ಪ್ರಕೃತಿ – ವಿಕೃತಿ

 

‘ಪ್ರಕೃತಿ’ಗೆ ವ್ಯತಿರೇಕವಾಗುವುದೇ ‘ವಿಕೃತಿ’.

‘ಪ್ರಕೃತಿ’ಯ ಜೊತೆ ಇದ್ದರೆ ‘ವಿಕೃತಿ ಬುದ್ಧಿ’ ಇಲ್ಲದೇ ಇರುತ್ತೇವೆ. ವಿಕೃತಿ ಮನಸ್ಸು ಇರುವುದಿಲ್ಲ.

‘ಪ್ರಕೃತಿ’ಯ ಜೊತೆ ಇದ್ದರೆ ಒಂದು ತರಹ ಇರುತ್ತೇವೆ; ಪ್ರಕೃತಿಯ ಜೊತೆ ಜೀವಿಸದೆ ಇದ್ದರೇ, ಇನ್ನೊಂದು ತರಹ, ಅಂದರೆ ಅಧ್ವಾನವಾಗಿ ತಯಾರಾಗುತ್ತೇವೆ.

‘ಪ್ರಕೃತಿ’ ಎಂದರೇ ಬೆಟ್ಟಗಳು, ಮರಗಳು, ಪಕ್ಷಿಗಳು – ಇವೆಲ್ಲಾ ಸ್ಥೂಲ ಪ್ರಕೃತಿ – ಚರ್ಮ ಚಕ್ಷುವಿನಿಂದ ನೋಡುವುದು.

ಆದರೆ ಪ್ರಕೃತಿಯ ಜೊತೆ ಜೀವಿಸುವುದು ಎಂದರೆ ಸ್ಥೂಲ ಪ್ರಕೃತಿಯ ಜೊತೆ ಜೀವಿಸುವುದು ಅಲ್ಲ.

ಬಗೆಬಗೆಯ ಪ್ರಕೃತಿಗಳಿವೆ – ೧.ಚರ್ಮ ಚಕ್ಷುವಿನಿಂದ ನೋಡುವ ಪ್ರಕೃತಿ, ೨.ದಿವ್ಯಚಕ್ಷುವಿನಿಂದ ನೋಡುವ ಪ್ರಕೃತಿ – ಅದು ಬ್ರಹ್ಮಾಂಡಕರವಾದದ್ದು. ಅನೇಕ ಲೋಕಗಳು ಇರುವುದು – ‘ಸೂಕ್ಷ್ಮ’, ‘ಕಾರಣ’, ‘ಮಹಾಕಾರಣ’ ಲೋಕಗಳಿಂದ ಕೂಡಿರುವ ಪ್ರಕೃತಿ ದಿವ್ಯಚಕ್ಷುವಿನಿಂದ ನೋಡುವುದು.

ಪ್ರಕೃತಿಯ ಜೊತೆ ಜೀವಿಸುವುದು ಎಂದರೆ ನಮ್ಮ ಕಣ್ಣಿಗೆ ಕಾಣುವ ಪ್ರಕೃತಿಯ ಜೊತೆಯೇ ಅಲ್ಲದೆ, ಕಣ್ಣಿಗೆ ಕಾಣದ ಸೂಕ್ಷ್ಮ, ಕಾರಣ, ಮಹಾಕಾರಣ ಪ್ರಕೃತಿಯ ಜೊತೆ ಸೇರಿರುವುದು. ಆಗಲೇ ಸರಿಯಾದ ಶಾಸ್ತ್ರೀಯ ಪುರುಷರಾಗಿ, ಸರಿಯಾದ ವಿಶ್ವಜೀವಿಗಳಾಗಿ ಪರಿಣಮಿಸುತ್ತೇವೆ. ಅಷ್ಟೇ ಅಲ್ಲದೆ, ಅನೇಕ ಜನ್ಮಗಳಿಂದ ಸಂಪಾದಿಸಿಕೊಂಡ ನಮ್ಮ ‘ಭಾವಸಂಪತ್ತು’, ‘ಮನೋವಿಕಾಸ’ ಮುಂತಾದರ ಜೊತೆ ಕೂಡಾ ಚೆನ್ನಾಗಿ ಜೀವಿಸಬೇಕು. ನಮ್ಮಲ್ಲಿರುವ ನ್ಯೂನತ್ತ್ವ (ಕೊರತೆ) ಔನತ್ಯಗಳಿಂದ ಕೂಡಾ ಚೆನ್ನಾಗಿ ಜೀವಿಸುವುದು ಎಂದು ಹೇಳುತ್ತೇವೆ. ನಮ್ಮನ್ನು ನಾವು ಹೀನಾಯವಾಗಿ ನೋಡಿಕೊಳ್ಳಬಾರದು. ಹಾಗೆಯೇ, ಮನುಷ್ಯ ಸಹ ಪ್ರಕೃತಿಯಲ್ಲಿ ಭಾಗವೇ. ಹಾಗೆಂi ಇತರೆ ಪ್ರಾಣಿಕೋಟಿಯ ಜೊತೆ ಕೂಡಾ ಸಹೃದಯದಿಂದ ಜೀವಿಸಬೇಕು.

ಬಗೆಬಗೆಯ ಪ್ರಕೃತಿಗಳಿಗೆ ಮೂಲವಾದದ್ದು ಮೂಲಪ್ರಕೃತಿ – ‘ಮೂಲ ಚೈತನ್ಯ’-ಅಲ್ಲಿ ‘ಅದ್ವೈತ’ವಾಗಿ ಜೀವಿಸುವುದು, ಬೇರೊಂದು ಇಲ್ಲದೇ ಜೀವಿಸುವುದು; ‘ಅದ್ವೈತಾನುಭೂತಿ’ ಹೊಂದುವುದೆಂಬುವುದು ಕೇವಲ ‘ಧ್ಯಾನ’ದಿಂದಲೇ ಸಾಧ್ಯ; ಅದು ‘ಮಹಾಪ್ರಕೃತಿ’ಯ ಜೊತೆ ಸೇರಿ ಜೀವಿಸುವಂತಹದ್ದು, ಇಲ್ಲಿ ಕೇವಲ ಪುರುಷರಾಗಿ, ‘ಪರಮಾತ್ಮ’ರಾಗಿ ನಾವು ಜೀವಿಸುತ್ತೇವೆಂದು ಅರ್ಥ.

ಉಳಿದ ಪಕೃತಿ ಎಲ್ಲಾ ಚೆನ್ನಾಗೇ ಇದೆ – ಮಾನವನೊಬ್ಬನೇ ‘ವಿಕೃತ’ನಾಗಿ ತಯಾರಾಗಿದ್ದಾನೆ. ಆದ್ದರಿಂದ, ನಾವು ಎಲ್ಲಾ ರೀತಿಯ ಪ್ರಕೃತಿಗಳ ಜೊತೆ ಬೆರೆತು ಜೀವಿಸಬೇಕು. ಆಗಲೇ ನಾವು ‘ಪ್ರಕೃತಿ ಪುರುಷ’ರಾಗುತ್ತೇವೆ. ಇಲ್ಲದಿದ್ದರೇ ‘ವಿಕೃತಿ ಪುರುಷ’ರಾಗುತ್ತೇವೆ. ವಿಕೃತಿ ರೂಪಗಳು ಧರಿಸುತ್ತೇವೆ. ಪ್ರಕೃತಿಯ ಜೊತೆ ನಾವು ಜೀವಿಸದೇ ಹೋದರೆ ನಾವು ವಿಕೃತವಾಗಿ ತಯಾರಾಗುತ್ತೇವೆ. ನಾವು ಎಲ್ಲಿಯವರೆಗೂ ‘ಪ್ರಕೃತಿ ಪುರುಷ’ರಾಗಿ ಆಗುವುದಿಲ್ಲವೊ ಅಲ್ಲಿಯವರೆಗೂ ನಾವು ಪುನಃ ಪುನಃ ಜನ್ಮಗಳು ತಾಳಬೇಕಾದ್ದೇ.