“ಪಿರಮಿಡಾಯಣ”
ರಘುಪತಿ ರಾಘವ ರಾಜಾರಾಂ; ಪತಿತ ಪಾವನ ಸೀತಾರಾಂ !
ಈಶ್ವರ ಅಲ್ಲಾ ತೇರೇನಾಂ; ಸಬ್ಕೋ ಸನ್ಮತಿ ದೇ ಭಗವಾನ್ !
ಪ್ರಖ್ಯಾತಿ ಹೊಂದಿರುವಂತಹ ಈ ಹಾಡನ್ನು ಕೇಳುತ್ತಲೇ ನೆನಪಿಗೆ ಬರುವವರು ಗಾಂಧೀಜಿ.
ಗಾಂಧೀಜಿಗೆ ರಾಮನು ತುಂಬಾ ಪ್ರೀತಿಪಾತ್ರನು.
ಕಾರಣ … ರಾಮ, ಗಾಂಧಿ ಇಬ್ಬರೂ ಒಂದೇ ಗೂಡಿಗೆ ಸೇರಿರುವ ಹಕ್ಕಿಗಳು…
ವಿಶುದ್ಧ ಚಕ್ರಕ್ಕೆ ಪ್ರತೀತಿ.
* * *
ಅವರಿಬ್ಬರೂ ಸಹಸ್ರಾರಕ್ಕೆ ಹೊಂದಿರುವರಾದರೂ
ವಿಶುದ್ಧಕ್ಕೆ ಪ್ರತಿಬಿಂಬವಾಗಿ ವಿಕಸಿಸಲು ಈ ಜನ್ಮವನ್ನು ಪಡೆದಿರುವವರು.
ಒಂದು ಶಾಸ್ತ್ರವನ್ನು ತುಂಬಾ ಚೆನ್ನಾಗಿ ಅಭ್ಯಾಸ ಮಾಡಿರುವಂತಹ ಮೇಧಾವಿ,
ಚಿಕ್ಕ ಮಕ್ಕಳಿಗೆ ಆ ಶಾಸ್ತ್ರವನ್ನು ಅವರ ಮಟ್ಟಕ್ಕೆ ತಕ್ಕಹಾಗೆ ಅದ್ಭುತವಾಗಿ ಬೋಧಿಸಿದಂತಹ
ರೀತಿಯಲ್ಲಿ ಅವರಿಬ್ಬರೂ ಅವರವರ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ಮಾಡಿತೋರಿಸಿದರು.
* * *
ವಿಶುದ್ಧ ಚಕ್ರ , ಅಂದರೆ, ವಿಪರೀತವಾದ ಶುದ್ಧತೆಯನ್ನು ಹೊಂದಿರುವುದು ಎಂದು ಅರ್ಥ.
ಅಂದರೆ, ವ್ಯಾವಹಾರಿಕ ಧರ್ಮಾನುಸಾರ ಪರಿಪೂರ್ಣವಾಗಿ ಪ್ರವರ್ತಿಸುವುದೆಂದು ಅರ್ಥ.
ಪಾಂಚಭೌತಿಕ ಜ್ಞಾನ ಮಾತ್ರವೇ ಹೊಂದಿರುವ ಸಾಧಾರಣ ಪ್ರಜೆಗಳಿಗೆ
ಅತ್ಯಂತ ಆದರ್ಶವಂತರಾಗಿ ಕಾಣಿಸುವವರು ವಿಶುದ್ಧದಲ್ಲಿರುವವರು ಮಾತ್ರವೇ.
ಆಮೇಲೆ ಇರುವ ಆಜ್ಞ, ಸಹಸ್ರಾರ ಮಟ್ಟಗಳಲ್ಲಿ ಪ್ರವರ್ತಿಸುವ ವ್ಯಕ್ತಿಗಳ ಶೈಲಿ, ಔನ್ನತ್ಯ ಅವರಿಗೆ ಅರ್ಥವಾಗುವುದಿಲ್ಲ.
* * *
ವರಸೆ ಕ್ರಮದಲ್ಲಿ …
ಮೂಲ, ಸ್ವಾಧಿಷ್ಠಾನ, ಮಣಿಪುರ ಚಕ್ರಗಳು ಅಶುಭವನ್ನೂ,
ಅನಾಹತ, ವಿಶುದ್ಧ ಚಕ್ರಗಳು ಶುಭವನ್ನೂ,
ಆಜ್ಞಾ ಚಕ್ರ ಆತ್ಮಜ್ಞಾನವನ್ನೂ,
ಸಹಸ್ರಾರ ಚಕ್ರಾತೀತ ಸ್ವಭಾವವನ್ನೂ … ಸೂಚಿಸಿ, ಶುಭಾಶುಭಗಳಿಗೆ ಅತೀತವಾದ
ಸತ್ಯಾನುಸಂಧಾನವನ್ನು ಪ್ರದರ್ಶಿಸಿದೆ.
* * *
ಅದಕ್ಕೇ . . . .
ಕಳೆದ ಪಾಂಚಭೌತಿಕವಾದ ಕಾಲಕ್ಕೆ
ರಾಮಾಯಣ
ಶ್ರೀರಾಮನ ಕಥೆ
ಪಿತೃವಾಕ್ಯ ಪರಿಪಾಲನೆ
ಅಂತಹದು ಆದರ್ಶಗಳಾಗಿ ಉಳಿದರೇ…
ಬರಲಿರುವ ಕಾಲಕ್ಕೆ ಆತ್ಮಜ್ಞಾನಮಯವಾಗಿ ನಿಲ್ಲುವ
ಪಿರಮಿಡಾಯಣ
ಪಿರಮಿಡ್ ಮಾಸ್ಟರ್ಗಳ ಕಥೆ
ಸತ್ಯವಾಕ್ ಪರಿಸಾಧನೆ
ಅಂತಹದು ಮೈಲುಗಲ್ಲಾಗಿ ನಿಲ್ಲುತ್ತವೆ.
* * *
ನೂತನ ಯುಗ ಆಧ್ಯಾತ್ಮಿಕ ಸಂಶೋಧನೆ ಮಾಡುವವರೇ ಪಿರಮಿಡ್ ಮಾಸ್ಟರ್ಸ್
ಇವರೆಲ್ಲಾ ಸರಿತಪ್ಪುಗಳಿಗೆ ಅತೀತವಾದ ಪಿತೃವಾಕ್ಯ ಪರಿಪಾಲನೆಗೆ ಅಂತಿಮ ಗೀತೆಯನ್ನು ಹಾಡಿ,
ಪ್ರಹ್ಲಾದನ ದಾರಿಯಲ್ಲಿ ಸಾಗಿ ಸತ್ಯಕ್ಕೆ ಮಾತ್ರವೇ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಆದ್ದರಿಂದಲೇ . . .
“ ಸತ್ಯಂ ಶರಣಂ ಗಚ್ಛಾಮಿ “
“ಸತ್ಯ ವಾಕ್ಯಂ ಶರಣಂ ಗಚ್ಛಾಮಿ”
“ಸತ್ಯವಾಕ್ ಪರಿಸಾಧನೆ ಶರಣಂ ಗಚ್ಛಾಮಿ”
ಇವೇ ಪಿರಮಿಡಾಯಣದ ಘೋಷಣಾ ವಾಕ್ಯಗಳು !
Recent Comments