೆ ಸುಖ, ಆನಂದ, ಮುಕ್ತಿ, ಮೋಕ್ಷ, ದುಃಖರಹಿತ್ಯ .. ಏನು ಬೇಕಾದರೂ ಸರಿಯೇ .. ತ್ರಿಕರಣ ಶುದ್ಧಿಯಾಗಿ ಧರ್ಮವನ್ನು ಆಚರಿಸುವುದಲ್ಲದೆ ನಮಗೆ ಬೇರೆ ಮಾರ್ಗ ಇಲ್ಲ. ನಾವು ಸರಿಯಾದುದನ್ನು ಅಂದರೆ .. ಧರ್ಮವನ್ನು ಸದಾ ರಕ್ಷಿಸುತ್ತಿದ್ದರೆ .. ನಮ್ಮಿಂದ ರಕ್ಷಿಸಲಾದಂತಹ ಆ ಧರ್ಮವೇ ಮತ್ತೆ ನಮ್ಮನ್ನು ರಕ್ಷಿಸುತ್ತಾ ನಮ್ಮನ್ನು ’ಭಾಗ್ಯವಂತರನ್ನಾಗಿ’ ಮಾಡುತ್ತದೆ. ನಮ್ಮ ಧರ್ಮಾಚರಣೆಯೇ ನಮ್ಮ ಭಾಗ್ಯವಾಗಿ ಪರಿವರ್ತಿಸುತ್ತದೆ ಹೊರೆತು .. ಭಾಗ್ಯ ಎನ್ನುವುದು ನಮಗೆ ಎಲ್ಲಿಂದಲೋ ಯಾರೋ ಅನುಗ್ರಹಿಸುವುದರಿಂದ ಬರುವುದಿಲ್ಲ ಎನ್ನುವ ಸತ್ಯವನ್ನು ನಾವು ವಿಧಿಯಾಗಿ ತಿಳಿದುಕೊಳ್ಳಬೇಕು. ಈ ಪ್ರಪಂಚದಲ್ಲಿ ಬಗೆಬಗೆಯ ಧರ್ಮಗಳಿವೆ. ಅದರಲ್ಲಿ ಕೆಲವನ್ನು ತಿಳಿದುಕೊಳ್ಳೋಣ.

"ಧ್ಯಾನಧರ್ಮ" .. ಪ್ರತಿದಿನ ತಪ್ಪದೇ ವಿಧಿಯಾಗಿ ಧ್ಯಾನಾಭ್ಯಾಸದಲ್ಲಿ ಇರುವುದು

"ಅಹಿಂಸಾ ಧರ್ಮ" .. ಸಸ್ಯಾಹಾರದಿಂದಲೇ ಮಾನವ ಜೀವನವನ್ನು ಸಾಗಿಸಬೇಕು

"ಮಿತ್ರಧರ್ಮ" .. ಸಕಲಪ್ರಾಣಿಕೋಟಿಯೊಂದಿಗೆ ಸ್ನೇಹ ಭಾವನೆಯಿಂದ ಇರುವುದು

"ಕರುಣಧರ್ಮ" .. ದಯನೀಯ ಸ್ಥಿಯಲ್ಲಿರುವ ಸಹ ಜೀವಿಗಳಿಗೆ ಸಾಧ್ಯವಾದಷ್ಟು ಸಹಕರಿಸುವುದು

"ಶಾಂತಧರ್ಮ" .. ಸಬೂರಿ ಮತ್ತು ಸಹನೆ

"ಆರೋಗ್ಯಧರ್ಮ" .. ಪಾಂಚಭೌತಿಕ ಶರೀರದೊಂದಿಗೆ ನಮ್ಮ ಜಾಗರೂಕತೆ, ನಮ್ಮ ಕರ್ತವ್ಯ, ನಮ್ಮ ಶ್ರದ್ಧೆ

"ಸ್ವಾಧ್ಯಾಯಧರ್ಮ" .. ಬುದ್ಧಿಯನ್ನು ಆಗಿಂದಾಗ ಮತ್ತಷ್ಟು ವಿಕಸಿಸಿಕೊಳ್ಳುತ್ತಾ, ಮತ್ತಷ್ಟು ಹರಡಿಸುವಂತಹ ಕ್ರಿಯೆಯನ್ನು ಮಾಡುವುದು

"ವಿನಯಧರ್ಮ" .. ನಮಗಿಂತಾ ಆಯಸ್ಸಿನಲ್ಲಿ, ಬುದ್ಧಿಯಲ್ಲಿ ಹೆಚ್ಚಾಗಿರುವವರೊಂದಿಗೆ ಸರಿದು ಇರುವುದು

"ದಾನಧರ್ಮ" .. ನಮಗೆ ಅವಶ್ಯಕವಿರುವಷ್ಟು ನಮ್ಮಲ್ಲಿಟ್ಟುಕೊಂಡು, ನಮ್ಮ ಸ್ವಂತ ಅಗತ್ಯಕ್ಕೆ ಮೀರಿದ ಸಂಪದವನ್ನು ಲೋಕಕಲ್ಯಾಣಕ್ಕೆ ನಿಮಿತ್ತವಾಗಿ ಉಪಯೋಗಿಸುವುದು


 

Go to top