“ನಿಜವಾದ ಅಸ್ತಿತ್ವ”
“ನೀರಿಗೆ ತಗ್ಗಿನಲ್ಲಿ ಸಲೀಸಾಗಿ ಹೇಗೆ ಹರಿಯಬೇಕೊ ತಿಳಿದಿದೆ, ಹಾಗೆಯೆ ಧ್ಯಾನಿಗೆ ಸುಲಭ ರೀತಿಯಲ್ಲಿ ಮೋಕ್ಷ ಹೇಗೆ ಪಡೆಯಬಹುದೊ ತಿಳಿದಿದೆ. ಧ್ಯಾನ ಮಾಡಿದರೆ ಮೋಕ್ಷ ಸಿಗುತ್ತದೆ. ಹೆಚ್ಚಾಗಿ ಧ್ಯಾನ ಮಾಡಿದರೆ ಮಹಾಮೋಕ್ಷ ಸಿಗುತ್ತದೆ. ಧ್ಯಾನ ಮಾಡಿದರೆ ಮೋಕ್ಷದ ಜೊತೆ ಆರೋಗ್ಯ, ಐಶ್ವರ್ಯ ಸಹ ಬರುತ್ತದೆ. ನನ್ನ ಹತ್ತಿರ ಒಂದು ಪೈಸಾ ಇಲ್ಲ ಆದರೂ ವಿಮಾನಗಳಲ್ಲಿ ತಿರುಗುತ್ತಿದ್ದೇನೆ. ಹೇಗೆ ಓಡಾಡುತ್ತಿದ್ದೇನೆ ?” ಪ್ರತಿ ಮನುಷ್ಯ ಬ್ರಹ್ಮ ಸ್ವರೂಪನೆ, ತ್ರಿನೇತ್ರನೆ. ಎಲ್ಲಾ ಇದೆ ಆದರೆ ಏನು ಲಾಭ? ಅಂಗಡಿಯಲ್ಲಿ ಎಲ್ಲಾ ಇದೆ…ಆದರೆ ಅಳಿಯನ ಬಾಯಲ್ಲಿ ಶನಿ ಇದೆ ಎಂದು ಹೇಳಿದ ಹಾಗೆ ತನ್ನ ಬಾಯಿಯನ್ನು ಗಬ್ಬು ಮಾಡಿಕೊಂಡು ಭ್ರಷ್ಟನಾಗುತ್ತಿದ್ದಾನೆ. ಮಾಂಸಾಹಾರ ತಿಂದು ಅರ್ಧ ಭಾಗ … ಪರರನ್ನು ನಿಂದಿಸಿ ಅರ್ಧ ಭಾಗ. ಶನಿದೇವತೆಯರು ಎಲ್ಲೋ ಇಲ್ಲ ಅವರಷ್ಟಕ್ಕೆ ಅವರೆ ಆ ಪರಿಸ್ಥಿತಿಯನ್ನು ತಂದುಕೊಳ್ಳುತ್ತಿದ್ದಾರೆ. ’ ಶನಿ ’ ಎಂಬುವ ಅಕ್ಷರವನ್ನು ಹಿಂದೆ ಮುಂದಕ್ಕೆ ಬರದರೇ ’ನಿಶ’ ಎಂದು ಬರುತ್ತದೆ. ಕತ್ತಲೆಯ ಜೀವನವನ್ನು ಜೀವಿಸುತ್ತಿದ್ದಾರೆ. ಧ್ಯಾನ ಮಾಡುವುದನ್ನು ಮುಂದುವರಿಸಿದರೇನೆ ತನ್ನ ನಿಜವಾದ ಅಸ್ತಿತ್ವವನ್ನು ಹೊಂದಬಲ್ಲರು. ಹಾಗೆಯೆ ’ ಶ್ವಾಸದ ಮೇಲೆ ಗಮನ ’ವನ್ನು ಇಟ್ಟರೆ ಬೋಧಿಸತ್ವನು, ಅದರ ಜೊತೆ ಆಧ್ಯಾತ್ಮಿಕ ಕೆಲಸಗಳನ್ನು ನಿರಂತರ ಮಾಡಿದರೆ ಬುದ್ಧರಾಗುತ್ತಾರೆ. “
Recent Comments