“ಸಾಮರಸ್ಯ”
ಪ್ರತಿಯೊಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನ ಜೊತೆ ಒಳ್ಳೆಯ ಸಹ ಜೀವನವನ್ನು ಹೊಂದಿರಬೇಕು. ಸಹೃದಯತೆ ಯಿಂದ ಇರಬೇಕು ಎನ್ನುವುದೇ ಸಾಮರಸ್ಯ. ಅದು ಹೇಗೆ ಬರುತ್ತದೆ ಎಂದರೆ ಯೋಗಾಭ್ಯಾಸದಿಂದ ಬರುತ್ತದೆ. ಇಲ್ಲಿ ಎರಡು ಅಂಶಗಳಿವೆ. ಅವು ಯಾವು ದೆಂದರೆ “ಯೋಗವೆಂದರೆ ಸಾಮರಸ್ಯಕ್ಕಾಗಿ”, “ಯೋಗವು ಶಾಂತಿಗಾಗಿ”, ಇನ್ನೊಬ್ಬ ಮನುಷ್ಯನ ಜೊತೆಯಾಗಿರುವುದೆಂದರೆ ಸಾಮರಸ್ಯ. ತನ್ನೊಂದಿಗೆ ತಾನು ಇರುವುದು ಎಂದರೆ ಶಾಂತಿ. ಮನಸ್ಸಿಗೆ ಶಾಂತಿ ಬರುತ್ತದೆ. ಎಲ್ಲಿ ಯೋಗಾಭ್ಯಾಸವಿಲ್ಲವೋ ಅಲ್ಲಿ ಶಾಂತಿಯು ಇಲ್ಲವೆಂದು ಅರ್ಥ. ಎಲ್ಲಿ ಯೋಗಾಭ್ಯಾಸವಿಲ್ಲವೋ ಅಲ್ಲಿ ಸಹೃದಯತೆ, ಸಹಚರ್ಯೆ ಇಲ್ಲ. ಸಾಮರಸ್ಯ ಎಂದರೆ, ಸಹಚರ್ಯೆ, ಸಹೃದಯತೆ.
ಸಾಮರಸ್ಯವೆಂದರೆ, ಒಗ್ಗಟ್ಟಾಗಿ ಇರುವುದು. ನಾವೆಲ್ಲರೂ ಒಂದೇ. ನಮ್ಮ ಅಭಿಪ್ರಾಯಗಳಲ್ಲಿ ಬೇಧ ಇರಬಹುದು. ಆದರೇ ನಾವೆಲ್ಲರೂ ಮೂಲಭೂತವಾಗಿ ಒಂದೇ. ನಾವು ಪರಸ್ಪರ ಕಿತ್ತಾಡಲು ಬಯಸುವುದಿಲ್ಲ. ನಾವು ಪರಸ್ಪರ ಸಾಮರಸ್ಯದಿಂದ ಇರಬೇಕು. ವೈಯಕ್ತಿಕ ಅಭಿಪ್ರಾಯವೇನಾದರೂ ಇರಬಹುದು. ಈ ಒಂದು ಯೋಗಭ್ಯಾಸದಿಂದಲೇ ಶಾಂತಿ ಬರುತ್ತದೆ. ಪ್ರತಿಯೊಬ್ಬರೂ ಯೋಗಿಯಾಗಲೇಬೇಕು. ನೀನು ನಿನ್ನ ಮನೆಯವರೊಂದಿಗೆ ನಿನ್ನ ಪಕ್ಕದ ಮನೆಯವರೊಂದಿಗೆ ಚೆನ್ನಾಗಿ ಜೀವಿಸಬೇಕೆಂದರೆ, ನಿನಗೆ ಯಾವಾಗಲೂ ಮನಃಶಾಂತಿ ಇರಬೇಕೆಂದರೆ, ಯೋಗವು ಸಾಮರಸ್ಯ ಮತ್ತು ಶಾಂತಿಗಾಗಿಬೇಕು. ಇಡೀ ವಿಶ್ವಕ್ಕೇ ಬೇಕು. ಅದಕ್ಕೆಂದೇ ಇಂದು ‘ವಿಶ್ವಯೋಗ’ ದಿನವಾಗಿದೆ. ಎಲ್ಲರಿಗೂ ಸಾಮರಸ್ಯಬೇಕು, ಶಾಂತಿ ಬೇಕು. ಇವೆರೆಡೂ ಸಿಗುವುದು ಯೋಗದಿಂದ ಮಾತ್ರ. ಯೋಗವೇ ನಮ್ಮ ಮಂತ್ರವಾಗಿರಬೇಕು.
ನಮ್ಮ ಭಾರತದೇಶವು ಉನ್ನತವಾದದ್ದು, ನಮ್ಮ ಪ್ರಪಂಚವು ಉನ್ನತವಾದದ್ದು. ನನ್ನ ಸೃಷ್ಟಿಯು ಉನ್ನತವಾದದ್ದು. ಏಕೆಂದರೆ ಅದು ಯೋಗದಿಂದಲೇ. ನಮ್ಮಲ್ಲಿ ಒಂದು ಮಾತಿದೆ. “ಅವನಿಗೆ ಯೋಗ ಬಂದಿದೆ” ಎನ್ನುತ್ತೇವೆ. ಆದರೆ ಹಾಗಲ್ಲ, ಯಾರು ಯೋಗಾಭ್ಯಾಸ ಮಾಡುತ್ತಾರೋ ಅವರಿಗೇ ಒಳ್ಳೆಯ ಯೋಗ ಬಂದಿದೆ. ಯೋಗವು ಆನಂದಕ್ಕೆ ಕಾರಣ, ವಿಯೋಗ ದುಃಖಕ್ಕೆ ಕಾರಣ. ವಿಯೋಗ ಎಂದರೆ “ವಿಕಟ ಯೋಗ”.
Recent Comments