“ಆತ್ಮಜ್ಞಾನ– ಬ್ರಹ್ಮಜ್ಞಾನ“
“ಆತ್ಮಜ್ಞಾನ” ಎಂದರೆ “ಆತ್ಮ ಕುರಿತು ಜ್ಞಾನ” –
ಅಂದರೆ, ನಮ್ಮ ಕುರಿತು ನಾವು ತಿಳಿದುಕೊಳ್ಳುವುದು,
“ನಾನು ಭೌತಿಕ ಶರೀರ ಮಾತ್ರವೇ ಅಲ್ಲ,
ಆತ್ಮವೂ ಸಹ” ಎಂದು ತಿಳಿದುಕೊಳ್ಳುವುದು;
“ನಾನು ಮೂಲ ಚೈತನ್ಯ” ಎಂದು ತಿಳಿದುಕೊಳ್ಳುವುದು.
ಇದೆಲ್ಲಾ ಧ್ಯಾನದಿಂದ ಮಾತ್ರವೇ ಸಾಧ್ಯ.
ಆತ್ಮಜ್ಞಾನ ಎನ್ನುವುದು ’ಮೊದಲನೆಯ ಮೆಟ್ಟಿಲು’, ಆದರೆ, ಬ್ರಹ್ಮಜ್ಞಾನ ಎನ್ನುವುದು ’ ಕೊನೆಯ ಮೆಟ್ಟಿಲು ’
ಬ್ರಹ್ಮಜ್ಞಾನ ಎಂದರೆ ಸಕಲ ಚರಾಚರ ಸೃಷ್ಟಿಯ ಕುರಿತು ಜ್ಞಾನ –
ಕೋಟ್ಯಾಂತರ ಲೋಕಗಳ ಕುರಿತು ಆದಷ್ಟು ಹೆಚ್ಚಿನ ಸುಸ್ಪಷ್ಟ ವಿಜ್ಞಾನ.
“ಆತ್ಮಜ್ಞಾನ” ಇಲ್ಲದೆ “ಬ್ರಹ್ಮಜ್ಞಾನ” ಎನ್ನುವುದು ಅಸಂಭವ.
ಒಬ್ಬ ಆತ್ಮಜ್ಞಾನಿಯನ್ನು “ಋಷಿ” ಎನ್ನುತ್ತೇವೆ; “ದ್ರಷ್ಟ” ಎನ್ನುತ್ತೇವೆ;
ಒಬ್ಬ ಬ್ರಹ್ಮಜ್ಞಾನಿಯನ್ನು “ಬ್ರಹ್ಮರ್ಷಿ” ಎನ್ನುತ್ತೇವೆ.
ತನ್ನ ಪರಿಪೂರ್ಣ ನಿಜ ಸ್ಥಿತಿಯನ್ನು ತಿಳಿದುಕೊಂಡಿರುವನು ಒಬ್ಬ ’ ಆತ್ಮಜ್ಞಾನಿ ’.
ತನ್ನ ಹೊರ ಪ್ರಕೃತಿಯನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಿರುವವನೇ ಒಬ್ಬ ’ ಬ್ರಹ್ಮಜ್ಞಾನಿ ’.
“ಬ್ರಹ್ಮಜ್ಞಾನಿ” ಆದಾಗ ಬ್ರಹ್ಮ ಪದವಿ ಲಭಿಸುತ್ತದೆ.
“ಬ್ರಹ್ಮ” ಅಂದರೆ, ಸೃಷ್ಟಿಕರ್ತ – Creator”
ಆತನು ಕೆಲವು ಆತ್ಮಗಳನ್ನೂ, ಕೆಲವು ಲೋಕಗಳನ್ನೂ ಸೃಷ್ಟಿಸಬಲ್ಲನು ;
ಸಕಲ ಲೋಕ ಜ್ಞಾನಿ ಆದವನೇ ನೂತನ ಲೋಕಗಳನ್ನು ಸೃಷ್ಟಿಸಬಲ್ಲನು ;
“ಸಹ ಸೃಷ್ಟಿ ಕರ್ತ-Co-Creator” ಆಗಬಲ್ಲನು.
ಆತ್ಮಜ್ಞಾನ ಎನ್ನುವುದು ಧ್ಯಾನದಿಂದ ಸಿಗುವ ದಿವ್ಯಚಕ್ಷುವಿನ ಪ್ರಾಥಮಿಕ ಸ್ಥಿತಿ ;
ಬ್ರಹ್ಮಜ್ಞಾನ ಎನ್ನುವುದು ದಿವ್ಯಚಕ್ಷುವಿನ ಪರಮ ಪರಿಪಕ್ವವಾದ ಸ್ಥಿತಿ.
Recent Comments