“ಏತಕ್ಕಯ್ಯಾ ಮಾನವ ಜನ್ಮ ?”
ಮನಸ್ಸನ್ನು ಮರೆಸುವುದೇ ಧ್ಯಾನ. ಮನಸ್ಸನ್ನು ಮರೆಸಿದಾಗಲೇ ಆತ್ಮ ಪ್ರತ್ಯಕ್ಷವಾಗುತ್ತದೆ. ಒಂದು ಕಡೆ ಸಂಗೀತ ಇರುತ್ತದೆ, ಮತ್ತೊಂದು ಕಡೆ ಧ್ಯಾನ ಇರುತ್ತದೆ. ಇದರ ಹೆಸರೇ ಸಂಗೀತ ಧ್ಯಾನ ಯಜ್ಞ. ಎಲ್ಲಿ ‘ನಿನ್ನದು’, ‘ನನ್ನದು’ ಎಂಬುವ ಭಾವನೆ ಇಲ್ಲದೆ ಎಲ್ಲಾ ಮರೆತು ಹೋಗುತ್ತೇವೊ ಅಲ್ಲಿ ಆತ್ಮ ಪ್ರತ್ಯಕ್ಷವಾಗುತ್ತದೆ, ವಿರಾಜಿಸುತ್ತದೆ. ‘ಆಧ್ಯಾತ್ಮಿಕತೆ’ ಎಂದರೆ ‘ನಾನು’, ‘ನನ್ನದು’ ಎಂಬುವುದನ್ನು ಬಿಡುವುದು. ಭಗವದ್ಗೀತೆಯಲ್ಲಿ ಹೇಳಿದರೂ ಸರಿ … ಸಿನಿಮಾ ಹಾಡಿನಲ್ಲಿ ಹೇಳಿದರೂ ಸರಿ … ಸತ್ಯ ಒಂದೇ.
ಏತಕಯ್ಯಾ ಮಾನವಜನ್ಮ? ಇದರ ಅರ್ಥ ಅನೇಕ ಜನ್ಮಗಳ ನಂತರ ಮಾನವನು ಧ್ಯಾನಕ್ಕೆ ಬರುತ್ತಾನೆ. ಧ್ಯಾನದಲ್ಲಿ ಬರುವವನೇ ತನ್ನ ಕೊನೆಯ ಜನ್ಮವನ್ನು ಆರಿಸಿಕೊಂಡಿರುವವನು. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಅವರು ಎಲ್ಲರಿಗೂ ಧ್ಯಾನವಿದ್ಯೆ ಬೋಧಿಸಿ ಎಲ್ಲರನ್ನೂ ಧ್ಯಾನ ಸಾಧಕರನ್ನಾಗಿ ತಯಾರು ಮಾಡುತ್ತಿದ್ದಾರೆ. ಪ್ರಸ್ತುತ ಕ್ರಿಯೆ ಸಂಗೀತ ಧ್ಯಾನ ಕ್ರಿಯೆ. ಸಂಗೀತದಿಂದ ನಾವು ಇನ್ನೂ ಉತ್ತಮವಾಗಿ ಧ್ಯಾನವಂತರಾಗುತ್ತೇವೆ.
ಮನುಷ್ಯ ತಿಂದು, ಉಂಡು, ನಿದ್ದೆ ಮಾಡಲು ಹುಟ್ಟಲಿಲ್ಲ. ಸ್ವಲ್ಪ ತಿಂದು, ಸ್ವಲ್ಪ ನಿದ್ರಿಸಿ, ಮತ್ತು ಹೆಚ್ಚು ಧ್ಯಾನಮಾಡಲು ಬಂದಿದ್ದೇವೆ.
ಎರಡು ಕಣ್ಣಿರುವವನು, ಮೂರು ಕಣ್ಣಿನವನಾಗಬೇಕು, ‘ಮುಕ್ಕಣ್ಣ’ ನಾಗಬೇಕು. ಯಾವಾಗ ಮನಸ್ಸು ಶೂನ್ಯವಾಗುತ್ತದೆಂi ವಿಶೇಷವಾಗಿ ಪ್ರಾಣಶಕ್ತಿ ನಮ್ಮಲ್ಲಿ ಪ್ರವಹಿಸುತ್ತದೆ. ಅದೇ ನಮಗೆ ಬೇಕಾಗಿರುವುದು.
ನಾವೇ ದೇವರುಗಳು. ಜೀವನೇ ದೇವನು, ದೇಹವೇ ದೇವಾಲಯ, ಆತ್ಮವೇ ಪರಬ್ರಹ್ಮ, ಇದೇ ಸತ್ಯ.
ಯೋಗಿ ವೇಮನ ನಮಗೆ ಎಷ್ಟು ಧ್ಯಾನ ಸಾರವನ್ನು, ಆತ್ಮಜ್ಞಾನ ಸಾರವನ್ನು ನೀಡಿದರೋ ಹೇಳಲಾಗುವುದೇ ಇಲ್ಲ. ಅಷ್ಟೇ ಅಲ್ಲದೆ ಯೋಗಿ ವೇಮನ ನಮಗೆ ಒಳ್ಳೆಯ ಕಾಮನ್ಸೆನ್ಸ್ ಸಹ ಕೊಟ್ಟಿದ್ದಾರೆ.
ಕಲ್ಲು ಕಲ್ಲೇ; ಒಂದು ವೃಕ್ಷ ವೃಕ್ಷವೇ; ಒಂದು ಪ್ರಾಣಿ ಪ್ರಾಣಿಯೇ; ಒಬ್ಬ ಮಾನವನು ಮಾನವನೇ; ಶಿವನು ಮಾತ್ರವೇ ಶಿವನು. ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ? ಎಂದು ನೊಂದುಕೊಳ್ಳುತ್ತಿದ್ದಾನೆ ಯೋಗಿ ವೇಮನ.
ಸ್ವಲ್ಪ ಮನಸ್ಸನ್ನು ಏಕಾಗ್ರತೆಯಲ್ಲಿ ಇಟ್ಟರೆ, ಮನಸ್ಸಿನ ಚಂಚಲ ಸ್ವಭಾವವನ್ನು ಸ್ವಲ್ಪ ಅಚಂಚಲ ಮಾಡಿದರೆ … ಮೇಲೆ ಲೋಕಗಳಲ್ಲಿರುವ ಅನೇಕಾನೇಕ ಮಂದಿ ಆಸ್ಟ್ರಲ್ ಮಾಸ್ಟರ್ಸ್ ನಮಗೆ ಹತ್ತಿರವಾಗುತ್ತಾರೆ.
ತಿರುಪತಿಗೆ ಹೋಗುವವನೇ ದೇವನು. ಕಾಶಿಗೆ ಹೋಗುವವನೇ ದೇವನು. ಮಕ್ಕಾಗೆ ಹೋಗುವವನೇ ದೇವನು. ಯಾರು ದೇವನು ? ಎಲ್ಲಿದ್ದಾರೆ ದೇವರು ? ಎಂದು ಹುಡುಕುವವನೇ ದೇವನು.
‘ಮುಕ್ತಿ’ ಎಂಬುವುದು ಹತ್ತು ಲಕ್ಷಗಳ ಗಾವುದ ದೂರದಲ್ಲಿಲ್ಲ. ತ್ರಿಕರಣಶುದ್ಧಿ ಎಂಬುವುದು ಮೊದಲನೆಯ ಮೆಟ್ಟಲು. ಧ್ಯಾನ ಎಂಬುವುದು ಎರಡನೆಯ ಮೆಟ್ಟಲು. ನಿಜವಾಗಲೂ ನಾವು ಮುಕ್ತಿಯನ್ನು ಕೊರುವವರಾದರೇ ನಿಜವಾಗಲೂ ಧ್ಯಾನ ಮಾಡುತ್ತೇವೆ.
ಆಂಜನೇಯಸ್ವಾಮಿ ಎರಡು ವರ್ಷ ವಯಸ್ಸಿನಿಂದಲೇ ಧ್ಯಾನ ಮಾಡಿ ಮಹನೀಯರಾದರು. ನಾವು ಏಕೆ ಧ್ಯಾನ ಮಾಡುತ್ತಿಲ್ಲ? ಧ್ಯಾನ ಮಾಡಿದರೆ ನಾವು ಕೂಡಾ ಅಂತಹ ಶ್ರೇಷ್ಠ ವ್ಯಕ್ತಿಯಂತೆ ಆಗುತ್ತೇವಲ್ಲವೆ.
Recent Comments