“ಇರುವ ಸ್ಥಿತಿಯಿಂದ ಉನ್ನತ ಸ್ಥಿತಿಗೆ”
ನಾವು ಇರುವ ಸ್ಥಿತಿಯಿಂದ ಉನ್ನತ ಸ್ಥಿತಿಗೆ ಹೋಗಬೇಕು. ಅದೇ ಜೀವನದ ಗುರಿ. ಅದಕ್ಕಾಗಿ ಕೃಷ್ಣನಿಂದ ಕಲಿತುಕೊಳ್ಳಬೇಕು ಜೀಸಸ್ನಿಂದ ಕಲಿಯಬೇಕು. ಅವರು ನೀಡಿದ ಜ್ಞಾನದಲ್ಲಿ ಜೀವಿಸಬೇಕು. ಅವರು ನುಡಿದ ಸತ್ಯದಲ್ಲಿ ಜೀವಿಸಬೇಕು. ಆ ಸತ್ಯವೇನು ?… ನಾನು ಈ ಶರೀರವಲ್ಲ ಆತ್ಮ.
ಇದು ಅನುಭವದಲ್ಲಿ ತಂದುಕೊಳ್ಳಬೇಕಾದರೆ … ಧ್ಯಾನ ಮಾಡಬೇಕು. ನಾವು ಎಂತಹ ಹೀನಸ್ಥಿತಿಯಲ್ಲಿದ್ದೇವೊ ನಮಗೆ ತಿಳಿದಿದೆ. ಈ ವಿಷಯ ಬೇರೆಯವರು ಹೇಳಬೇಕಾಗಿಲ್ಲ. ನಮಗೇ ತಿಳಿದಿದೆ … ನಮ್ಮ ಉನ್ನತಿಗಾಗಿ ನಾವು ಎಲ್ಲಾ ಮರತು ಧ್ಯಾನ ಸ್ಥಿತಿಯಲ್ಲಿರಬೇಕು… ಪ್ರತಿದಿನ…
ಎಲ್ಲಾ ಮರೆತು… ನಮ್ಮ ಪರಿವಾರ … ನಮ್ಮ ಅಂತಸ್ತು … ನಮ್ಮ ಸಿರಿ ಸಂಪತ್ತುಗಳು… ಎಲ್ಲಿದ್ದರೂ… ಹೇಗಿದ್ದರೂ…
ಯಾರು ಸತ್ಯ ತಿಳಿದುಕೊಳ್ಳುತ್ತಾರೋ ಅವರೇ ಶಾಸ್ತ್ರಜ್ಞರಾಗುತ್ತರೆ. ಸತ್ಯ ತಿಳಿಯದೇ … ಸತ್ಯಾನುಭವವಿಲ್ಲದೇ, ಸತ್ಯ ಪರಿಶೋಧನೆಗಳು ಮಾಡದೇ, ಯಾರೂ ಜೀವನ ಶಾಸ್ತ್ರಜ್ಞಲಾಗರಾರರು.
ಜೀವನವನ್ನು ಆಶಿಸಿದಷ್ಟು ಸುಲಭವಾಗಿ ತೆಗೆದುಕೊಳ್ಳುವವರು ಶಾಸ್ತ್ರಜ್ಞರಾಗಲಾರರು…
Recent Comments