“ಧ್ಯಾನದ ಅಭ್ಯಾಸದಲ್ಲಿ ಮೂರು ಮಹತ್ತರ ಘಟನೆಗಳು ನಡೆಯುತ್ತವೆ”

“ಮೊದಲನೆ ಮಹತ್ತರ ಘಟನೆ”

“ನಾವು ಸರಳವಾದ, ಸಹಜವಾದ, ಸುಲಲಿತವಾದ ಉಸಿರಿನ ಹರಿವಿನೊಂದಿಗಿದ್ದಾಗ ನಮ್ಮ ಮನಸ್ಸು ಖಾಲಿಯಾಗಿರುತ್ತದೆ”

ಧ್ಯಾನವೆಂದರೆ ನಮ್ಮ ಚಂಚಲಮನಸ್ಸಿನ ನಿರಂತರ ಅರ್ಥವಿಲ್ಲದ ಹರಟೆಗಳನ್ನು ನಿಲ್ಲಿಸುವ ಕ್ರಿಯೆ. ಇದಕ್ಕಾಗಿ ನಾವು ಉಸಿರಾಟದಿಂದ ಪ್ರಾರಂಭಿಸುತ್ತೇವೆ.

ಮನಸ್ಸು ಉಸಿರಿನೊಂದಿಗಿರಬೇಕು ಇದೇ ಮೂಲ ಮಂತ್ರ. ಮನಸ್ಸು ಉಸಿರಿನೊಂದಿಗಿಲ್ಲದಿದ್ದರೆ ಅದು ಖಾಲಿಯಾಗಲಾರದು. ಮನಸ್ಸು ಯಾವುದೇ ಅಡೆತಡೆಯಿಲ್ಲದೆ ಸಂಪೂರ್ಣ ಖಾಲಿಯಾಗಿರಬೇಕು.

ಮನಸ್ಸು ತನ್ನೆಲ್ಲಾ ಅವೈಜ್ಞಾನಿಕ, ಸಾಮಾಜಿಕ , ಮತ, ಮಾನಸಿಕ ಹಾಗೂ ಅರ್ಥವಿಲ್ಲದ ಪ್ರಲಾಪಗಳನ್ನು ತೊರೆಯಬೇಕು. ಇದೇ ಸ್ಥಿತಿಯಲ್ಲಿ ಯಾವುದೇ ಮಂತ್ರವನ್ನು ಹೇಳಿದರೂ ಅದು ಧ್ಯಾನದಲ್ಲಿ ಫಲಕಾರಿಯಾಗಲಾರದು.

ಧ್ಯಾನವು ನಮ್ಮ ಮನಸ್ಸಿನ ಎಲ್ಲಾ ಪ್ರಲಾಪಗಳನ್ನು ಸ್ತಬ್ಧವಾಗಿಸುವುದರಿಂದ ಗಮನವನ್ನು ಕೇಂದ್ರೀಕರಿಸಲು ಯಾವುದೇ ಚಿತ್ರಣವೂ ನಮ್ಮ ಮನಸ್ಸಿನೊಳಗಿರುವುದಿಲ್ಲ. ನಮ್ಮನ್ನು ಉಸಿರಾಟದೊಂದಿಗೆ ಸರಿಹೊಂದಿಸಿಕೊಳ್ಳಬೇಕು. ಈ ರೀತಿ ನಮ್ಮ ಮನಸ್ಸು ಉಸಿರಿನೊಂದಿಗೆ ಹೊಂದಿಕೊಂಡಂತೆಲ್ಲಾ ಮನಸ್ಸು ಚಿಂತೆಯಿಂದ ಹೆಚ್ಚು ಹೆಚ್ಚು ಮುಕ್ತವಾಗುತ್ತದೆ. ಅಂತೆಯೇ, ಅದರ ಘನತ್ವವೂ ಕಡಿಮೆಯಾಗಿ ನಿಧಾನವಾಗಿ ಕಾಲಾಂತರದಲ್ಲಿ ಅದು ಸಂಪೂರ್ಣವಾಗಿ ಖಾಲಿಯಾಗುತ್ತದೆ.

ನಮ್ಮ ಉಸಿರು ನಮ್ಮ ದೇಹದ ಅರಿವಿನ ಪ್ರಪಂಚದ ರಾಯಭಾರಿ. ಉಸಿರು ನಿರಂತರವಾಗಿ ನಡೆಯುತ್ತಿರುವ ಒಂದು ಕ್ರಿಯೆ. ಅದಕ್ಕೆ ಮುಪ್ಪೆನ್ನುವುದಿಲ್ಲ. ಅದು ಅತ್ಯಂತ ಸರಳ, ಉಸಿರನ್ನು ಎಲ್ಲರೂ ಅನುಭವಿಸಬಹುದು.ಉಸಿರನ್ನು ಹಿಂಬಾಲಿಸಬಹುದು. ಉಸಿರನ್ನು ಸುಲಭವಾಗಿ ಲಯಕ್ಕನುಗುಣವಾಗಿಸಬಹುದು.

ಇಂತಹ ಸರಳ, ಸಹಜ ಉಸಿರಿನೊಂದಿಗಿರುವುದೇ ಧ್ಯಾನದ ಮೂಲ.

 

“ಎರಡನೆ ಮಹತ್ತರ ಘಟನೆ”

“ನಮ್ಮ ಮನಸ್ಸು ಖಾಲಿಯಾಗಿದ್ದಾಗ ಮಾತ್ರ ಅಗಾಧವಾದ ವಿಶ್ವಪ್ರಾಣಶಕ್ತಿಯು ನಮ್ಮ ಭೌತಿಕ ದೇಹದೊಳಗೆ ಹರಿಯುತ್ತವೆ”

ಒಂದು ಅಸ್ತವ್ಯಸ್ತವಾದ ಮನಸ್ಸು ದೇಹದೊಳಗೆ ಯಾವುದೇ ಬಾಹ್ಯಶಕ್ತಿಯ ಹರಿವನ್ನು ತಡೆಯುತ್ತದೆ. ಮನಸ್ಸು ಅಸ್ತವ್ಯಸ್ತವಾಗಿದ್ದಾಗ ಅದೇ ಅತ್ಯಂತ ದೊಡ್ಡ ಅಡಚಣೆ. ಅದು ಯಾವುದೇ ಬಾಹ್ಯಶಕ್ತಿಯು ನಮ್ಮ ದೇಹದೊಳಗೆ ಹರಿಯುವುದನ್ನು ತಡೆಯುತ್ತದೆ.

ಇಂತಹ ಅಸ್ತವ್ಯಸ್ತ ಮನಸ್ಸು ಅತ್ಯಂತ ಕಠಿಣವಾಗಿಯೂ, ಅಭೇದ್ಯವಾಗಿಯೂ ಇರುತ್ತದೆ. ಆದರೆ, ಇದೇ ಮನಸ್ಸು ದ್ರವರೂಪಿ ಅಥವಾ ವಾಯುರೂಪಿಯಾದಾಗ ಅದು ಅತ್ಯಂತ ಸುಲಭವಾಗಿ ಪ್ರವೇಶಿಸವಂತಹುದೂ, ಪಾರದರ್ಶಕವೂ ಆಗಿ ಬಾಹ್ಯಶಕ್ತಿಗಳೆಲ್ಲಾ ನಮ್ಮ ದೇಹದೊಳಗೆ ಪ್ರವಹಿಸಲು ಅನುವು ಮಾಡಿಕೊಡುತ್ತದೆ. ಇದು ಭೌತಶಾಸ್ತ್ರದ ಸರಳ ನಿಯಮಗಳಿಗನುಸಾರವಾಗಿರುತ್ತದೆ.

ನಮ್ಮ ಇಂತಹ ಘನರೂಪಿ ಮನಸ್ಸನ್ನು ವಾಯುರೂಪಿಯನ್ನಾಗಿಸಿ ಅದರೊಳಗೆ ಆಲೋಚನೆಗಳನ್ನೆಲ್ಲಾ ಬರಿದುಗೊಳಿಸಿ ಶೂನ್ಯತೆಯನ್ನು ತುಂಬುವ ವಿಧಾನವೇ ಧ್ಯಾನ. ಉಸಿರೊಂದೇ ಅದಕ್ಕಿರುವ ದಾರಿ.

 

“ಮೂರನೆ ಮಹತ್ತರ ಘಟನೆ -ಮೂರನೆ ಕಣ್ಣು”

“ಬಹಳಷ್ಟು ಪ್ರಮಾಣದಲ್ಲಿ ಈ ವಿಶ್ವಪ್ರಾಣಮಯ ಶಕ್ತಿಯು ನಮ್ಮ ದೇಹದೊಳಗೆ ಪ್ರವೇಶಿಸಿದಾಗ ನಮ್ಮ ಮೂರನೆಯ ಕಣ್ಣು ತೆರೆಯಲ್ಪಡುತ್ತದೆ.”

ನಮ್ಮ ಭೌತಿಕ ದೇಹವು ಬಾಹ್ಯಶಕ್ತಿಗಳಿಂದ ಸಂಪೂರ್ಣವಾಗಿ ತುಂಬುವ ಅಗತ್ಯವಿದೆ. ಈ ದೇಹವು ಬಾಹ್ಯಶಕ್ತಿಗಳಿಂದ ತುಂಬಿದಾಗ ಅಲೌಕಿಕದೇಹದಲ್ಲಿರುವ ಕಪ್ಪುಕಲೆಗಳು ಮಾಯವಾಗುತ್ತದೆ ಹಾಗೂ ಆತ್ಮದ ಸಾಮರ್ಥ್ಯವು ನಿಧಾನವಾಗಿ ವೃದ್ಧಿಸುತ್ತದೆ, ನಮ್ಮ ಆತ್ಮಕ್ಕೆ ಅಮಿತವಾದ ಸಾಮರ್ಥ್ಯವಿದೆ ಹಾಗೂ ಅಪರಿಮಿತ ದಕ್ಷತೆಯಿದೆ. ಆದರೆ, ನಾವು ಧ್ಯಾನದ ಮೂಲಕ ಅದನ್ನು ಎಚ್ಚರಗೊಳಿಸದೇ ಇದ್ದರೆ ಅದು ಬರೀ ಬರಡು ಬಂಜರು ಭೂಮಿಯಂತೆ.

ಧ್ಯಾನದ ಅತ್ಯುಚ್ಚ ಅಂತಿಮ ಸಾಧನೆಯೆಂದರೆ ನಮ್ಮೊಳಗಿನ ಇಂದ್ರಿಯಗಳನ್ನು ಅಥವಾ ಮೂರನೆಯ ಕಣ್ಣನ್ನು ಜಾಗೃತಗೊಳಿಸುವುದು. ಧ್ಯಾನದ ಕೊನೆಯ ಫಲಿತಾಂಶವು ನಮ್ಮೊಳಗಿನ ಇತರ eನೇಂದ್ರಿಯಗಳನ್ನು ಜಾಗೃತಗೊಳಿಸುವುದು. ಧ್ಯಾನದ ಅಂತಿಮ ಗುರಿಯು ಆತ್ಮದ ಬಗೆಗಿನ ಅರಿವನ್ನು ಜಾಗೃತಗೊಳಿಸುವುದಾಗಿದೆ.

ಸಾಧಾರಣ ಮಾನವರಲ್ಲಿ ಈ ಆತ್ಮಜಾಗೃತಿಯು ಕಳೆದು ಹೋಗಿರುತ್ತದೆ. ಭೂಮಿಯ ಮೇಲಿರುವ ಈ ಸ್ವರ್ಗವನ್ನು ಮತ್ತೆ ಪಡೆಯಬೇಕು. ಇದನ್ನು ಧ್ಯಾನದಿಂದಲೇ ಮಾಡಬೇಕು.

ಧ್ಯಾನವಿಜ್ಞಾನವು ಶಕ್ತಿಯನ್ನು ವೃದ್ಧಿಸಿಕೊಳ್ಳುವ ನಿಜವಾದ ವಿಜ್ಞಾನ
ಧ್ಯಾನವಿಜ್ಞಾನವು ದೈಹಿಕ ಆರೋಗ್ಯವನ್ನು ಗಳಿಸುವ ನಿಜವಾದ ವಿಜ್ಞಾನ
ಧ್ಯಾನವಿಜ್ಞಾನವು ಎಲ್ಲರನ್ನೂ ಒಂದುಗೂಡಿಸುವ ವಿಜ್ಞಾನ
ಧ್ಯಾನವಿಜ್ಞಾನವು ಸಂತೋಷವನ್ನು ಪಡೆಯುವ ನಿಜವಾದ ವಿಜ್ಞಾನ