“ಎಲ್ಲರೂ ಬುದ್ಧರಹಾಗೆ ಆಗಬೇಕು”

 

ಸಸ್ಯಾಹಾರವನ್ನೇ ಸೇವಿಸಬೇಕು. ಪ್ರಪಂಚದಲ್ಲಿ ಎಲ್ಲದಕ್ಕಿಂತ ದರಿದ್ರವಾದದ್ದು ಮಾಂಸ. ಮಾಂಸಾಹಾರಿಗಳೆಲ್ಲರೂ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಗಳಾಗಬೇಕು. ಪ್ರತಿ ಪ್ರಾಣಿಯೂ ದೈವಾಂಶವೇ.

ಸಸ್ಯಾಹಾರ ಭೋಜನ, ಅದೂ – ಮಿತವಾಗಿ ತಿನ್ನಬೇಕು. ನಾಲ್ಕು ಇಡ್ಲಿಗಳ ಬದಲಾಗಿ ಮೂರು ಇಡ್ಲಿಗಳು, ಮೂರು ಇಡ್ಲಿಗಳು ತಿನ್ನುವ ಬದಲು ಎರಡು ಇಡ್ಲಿಗಳು ತಿನ್ನಬೇಕು. ಗಾಂಧೀಜಿ ಅವರು ವಾರಕ್ಕೆ ಒಂದು ದಿನ ಉಪವಾಸ ಮಾಡುತ್ತಿದ್ದರು. ನಾವು ಕೂಡಾ ಉಪವಾಸ ಅಭ್ಯಾಸ ಮಾಡಬೇಕು. ದಿನವೆಲ್ಲಾ ಕೆಲಸ ಮಾಡಿ ಮಾಡಿ ಹೇಗೆ ರಿಲಾಕ್ಸ್ ಆಗಬೇಕೆಂದುಕೊಳ್ಳುತ್ತೇವೊ, ಸರಿಯಾಗಿ, ಹಾಗೆಂi, ನಮ್ಮ ಭೌತಿಕಶರೀರ ಸಹ ಹಾಗೇ. ನಾನು ಒಂದು ವರ್ಷ ಕೇವಲ ಜ್ಯೂಸ್‌ಗಳನ್ನು ಮಾತ್ರ ಕುಡಿದುಕೊಂಡಿದ್ದೆ.

ಬಾಲ್ಯದಿಂದಲೇ ಎಲ್ಲರೂ ಪಂಡಿತರಾಗಬೇಕು. ‘ಉಪನಯನ’ ಅಂದರೆ ಮೂರನೆಯಕಣ್ಣು ತೆರೆದುಕೊಳ್ಳುವುದು. ಚಿಕ್ಕವಯಸ್ಸಿನಲ್ಲೇ ಎಲ್ಲರೂ ಮೂರನೆಯ ಕಣ್ಣು ತೆರೆದುಕೊಂಡು ಇತರ ಲೋಕಗಳನ್ನು ದರ್ಶಿಸಬೇಕು. ಮೇಲಿರುವ ಲೋಕಗಳನ್ನು ದರ್ಶಿಸುವುದೇ ಉಪನಯನ. ಆಗಲೇ ಕೆಳಗಿನ ಲೋಕಗಳಲ್ಲಿ ದುಃಖಿಸದೆ ಆನಂದವಾಗಿ ಇರಲಾಗುವುದು. ಆಗಲೇ ನಾವು ‘Take it easy’ ಎನ್ನಲಾಗುವುದು.

ದುಃಖಿಸುವವರು, ಮಾನಸಿಕ ಉದ್ವೇಗಕ್ಕೆ (ಟೆನ್ಷನ್) ಒಳಗಾಗುವವರು … ಎಲ್ಲರೂ ಅಜ್ಞಾನಿಗಳು. ರಾಮನು ೧೪ ವರ್ಷಗಳು ವನವಾಸಕ್ಕೆ ಹೋದ. ರಾಮನಿಗೇನಾದರೂ ಮಾನಸಿಕ ಉದ್ವೇಗ (ಟೆನ್ಷನ್) ಇತ್ತಾ ? ಬಾಧೆ ಇತ್ತಾ ? ಅಳುತ್ತಿದ್ದನಾ ? ಇಲ್ಲವಲ್ಲ. ದಶರಥನಿಗೆ ಟೆನ್ಷನ್. ಬಾಧೆ, ನೋವು ಇದ್ದವು. ಜೀಸಸ್‌ನ ಶಿಲುಬೆಗೇರಿಸಿ ಮೊಳೆ ಹೊಡೆದರು. ಅವರಿಗೆ ಬಾಧೆಯಾಗಲಿ, ನೋವಾಗಲಿ, ಟೆನ್ಷನ್ ಆಗಲಿ ಆಗಿತ್ತಾ ? ಇಲ್ಲವಲ್ಲ. ನಾವು ಜೀಸಸ್, ಶ್ರೀಕೃಷ್ಣನ ಹಾಗೆ ಆಗದೇ ಇದ್ದರೆ ಪಾಮರರ ಹಾಗೆ ಇರುತ್ತೇವೆ. ಆದ್ದರಿಂದ, ನಾವು ಧ್ಯಾನಿಗಳ ಹಾಗೆ ಅಂದರೇ ಪಂಡಿತರಹಾಗೆ ಬದಲಾಗಬೇಕು.

ಎಲ್ಲರೂ ಬುದ್ಧನ ಹಾಗೆ ಆಗಬೇಕು.