“ಪಿರಮಿಡ್ ಹಿತವಚನಗಳು

 

ಸ್ವಲ್ಪ ಶ್ವಾಸ – ಬೆಟ್ಟದಷ್ಟು ಸಂಜೀವನಿ.

ಬಾಯಿಂದ ಬರುವ ಮಾತೆ – ಹಣೆಯ ಮೇಲೆ ಬರಹ.

ಬಾಯಿಂದ ಇದ್ದಿಲಿನ ಹಾಗೆ ಮಾತುಗಳು ಬಂದರೇ – ಹಣೆಯ ಮೇಲೆ ಇದ್ದ್ಜಿಲಿನ ಹಾಗೆ ಬರಹಗಳು.

ಬಾಯಿಂದ ಚಿನ್ನದಂತಹ ಮಾತುಗಳು ಬಂದರೆ – ಹಣೆಯ ಮೇಲೆ ಚಿನ್ನದಂತಹ ಬರಹಗಳು.

ಬಾಯಿಂದ ವಜ್ರದ ತುಣುಕುಗಳು ಬಂದರೆ – ಹಣೆಯ ಮೇಲೆ ವಜ್ರದ ಬರಹಗಳು.

ಸಕಲ ಪ್ರಾಣಿಕೋಟಿಯ ಜೊತೆ ಮಿತ್ರತ್ವ – ಅದರ ಹೆಸರೇ ಬುದ್ಧತ್ವ.

ಸಹಿಸಿಕೊಂಡಷ್ಟೇ – ಕಲಿತುಕೊಂಡಷ್ಟು

ಹೇಳಿಕೊಟ್ಟಷ್ಟೇ – ಕಲಿತುಕೊಂಡಷ್ಟು

ಕಲಿತುಕೊಂಡಷ್ಟೇ – ಕಲಿಕೆಯಿರುವಷ್ಟು

ಕಲಿಕೆಯಿರುವಷ್ಟೇ – ಭಾಗ್ಯವಂತೆ

ಹಿಂಸೆ ಹೆಚ್ಚಾದರೆ – ಪ್ರತಿಹಿಂಸೆ

ಹಂಸೆ ಹೆಚ್ಚಾದರೆ – ಪರಮಹಂಸ

ಧ್ಯಾನ ಎಂಬುವುದು ಒಂದು ಪುಷ್ಪ

ಆದರೆ, ಧ್ಯಾನ ಪ್ರಚಾರ ಎಂಬುವುದು ಹೂವಿನ ಪರಿಮಳ

ಸುಗಂಧವಿಲ್ಲದ ಪುಷ್ಪ ಪುಷ್ಪವಾ ?

ಧ್ಯಾನ ಪ್ರಚಾರವಿಲ್ಲದ ಧ್ಯಾನ ಧ್ಯಾನವೇನಾ ?

ಭೂತಕಾಲ ಎಂಬುವುದು ವರ್ತಮಾನವನ್ನು ಹೀರಿ ಸಿಪ್ಪೆ ಮಾಡುವ ಪ್ರೇತ ಪಿಶಾಚಿ.

ಭೂತಕಾಲ ವರ್ತಮಾನದಲ್ಲಿ ತಾಂಡವ ಮಾಡಿದರೆ ವರ್ತಮಾನ ನಿರ್ವೀರ್ಯ, ನಿಷ್ಫಲ.

ಭೂತಕಾಲದ ಛಾಯೆಗಳು ವರ್ತಮಾನದಲ್ಲಿ ಇಲ್ಲದಿದ್ದರೆ ವರ್ತಮಾನ ಸವೀರ್ಯ, ಫಲಯುತ, ಜಯಪ್ರದ.

ಕಳೆದ ಘಟನೆಯ ಬಗ್ಗೆ ತಿಳಿದರೇನೆ ವರ್ತಮಾನ ಅರ್ಥವಾಗುತ್ತದೆ.

ಅರ್ಥವಾಗಿರುವ ವರ್ತಮಾನವೇ ಬಹುಮಾನ.

ಇರುವುದೆಲ್ಲಾ ಅನುಭವಿಸಲಿಕ್ಕಾಗಿಯೇ.

ಅನುಭವವೇ ಜ್ಞಾನ.

’ ಇರುವುದೆಲ್ಲಾ ’ ಎಂದರೆ ?

’ ಇರುವುದೆಲ್ಲಾ ’ ಎಂದರೆ ಸಿರಿತನವಾಗಲಿ, ಬಡತನವಾಗಲಿ,

ಮಾನವಾಗಲಿ, ಅವಮಾನವಾಗಲಿ

ಜಯವಾಗಲಿ, ಅಪಜಯವಾಗಲಿ,

ಜನನವಾಗಲಿ, ಮರಣವಾಗಲಿ.

* ಸಕಲ ಪ್ರಾಣಿಕೋಟಿಯ ಜೊತೆ ಮಿತ್ರತ್ವ – ಅದರ ಹೆಸರೇ ಬುದ್ಧತ್ವ.