ಭಯ – ಅಭಯ

 

ಭಯ ಎಂಬುವುದು ಮನುಷ್ಯನಿಗೆ ಏತಕ್ಕಾಗಿ ಇರುತ್ತದೆ?

‘ಭಯ’ ಎಂಬುವುದು ಮನುಷ್ಯನಿಗೆ ಸಹಜ.

‘ಭಯ’ ಎಂಬುವುದು … ವರ್ತಮಾನದಲ್ಲಿ ಅಡಗಿರುವ ಭವಿಷ್ಯತ್ತನ್ನು ಕುರಿತು ಖಚಿತವಾಗಿ ತಿಳಿಯದೇ ಇರುವುದರ ಪ್ರತೀಕ.

‘ಶರೀರ’ ಎಂಬುವ ‘ಪಂಜರ’ದಲ್ಲಿ ಪ್ರವೇಶಿಸಿದ ‘ಆತ್ಮ ಎಂಬುವ ಗಿಣಿ’ ಗೆ ‘ಭಯ’ ಎಂಬುವುದು ಸಹಜ. ಯಾವಾಗ ಆತ್ಮ ಎಂದು ಹೇಳಲ್ಪಡುವ ಸರ್ವವ್ಯಾಪಿ ಶರೀರದಿಂದ ತಾದಾತ್ಮ್ಯವನ್ನು ಹೊಂದಿ ‘ನಖಶಿಖ ಪರ್ಯಂತ ಮಾತ್ರ’ವಾಗಿ ರೂಪಾಂತರ ಹೊಂದುತ್ತದೆಯೋ ಆಗಲೇ ಇದುವರೆಗೂ ಸರ್ವವ್ಯಾಪಿಯಾಗಿರುವ ಆತ್ಮದ ‘ಅಭಯ’, ‘ಭಯ’ವಾಗಿ ರೂಪಾಂತರ ಹೊಂದುತ್ತದೆ.

‘ಜನ್ಮ’ ಎಂದು ಹೇಳಲ್ಪಡುವ ‘ಆಟ’ದ … ಅರ್ಥ, ಪರಮಾರ್ಥ, (ಗುರಿ) ಗೋಲ್ … ಏನೆಂದರೆ, ಜನ್ಮತಹ ಪ್ರಾರಂಭವಾದ ‘ಭಯ’ ಎಂಬುವುದು ಮರಣಿಸುವುದರೊಳಗೆ ‘ಅಭಯ’ವಾಗಿ ಬದಲಾಗಬೇಕು. ಒಂದು ಕ್ರಿಕೆಟ್, ಒಂದು ಫುಟ್‌ಬಾಲ್, ಒಂದು ಕಬಡ್ಡಿ, ಆಟದ ಹಾಗೆ … ಇದು ‘ಭಯ-ಅಭಯ’ ಎಂಬುವ ಆಟ.

ಮಕ್ಕಳಿಗೆ ಶಾಲೆಗೆ ಹೋಗಬೇಕೆಂದರೆ ಭಯ
ಆದರೆ, ಹೋಗಲೇಬೇಕು.
ಪರೀಕ್ಷೆಗಳನ್ನು ಎದುರಿಸಬೇಕೆಂದರೆ ಭಯ
ಆದರೆ, ಎದುರಿಸಲೇಬೇಕು.
‘ಈಜು’ ಎಂದರೆ ಭಯ
ಆದರೆ, ಈಜು ಕಲಿಯಲೇಬೇಕು.

ಪ್ರಾರಂಭದಲ್ಲಿ ‘ಡ್ರೈವಿಂಗ್’ ಎಂದರೆ ಭಯ
ಆದರೆ, ಡ್ರೈವಿಂಗ್ ಕಲಿತುಕೊಳ್ಳಲೇಬೇಕು.
ಮೊದಲನೆಯ ಬಾರಿ ಮೈಕ್‌ನಲ್ಲಿ ಮಾತನಾಡಬೇಕೆಂದರೆ ಭಯ
ಆದರೆ, ‘ಮೈಕ್ ವೀರರು’ ಆಗಲೇಬೇಕು.

ಬೆಳೆದುನಿಂತ ಮಕ್ಕಳನ್ನು ದೂರ ಇಡಬೇಕೆಂದರೇ ತಂದೆ ತಾಯಿಯರಿಗೆ ಭಯ
ಆದರೆ, ಅವರ ಅಭಿವೃದ್ಧಿಗಾಗಿ ಆ ರೀತಿ ಇಡಲೇಬೇಕು.
ಬೆಳೆದ ಮಕ್ಕಳು ತಂದೆ ತಾಯಂದಿರಿಂದ ದೂರ ಹೋಗಲೇಬೇಕು.

ಹೆಣ್ಣು ಮಕ್ಕಳಿಗೆ ಗರ್ಭವಂತರಾಗಬೇಕೆಂದರೆ ಭಯ
ಆದರೆ, ಗರ್ಭ ಧರಿಸಲೇಬೇಕು.
ಹೆರಿಗೆ ಎಂದರೆ ಭಯ
ಆದರೆ, ಮಕ್ಕಳಿಗೆ ಜನ್ಮ ನೀಡಲೇಬೇಕು.

ಮನುಷ್ಯನಿಗೆ ಸಾವು ಎಂದರೆ ಭಯ
ಆದರೆ, ಸಾವನ್ನು ಎದುರಿಸಲೇಬೇಕು.
ಮನಸ್ಸಿಗೆ ಧ್ಯಾನವೆಂದರೆ ಭಯ
ಆದರೆ, ಧ್ಯಾನ ಮಾಡಲೇಬೇಕು.
ಮೂರನೆಯ ಕಣ್ಣು ಉತ್ತೇಜಿತ ಮಾಡಿಕೊಳ್ಳಲೇಬೇಕು.
ತಾಮಸತ್ವದಲ್ಲಿ ಇರುವವರಿಗೆ ರಾಜಸತ್ವ ಎಂದರೆ ಭಯ
ಆದರೆ, ರಾಜಸತ್ವ ಕಲಿತುಕೊಳ್ಳಲೇಬೇಕು.
ತಾಮಸತ್ವ ಬಿಡಿಸಿಕೊಳ್ಳಲೇಬೇಕು.
ರಾಜಸತ್ವದಲ್ಲಿ ಇರುವವರಿಗೆ ನಿರ್ಗುಣ ಎಂದರೆ ಭಯ
ಆದರೆ, ನಿರ್ಗುಣಿಗಳಾಗಲೇಬೇಕು.
ಸಮಾರಿಗೆ ಬುದ್ಧತ್ವ ಎಂದರೆ ಭಯ
ಆದರೆ, ಬುದ್ಧತ್ವವನ್ನು ಹೊಂದಲೇಬೇಕು.