“ಬುದ್ಧತ್ವಕ್ಕೆ ಜಯಹೋ”

“ಬುದ್ಧತ್ವ” ಅಂದರೆ “ಸತ್ಯಾನುಭವದ ಒಂದು ಪರಾಕಾಷ್ಟೆ”
“ಬುದ್ಧತ್ವ” ಅಂದರೆ “ಸತ್ಯಪ್ರಾಪ್ತಿಯ ಒಂದು ಪರಾಕಾಷ್ಟೆ”
ನಿರಂತರ ಸತ್ಯಾನ್ವೇಷಣೆಯಿಂದಲೇ “ಸತ್ಯ” ಎನ್ನುವುದು ಪ್ರಾಪ್ತಿಯಾಗುತ್ತದೆ
ನಿತ್ಯವಾದದ್ದೇ “ಸತ್ಯ”.. ಅನಿತ್ಯವಾದದ್ದೇ “ಅಸತ್ಯ”
“ಭೌತಿಕ ಜಗತ್ತಿನಲ್ಲಿ ಎಲ್ಲವೂ ಅನುಕ್ಷಣ ಬದಲಾಗುತ್ತಾ ಇರುತ್ತದೆ” ಎನ್ನುವ ಅರಿವೇ.. “ಸತ್ಯ”
“ದೃಶ್ಯವಾಗುತ್ತಿರುವ ಪ್ರಪಂಚ” ಎಂತಹುದೋ .. “ದ್ರಷ್ಟಾ ಪ್ರಪಂಚ” ಕೂಡ ಅಂತಹುದೇ
“ನೋಡಲ್ಪಡುವುದು” ಬದಲಾಗುತ್ತಾ ಇರುತ್ತದೆ .. “ನೋಡುವುದು” ಬದಲಾಗುತ್ತಾ ಇರುತ್ತದೆ
* * *
ಒಂದು ಕಾಲದ ದೃಶ್ಯಮಾನ ಪ್ರಪಂಚ ಈಗಿಲ್ಲ
ಈಗಿರುವ ದೃಶ್ಯಮಾನ ಪ್ರಪಂಚ ನಾಳೆ ಇರುವುದಿಲ್ಲ
ಒಂದು ಕಾಲದಲ್ಲಿ ದ್ರಷ್ಟರಾಗಿದ್ದ ನಾವು .. ಈಗ ದ್ರಷ್ಟರಲ್ಲ
ಈಗಿರುವ ನಾವು .. ನಾಳೆಯ ನಾವು ಆಗಲಾರೆವು
ನೋಡುವುದು .. ನೋಡಲ್ಪಡುವುದು .. ಎಲ್ಲಾ ಅನುಕ್ಷಣ, ನಿತ್ಯವೂ ಬದಲಾಗುವಂತಹುದೇ
* * *
ಇಷ್ಟು ಹೀಗೆ ಇದ್ದರೂ ಕೂಡಾ ಬುದ್ಧತ್ವ ಎನ್ನುವುದು “ತಟಸ್ಥ ಪ್ರಕ್ರಿಯೆ”ಯಲ್ಲ!
“ಬುದ್ಧತ್ವ” ಅಂದರೆ ಆಸೆಗಳಿಲ್ಲದ ಜೀವನವಲ್ಲ!
“ಬುದ್ಧತ್ವ” ಅಂದರೆ ಕೋರಿಕೆಗಳು ಇಲ್ಲದ ಸ್ಥಿತಿಯಲ್ಲ!
“ಬುದ್ಧತ್ವ” ಅಂದರೆ ಸದಾಶಯಗಳಲ್ಲಿ ಮುಳುಗಿ ತೇಲುತ್ತಿರುವ ಜೀವನ
“ಬುದ್ಧತ್ವ” ಅಂದರೆ ಲೋಕಕಲ್ಯಾಣಾರ್ಥಕ್ಕಾಗಿ ಸರಿಯಾದ ಕೋರಿಕೆಗಳನ್ನು ನೆರವೇರಿಸಲು
ನಿರಂತರವಾಗಿ, ಆನಂದಕರವಾಗಿ ಮಾಡುವ ಮಹಾ ಕೃಷಿ
“ಬುದ್ಧತ್ವ” ಎನ್ನುವುದು ಎಲ್ಲರಿಗೂ ವಾಸ್ತವದ ಅರಿವನ್ನು ನೀಡುವ ಅದ್ಭುತವಾದ ಆನಂದಕರವಾದ ಸ್ಥಿತಿ
“ಬುದ್ಧತ್ವ” ಅಂದರೆ ಸಕಲ ಪ್ರಾಣಿಕೋಟಿಯ ಯೋಗಕ್ಷೇಮಕ್ಕೋಸ್ಕರ ತನ್ನನ್ನು ತಾನು ಅರ್ಪಿಸುಕೊಳ್ಳುವ ಸ್ಥಿತಿ
“ಬುದ್ಧತ್ವ” ಅಂದರೆ ನಾಲ್ಕು “ಬ್ರಹ್ಮವಿಹಾರ”ಗಳೂಂದಿಗೆ ಪರಿಪೂರ್ಣವಾಗಿ, ಪರಿಪುಷ್ಟವಾಗಿರುವುದು
ಮೈತ್ರಿ, ಮುದಿತ, ಕರುಣೆ ಮತ್ತು ಉಪೇಕ್ಷೆಗಳೊಂದಿಗೆ ಕೊಡಿರುವುದೇ ಬ್ರಹ್ಮವಿಹಾರಗಳು
* * *

ಪ್ರತಿ ಮಾನವ ಆತ್ಮದ ಒಂದು ಧ್ಯೇಯವೇನೆಂದರೆ ಬುದ್ಧತ್ವವನ್ನು ಸೇರುವುದು
“ಬುದ್ಧತ್ವ” ಅಂದರೆ ಸ್ವಯಂ ವಿಶೇಷವಾದ ದುಃಖರಾಹಿತ್ಯ ಸ್ಥಿತಿಯಲ್ಲಿರುವುದು
ಹಾಗೆ ಇರುತ್ತಾ ಸಕಲ ಮಾನವ ಜಾತಿಯನ್ನು ಕೂಡಾ ಆ ದಿಶೆಯಲ್ಲಿ ನಡೆಸಲು ಮಾಡುವ ಮಹಾಕೃಷಿಯಸ್ಥಿತಿ
“ಬುದ್ಧತ್ವ” ಅಂದರೆ ನಿರ್ವಾಣ ಸ್ಥಿತಿ, ಪರಿನಿರ್ವಾಣಸ್ಥಿತಿ, ಮಹಾಪರಿನಿರ್ವಾಣಸ್ಥಿತಿ
“ನಿರ್ವಾಣ” ಅಂದರೆ ದುಃಖರಾಹಿತ್ಯ ಸ್ಥಿತಿ .. ಅಂದರೆ “ಅರಿಹಂತನ” ಸ್ಥಿತಿ
“ಪರಿನಿರ್ವಾಣ” ಎಂದರೆ ಅದು ಮಹಾದುಃಖರಾಹಿತ್ಯ ಸ್ಥಿತಿ .. ಅಂದರೆ “ಬೋಧಿಸತ್ವ”ನ ಒಂದು ಸ್ಥಿತಿ
“ಮಹಾಪರಿನಿರ್ವಾಣ” ಎಂದರೆ ಅದು ಒಂದು ಮಹಾ ಮಹಾ ದುಃಖರಾಹಿತ್ಯ ಸ್ಥಿತಿ .. ಒಬ್ಬ “ಬುದ್ಧ”ನ ಒಂದು ಸ್ಥಿತಿ
* * *

ಗೌತಮ ಬುದ್ಧ “ಆದಿ ಬುದ್ಧ”ನಲ್ಲ .. “ಅಂತ್ಯ ಬುದ್ಧನೂ” ಅಲ್ಲಾ
ಪಿರಮಿಡ್ ಮಾಸ್ಟರ್‌ಗಳೆಲ್ಲರೂ “ಮಹಾ ಮಹಾ ಬುದ್ಧರು”
ಬುದ್ಧತ್ವಕ್ಕೆ ಜಯಹೋ! ಬುದ್ಧರೆಲ್ಲರಿಗೂ ಜಯ ಜಯ ಜಯಹೋ!
ಪಿರಮಿಡ್ ಮಾಸ್ಟರ್‌ಗಳೆಲ್ಲರೂ ಜಯ ಜಯ ಜಯಹೋ !
ಬುದ್ಧರಾದವರೆಲ್ಲರಿಗೂ .. ಬುದ್ಧರಾಗುವವರೆಲ್ಲರಿಗೂ
“ಬುದ್ಧಪೂರ್ಣಿಮೆ”ಯ ಸಂದರ್ಭವಾಗಿ .. ಶುಭಾಶಯಗಳು !!!