“ಕರ್ಮಬದ್ಧನು”
ಕರ್ಮಗಳನ್ನು
ಮಾಡಲೇಬೇಕು.
ಅಕರ್ಮನಾಗಿ ಎಂದಿಗೂ ಇರಬಾರದು …
ಸೋಲುತ್ತೇವೆಂದು ತಿಳಿದರೂ ಸರಿಯೇ.
* * *
ಪ್ರಾರಂಭದಲ್ಲಿ ಅಪಜಯವಾದರೂ,
ಅಪಜಯ ಸಹ ವಿಜಯ ಪರಂಪರೆಯ ಒಂದು ಮೆಟ್ಟಿಲೇ ಎಂದು ಗ್ರಹಿಸಬೇಕು.
* * *
ಕರ್ಮಗಳನ್ನು ಮಾಡಲೇಬೇಕು
ಧರ್ಮಾಧರ್ಮಗಳು ಸರಿಯಾಗಿ ತಿಳಿಯದೆ ಇದ್ದರೂ ಸರಿಯೇ
ಕರ್ಮಬದ್ಧನಾಗಿರುವವನಿಗೆ
ಧರ್ಮಾಧರ್ಮ ಜ್ಞಾನ ಕ್ರಮಕ್ರಮವಾಗಿ ಖಂಡಿತ ಉಂಟಾಗುತ್ತದೆ.
* * *
ಪ್ರತಿಯೊಬ್ಬರೂ ಕರ್ಮಗಳನ್ನು ಮಾಡುತ್ತಲೇ ಇರಬೇಕು
“ಮಾ ತೇ ಸಂಗೋಸ್ತ ಕರ್ಮಣಿ” ಎಂದಲ್ಲವೇ ಗೀತಾಕಾರನು ಹೇಳಿದ್ದು.
* * *
ಸೋಮಾರಿಯಾಗಿ, ತಮೋಗುಣಿಯಾಗಿ,
ಅಕರ್ಮನಾಗಿ ಯಾರೂ, ಎಂದಿಗೂ ಇರಬಾರದು
’ನಾಳೆ’ ಎಂದು ಯಾರೂ, ಎಂದಿಗೂ ಹೇಳಬಾರದು.
* * *
ಕರ್ಮಬದ್ಧನು ಎಂದಿಗೂ ಅಗ್ರಜನೇ
ಅಕರ್ಮನು ಸದಾ ಕಟ್ಟಕಡೆಯವನೇ.
Recent Comments