“ಯೋಗಃ ಚಿತ್ತವೃತ್ತಿ ನಿರೋಧಃ”
ನಮ್ಮ ಭಾರತದೇಶದ ಸ್ಥಿತಿಗತಿಗಳು ಉನ್ನತವಾಗುತ್ತಿರುವ ಸೂಚನೆಗಳು ಇವು. ಪ್ರಪಂಚದ ಎಲ್ಲ ದೇಶಗಳು ಯೋಗದ ಕುರಿತಾಗಿ ‘ವಿಶ್ವಸಂಸ್ಥೆ’ಯಲ್ಲಿ ಭಾರತದ ಪ್ರಸ್ತಾವನೆಯನ್ನು ಇಷ್ಟೊಂದು ಪ್ರಮಾಣದಲ್ಲಿ ಬೆಂಬಲಿಸಿರುವುದು ಇದೇ ಮೊದಲು. ಆದ್ದರಿಂದ ಎಷ್ಟೋ ಜನ ದೊಡ್ಡ ಯೋಗಿಗಳ ಸಾಧನೆಯ ಫಲವಿದು. ಇದು ಒಬ್ಬರ ಕೈಯ್ಯಿಂದ ಮಾಡಲು ಸಾಧ್ಯವಿಲ್ಲ.
ಪತಂಜಲಿ ಯೋಗಮಾರ್ಗವೆಂದರೆ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಯಮ ಎಂದರೆ ಅಹಿಂಸೆ, ಅಸ್ತ್ರೇಯ, ಅಪರಿಗ್ರಹ, ಸತ್ಯ. ಮಹಾತ್ಮಗಾಂಧಿಯವರು ಈ ’ಯಮ’ ಎಂಬುದು ಮೂರ್ತೀಭವಿಸಿದ ನಾಯಕ. ಈ ವಿಶ್ವಯೋಗ ದಿನೋತ್ಸವದ ಸಂದರ್ಭದಲ್ಲಿ ನಾವು ಮಹಾತ್ಮಗಾಂಧೀಜಿಗೆ ಕೃತಜ್ಞತೆಗಳನ್ನು ತಿಳಿಸೋಣ.
ಗಾಂಧೀಜಿಯವರ ಕೈಯಲ್ಲಿ ಯಾವಾಗಲೂ ಒಂದು ಭಗವದ್ಗೀತೆ ಇರುತ್ತಿತ್ತು. ಭಗವದ್ಗೀತೆಯೇ ಅವರ ಜೀವನಕ್ಕೆ ಮಾರ್ಗದರ್ಶಿ. ಯಾರ ಜೀವನಕ್ಕಾದರೂ ಭಗವದ್ಗೀತೆಯೇ ಮಾರ್ಗದರ್ಶಿ. ಆ ಭಗವದ್ಗೀತೆಯಲ್ಲಿ ಯೋಗದ ಬಗ್ಗೆ ಒಂದು ಚಿಕ್ಕ ವ್ಯಾಖ್ಯಾನ ಇದೆ. ಅದೇ “ಸಮತ್ವಂ ಯೋಗ ಉಚ್ಛ್ಯತೆ”. ಅಂದರೆ, ಎಲ್ಲರನ್ನೂ ಸಮವಾಗಿ ನೋಡುವುದೇ ಯೋಗವಯ್ಯಾ ಎಂದು ಹೇಳಿದ್ದಾನೆ ಶ್ರೀಕೃಷ್ಣ. ಇಲಿಯನ್ನು ನೀಚವಾಗಿ ನೊಡುತ್ತೇವೆ. ಆದರೆ, ವಿನಾಯಕ ಇಲಿಯನ್ನು ವಾಹನವಾಗಿ ಮಾಡಿಕೊಂಡಿದ್ದಾನೆ.
ಯಾರನ್ನೂ ಅಲ್ಲಗೆಳೆಯಬಾರದು ಎನ್ನುವುದೇ ಇದರ ಅರ್ಥ. ಯಾರನ್ನೂ ಮೆಚ್ಚಿಸಲು ಕೆಲಸ ಮಾಡಬಾರದು. ಅದೇ “ಸಮತ್ವಂ ಯೋಗ ಉಚ್ಛ್ಯತೆ” “ಸಮತ್ವವೇ ಯೋಗ”ವೆಂದು ಹೇಳಲಾಗಿದೆ. ಆ ಸಮತವನ್ನು ಸಾಧಿಸಿದವನೇ ಯೋಗೀಶ್ವರ. ಜಯ-ಅಪಜಯದಲ್ಲಿ, ಮಾನ-ಅವಮಾನದಲ್ಲಿ, ಕೀರ್ತಿ-ಅಪಕೀರ್ತಿಯಲ್ಲಿ, ತನ್ನವರಲ್ಲಿ-ಪರರಲ್ಲಿ, ತನ್ನನ್ನು ಒಪ್ಪಿಕೊಂಡವರೊಂದಿಗೆ ಒಪ್ಪಿಕೊಳ್ಳದವರೊಂದಿಗೆ ಎಲ್ಲರೊಂದಿಗೂ ಸಮವಾಗಿ ಜೀವಿಸುವವನೇ ಯೋಗೀಶ್ವರ. ಎಂದು ಭಗವದ್ಗೀತೆಯಿಂದ ತಿಳಿದುಕೊಂಡೆವು.
ಪತಂಜಲಿ ಏನು ಹೇಳಿದ್ದಾರೆ “ಯೋಗಃ ಚಿತ್ತವೃತ್ತಿ ನಿರೋಧಃ” ಯೋಗವೆಂದರೆ ಚಿತ್ತದ ವೃತ್ತಿಗಳನ್ನು ನಿರೋಧಿಸುವುದು. ದಮ, ಸಮ ಎಂಬ ಎರಡು ಅಂಶಗಳಿವೆ. ದಯ ಎಂದರೆ ಇಲ್ಲಿ ಬಹಿರೇಂದ್ರಿಯ ನಿಗ್ರಹ. ಇಲ್ಲಿ ನಮ್ಮ ಒಳಗೆ ಏನಿದ್ದರೂ ಗೊತ್ತಾಗದು, ಅದೇ ದಮ. ಸಮವೆಂದರೆ ಕಣ್ಣು ತೆರೆಯದೇ ಬಹಿರೇಂದ್ರಿಯವನ್ನು ನಿಗ್ರಹಿಸುವುದು. ಯಾವಾಗ ಬಹಿರೇಂದ್ರಿಯಗಳನ್ನು ನಿಗ್ರಹಿಸುತ್ತೇವೋ ದಮದಲ್ಲಿ ಅಭಿವೃದ್ಧಿ ಸಾಧಿಸಿದಂತೆ. ಆಗ ದಮದಿಂದ ಸಮಕ್ಕೆ ಬರುತ್ತೇವೆ.
ಸಮ ಎಂದರೆ ಮನಸ್ಸು, ಅಂದರೆ ಅಂತರೇಂದ್ರಿಯದೊಂದಿಗೆ ಅನುಸಂಧಾನ. ಆದ್ದರಿಂದ, ಸಮತ್ವಂ ಯೋಗ ಉಚ್ಛ್ಯತೆ ಎಂದರೆ ಅಂತರೇಂದ್ರಿಯವನ್ನು ಸಮವಾಗಿ (ಸರಿಯಾಗಿ) ಇರಿಸಿಕೊಳ್ಳುವುದು. ಅಂತರೇಂದ್ರಿಯದಿಂದ ಯೋಗವು ಬರುತ್ತದೆ. ಸಮದಲ್ಲಿದ್ದರೆ ಯೋಗಿಗಳಾಗುತ್ತಾರೆ. ಯೋಗ ಎಂದರೆ ಸಂಗಮ. “ಯುಂಜತೇ ಇತಿ ಯೋಗಃ”. ನಾವೆಲ್ಲರೂ ಒಂದಾಗಿದ್ದರೆ ಅದು ಮಿತ್ರತ್ವಯೋಗ. ನಮ್ಮೊಂದಿಗೆ ನಾವು ಒಂದಾಗಿದ್ದರೆ ಆತ್ಮಯೋಗ. ನಮ್ಮ ಸಂಗೀತದೊಂದಿಗೆ ನಾವು ಇದ್ದರೆ ನಾದಯೋಗ. ವಿಜ್ಞಾನದೊಂದಿಗೆ ಒಂದಾಗಿದ್ದರೆ ವಿಜ್ಞಾನಯೋಗ. ವಿಧವಿಧವಾದ ಸಂಗಮವಿದೆ. ಪ್ರತಿ ಸಂಗಮವೂ ಯೋಗವಾಗುತ್ತದೆ. ಎಲ್ಲರ ಶ್ರೇಯಸ್ಸಿಗೋಸ್ಕರ ಕೆಲಸ ಮಾಡಿದರೆ ಅದು ಧರ್ಮಯೋಗ. ಪ್ರತಿಯೊಬ್ಬರೂ ಯೋಗಿಗಳಾಗಲೇಬೇಕು. ನಿನಗೆ ಯಾವುದು ಇಷ್ಟವೋ ಆ ಯೋಗವನ್ನು ಮಾಡು ಒಟ್ಟಾರೆ ನೀನು ಯೋಗಿಯಾಗು! ಅಯೋಗಿಯಾಗಿರಬೇಡ!
ಒಬ್ಬಳು ಸ್ತ್ರೀ/ ಹೆಣ್ಣು ಮಗು ತಾಯಿಯಾಗಲೇಬೇಕು. ಒಬ್ಬ ಹೆಣ್ಣಿಗೆ ಏನಿರುತ್ತದೆ ಗರ್ಭಕೋಶವಿರುತ್ತದೆ. ಪ್ರಕೃತಿ ಏನು ಹೇಳುತ್ತದೆ ನೀನು ತಾಯಿಯಾಗಬೇಕು ಎನ್ನುತ್ತದೆ. ಪ್ರತಿ ಸ್ತ್ರೀ ತಾಯಿಯಾಗಬೇಕು. ಪ್ರತಿ ಆತ್ಮವೂ ಯೋಗಿಯಾಗಬೇಕು. ಸ್ತ್ರೀಗೆ ಗರ್ಭಕೋಶ ಹೇಗಿರುತ್ತದೋ ಹಾಗೇ ಪ್ರತಿ ಆತ್ಮಕ್ಕೆ ಮನುಷ್ಯನಿಗೆ ದಿವ್ಯಚಕ್ಷುವಿರುತ್ತದೆ. ಆ ದಿವ್ಯಚಕ್ಷುವಿಗೆ ನಾವು ಏಳು ಶರೀರಗಳ ಸಮೂಹ ಎಂದು ತಿಳಿಯುತ್ತದೆ.
ಅನ್ನಮಯ, ಮನೋಮಯ, ವಿಜ್ಞಾನಮಯ ಕೋಶ, ಆನಂದಮಯ ಕೋಶ, ವಿಶ್ವಮಯ ಕೋಶ, ನಿರ್ವಾಣಮಯ ಕೋಶ ಇವೆಲ್ಲಾ ಸೇರಿ ಒಬ್ಬ ಮನುಷ್ಯನಾಗುತ್ತಾನೆ.
ಆದ್ದರಿಂದ, ಈ ಏಳು ಶರೀರಗಳು ಒಟ್ಟಾಗಿರುವುದು ಯೋಗ. ಮೊದಲು ನಮಗೆ ಇದೆಲ್ಲಾ ತಿಳಿಯುವುದಿಲ್ಲ, ಆದರೆ ನಾವು ತಿಳಿದುಕೊಳ್ಳಲೇಬೇಕು. ವ್ಯಕ್ತಿ ಉನ್ನತಿ ಸಾಧಿಸುತ್ತಿದ್ದಾನೆ ಎಂದರೆ ಸತ್ಯವನ್ನು ತಿಳಿದುಕೊಳ್ಳಬೇಕು. ಅದೇ ವ್ಯಕ್ತಿಯ ಉನ್ನತತೆ. ನಾವು ಏಳು ಶರೀರಗಳ ಸಮುದಾಯ ಎಂದು ಒಪ್ಪಿದರೂ, ಒಪ್ಪದಿದ್ದರೂ ಅದೇ ಸತ್ಯ. ಭೂಮಿ ಗುಂಡಾಗಿಲ್ಲ, ಚಪ್ಪಟೆಯಾಗಿದೆ ಎಂದು ಕೆಲವರು ವಿಜ್ಞಾನಿಗಳು ಪ್ರತಿಪಾದಿಸಿದರು. ಆದರೆ, ಭೂಮಿ ಗುಂಡಾಗಿದೆ ಚಪ್ಪಟೆಯಾಗಿಲ್ಲ ಎಂದು ಹೇಳಿದಾಗ ಆತನನ್ನು ಗುಂಡಿಟ್ಟು ಸಾಯಿಸಿದರು. ಆದರೆ ಸತ್ಯವು ಸತ್ಯವೇ ಆಯಿತಲ್ಲಾ. ಮೂರ್ಖತನಕ್ಕೆ ಕೊನೆಯೇ ಇಲ್ಲ.
ಈ ಶರೀರವೇ ನಾನು, ಮೂಳೆಯ (ಎಲುಬಿನ) ಗೂಡೇ ನಾನು. ಎನ್ನುತ್ತಾರೆ. ಆಗ ಅಯ್ಯಾ ಬರುವ ಜನ್ಮದಲ್ಲಾದರೂ ಜ್ಞಾನಿಯಾಗು ಎಂದು ಈ ಲೋಕವು ನಮಸ್ಕರಿಸುತ್ತದೆ. ಈ ಜನ್ಮದಲ್ಲಿ ಆತ್ಮಜ್ಞಾನದತ್ತ ಬರಲಿಲ್ಲ. ಪರವಾಗಿಲ್ಲ, ನಾನು ಕೂಡಾ ಹಿಂದಿನ ಜನ್ಮದಲ್ಲಿ ಇದರತ್ತ ಬರಲಿಲ್ಲ. ಆದರೆ ಸತ್ಯವನ್ನು ತಿಳಿದುಕೊಳ್ಳಬೇಕು. “ಸತ್ಯಮೇವ ಜಯತೇ” ಸತ್ಯವನ್ನಾಚರಿಸುವವನೇ ಜಯಗಳಿಸುತ್ತಾನೆ. ಯಾವ ಸತ್ಯ? ಎಂದರೆ ನಾವು ಏಳು ಶರೀರಗಳ ಸಮುದಾಯ ಎನ್ನುವುದೇ ಸತ್ಯ. ಹಿಂದೆ ನಾವು ಕಥೆಯಲ್ಲಿ ಕೇಳಿದ್ದೇವೆ. ಏಳು ಸಮುದ್ರಗಳನ್ನು ದಾಟಿದರೆ ಒಂದು ಗಿಡವಿರುತ್ತದೆ. ಆ ಗಿಡದ ಮೇಲೆ ಪಕ್ಷಿ ಇರುತ್ತದೆ, ಅದರಲ್ಲಿ ಪ್ರಾಣವಿರುತ್ತದೆ (ಚೈತನ್ಯ) ಎಂದು. ಆದರೆ ಈ ಏಳು ಶರೀರಗಳ ಸಮುದಾಯವೇ ಆ ಏಳು ಸಮುದ್ರಗಳು. ಆ ಗಿಡದ ಮೇಲಿರುವ ಪಕ್ಷಿಯೇ ನಾವು, ನಮ್ಮೊಳಗೆ ಆತ್ಮವಿರುತ್ತದೆ. ಮೊದಲು ಇವೆಲ್ಲಾ ಅರ್ಥವಾಗುತ್ತಿರಲಿಲ್ಲ. ಚಂದಮಾಮ ಕಥೆಗಳು ಎಂದುಕೊಳ್ಳುತ್ತಿದ್ದೆವು ಆದರೆ ಈಗ ಅರ್ಥವಾಗುತ್ತಿದೆ. ಆ ಚಂದಮಾಮ ಕಥೆಗಳಿಗೆ ಯೋಗ ದಿನದ ಸಂದರ್ಭದಲ್ಲಿ ನಾವು ಕೃತಜ್ಞತೆಗಳನ್ನು ತಿಳಿಸೋಣ. 1969-70ರಲ್ಲಿ ನಮ್ಮ ಮನೆಯ ಪಕ್ಕದಲ್ಲೇ ಯೋಗ ಕೇಂದ್ರವಿತ್ತು ಹೈದರಾಬಾದ್ನ, ವಿದ್ಯಾನಗರದಲ್ಲಿ. ಅಲ್ಲಿ ಎಲ್ಲಾ ಆಸನಗಳನ್ನು ಕಲಿತೆನು. ಇಷ್ಟೇನಾ ಇನ್ನೇನಾದರೂ ಇದೆಯಾ ಎಂದು ಕೇಳಿದರೆ, ಅಯ್ಯಾ ನಮಗೆ ಗೊತ್ತಿರುವುದು ಇಷ್ಟೇ, ಇನ್ನೂ ಕಲಿಯಬೇಕೆಂದರೆ ಇನ್ನೆಲ್ಲಾದರೂ ಹೋಗು ಎಂದರು. ಯೋಗದಲ್ಲಿ ವಿವಿಧ ಹಂತದ ಯೋಗಗಳಿವೆ. ಪ್ರಾಥಮಿಕ ಶಾಲೆಯ ಯೋಗವಿದೆ. ಮಾಧ್ಯಮಿಕ ಶಾಲೆಯ ಯೋಗವಿದೆ, ಹೈಸ್ಕೂಲ್ ಯೋಗವಿದೆ, ಕಾಲೇಜ್ ಯೋಗವಿದೆ, ಯೂನಿವರ್ಸಿಟಿ ಯೋಗವಿದೆ; ಪಿರಮಿಡ್ ಮಾಸ್ಟರ್ಸ್ ಎಲ್ಲರೂ ಯೂನಿವರ್ಸಿಟಿ ಯೋಗದಲ್ಲಿದ್ದಾರೆ, ‘ಅಹಂ ಬ್ರಹ್ಮಾಸ್ಮಿ’ ಎಂದು ತಿಳಿದಿರುವವವರು I am that I am ಎನ್ನುವವರು.
ಮೋಸೆಸ್ ಒಂದು ದೊಡ್ಡ ಬೆಟ್ಟದ ಮೇಲೆ ನಿಂತಿದ್ದಾನೆ, ಮೇಲೆ ದೊಡ್ಡ ಅಗ್ನಿಗೋಳ ಕಾಣಿಸುತ್ತಿದೆ. ಯಾರು ನೀನು ಎಂದು ಮೋಸೆಸ್ ಕೇಳಿದ ಏಕೆಂದರೆ ಆ ಅಗ್ನಿಗೋಳದಲ್ಲಿ ಒಬ್ಬ ವ್ಯಕ್ತಿ ಚೆನ್ನಾಗಿ ಕಾಣಿಸುತ್ತಿದ್ದಾನೆ. ಆಗ ಆ ಗೋಳದಲ್ಲಿ ಒಬ್ಬ ವ್ಯಕ್ತಿ ಚೆನ್ನಾಗಿ ಕಾಣಿಸುತ್ತಿದ್ದಾನೆ. ಆಗ ಆ ಅಗ್ನಿಗೋಳದಲ್ಲಿರುವ ವ್ಯಕ್ತಿಯಿಂದ ಬಂದ ಉತ್ತರ “I am that I am” ನಾನು ಆ ನಾನು ತತ್ವಮಸಿ, ಅದು ನೀನು.
ಸತ್ಯವೂ ಎಲ್ಲಾ ಕಡೆಯೂ ಒಂದೇ ಆಗಿರುತ್ತದೆ. ಅಮೇರಿಕಾದಲ್ಲಾಗಲಿ, ಚೈನಾದಲ್ಲಾಗಲಿ, ವಿಶಾಖಪಟ್ಟಣದಲ್ಲಾಗಲಿ, ಬೆಂಗಳೂರಿನಲ್ಲಾಗಲಿ ಎಲ್ಲಾ ಕಡೆಯೂ ಒಂದೇ. ಕೃತಯುಗದಲ್ಲಾಗಲಿ, ತ್ರೇತಾಯುಗದಲ್ಲಾಗಲಿ, ದ್ವಾಪರಯುಗದಲ್ಲಾಗಲಿ, ಕಲಿಯುಗದಲ್ಲಾಗಲಿ ಸತ್ಯ ಒಂದೇ ಆಗಿರುತ್ತದೆ.
ಅದಕ್ಕಾಗಿ ಪಿರಮಿಡ್ ಮಾಸ್ಟರ್ಸ್ ರ್ಯಾಲಿಗಳನ್ನು ಮಾಡುತ್ತಿದ್ದಾರೆ. ಶಾಕಾಹಾರಿಗಳಾಗು, ಅಹಿಂಸಾತತ್ತ್ವವನ್ನು ಅನುಸರಿಸು. ಜ್ಞಾನಯೋಗಿಯಾಗು, ಆಧ್ಯಾತ್ಮಿಕ ವಿಜ್ಞಾನಿಯಾಗು. ಸತ್ಯವನ್ನು ತನ್ನಲ್ಲಿ ಅಡಗಿಸಿರುವುದು ಯೋಗವೇ! ಸತ್ಯವನ್ನು ಆಚರಿಸಿದರೆ ಜ್ಞಾನವು ಬರುತ್ತದೆ. ಯೋಗದ ಫಲವೇನೆಂದರೇ ಸತ್ಯ. ಆ ಸತ್ಯ ನಮಗೆ ಸಿಕ್ಕಿದಾಗ ಯಾವಾಗಲೂ ಜಯವೇ ನಮ್ಮದಾಗುತ್ತದೆ.
ಶ್ರೀಕೃಷ್ಣನು ಮಹಾಭಾರತ ಯುದ್ಧದಲ್ಲಿ ರಾಯಭಾರ ಮಾಡಿದನು. ಆದರೆ ರಾಯಭಾರ ವಿಫಲವಾಯಿತು. ಆದರೆ, ಶ್ರೀಕೃಷ್ಣನು ವಿಫಲನಾಗಲಿಲ್ಲ. ಹಾಗೆಯೇ, ಪಿರಮಿಡ್ ಮಾಸ್ಟರ್ಸ್ ರಾಯಭಾರ ಮಾಡುತ್ತಿದ್ದಾರೆ. ಅಯ್ಯ ನೀನು ಧ್ಯಾನಿಯಾಗು, ಶಾಕಾಹಾರಿಯಾಗು, ಯೋಗಿಯಾಗು, ಸ್ಪಿರಿಚ್ಯವಲ್ ಸೈಂಟಸ್ಟ್ ಆಗು ಎಂದು ರಾಯಭಾರ ಮಾಡುತ್ತಿದ್ದಾರೆ. ಅವರು ನಮ್ಮ ಮಾತು ಕೇಳಿಲ್ಲ ಎಂದರೆ ನಾವು ವಿಫಲರಾಗುವುದಿಲ್ಲ. ಈ ರಾಯಭಾರ ಮಾಡುತ್ತಿರುವವರೆಲ್ಲಾ ಯೋಗಿಗಳೇ ವಿಜಯಿಗಳೇ!!
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಚಪ್ಪಾಳೆಯ ಮೂಲಕ ನಮ್ಮ ಕೃತಜ್ಞತೆಗಳನ್ನು ತಿಳಿಸೋಣ. P.S.S.M ಅವರಿಗೆ ನಮಸ್ಕಾರಗಳನ್ನು ತಿಳಿಸುತ್ತದೆ. ಅಹಿಂಸಾ ಪರಮೋ ಧರ್ಮಃ ಮಾಂಸ ತಿನ್ನುವುದು ಪ್ರಾಣಿಗಳನ್ನು ಸಾಯಿಸುವುದು, ಮೀನುಗಳನ್ನು ತಿನ್ನುವುದು ಇವೆಲ್ಲವೂ ರಾಕ್ಷಸತನ. ನಿನಗೆ, ನಿನ್ನ ಮಗ, ಮಗಳು ಹೇಗೋ, ಹಾಗೆಯೇ ಮೇಕೆ, ಕೋಳಿ ಮೀನಿಗೆ ಅವುಗಳ ಮಕ್ಕಳು. ನಿನ್ನ ಮಕ್ಕಳು ಹುಟ್ಟಿದಾಗ ಹೇಗೆ ನೀನು ಹೇಗೆ ಸಂಭ್ರಮಿಸುವೆಯೋ ಹಾಗೆ ಆ ಪ್ರಾಣಿಗಳು ಕೂಡಾ. ಮೇರಾ ಭಾರತ್ ಮಹಾನ್ ಎನ್ನುತ್ತಾರೆ. ಗಾಂಧೀಜಯಂತಿ ಆಚರಿಸುತ್ತಾರೆ, ಚಿಕನ್ ಮಟನ್ ತಿನ್ನುತ್ತಾರೆ. ಮಹಾತ್ಮಾಗಾಂಧಿಯವರನ್ನು ರಾಷ್ಟ್ರಪಿತ ಎಂದಿರುವುದು ಏಕೆ?! ಅದಕ್ಕೇ, ವೇಮನ ಹೀಗೆ ಹೇಳಿದ್ದಾನೆ. ಪಕ್ಷಿಸಂಕುಲವನ್ನು ಹಿಡಿದು ಕ್ರೂರವಾಗಿ ಹಿಂಸಿಸಿ, ಹೊಟ್ಟೆಯೊಳಗೆ ಕೂಳು ತುಂಬಿಸಿಕೊಳ್ಳಲು, ಬೇಯಿಸಿ ತಿನ್ನುವವನು ವಸುಧೆಗೆ ದ್ರೋಹ ಮಾಡುವ ಚಂಡಾಲನು ಎಂದು ಹೇಳುತ್ತಾನೆ.
ಅದಕ್ಕೆ ಪತಂಜಲಿಯು ತನ್ನ ಅಷ್ಟಾಂಗಮಾರ್ಗದಲ್ಲಿ, ಯೋಗಸೂತ್ರದಲ್ಲಿ ಅರೇ ಮಗೂ ಆಸನಗಳನ್ನು ಹಾಕುವ ಮೊದಲು ಯಮವನ್ನಾಚರಿಸು. ಸತ್ಯ, ಅಹಿಂಸೆ, ಅಸ್ತ್ರೇಯ, ಅಪರಿಗ್ರಹ ಎನ್ನುತ್ತಾರೆ. ಸತ್ಯದೊಂದಿಗೆ ಜೀವಿಸಬೇಕು. ಅಹಿಂಸೆಯಲ್ಲಿ ಜೀವಿಸಬೇಕು, ಬ್ರಹ್ಮಚರ್ಯೆ ಎಂದರೆ, ಲೈಂಗಿಕತೆ ಇಲ್ಲದೇ ಜೀವಿಸುವುದಲ್ಲ, ಮಧ್ಯೆಮಾರ್ಗದಲ್ಲಿ ಜೀವಿಸುವುದು, ‘ಅಸ್ತ್ರೇಯ’ ಎಂದರೆ ನೆರೆಯವರ ಸ್ನೇಹ ಸಂಪಾದಿಸುವುದು, ಅಪರಿಗ್ರಹ ನಾವು ಯಾವುದನ್ನಾದರೂ ಅಳವಡಿಸಿಕೊಳ್ಳದೇ ಬಿಡಬಾರದು. ನೀನು ಚಿಕನ್, ಮಟನ್ ತಿಂದು ಯೋಗ ಮಾಡುವೆ ಎಂದರೆ ಹೇಗಯ್ಯಾ? ಮೊದಲೇ ಅವರು ಹೇಳಿದ್ದಾರಲ್ಲ, ಯಮ, ನಿಯಮ, ಸತ್ಯ, ಅಹಿಂಸೆ, ಬ್ರಹ್ಮಚರ್ಯೆ, ಅಸ್ತ್ರೇಯ, ಅಪರಿಗ್ರಹ ಎಂದು!
ನಾವು ಹಿಂಸೆ ಮಾಡುತ್ತಿದ್ದರೆ, ನಾವಿನ್ನೂ ಪಶುತ್ವವುಳ್ಳವರು, ಅನಾಗರಿಕರು. ತಮಗೆ ಅರಿವಿಲ್ಲದೇ ಒಬ್ಬ ಮನುಷ್ಯನನ್ನು ಹಿಂಸಿಸುತ್ತಿರುತ್ತಾರೆ. ಅವರಿಗೆ ಯಾವ ಪಾಪವೂ ಇರುವುದಿಲ್ಲ. ನಿನಗೆ ಅದು ಹಿಂಸೆ ಎಂದು ತಿಳಿದ ನಂತರ ಆ ತಪ್ಪು ಮಾಡಿದರೆ ಅದು ಮಹಾಪಾಪ.
P.S.S.M 25ನೆಯ ವರ್ಷದ ಸಂಭ್ರಮಾಚರಣೆ ಮಾಡಿದ ವರ್ಷದಲ್ಲೇ ಈ ಅಂತಾರಾಷ್ಟ್ರೀಯ ಯೋಗದಿನ ಬಂದಿರುವುದು ತುಂಬಾ ಖುಷಿಪಡುವ ವಿಚಾರ. 1960ರಲ್ಲಿ ನಮ್ಮ ಮೂವ್ಮೆಂಟ್ ಶುರುವಾಯಿತು. ಬುದ್ಧಾ ಪಿರಮಿಡ್ ಧ್ಯಾನ ಕೇಂದ್ರ, ಆ ದಿನ ರಿಜಿಸ್ಟರ್ ಆಯಿತು. ಕರ್ನೂಲು ಸ್ಪಿರುಚ್ಯುವಲ್ ಸೊಸೈಟಿ ಶುರುವಾಯಿತು. ಅಂದಿನಿಂದ ಶುರುವಾಯಿತು. ನಮ್ಮ ಯೋಗ!
ನನಗೆ ಸತ್ಯವಾಗಿದ್ದು, ಪತಂಜಲಿಗೆ ಸತ್ಯವಾಗಿದ್ದು. ಏಸುಪ್ರಭುವಿಗೆ ಸತ್ಯವಾಗಿದ್ದು, ಎಲ್ಲರಿಗೂ ಸತ್ಯವೇ. ಆದ್ದರಿಂದ ಸತ್ಯ ಸತ್ಯವೇ.
ಮೈ ಡಿಯರ್ ಫ್ರೆಂಡ್ಸ್, ಈ ದಿನವೆಲ್ಲಾ ನಾವು ಧ್ಯಾನದಲ್ಲಿದ್ದೆವು. ಆಯಾ ಸ್ಥಿತಿಯ ಜನರಿಗೆ ಆಯಾ ಹಂತದ ಯೋಗವಿದೆ.
ಆದಿಶಂಕರಾಚಾರ್ಯರಂತೆ ಅದ್ವೈತಯೋಗ ದಲ್ಲಿದ್ದೇವೆ. ಅದ್ವೈತ ಯೋಗವೆಂದರೆ, ನೀನು ನಾನು ಒಂದೇ. ಅ+ದ್ವೈತ.
ಧ್ಯಾನ ಸರ್ವರೋಗ ನಿವಾರಣಿ, ತಲೆನೋವಿನಿಂದ ಕ್ಯಾನ್ಸರ್ವರೆಗೂ ಎಲ್ಲಾ ಖಾಯಿಲೆಗಳು ದೂರವಾಗುತ್ತವೆ. ಇದರ ಬಗ್ಗೆ ರಿಸರ್ಚ್ ಮಾಡಿದ್ದಾರೆ ಡಾ||ಗೋಪಾಲಕೃಷ್ಣರವರು, (G.K.) ಪಿರಮಿಡ್ ಸ್ಪಿರುಚ್ಯುವಲ್ ಸೊಸೈಟಿಗೆ ಒಂದು ಕೋಹಿನೂರ್ ವಜ್ರದಂತವರು, ಡಾ||ಗೋಪಾಲಕೃಷ್ಣರವರು. ಸತ್ಯ ತಿಳಿದುಕೊಳ್ಳಬೇಕೆಂದರೆ ಅವರ ಸ್ಪಿರುಚ್ಯುವಲ್ ಟಾಬ್ಲೆಟ್ಸ್ ಪುಸ್ತಕಗಳನ್ನು ಓದಿ, (ಆಧ್ಯಾತ್ಮಿಕ ಮಾತ್ರೆಗಳು) ಅವರ ಬಳಿಗೆ ಯಾರು ಯಾವ ರೋಗದೊಂದಿಗೆ ಬಂದರೂ ಅವರು ಹೇಳುವುದಿಷ್ಟೆ! ಇನ್ನೂ ಸ್ವಲ್ಪ ಧ್ಯಾನ ಮಾಡು. ಈ ಪುಸ್ತಕಗಳನ್ನು ಓದು ಎನ್ನುತ್ತಾರೆ. ಅವರಿಗೆ ಚಪ್ಪಾಳೆಯ ಮೂಲಕ ಅಭಿನಂದಿಸೋಣ. ಇನ್ನೊಬ್ಬ ವಿದೇಶಿ ಮಹಿಳೆ ಇದ್ದಾರೆ. ಅವರ ಹೆಸರು ಆಲಿಯಾನ ಹಕಿನ್ಸನ್. ಈಕೆ ಬಹಷ್ಟು ಹಣವನ್ನು ಸಂಪಾದಿಸಿದ್ದರು. ಹೆಸರು ಪ್ರಖ್ಯಾತಿಗಳು ಬಂದವು. ಆದರೆ ಆಕೆ ಏನೂ ತಿನ್ನಲು ಆಗುತ್ತಿರಲಿಲ್ಲ, ರುಚಿಸುತ್ತಿರಲಿಲ್ಲ. ಮನಸ್ಸು ಅಶಾಂತತೆಯಿಂದ ಕೂಡಿತ್ತು, ಆಗ ಆಕೆ ಧ್ಯಾನಕ್ಕೆ ಬಂದಳು. ಆಕೆ ಒಂದು ಪುಸ್ತಕವನ್ನು ಬರೆದಳು, (Fired the bird matrix) ಆಗ ಆಕೆ ಹಣವಿದ್ದರೆ ಶಾಂತಿ ದೊರೆಯುವುದಿಲ್ಲ, ಆರೋಗ್ಯ ಇರುವುದಿಲ್ಲ ಎಂದು ಅರಿತಳು. ಧ್ಯಾನದಿಂದಲೇ ಸುಖ, ಶಾಂತಿ ಲಭಿಸುತ್ತದೆ ಎಂದು ಕಂಡುಕೊಂಡು, ಆಕೆಗೆ ಎಷ್ಟೋ ಡಿಪಾರ್ಟ್ಮೆಂಟ್ಗಳಿತ್ತು. ಪ್ರತಿಯೊಂದು ಆಫೀಸಿನಲ್ಲೂ ಧ್ಯಾನವನ್ನು ಹೇಳಿಕೊಟ್ಟಳು. ಧ್ಯಾನದಿಂದಲೇ ಸುಖ, ಸಂತೋಷಗಳು ಸಿಗುತ್ತದೆ ಇನ್ಯಾವುದರಿಂದಲೂ ಬರುವುದಿಲ್ಲ! ಕೆಲವರೂ ಧ್ಯಾನ ಮಾಡಿ ಎಂದು ಹೇಳಿದರೆ ನಾವು ಈಗ ಚೆನ್ನಾಗಿದ್ದೇವೆ ಎನ್ನುತ್ತಾರೆ. ಆದರೆ ಒಳಗೆ ಅವರ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ನಮ್ಮೊಳಗೂ, ಹೊರಗೂ ನಾವು ಚೆನ್ನಾಗಿರಬೇಕೆಂದರೆ ನಾವು ಧ್ಯಾನ ಮಾಡಬೇಕು. ಧ್ಯಾನವೆಂದರೆ “ಚಿತ್ತವೃತ್ತಿ ನಿರೋಧಃ” ಈ ವಿಶ್ವಯೋಗ ದಿನವೆಂದು ನಾವೆಲ್ಲರೂ ಇಲ್ಲಿ ಸೇರಿರುವುದು ಎಷ್ಟೋ ಸಂತಸವಾಗಿದೆ. ಯೋಗಿಗಳಿಗೆಲ್ಲಾ ಶುಭಾಶಯಗಳು.
Recent Comments