ಸಮ್ಯಕ್+ಕಲ್ಪನೆ=ಸಂಕಲ್ಪ
ಆಲೋಚನೆ ಬೇರೆ, ಸಂಕಲ್ಪ ಬೇರೆ.
ಯಾವುದಾದರು ಒಂದು ಭಾವನೆಯೇ ’ಆಲೋಚನೆ’ ಎಂದು ಹೇಳಲಾಗುತ್ತದೆ. ’ಆಲೋಚನೆ’ ಎಂಬುವುದು ಒಂದು ಮಹಾಸ್ಪಂದನೆ ಅಥವಾ ಒಂದು ಮನೋ ಪ್ರತಿಸ್ಪಂದನೆ. ’ಆಲೋಚನೆಗಳ ಪ್ರವಾಹ’ ಎಂಬುವುದು ಮನಸ್ಸಿನ ಸ್ವಭಾವ.
ಯಾವುದಾದರೂ ಆಲೋಚನೆ ಪುನಃ ಪುನಃ ಯೋಚಿಸಲ್ಪಟ್ಟು ಬಲವುಳ್ಳದ್ದಾಗಿ ಸದೃಢವಾದಾಗ ಅದನ್ನು ’ ಸಂಕಲ್ಪ ’ ಎನ್ನುತ್ತೇವೆ. ಸಂಕಲ್ಪ ಎನ್ನುವುದು ಕಾರ್ಯಾಚರಣೆಗೆ ’ ಸರಹದ್ದು ’ ಆಗುತ್ತದೆ. ಯಾವುದಾದರೂ ಕಾರ್ಯಕ್ಕೆ ಕಾರಣಭೂತವಾಗುತ್ತದೆ.
ಯಾವ ಕಾರ್ಯಕ್ಕಾದರೂ ಸಂಕಲ್ಪವೇ ಕಾರಣ. ಕಾರ್ಯಾಚರಣೆ ಪೂರ್ತಿ ಆಗುವವರೆಗೂ ಯಾವ ಕಾರ್ಯಕ್ಕಾದರೂ ಮಧ್ಯದಲ್ಲಿ ಭಂಗವಾಗಬಾರದು. ಸಂಕಲ್ಪ ’ ಏಕಧಾರೆ ’ಯಾಗಿರಬೇಕು. ಸಂಕಲ್ಪಕ್ಕೆ ಮಧ್ಯದಲ್ಲಿ ಭಂಗವಾಗಿಸುವುದೇ ’ ವಿಕಲ್ಪ ’. ವ್ಯತಿರೇಕ ಆಲೋಚನೆಗಳ ಸಮೂಹವೇ ’ವಿಕಲ್ಪ’. ಮಧ್ಯೆ ಮಧ್ಯೆ ವಿಕಲ್ಪಗಳಿರದೇ ಸಂಕಲ್ಪ ಕೊನೆಯವರೆಗು ಮುಂದುವರಿಸಿದರೆ ’ ಸಂಕಲ್ಪಸಿದ್ಧಿ ’ ಆಗುತ್ತದೆ. ಅಂದರೆ, ಸಂಕಲ್ಪ ಒಂದು ’ ಭೌತಿಕ ವಾಸ್ತವ ’ವಾಗಿ ಬದಲಾಗುತ್ತದೆ. ಕಾರಣ ಒಂದು ’ಕಾರ್ಯ’ವಾಗಿ ಬದಲಾಗುತ್ತದೆ.
ಯೋಚಿಸದೇ ಸಂಕಲ್ಪಗಳು ಇಟ್ಟುಕೊಳ್ಳಬಾರದು. ಚರ್ಚಿಸಿ, ಯೋಚನೆ ಮಾಡಿ, ತೀಕ್ಷ್ಣವಾಗಿ ವಿಚಾರಿಸದ, ಸರ್ವ ಆಮೋದ (ಸಂತೋಷದೊಡಗೂಡಿದ ಒಪ್ಪಿಗೆ) ಯೋಗ್ಯವಾದದ್ದನ್ನೇ ಸಂಕಲ್ಪವಾಗಿ ಇಟ್ಟುಕೊಳ್ಳಬೇಕು. ಚರ್ಚಿಸದೆ, ತೀಕ್ಷ್ಣವಾಗಿ ಯೋಚನೆ ಮಾಡದೆ, ಸರ್ವಾಮೋದಯೋಗ್ಯ ಅಲ್ಲದ ಸಂಕಲ್ಪಗಳೆಲ್ಲವೂ ಎಲ್ಲಾ ಸಮಯದಲ್ಲೂ ಅನರ್ಥವನ್ನು ಉಂಟುಮಾಡುವುದು.
ನಾವು ಅಂದುಕೊಂಡಿರುವ ಸಂಕಲ್ಪಗಳಿಗೆ ತಕ್ಕ ಶಕ್ತಿಯನ್ನು ಸಂಗ್ರಹಿಸುವುದೇ ದಿನದಲ್ಲಿ ಕೆಲವು ಗಂಟೆಗಳ ಕಾಲ ಚಿತ್ತವೃತ್ತಿ ನಿರೋಧ ಸ್ಥಿತಿ – ಯೋಗಸ್ಥಿತಿ.
’ ಸಮ್ಯಕ್ ’ ಎಂದರೆ ’ ಪರಿಶುದ್ಧಿ ’; ’ ಕಲ್ಪನೆ ’ ಎಂದರೆ ’ ಆಲೋಚನೆಗಳ ಸಮೂಹ ’. ಮೂಢರಿಗೆ ಸಂಕಲ್ಪಗಳಿರುವುದಿಲ್ಲ. ವಿಕಲ್ಪಗಳೇ ಅಧಿಕ. ಒಂದು ಹೆಜ್ಜೆ ಮುಂದಕ್ಕೆ, ಎರಡು ಹೆಜ್ಜೆ ಹಿಂದಕ್ಕೆ ಹಾಕುತ್ತಾರೆ. ಸಂಕಲ್ಪ ವಿಕಲ್ಪಗಳ ಸಮಾನ ಮಿಶ್ರಣವೇ ’ ಸಾಧಾರಣ ಮನುಷ್ಯ ’. ಸಂಕಲ್ಪಗಳ ಹಿರಿಮೆಯೇ, ವಿಕಲ್ಪಗಳ ಕ್ಷೀಣತೆ ’ ಉತ್ತಮರ ಜೀವನ ವಿಧಾನ ’.
Recent Comments