“ವಿದ್ಯಾರ್ಥಿಗಳು ಧ್ಯಾನ ಮಾಡಿದರೆ…”
” ಶಾರೀರಿಕವಿಕಾಸ”
ಧ್ಯಾನದಿಂದಲೇ ವಿಶ್ವಶಕ್ತಿಯು ಅಪಾರವಾಗಿ ನಮ್ಮೊಳಗೆ ಪ್ರವಹಿಸುತ್ತದೆ. ಅದರಿಂದ ನಮ್ಮ ಶರೀರದಲ್ಲಿರುವ 72 ಸಾವಿರ ನಾಡಿಗಳು ಶುಚಿಯಾಗುತ್ತವೆ. ನಾಡೀಮಂಡಲ ಶುದ್ಧಿ ಆಗುವುದರಿಂದ ಶರೀರ ದೃಢಕಾಯವಾಗುತ್ತದೆ.
ದಿವ್ಯವಾದ ಆನಾಪಾನಸತಿ ಧ್ಯಾನ ಸಾಧನೆಯಿಂದ ಮಕ್ಕಳಲ್ಲಿ ಹೇಡಿತನ, ಸೋಂಬೇರಿತನ ಮುಂತಾದವು ಹೋಗಿ ನಿರ್ಭಯತ್ವ, ಚುರುಕುತನ ಎನ್ನುವುದು ಮೊಳಕೆಯೊಡೆಯುತ್ತದೆ. ಆಟಪಾಠಗಳಲ್ಲೂ ವಿದ್ಯೆಗಳಲ್ಲಿ ಊಹಿಸಲಾರದಷ್ಟು ಪ್ರಗತಿಯನ್ನು ಸಾಧಿಸಬಲ್ಲರು.
“ಮಾನಸಿಕವಿಕಾಸ “
“A Sound Mind in a Sound Body” ಎಂದರಲ್ಲವೆ. ಧ್ಯಾನದಲ್ಲಿ ನಾವು ತೆಗೆದುಕೊಂಡ ವಿಶ್ವಶಕ್ತಿಯು ಹೊರಗೆ ಹೋಗದೆ ನಮ್ಮಲ್ಲೆ ಉಳಿದು, ಮಿದುಳಿನಲ್ಲಿ ನೂತನ ಕಣಗಳು ಉದ್ಭವಿಸಲು ಸಹಾಯವಾಗುತ್ತದೆ. ಮಿದುಳಿನಿಂದ ಅನಾವಶ್ಯಕವಾದ ಆಲೋಚನೆಗಳನ್ನು ತೊಲಗಿಸಿ, ಅವಶ್ಯಕತೆ ಇದ್ದಾಗ ಇನ್ನೂ ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡುವ ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ನೆನಪಿನಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ. ಯಾವುದನ್ನಾದರೂ ಒಂದು ಬಾರಿ ಕೇಳಿಸಿಕೊಂಡರೂ, ಓದಿಕೊಂಡರೂ ಸಾಕು ಹಾಗೆಯೆ ನೆನಪಿನಲ್ಲಿ ಉಳಿಯುತ್ತದೆ.
ದಿನನಿತ್ಯ ಆನಾಪಾನಸತಿ ಧ್ಯಾನ ಸಾಧನೆಯಿಂದ ಮಕ್ಕಳಲ್ಲಿ ಮೂಢನಂಬಿಕೆಗಳು ನಶಿಸಿ, ಭಯಗಳು ದೂರವಾಗುತ್ತವೆ. ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ. ಮಾನಸಿಕ ವಿಕಾಸ ಹೊಂದಿರುವುದು ಎಂದರೆ ಧೈರ್ಯ, ಆತ್ಮ ವಿಶ್ವಾಸ … ಇವುಗಳನ್ನು ಪುಷ್ಕಳವಾಗಿ ಹೊಂದಿರುವುದು.
“ಭಾವವಿಕಾಸ”
ಸೋಲುವುದು ಅಂದರೆ ವಿಜಯಕ್ಕೆ ಕೇವಲ ಒಂದು ಮೆಟ್ಟಿಲು ದೂರದಲ್ಲಿ ನಿಂತು ಹೋಗುವುದು.. ತಪ್ಪು ಮಾಡುವುದು ಸಹಜ. ದಿನ ನಿತ್ಯ ಆನಾಪಾನಸತಿ ಧ್ಯಾನ ಸಾಧನೆಯಿಂದ ಮಕ್ಕಳು ಆಟಪಾಠಗಳಲ್ಲಿ ಸೋತರೆ, ತಪ್ಪುಗಳು ಮಾಡಿದರೆ, ಪ್ರಯತ್ನಗಳು ವಿಫಲವಾದಾಗ, ನಿರಾಸೆ, ನಿಸ್ಪೃಹಗಳಿಂದ ಕುಗ್ಗದೆ, ನೊಂದುಕೊಳ್ಳದೆ ಆಸೆಯನ್ನು ಕಳೆದುಕೊಳ್ಳದೆ, ಧೈರ್ಯದಿಂದ ಜೀವಿಸಬಲ್ಲರು.
ಆನಾಪಾನಸತಿ ಧ್ಯಾನ ಸಾಧನೆಯಿಂದ ಜೀವನದಲ್ಲಿ ಎಂತಹ ಕಷ್ಟ ಪರಿಸ್ಥಿತಿಗಳನ್ನಾದರೂ ನಿರ್ಭಯದಿಂದ ಎದುರಿಸುವ ಶಕ್ತಿ, ’ ಗುರಿಸ್ಥಿರತೆ ’ ಲಭಿಸುತ್ತದೆ, ಪ್ರೀತಿ, ಭಯ, ದುಃಖ, ಕೋಪ ಮುಂತಾದ ಸಹಜ ಭಾವಾವೇಶಗಳನ್ನು ಸಕ್ರಮವಾಗಿ ಉಪಯೋಗಿಸಬಲ್ಲರು.
“ಬುದ್ಧಿವಿಕಾಸ”
’ ಆನಾಪಾನಸತಿ ಧ್ಯಾನ ’ ಎನ್ನುವುದು ಮನಸ್ಸಿನಲ್ಲಿ ಅಲ್ಪವಾದ ಆಲೋಚನೆಗಳಿಗೆ ಎಡೆಕೊಡದೆ, ಉನ್ನತವಾದ ಆಲೋಚನಾ ವೈಖರಿಗಳನ್ನು ವೃದ್ಧಿಸುತ್ತದೆ. ಮನುಷ್ಯರನ್ನು, ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಬಲ್ಲ ’ ಬುದ್ಧಿ ಕುಶಲತೆ ’ ಯು ಅಭ್ಯಾಸವಾಗುತ್ತದೆ.
ದಿನ ನಿತ್ಯ ಆನಾಪಾನಸತಿ ಧ್ಯಾನ ಸಾಧನೆಯಿಂದ ಸೋಲು-ಗೆಲುವುಗಳಲ್ಲಿ, ಕಷ್ಟ-ಸುಖಗಳಲ್ಲಿ, ಲಾಭ-ನಷ್ಟಗಳಲ್ಲಿ ಎಲ್ಲದರಲ್ಲೂ ಕಾರಣ-ಕಾರ್ಯ ಸಂಬಂಧವನ್ನು ನೋಡಲಾಗುವ ಸ್ಥಿತಿಯನ್ನು ಸಂಪಾದಿಸಿಕೊಳ್ಳುತ್ತಾರೆ. ಮನಸ್ಸ್‌ತಾಪಗಳನ್ನು ಬೆಳೆಸಿಕೊಳ್ಳದೆ, ಎಲ್ಲರೂ ಕಲೆತು ಬೆರೆತು ಒಗ್ಗಟ್ಟಿನಿಂದ ಜೀವಿಸಬಲ್ಲರು.
“ಆಧ್ಯಾತ್ಮಿಕವಿಕಾಸ”
“ಅಹಂ ಬ್ರಹ್ಮಾಸ್ಮಿ” , ” ತತ್ವಮಸಿ” ಎನ್ನುವ ಪರಮ ಸತ್ಯಗಳು ಧ್ಯಾನದಿಂದಲೇ ಅನುಭವಕ್ಕೆ ಬರುತ್ತವೆ”. ’ ನಾನು ’ ಅಂದರೆ ’ ಶರೀರ ’ ಅಲ್ಲ, ’ ಆತ ’ ಎಂದು … ಆತ್ಮಕ್ಕೆ ಮರಣ ಎಂಬುವುದಿಲ ಎಂದು … ಅವರವರ ವಾಸ್ತವಕ್ಕೆ ಅವರೇ ಸೃಷ್ಟಿಕರ್ತರು ಎಂದು … ಅವರನ್ನವರೇ ಉದ್ಧರಿಸಿಕೊಳ್ಳಬೇಕೆಂದು … ಎನ್ನುವ ಮೂಲ ಸತ್ಯಗಳು, ವಿದ್ಯಾರ್ಥಿಗಳು ಸ್ವಾನುಭವದಿಂದ ತಕ್ಷಣವೇ ತಿಳಿದುಕೊಳ್ಳಬಲ್ಲರು.
” ಮಕ್ಕಳು– ಆಧ್ಯಾತ್ಮಿಕಶಿಕ್ಷಣ “
ಮಹಾಯೋಗಿಗಳ ಜೀವನ ಚರಿತ್ರೆಗಳನ್ನು ಓದಿದರೆ ಒಂದು ವಿಶೇಷಕರವಾದ ವಿಷಯವು ತಪ್ಪದೆ ಕಂಡುಬರುತ್ತದೆ. ಅದು ಅವರ ಬಾಲ್ಯದಿಂದಲೇ ಪ್ರಾರಂಭವಾದ ಆಧ್ಯಾತ್ಮಿಕ ಶಿಕ್ಷಣ. ಚಿಕ್ಕ ಮಕ್ಕಳಿಗೆ ಎಳೆಯ ಬಾಲ್ಯದಿಂದಲೇ ಆಧ್ಯಾತ್ಮಿಕ ಶಾಸ್ತ್ರದಲ್ಲಿ ಶಿಕ್ಷಣ ನೀಡುವುದು ಅವರ ಬಂಗಾರದ ಭವಿಷ್ಯಕ್ಕೆ ರಾಜಮಾರ್ಗ ಆಗುತ್ತದೆ.
ಮಕ್ಕಳು ಕಲ್ಮಶರಹಿತರು ; ಅವರ ಸ್ವಭಾವ ಸ್ವಚ್ಛವಾಗಿರುತ್ತದೆ. ಆದ್ದರಿಂದಲೇ ಹೇಳಿದ್ದನ್ನು ತಕ್ಷಣವೆ ಗ್ರಹಿಸಬಲ್ಲರು. ಮಕ್ಕಳಿಗೆ ಹದಿನೈದು ನಿಮಿಷಗಳ ಧ್ಯಾನ ಸಾಕಾಗುತ್ತದೆ. ಅವರ ಅನುಭವಗಳನ್ನು ಆಗಿಂದಾಗೆ ಪ್ರತ್ಯೇಕ ಶ್ರದ್ಧೆಯಿಂದ ಆಲಿಸುತ್ತಿದ್ದರೆ ಅವರು ತುಂಬಾ ಉತ್ಸಾಹದಿಂದ ಆಧ್ಯಾತ್ಮಿಕ ರಂಗದಲ್ಲಿ ಪ್ರಗತಿ ಸಾಧಿಸುತ್ತಾರೆ.
“ಇಂದಿನವಿದ್ಯಾರ್ಥಿಗಳೇಭವಿಷ್ಯತ್ತಿನನಾಯಕರು”
ಈಗಿನ ವಿದ್ಯಾರ್ಥಿಗಳೇ ನಾಳಿನ ನಾಯಕರು. ಒಳ್ಳೆಯ ನಾಯಕರು ಇರುವ ದೇಶವು ಶಾಂತಿಯುತವಾಗುತ್ತದೆ, ಸದೃಢವಾಗುತ್ತದೆ. ಸುಸಂಪನ್ನ ಭರಿತವಾಗಿಸಬೇಕು. ಮಕ್ಕಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು.
ಮಕ್ಕಳ ಅಭಿವೃದ್ಧಿಯು ಯಾವುದೋ ಒಂದು ಹಂತದಲ್ಲಿ ನಿಂತುಹೋಗದೆ ಎಲ್ಲಾ ಕೋನಗಳಲ್ಲೂ ಅಭಿವೃದ್ಧಿಯನ್ನು ಸಾಧಿಸುವ ಹಾಗೆ ಇರಬೇಕು. ಅಂದರೆ, ಮೇಲೆ ವಿವರಿಸಿದ ಐದು ಹಂತಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದಾಗಲೇ ಅವರು ಬಹುಮುಖ ಪ್ರಜ್ಞಾಶೀಲರಾಗಿ ಪರಿಪೂರ್ಣ ಸಾಮರ್ಥ್ಯವುಳ್ಳ ಮಾನವರಾಗಿ ತಯಾರಾಗಬಲ್ಲರು.
Recent Comments