“ಸನ್ಯಾಸ”
“ಸಮ್ಯಕ್+ನ್ಯಾಸ=ಸನ್ಯಾಸ “
ಸಮ್ಯಕ್=ಸರಿಯಾದ; ನ್ಯಾಸ=ತ್ಯಜಿಸುವುದು
ಸನ್ಯಾಸ=ಸರಿಯಾದದ್ದನ್ನು ತ್ಯಜಿಸುವುದು
“ಸನ್ಯಾಸ” ಎಂಬುವುದುನಾಲ್ಕುಬಗೆಯದ್ದು…
“ಮರ್ಕಟಸನ್ಯಾಸ“
ಚಿಕ್ಕ ಚಿಕ್ಕ ಕಾರಣಗಳಿಗೇ ಸನ್ಯಾಸಿಗಳಾಗುತ್ತಾರೆ. ಇರುವ ಸಂಸಾರವನ್ನು ತ್ಯಜಿಸುತ್ತಾರೆ. ಕೆಲವು ದಿನಗಳ ನಂತರ ಇನ್ನೊಂದು ಸಂಸಾರದ ಬಂಧನದಲ್ಲಿ ಸಿಕ್ಕಿಕೊಳ್ಳುತ್ತಾರೆ. ಇದು ಶೂದ್ರ ಸನ್ಯಾಸ.
“ಆಪತ್ಸನ್ಯಾಸ”
ಸ್ವಲ್ಪ ಹೊತ್ತಿನಲ್ಲೊ, ಇನ್ನು ಸ್ವಲ್ಪ ಹೊತ್ತಿನಲ್ಲೊ ಸಾಯುತ್ತೇವೆಂದು ತಿಳಿದ ನಂತರ ಸ್ವರ್ಗದಲ್ಲಿ ಸ್ಥಾನ ಹೊಂದಬೇಕೆಂಬುವ ಆಸೆಯಿಂದ ಸನ್ಯಾಸ ಸ್ವೀಕರಿಸುತ್ತಾರೆ. ’ ಆಪತ್ ’ ಎಂದರೆ ಮರಣ ಸಮಯದಲ್ಲಿ ಸ್ವೀಕರಿಸುವ ಸನ್ಯಾಸ. ಇದು ವೈಶ್ಯ ಸನ್ಯಾಸ.
“ಕ್ಷತ್ರಿಯಸನ್ಯಾಸ“
ಬುದ್ಧಿ ತತ್ವಕ್ಕೆ ಹೊಂದಿದವರು. ಸತ್ಯವನ್ನು ತಿಳಿದುಕೊಳ್ಳಬೇಕೆಂಬುವ ಆಕಾಂಕ್ಷೆ, ಜ್ಞಾನತೃಷ್ಣೆಯಿಂದ … ತಮ್ಮ ಹತ್ತಿರ ಇರುವುದೆಲ್ಲಾ ತ್ಯಜಿಸಿ … ಸನ್ಯಾಸ ಸ್ವೀಕರಿಸುತ್ತಾರೆ. ವಿವೇಕಾನಂದ ಅಂತವರು. ಇದು ಕ್ಷತ್ರಿಯ ಸನ್ಯಾಸ.
’ವಿದ್ವತ್ಸನ್ಯಾಸ“
ಅತ್ಯುನ್ನತ ಹಂತ … ಆತ್ಮ ಮಟ್ಟ. ಅಜ್ಞಾನವನ್ನು ತ್ಯಜಿಸುತ್ತಾರೆ ವಿನಹ, ಸಂಸಾರವನ್ನಲ್ಲ. ದಿನ ನಿತ್ಯದ ಜೀವನದಲ್ಲಿ ಅನವಶ್ಯಕವಾದದ್ದನ್ನು ಬಿಟ್ಟು ಅವಶ್ಯಕವಾದದ್ದಕ್ಕೆ ಮಾತ್ರ ಸೀಮಿತವಾಗುತ್ತಾರೆ. ಇದೇ ಬ್ರಾಹ್ಮಣ ಸನ್ಯಾಸ. ಅಂದರೆ, ಸಂಸಾರದಲ್ಲೇ ನಿರ್ವಾಣವನ್ನು ಸಾಧಿಸುವುದು ಎಂದರ್ಥ. ಅಂದರೆ, ’ಪಿರಮಿಡ್ ಮಾಸ್ಟರ್ಸ್ ’ ಎಂದರ್ಥ.
Recent Comments