“ವಿದ್ಯಾರ್ಥಿಗಳು– ಧ್ಯಾನದಅವಶ್ಯಕತೆ“
ವಿದ್ಯೆ ಎಂದರೆ ?
ವಿದ್+ಯಃ=ವಿದ್ಯ
ವಿದ್ … ಅಂದರೆ ತಿಳಿದುಕೊಳ್ಳುವುದು
ಯಃ…ಅಂದರೆ ಯಾವುದರಿಂದ
“ಯಾವುದರಿಂದ ಯಥಾರ್ಥ ಜ್ಞಾನವನ್ನು ತಿಳಿದುಕೊಳ್ಳುತ್ತೇವೊ ಅದನ್ನು ವಿದ್ಯೆ” ಎನ್ನುತ್ತೇವೆ.
ವಿದ್ಯೆಗಳು ಎರಡು ಬಗೆ …
1. ಪ್ರಾಪಂಚಿಕವಿದ್ಯೆಗಳು2. ಆಧ್ಯಾತ್ಮಿಕವಿದ್ಯೆ.
“ಪ್ರಾಪಂಚಿಕವಿದ್ಯೆಗಳು”
ಭೌತಿಕ ಪ್ರಪಂಚದ ಅಸ್ತಿತ್ವವನ್ನು ಕುರಿತು ಯಥಾರ್ಥ ಜ್ಞಾನವನ್ನು ಉಂಟುಮಾಡುವುದೆ ಪ್ರಾಪಂಚಿಕ ವಿದ್ಯೆಗಳು. “ಲೌಕಿಕ ವಿದ್ಯೆ” , ” ಅಪರಾವಿದ್ಯೆ” ,” ಇಹಲೋಕ ವಿದ್ಯೆ” … ಇವೆಲ್ಲವು ಪ್ರಾಪಂಚಿಕ ವಿದ್ಯೆಯ ಪರ್ಯಾಯ ಪದಗಳು. ಪ್ರಾಪಂಚಿಕ ವಿದ್ಯೆಗಳು ಭೌತಿಕ ಜ್ಞಾನವನ್ನು ಸುಗಮವಾಗಿಸುತ್ತದೆ. ಜೀವಶಾಸ್ತ್ರ … ವೃಕ್ಷ, ಪ್ರಾಣಿ ಶಾಸ್ತ್ರಗಳು … ಭೌತಿಕ ಶಾಸ್ತ್ರ, ರಸಾಯನ ಶಾಸ್ತ್ರ, ಭೂಗರ್ಭ ಶಾಸ್ತ್ರ … ಇಂತಹುದೆಲ್ಲಾ ನಮಗೆ ಸ್ಥೂಲ ಪ್ರಕೃತಿಯನ್ನು ಕುರಿತು, ಸ್ಥೂಲ ಪ್ರಪಂಚವನ್ನು ಕುರಿತು ಅನೇಕ ವಿಷಯಗಳನ್ನು ತಿಳಿಸುತ್ತವೆ.
“ಆಧ್ಯಾತ್ಮಿಕವಿದ್ಯೆ”
ಆತ್ಮವನ್ನು ಕುರಿತು, ಇಚ್ಛಾಶಕ್ತಿಯನ್ನು ಕುರಿತು, ಮನೋಬಲವನ್ನು ಕುರಿತು, ಮೂಲ ಪ್ರಕೃತಿಯನ್ನು ಕುರಿತು, ಸೃಷ್ಟಿಯನ್ನು ಕುರಿತು ನಮಗೆ ಯಥಾರ್ಥ ಜ್ಞಾನವನ್ನು ತಿಳಿಸುವುದೇ ಆಧ್ಯಾತ್ಮಿಕ ವಿದ್ಯೆ. “ಅಲೌಕಿಕ ವಿದ್ಯೆ”,” ಪಾರಾವಿದ್ಯೆ” ,” ಪರಲೋಕ ವಿದ್ಯೆ” ,” ಪಾರಮಾರ್ಥಿಕ ವಿದ್ಯೆ” … ಮುಂತಾದವೆಲ್ಲಾ ಆಧ್ಯಾತ್ಮಿಕ ವಿದ್ಯೆಯ ಪರ್ಯಾಯ ಪದಗಳು.
ಆಧ್ಯಾತ್ಮಿಕ ವಿದ್ಯೆ ಮಾನಸಿಕ ಜೀವನವನ್ನು ಸುಗಮವಾಗಿಸುತ್ತದೆ. ಮಾನಸಿಕ ಜೀವನ ಸರಿಹೋದರೆ ಭೌತಿಕ ಜೀವನ ಅದಷ್ಟಕ್ಕದೆ ಸರಿಹೋಗುತ್ತದೆ.
ಆಧ್ಯಾತ್ಮಿಕ ವಿದ್ಯೆ ಎನ್ನುವುದು ನಮ್ಮ “ಮೂರನೆಯ ಕಣ್ಣಿ” ನ ಸಹಾಯದಿಂದ ಏನಿದೆಯೋ ತಿಳಿಯುವ ಹಾಗೆ ಮಾಡುತ್ತದೆ. ಆಧ್ಯಾತ್ಮಿಕ ವಿದ್ಯೆ ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ. ಇದೆ ಸನಾತನ ಧರ್ಮ.
“ಮನುಷ್ಯನು ಕೆಲವು ಸಾವಿರ ಮೈಲಿಗಳ ದೂರದವರೆಗೂ ಪ್ರಯಾಣ ಮಾಡಬಲ್ಲ; ಆದರೆ ತನ್ನೊಳಗೆ ಒಂದು ಅಂಗುಲ ಸಹ ಪ್ರಯಾಣ ಮಾಡಲಾಗುತ್ತಿಲ್ಲ ” ಎಂದರು ಶ್ರೀ ಸತ್ಯಸಾಯಿ”. ನಮ್ಮ ಒಳಗೆ ನಾವು ಹೋಗುವುದು “ಅಂದರೆ ಅದರ ಹೆಸರೇ ಧ್ಯಾನ”. ” ಆತ್ಮ” ಎನ್ನುವುದು ದೇಹಕ್ಕೆ ಹೇಗೆ ಮೂಲವೊ “ಆತ್ಮವಿದ್ಯೆ” ಎನ್ನುವುದು ಪ್ರಾಪಂಚಿಕ ವಿದ್ಯೆಗಳಿಗೆ ಅದೇ ರೀತಿಯಲ್ಲಿ ತುಂಬಾ ಮುಖ್ಯ.
ಆದ್ದರಿಂದ, ಪ್ರತಿ ವಿದ್ಯಾರ್ಥಿಗೂ, ಪ್ರಾಪಂಚಿಕ ವಿದ್ಯೆಗಳ ಹಾಗೆಯೇ ಆಧ್ಯಾತ್ಮಿಕ ವಿದ್ಯೆ ಸಹ ಪಾಠಶಾಲೆಗಳಲ್ಲೇ ಪ್ರಾರಂಭವಾಗಿ ಕಾಲೇಜ್‌ನಲ್ಲಿ ಸಂಪೂರ್ಣವಾಗಬೇಕು. ಕಾಲೇಜ್‌ಗಳಿಂದ ಹೊರ ಬರುವಷ್ಟರಲ್ಲಿ ಯುವತಿ ಯುವಕರು ಎಲ್ಲರೂ ಆಧ್ಯಾತ್ಮಿಕ ವಿದ್ಯೆಯಲ್ಲೂ, ಅದರ ಜೊತೆ ಕನಿಷ್ಠಪಕ್ಷ ಕೆಲವು ಪ್ರಾಪಂಚಿಕ ವಿದ್ಯೆಗಳಲ್ಲೂ ಸುಶಿಕ್ಷಿತರಾಗಿರಬೇಕು. ಆಗಲೇ ಅನಂತರ ಜವಾಬ್ಧಾರಿಯುತ ಗೃಹಸ್ಥ ಜೀವನದಲ್ಲಿ ಕೃತಕೃತ್ಯರಾಗಿ, ಆದರ್ಶ ಪೌರರಾಗಿ, ಸಂಪೂರ್ಣ ಸುಖಶಾಂತಿಗಳನ್ನು ಅನುಭವಿಸಬಲ್ಲರು.
“ಮಕ್ಕಳುದೇವರಸಮಾನ”
“ಚಿಕ್ಕ ಮಕ್ಕಳು ದೇವರ ಸಮಾನ” ಎನ್ನುತ್ತಾರೆ, ಸರಿ. ಚಿಕ್ಕಮಕ್ಕಳಲ್ಲಿ ಕಲ್ಮಷ ಇರುವುದಿಲ್ಲ. ಕೆಲಸಕ್ಕೆ ಬಾರದ ಆಲೋಚನೆಗಳು ಇರುವುದಿಲ್ಲ, ’ ನಿನ್ನ ’, ’ ನನ್ನ ’ ಎನ್ನುವ ಭೇದ ಭಾವನೆಗಳು ಇರುವುದಿಲ್ಲ, ಆದ್ದರಿಂದಲೇ ಅವರು ದೇವರ ಸಮಾನ.
“Unless you become like a child, you cannot enter the kingdom of God “ಎಂದು ಜೀಸಸ್ ಹೇಳಿದರು. ” ಚಿಕ್ಕಮಕ್ಕಳ ಹಾಗಾದರೆ ವಿನಹ ನೀವು ದೇವರ ರಾಜ್ಯದಲ್ಲಿ ಹೆಜ್ಜೆ ಇಡಲಾರಿರಿ” ಎಂದರ್ಥ. ಮಕ್ಕಳಲ್ಲಿ ದಿವ್ಯಚಕ್ಷುವು ಎಂಬುವುದು ಸದಾ ತೆರೆದಿರುತ್ತದೆ. ಆದರೆ, ಬೆಳೆಯುತ್ತಾ, ಬೆಳೆಯುತ್ತಾ ಆ ದಿವ್ಯಚಕ್ಷುವು ಹಿರಿಯರ ಅಜ್ಞಾನದಿಂದ, ಆಧ್ಯಾತ್ಮಿಕ ವಿದ್ಯಾಬೋಧನೆಯ ಅಭಾವದಿಂದ ಕ್ರಮೇಣ ಮುಚ್ಚಿಕೊಳ್ಳುತ್ತದೆ. ಆದ್ದರಿಂದ, ಪಾಠಶಾಲೆಯ ಮಟ್ಟದಲ್ಲೆ ಧ್ಯಾನ ಶಿಕ್ಷಣದ ಅವಶ್ಯಕತೆ ಬಹಳಷ್ಟು ಇದೆ.
” ಗಿಡವಾಗಿಬಗ್ಗದೆಇರುವುದು, ಮರವಾಗಿ…”
” ಗಿಡವಾಗಿ ಬಗ್ಗದೆ ಇರುವುದು ಮರವಾಗಿ ಬಗ್ಗುವುದಿಲ್ಲ” ಎಂದು ಹಿರಿಯರು ಹೇಳಿದ್ದಾರಲ್ಲವೆ. ಧ್ಯಾನಕ್ಕೆ ಅತ್ಯಂತ ಅನುಕೂಲವಾದ ವಯಸ್ಸು ಬಾಲ್ಯ. ಶ್ರೀಕೃಷ್ಣನು, ಧ್ರುವನು, ಪ್ರಹ್ಲಾದನು, ಏಸು … ಮುಂತಾದ ಮಹಾನುಭಾವರೆಲ್ಲರೂ ಬಾಲ್ಯದಿಂದಲೇ ಧ್ಯಾನಿಗಳು. ಮೊಳಕೆಯಲ್ಲಿರುವಾಗಲೇ ಧ್ಯಾನಾಭ್ಯಾಸ ತುಂಬಾ ಸುಲಭ. ” ಮುದಿತನ ಬಂದ ನಂತರವೊ, ಸಾಯುವ ಸಮಯದಲ್ಲಿ ಧ್ಯಾನ ಪ್ರಾರಂಭಿಸಿದರೇ ಆಯಿತು “ಎಂದುಕೊಂಡರೆ ಅದಕ್ಕಿಂತಾ ತಪ್ಪು ತಿಳುವಳಿಕೆ ಇನ್ನೊಂದಿಲ್ಲ. ಬಾಲ್ಯದಿಂದಲೇ ಧ್ಯಾನ ಮಾಡಬೇಕು. ಮೊಳಕೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಧ್ಯಾನ ಚೆನ್ನಾಗಿ ಮೈಗೂಡುತ್ತದೆ.
Recent Comments