” ಆಸಿಯಾ ಪೆಸಿಫಿಕ್ ದೇಶಗಳಲ್ಲಿ ಪತ್ರೀಜಿಯವರ ಸಂದೇಶಗಳು “
ಸೆಪ್ಟೆಂಬರ್ 6 ರಿಂದ 24 ರ ವರೆಗು “ಆಸಿಯಾ ಪಸಿಫಿಕ್ ದೇಶಗಳಲ್ಲಿ” ನಡೆದ ಧ್ಯಾನ, ಆತ್ಮಜ್ಞಾನ, ಸಸ್ಯಾಹಾರ ಯಾತ್ರೆಯಲ್ಲಿ ಬ್ರಹ್ಮರ್ಷಿ ಪತ್ರೀಜಿಯವರು ನೀಡಿದ ಸಂದೇಶಗಳು ಓದುಗರಿಗಾಗಿ ಇಲ್ಲಿವೆ.
ಸಿಂಗಪೂರ್ನಲ್ಲಿ ಪತ್ರೀಜಿಯವರ ಸಂದೇಶ :
ನನಗೆ ಮಾತ್ರ ಧ್ಯಾನಕ್ಕಿಂತಾ ಸಸ್ಯಾಹಾರವೇ ಮುಖ್ಯ. ನೀವೆಲ್ಲರೂ ಸಸ್ಯಾಹಾರಿಗಳೆಂದೇ ಭಾವಿಸುತ್ತಿದ್ದೇನೆ. ನೀವೆಲ್ಲರೂ ಸಿಂಗಪೂರ್ನಂತಹ ಸಂಪನ್ನ ದೇಶದಲ್ಲಿ ಸಂಪನ್ನರಾಗಿ ಜೀವಿಸುತ್ತಿರುವಿರಿ. ಆದರೆ, ಈ ಸಿರಿ-ಸಂಪತ್ತೆಲ್ಲಾ ನಮ್ಮ ಜೊತೆ ಬರುವುದಿಲ್ಲ. ನಮ್ಮ ಜೊತೆ ಬರುವುದು ಆತ್ಮಜ್ಞಾನ, ಎನ್ಲೈಟನ್ಮೆಂಟ್ ಮಾತ್ರವೆ. ಆತ್ಮಜ್ಞಾನವನ್ನು ಧ್ಯಾನದಿಂದ ಮತ್ತು ಸಜ್ಜನ ಸಾಂಗತ್ಯದಿಂದ ಮತ್ತು ಸ್ವಾಧ್ಯಾಯದಿಂದ ಮಾತ್ರವೇ ನಾವು ಪಡೆಯಬಹುದು.
ಧ್ಯಾನದ ಮೂಲಕ … ‘ಯೋಗಿ’, ‘ಋಷಿ’, ‘ರಾಜರ್ಷಿ’, ‘ಬ್ರಹ್ಮರ್ಷಿ’ಯಾಗಿ ನಾವು ವಿಕಾಸವನ್ನು ಹೊಂದುತ್ತೇವೆ. ಇದು ಒಂದು ದಿನದಲ್ಲಿ ಪೂರ್ಣಗೊಳ್ಳುವ ಪ್ರಕ್ರಿಯೆ ಅಲ್ಲ. ಜೀವನದಾದ್ಯಂತ ನಡೆಯುವ ಪ್ರಕ್ರಿಯೆ. ಅದನ್ನು ತಲುಪಬೇಕಾದರೆ ನೀವು ಧ್ಯಾನ ಮಾಡಿತೀರಲೇಬೇಕು. ಪ್ರತಿದಿನ ಧ್ಯಾನವನ್ನು ಕ್ರಮತಪ್ಪದೇ 40 ದಿನಗಳು ಮಾಡಿದರೆ ಮಾತ್ರವೇ ಧ್ಯಾನಿ ಆಗುತ್ತೇವೆ. ಹಾಗೆ ನಿರಂತರ ಧ್ಯಾನ- ಜ್ಞಾನ ಸಾಧನೆಗಳೇ ಕಾಲಕ್ರಮೇಣ ನಮ್ಮನ್ನು ‘ಬ್ರಹ್ಮರ್ಷಿ’ಯಾಗುವಂತೆ ಮಾಡುತ್ತದೆ ಎಂದು ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ಪತ್ರೀಜಿಯವರ ಸಂದೇಶ :
“ಪ್ರಾಣಿಗಳು ಮಾನವನ ಆಹಾರಕ್ಕಾಗಿ ಹುಟ್ಟಲಿಲ್ಲ. ಮಾನವನ ಜೀವನ ಸರಿಯಾಗಿರಲು ಮತ್ತು ಮಾನವನ ಕರುಣೆ, ಪ್ರೀತಿಗಳನ್ನು ಹೊಂದಲಿಕ್ಕಾಗಿಯೆ ಪ್ರಾಣಿಕೋಟಿ ಇದೆ. ಮಾನವನ ರಾಕ್ಷಸತ್ವದ ನಡವಳಿಕೆಗಳಿಂದ ಮತ್ತು ಅಜ್ಞಾನದಿಂದ ಮೂಕಪ್ರಾಣಿಗಳು ಬಲಿ ಆಗುವುದೇ ಭೂಮಿಯಲ್ಲಿರುವ ಅಸಮಾನತೆಗಳಿಗೆ ಕಾರಣ; ಆದ್ದರಿಂದ, ಭೂಮಾತೆ ಬಗ್ಗೆ ಪ್ರೇಮ ಮತ್ತು ಭಗವಂತನ ಸೃಷ್ಟಿ ಬಗ್ಗೆ ಗೌರವ ಇರುವವರು ಯಾರೂ ಮಾಂಸಾಹಾರ ತಿನ್ನಬಾರದು” ಎಂದು ಸಂದೇಶ ನೀಡಿದರು.
* * *
“ಜೀವನವೇ ಒಂದು ಸಮಸ್ಯೆ … ಪ್ರತಿಯೊಬ್ಬರ ಜೀವನದಲ್ಲೂ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳೇ. ಸಮಸ್ಯೆಗಳಿಲ್ಲದ ಜೀವನ ಈ ಭೂಮಿಯ ಮೇಲೆ ಇಲ್ಲ. ಸಮಸ್ಯೆಗಳು ಇಲ್ಲದಿದ್ದರೇ ಮಾನವ ಜನ್ಮವೇ ಇಲ್ಲ. ಆದ್ದರಿಂದ .. ಸಮಸ್ಯೆ ಹಿಂದೆ ಇರುವ ಅರ್ಥವನ್ನು ಗ್ರಹಿಸಬೇಕಾದರೂ ಒಳ್ಳೆಯ ಜೀವನ ವಿಧಾನವನ್ನು ಅವಲಂಬಿಸಬೇಕಾದರೂ .. ಧ್ಯಾನಸಾಧನೆ ವಿನಹ ಬೇರೆ ಮಾರ್ಗವಿಲ್ಲ” ಎಂದು ತಿಳಿಸಿದರು.
* * *
“ಗ್ಯಾರೀ”.. ಪ್ರಮುಖ ಛಾನೆಲರ್, “DZAR” ಎನ್ನುವ ಊರ್ಧ್ವ ಲೋಕದ ಪೂರ್ಣಾತ್ಮದಲ್ಲಿ ಅನುಸಂಧಾನ (connect) ಆಗಿರುವ ಗ್ಯಾರೀ .. ಒಳ್ಳೆಯ ಆಧ್ಯಾತ್ಮಿಕ ವಿಷಯಗಳನ್ನು ಸಂಗ್ರಹಮಾಡಿ, ಅವುಗಳನ್ನು ಗ್ರಂಥಸ್ಥಗೊಳಿಸಿ ಪ್ರಪಂಚಕ್ಕೆ ನೀಡುತ್ತಿದ್ದಾರೆ. ಅವರು ಪ್ರಕಟಿಸಿದ ಗ್ರಂಥಗಳೇ “ಮೆಸೇಜಸ್ ಫ್ರಮ್ ಸೋಲ್”. ಪತ್ರೀಜಿ ಗ್ಯಾರೀರವರನ್ನು ನಾಲ್ಕು ಪ್ರಶ್ನೆಗಳನ್ನು ಕೇಳಿದರು.
“ಛಾನೆಲಿಂಗ್ ಸಂದೇಶಗಳು”
ಪತ್ರೀಜಿ : ಭೂಮಂಡಲದಲ್ಲಿರುವ ಮೂಕ ಪ್ರಾಣಿಗಳನ್ನು ಕೊಲ್ಲುತ್ತಿದ್ದರೆ ನನಗೆ ನೋವು ಆಗುತ್ತಿದೆ. ಈ ಪ್ರಾಣಿಗಳನ್ನು ಕೊಲ್ಲುವುದು ಯಾವಾಗ ಅಂತ್ಯವಾಗುತ್ತದೆ ?
DZAR : ನಿಮ್ಮಲ್ಲಿರುವ ಬ್ರಹ್ಮರ್ಷಿತತ್ವದಿಂದ ನೀವು ಸಮಸ್ತ ಪ್ರಾಣಕೋಟಿ ಜೊತೆ ಏಕತ್ವವನ್ನು ಹೊಂದಿರುವಿರಿ. ಆದ್ದರಿಂದಲೇ, ಆ ನೋವನ್ನು ನೀವು ಅನುಭೂತಿ ಹೊಂದುತ್ತಿರುವಿರಿ. ಕೊಲ್ಲುವವರು, ತಿನ್ನುವವರು ಬಿಡಿಬಿಡಿಯಾಗಿ ಇದ್ದಾರೆಂದರೆ .. ಅವರಲ್ಲಿ ಸೃಷ್ಟಿಯಿಂದ ಕೂಡಿರುವ ಏಕತ್ವ ಭಾವನೆ ಇರುವುದಿಲ್ಲ. ಕೊಲ್ಲುವುದು ಬಾಧೆಯೆ .. ಆದರೂ ಅವರು ಅ ಬಾಧೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅಂದರೆ .. ಅವರಿಗೆ ವಿಶ್ವನ್ಯಾಯ ಸೂತ್ರವಾದ ಏಕತ್ವವನ್ನು ಕುರಿತು ತಿಳಿಯದು. ಅದನ್ನು ಅವರು ತಿಳಿದುಕೊಂಡ ದಿನ ಪ್ರಾಣಿಗಳನ್ನು ಕೊಲ್ಲುವುದು ಪೂರ್ತಿಯಾಗಿ ನಿಂತುಹೋಗುತ್ತದೆ. ಧ್ಯಾನದಿಂದ ಮಾತ್ರವೇ ಎಲ್ಲರಲ್ಲೂ ಆ ‘ಏಕತ್ವ’ ಉಂಟಾಗುತ್ತದೆ.
ಪತ್ರೀಜಿ : “ಪಿರಮಿಡ್ ಶಕ್ತಿಯನ್ನು ಕುರಿತು ತಿಳಿಸಿ”
DZAR : “ನೀವೇ ಒಂದು ಪಿರಮಿಡ್, ನೀವೇ ಆಶಕ್ತಿ, ನಿಮ್ಮ ಶಕ್ತಿಯೇ ಇಲ್ಲದಿದ್ದರೇ ಪಿರಮಿಡ್ ಎನರ್ಜಿ ಎನ್ನುವುದೇ ಇಲ್ಲ; ಕೇವಲ ಅದು ಕಟ್ಟಡಗಳು ಮಾತ್ರವೇ”.
ಪತ್ರೀಜಿ : “ನೂರು ವರ್ಷಗಳನಂತರ ಭೂಮಿ ಹೇಗೆ ಇರಲಿದೆ”?
DZAR : “ಪ್ರಸ್ತುತದಲ್ಲಿರುವ ಪ್ರಕಾರವಾದರೆ ನೂರು ವರ್ಷಗಳನಂತರ ಏನೂ ಇರುವುದಿಲ್ಲ. ಭೂಮಾತೆಯ ಉಳಿವಿಗಾಗಿ ನಾವು ಇನ್ನು ಹೆಚ್ಚಾಗಿ ಶ್ರಮಿಸಬೇಕು.. ಈ ಕ್ಷಣದಿಂದಲೇ ವಿಶೇಷವಾಗಿ ಶ್ರಮಿಸಿದರೇ ಮುಂದೆ ಬರಲಿರುವ ಐವತ್ತು ವರ್ಷಗಳನಂತರ ಎಷ್ಟು ಚೆನ್ನಾಗಿರತ್ತದೆಯೋ ನೀವೇ ಹೇಳಿ. ನಿಮಗೆ ಗೊತ್ತಲ್ಲವೇ. ಇನ್ನೂ .. ಇನ್ನೂ .. ತುಂಬಾ ಶ್ರಮಿಸಬೇಕು”.
ಪತ್ರೀಜಿ : “ನೀವು, ನಾನು ಭೇಟಿ ಆಗಿದ್ದು ಯಾವಾಗ” ?
DZAR : “ಎಂದಿಗಾದರೂ ಬೇರೆ ಆದರೆ ತಾನೆ ಭೇಟಿ ಆಗುವುದನ್ನು ಕುರಿತು ಮಾತನಾಡಿಕೊಳ್ಳುವುದು, ನಾವು ಸದಾ ಜೊತೆಗೇ ಇದ್ದೇವೆ. ನಿಮಗೆ ಗೊತ್ತಿರುವ ವಿಷಯವೇ”.
ಪತ್ರೀಜಿ : “ಆಸ್ಟ್ರೇಲಿಯಾ ಭೂ ಭಾಗವನ್ನು ಕುರಿತು ಹೇಳಿ” ?
DZAR : ಮತದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ವಿಭಜನೆಗಳಿಂದ ಮಾನವಜಾತಿ ತನ್ನ ಏಕತ್ವವನ್ನು ಕಳೆದುಕೊಂಡು ‘ದೇಶಗಳು’ ಏರ್ಪಟ್ಟಿದೆ. ಎಲ್ಲಾ ಭೂ ಭಾಗಗಳು ಸಸ್ಯಶ್ಯಾಮಲವಾದದ್ದೇ. ದೇಶಗಳ ನಡುವೆ ಎಲ್ಲೆಗಳನ್ನು ಅಳಸಿ ಹಾಕಿದರೇ .. ಭೂಮಂಡಲವೆಲ್ಲಾ ಕೂಡಾ ವಸುಧೈವಕುಟುಂಬವಾಗಿ ಬೆಳಗುತ್ತದೆ”.
ಹೀಗೆ ಅತ್ಯದ್ಭುತವಾಗಿ ಆ ಛಾನೆಲಿಂಗ್ ಪ್ರಕ್ರಿಯೆ ಪೂರ್ತಿ ಆಗಿದೆ. ಈ ಕಾರ್ಯಕ್ರಮವನ್ನು YOUTUBE ನಲ್ಲಿ ‘PATRIJI AND DZAR’ ಎಂದು ಸರ್ಚ್ ಮಾಡಿ ನೋಡಬಹುದು.
ಆಕ್ಲಾಂಡ್ನಲ್ಲಿ ಪತ್ರೀಜಿಯವರ ಸಂದೇಶ :
ಪ್ರತಿದಿನ ಪ್ರತಿಯೊಬ್ಬರೂ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕು; ಅದಕ್ಕೆ ಎರಡು ಮಾರ್ಗಗಳಿವೆ. ಅವು …
1. ಧ್ಯಾನ
2. ಪರಸ್ಪರ ಮಾನವ ಸಂಬಂಧಗಳು
“ಧ್ಯಾನದಿಂದ ನಮ್ಮನ್ನು ನಾವು ಶಕ್ತಿಯುತ ವಾಗಿಸಿಕೊಳ್ಳುತ್ತೇವೆ. ಇತರರ ಜೊತೆ ಪರಸ್ಪರ ಸಂಬಂಧ ಬಾಂಧವ್ಯಗಳನ್ನು ಸರಿಯಾಗಿ ಇಟ್ಟುಕೊಳ್ಳುವುದರಿಂದ ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳುತ್ತೇವೆ. ಇದುವರೆಗು ಲಕ್ಷಾಂತರ ಜನಗಳ ಜೀವನವಿಧಾನಗಳನ್ನು, ಜೀವನ ಆಶಯಗಳನ್ನು ನಾನು ಪ್ರತ್ಯಕ್ಷವಾಗಿ ತಿಳಿದುಕೊಂಡಿದ್ದೇನೆ. ಅದರಿಂದ ನನ್ನಲ್ಲಿ ಅಮಿತವಾದ ಪ್ರಗತಿ ಲಭಿಸಿದೆ. ಯಾವಾಗ ಪರಸ್ಪರ ಮಾನವ ಸಂಬಂಧಗಳನ್ನು ಉತ್ತಮಗೊಳಿಸಿಕೊಳ್ಳುತ್ತಾನೋ .. ಆಗಲೇ ಆತನು ಸರ್ವಭೂತಾತ್ಮ ಎನ್ನುವ ಸತ್ಯವನ್ನು ತಿಳಿದುಕೊಳ್ಳುತ್ತಾನೆ. ತಮ್ಮ ಜೊತೆ ತಾವು ಸಂಬಂಧಗಳು ಇಲ್ಲದವರು ಇತರ ಮಾನವರ ಜೊತೆ ಸಹ ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಳ್ಳಲಾಗುವುದಿಲ್ಲ. ನಮ್ಮ ಜೊತೆ ನಮ್ಮ ಸಂಬಂಧಗಳನ್ನು ಉತ್ತಮಗೊಳಿಸುವ ಶಾಸ್ತ್ರವೇ .. ಆಧ್ಯಾತ್ಮಿಕ ಶಾಸ್ತ್ರ .. ಅಥವಾ ಧ್ಯಾನಶಾಸ್ತ್ರ.
* * *
ನಾವೆಲ್ಲರೂ ದೇವರುಗಳೇ. ಈ ವಿಷಯವನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ದೇವರುಗಳಾದ ನಮಗೆ ಬಾಧೆಗಳು, ಸಮಸ್ಯೆಗಳು ಇರುವುದಿಲ್ಲ. ಕರ್ಮಗಳು ಮಾತ್ರ ಇರುತ್ತವೆ. ಯಾವಾಗ ನಾವು ಧ್ಯಾನದಲ್ಲಿ ಪ್ರವೇಶಿಸುತ್ತೇವೊ ಆಗ ನಮಗೆ ಎನ್ಲೈಟೆನ್ಮೆಂಟ್ ಬರುತ್ತದೆ. ಎನ್ಲೈಟನ್ ಆದವರಿಗೆ ಮಾತ್ರವೇ ಜೀವನವನ್ನು ಕುರಿತು ತಿಳಿಯುತ್ತದೆ. ಆಗ ಬಾಧೆಗಳಿಗೆ ದುಃಖಿಸುವುದು, ನಿರಾಸೆಗಳಿಗೆ ಒಳಗಾಗುವುದು ಇರುವುದಿಲ್ಲ.
“ಮಾಸ್ಟರ್ ಆಫ್ ಮೆಡಿಟೇಷನ್”, “ಮಾಸ್ಟರ್ ಆಫ್ ಎನ್ಲೈಟೆನ್ಮೆಂಟ್” ಎನ್ನುವ ಪದವಿಯನ್ನು ನಾವು ಹೊಂದಬೇಕು. ನಾವು ಧ್ಯಾನದಲ್ಲಿ ಪರಿಣಿತಿ ಸಂಪಾದಿಸಬೇಕಾದರೆ .. ಧ್ಯಾನಕ್ಕಾಗಿ ಅಧಿಕ ಸಮಯವನ್ನು ಕಳೆಯಬೇಕು. ಗಂಟಾನುಗಟ್ಟಲೆ ಸಾಧನೆ ಮಾಡಬೇಕು. ಇದನ್ನೇ ‘ಹನುಮಾನ್ ಚಾಲೀಸಾ’ ಎನ್ನುತ್ತಾರೆ. ‘ಚಾಲೀಸಾ’ ಅಂದರೆ 40 ದಿನಗಳು, ‘ಹನುಮಾನ್’ ಅಂದರೆ ವಾಯುಪುತ್ರರಾಗುವುದು. ಅಂದರೆ 40 ದಿನಗಳು ಧ್ಯಾನವನ್ನು ಮಾಡಿದರೆ ನಾವು ವಾಯುಪುತ್ರನ ಹಾಗೆ ಅತ್ಯಂತ ಶಕ್ತಿಯುತರಾದ ಮಾಸ್ಟರ್ಸ್ ಆಗುತ್ತೇವೆ. ಒಬ್ಬ ಎನ್ಲೈಟೆನ್ ಮಾಸ್ಟರ್ ಮಾತ್ರವೇ ತನ್ನ ಜೀವನವನ್ನು ಚೆನ್ನಾಗಿ ಅರಿಯುತ್ತಾನೆ. ಆತನು ಕಷ್ಟಗಳಿಗೆ ಕುಗ್ಗುವುದಿಲ್ಲ .. ಬಾಧೆಗಳಿಗೆ ಒಳಗಾಗುವುದಿಲ್ಲ. ಎಲ್ಲರಜೊತೆ ತಾನು ಒಂದಾಗಿ ಎಲ್ಲರನ್ನೂ ತನ್ನಲ್ಲಿ ನೋಡಿಕೊಳ್ಳುತ್ತಾನೆ. ಬುದ್ಧನ ಹಾಗೆ ಇರುತ್ತಾ .. ಯಾರು ತನ್ನನ್ನು ಹೊಗಳಿದರೂ ಹಿಗ್ಗುವುದಿಲ್ಲ .. ಮತ್ತು ಯಾರು ತನ್ನನ್ನು ದೂಷಿಸಿದರೂ ಕುಗ್ಗುವುದಿಲ್ಲ ಎನ್ನುತ್ತಾ ಬುದ್ಧನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಪತ್ರೀಜಿ ಉದಾಹರಣೆ ಮೂಲಕ ತಿಳಿಸಿದರು.
* * *
‘ಧ್ಯಾನಮಾಡುವುದು ತುಂಬಾ ಸುಲಭ .. ತುಂಬಾ ಸರಳ. ಆದರೆ, ನಾವು ಅದಕ್ಕಾಗಿ ತಕ್ಕಸಮಯವನ್ನು ಖರ್ಚುಮಾಡಬೇಕು. ವ್ಯಾಪಾರ ಮಾಡುವುದು ಎಷ್ಟು ಸುಲಭವೊ .. ಅದಕ್ಕಿಂತಾ ಧ್ಯಾನ ಮಾಡುವುದು ತುಂಬಾ ಸುಲಭ.
ವ್ಯಾಪಾರ ಮಾಡಿದರೆ ಹಣ ಬರುತ್ತದೆ. ಡ್ರೈವಿಂಗ್ ಮಾಡಿದರೆ ಕಾರು(ವಾಹನ) ಹೇಗೆ ಓಡಿಸಬಹುದೊ ಗೊತ್ತಾಗುತ್ತದೆ. ಸಂಗೀತ ಕಲಿತುಕೊಂಡರೆ ಸಂಗೀತಜ್ಞರು ಆಗುತ್ತೇವೆ. ಧ್ಯಾನ ಮಾಡಿದರೆ.. ಆತ್ಮಜ್ಞಾನಿಗಳಾಗುತ್ತೇವೆ. ಆತ್ಮಜ್ಞಾನದ ಮೂಲಕವೇ ಎನ್ಲೈಟೆನ್ಮೆಂಟ್ ಬರುತ್ತದೆ. ಯಾರು ಎನ್ಲೈಟೆನ್ ಆಗುತ್ತಾರೊ ಅವರೇ ಬುದ್ಧರು, ಜೀಸಸ್, ಮಹಾವೀರರಾಗುತ್ತಾರೆ.
* * *
“ಮುಂಚಿತವಾಗಿ ಯಾವ ವಿಷಯವನ್ನಾದರು ನಾವು ಪರಿಶೀಲಿಸಬೇಕು. ಶೋಧನೆ ಮಾಡಬೇಕು. ಶೋಧನೆ, ಎಕ್ಸ್ಪೆರಿಮೆಂಟ್ಸ್ ಮೂಲಕವೇ ನಮಗೆ ವಿಶೇಷ ಅನುಭವ ಉಂಟಾಗುತ್ತದೆ. ಮತ್ತು ವಿಶೇಷ ಅನುಭವದ ಮೂಲಕವೇ ಎನ್ಲೈಟೆನ್ಮೆಂಟ್ ಸುಸಾಧ್ಯ. ನಮ್ಮ ಗುರಿ ‘ಮಾಸ್ಟರ್ ಆಫ್ ಮೆಡಿಟೇಷನ್’ ಆಗುವುದು, ‘ಮಾಸ್ಟರ್ ಆಫ್ ಎನ್ಲೈಟೆನ್ಮೆಂಟ್’ ಆಗುವುದು.
“ಧ್ಯಾನ” ಇಲ್ಲದ ಜೀವನಕ್ಕೆ ‘ಎನ್ಲೈಟೆನ್ಮೆಂಟ್’ ಎನ್ನುವುದು ಅಸಾಧ್ಯ. ಪ್ರತಿಯೊಬ್ಬರೂ ಎಲ್ಲರಿಂದಲೂ ಕಲಿತುಕೊಳ್ಳಬೇಕು. ಹಾಗೆ ಕಲಿತುಕೊಂಡರೇನೆ ನಮಗೆ ಎನ್ಲೈಟೆನ್ಮೆಂಟ್ ಬರುತ್ತದೆ. ಅದಕ್ಕೆ ನಾನು ಪ್ರತಿಯೊಬ್ಬರನ್ನು ಮಾತನಾಡಿಸುತ್ತೇನೆ. ನಾನು ನನ್ನ ಜೀವನದಲ್ಲಿ ಲಕ್ಷಾಂತರ ಧ್ಯಾನಿಗಳ ಮೂಲಕ ಅವರ ಮುಖತಃ ಧ್ಯಾನವನ್ನು ಕುರಿತು ಎಲ್ಲಾ ಕೇಳಿಸಿಕೊಂಡೆ. ಆದ್ದರಿಂದ, ಎನ್ಲೈಟೆನ್ಮೆಂಟ್ ಇರುವವರು ಹೇಗೆ ಇರುತ್ತಾರೊ, ಅವರು ಯಾವರೀತಿ ಇರುತ್ತಾರೊ, ಅವರ ಮಾತುಗಳು ಹೇಗೆ ಇರುತ್ತವೊ ನಾನು ತಿಳಿದುಕೊಂಡಿದ್ದೇನೆ.
ಪ್ರತಿಯೊಬ್ಬರೂ ಒಬ್ಬ ಬುದ್ಧನಹಾಗೆ ಜೀವಿಸಬೇಕು.. ಒಬ್ಬ ಬುದ್ಧನ ಹಾಗೆ ಮರಣಿಸಬೇಕು. ತದ್ವಿರುದ್ಧವಾದ ಜೀವನ .. ಜೀವನವೇ ಅಲ್ಲ.
* * *
ಹೊಸದಾಗಿ ಬಂದವರನ್ನು ಕರೆದು .. ‘ಪ್ರಶ್ನೆಗಳನ್ನು ಕೇಳಿ’ ಎಂದರು ಪತ್ರೀಜಿ.
ಒಬ್ಬ ಮಹಿಳೆ “ಏನಾದರೂ ಒಂದು ಅದ್ಭುತವನ್ನು ತೋರಿಸಿ” ಎಂದು ಬಯಸಿದಾಗ .. ಪತ್ರೀಜಿ “ನಾನು ತೋರಿಸಲಾರೆ; ಆದರೆ, ಕೆಲವು ಅದ್ಭುತ ಘಟನೆಗಳನ್ನು ನಿಮಗೆ ಹೇಳಬಲ್ಲೆ”.
ಒಂದು ದಿನ ಸ್ನಾನಮಾಡಲು ಬಿಸಿನೀರು ಸಿದ್ಧಮಾಡಿ ಎಂದು ಹೇಳಿ ಅನಂತರ ನಾನು ಸ್ನಾನಮಾಡಲು ಪ್ರಾರಂಭಿಸಿದ್ದೇನೆ. ಬಕೆಟ್ನಲ್ಲಿ ಕಾಲು ಭಾಗ ನೀರಿದೆ. ಅದು ಸ್ನಾನ ಮಾಡುವುದಕ್ಕೆ ಸರಿಯಾಗುವುದಿಲ್ಲ. ಆದರೂ ನಾನು ಸ್ನಾನ ಮಾಡಲು ಪ್ರಾರಂಭಿಸಿದ್ದೇನೆ. 20 ತಂಬಿಗೆ ನೀರಿನಿಂದ ಸ್ನಾನ ಮಾಡಿದನಂತರ ಕೂಡಾ ಬಕೆಟ್ನಲ್ಲಿ ಬಿಸಿನೀರು ಇನ್ನು ಹಾಗೆ (ಅರ್ಥಕ್ಕೆ) ಇತ್ತು.
ಮತ್ತೊಂದು ಘಟನೆ : “1991 ನಲ್ಲಿ ಕರ್ನೂಲ್ನಲ್ಲಿ ಒಂದುದಿನ ವಿನಾಯಕ ಚೌತಿ ಕಾರ್ಯಕ್ರಮಕ್ಕೆ ನನ್ನ ಹೆಂಡತಿ ಸ್ವರ್ಣ ಮೇಡಮ್ ಸ್ಥಾನಿಕರನ್ನು ಊಟಕ್ಕೆ ಆಹ್ವಾನಿಸಿದರು. 25 ಕೆ.ಜಿ ಅಕ್ಕಿ ಇಂದ 200 ಜನಕ್ಕೆ ಊಟಕ್ಕೆ ಏರ್ಪಾಟು ಮಾಡಿದರು .. ಆದರೆ, ಆದಿನ 600 ಜನ ಬಂದರು. 600ಜನ ಚೆನ್ನಾಗಿ ಹೊಟ್ಟೆತುಂಬಾ ಊಟಾಮಾಡಿದನಂತರ ಕೂಡಾ ಇನ್ನೂ 100 ಜನಕ್ಕೆ ಸರಿಹೋಗುವಷ್ಟು ಅಡುಗೆ ಉಳಿದಿತ್ತು” ಎನ್ನುತ್ತಾ ತಮ್ಮ ಅನುಭವಗಳನ್ನು ಅಲ್ಲಿರುವವರ ಜೊತೆ ಹಂಚಿಕೊಂಡರು.
* * *
“ಪ್ರಾಣಿಗಳು ಮಾನವರ ಆಹಾರಕ್ಕಾಗಿ ಹುಟ್ಟಲಿಲ್ಲ. ಮಾನವರ ಆಹಾರ ಕೇವಲ ವೃಕ್ಷ ಸಂಪತ್ತೇ. ಮಾನವರು ತಮ್ಮ ಅಜ್ಞಾನದಿಂದಲೇ ಮಾಂಸಾಹಾರವನ್ನು ಉಣ್ಣುತ್ತಿದ್ದಾರೆ. ಬಿಷಪ್ ಲೆಡ್ಬೀಟರ್, ದೀಪಕ್ಚೋಪ್ರಾ, ಅನೀಬೆಸೆಂಟ್ ಅವರ ಪುಸ್ತಕಗಳನ್ನು ಓದಿದರೆ ಈ ವಿಷಯಗಳು ತಿಳಿದುಬರುತ್ತವೆ”.
“1985 ನಲ್ಲಿ ನಮ್ಮ ಗುರುಗಳು ನನ್ನ ಕರೆದು ‘ನಾನು ಅಂತಹ ದಿನ ಶರೀರ ತ್ಯಜಿಸುತ್ತಿದ್ದೇನೆ; ನನ್ನ ಸಮಾಧಿಗೆ ಎಲ್ಲಾ ಸಿದ್ಧತೆ ಮಾಡು’ ಹಾಗೆ ಆಗಲಿ ಗುರುಗಳೆ ಎಂದು ಹೇಳಿದೆ; ಗುರುಗಳು ಏನು ಹೇಳಿದರೂ ‘ಸರಿ’ ಎನ್ನಬೇಕು ಅಷ್ಟೇ.
“ಅವರು ತಾವು ಹೇಳಿದ ಸಮಯಕ್ಕೆ ತಮ್ಮ ಶರೀರವನ್ನು ತ್ಯಜಿಸಿದರು. ಅದೇ ಎನ್ಲೈಟೆನ್ಮೆಂಟ್ ಅಂದರೆ” ಎನ್ನುತ್ತಾ ಜನ್ಮ ಪರಂಪರೆಯ ಶ್ರಮವನ್ನು ಬೋರ್ಡು ಮೇಲೆ ಬರೆದು ತೋರಿಸಿದರು.
“ಭೂಲೋಕಕ್ಕೆ ಜನ್ಮ ತಾಳಿದನಂತರ ಕೆಲವು ವರ್ಷಗಳ ಕಾಲ ನಾವು ಭೂಮಿಯ ಮೇಲೆ ಜೀವಿಸಿ ಅನಂತರ ಈ ಶರೀರವನ್ನು ತ್ಯಜಿಸುತ್ತೇವೆ. ಭೌತಿಕ ಶರೀರವನ್ನು ತ್ಯಜಿಸಿದನಂತರ ಕೂಡಾ ಮೂರು ಗಂಟೆಗಳಕಾಲ ನಮ್ಮ ಪ್ರಾಣಮಯಕೋಶ ಅಲ್ಲೇ .. ಆ ನಿರ್ಜೀವವಾದ ಭೌತಿಕ ಶರೀರದ ಸುತ್ತೂ ತಿರುಗುತ್ತಲೇ ಇರುತ್ತದೆ”.
“ಮೂರು ಗಂಟೆಗಳನಂತರ ನಮ್ಮ ಮನೋಮಯಕೋಶದ ಜೊತೆಕೂಡಿ ಭೂಲೋಕದಿಂದ ಹೊರಬಂದು ಭುವರ್ಲೋಕಕ್ಕೆ ತೆರಳುತ್ತೇವೆ. ಅಲ್ಲಿಂದ ಸುವರ್ರ್ಲೋಕ .. ಅಂದರೆ ಸೂಕ್ಷ್ಮಲೋಕಕ್ಕೆ ಹೋಗಿ ತಲಪುತ್ತೇವೆ. ಭೂಮಿಯ ಮೇಲೆ ನಾವು ಮಾಡಿಕೊಂಡ ಸತ್ಕರ್ಮಗಳ ಫಲಿತಗಳನ್ನು ಆಯಾ ಹಂತದಲ್ಲಿರುವ ಲೋಕಗಳಲ್ಲಿ ವಿಹರಿಸುತ್ತೇವೆ. ಒಳ್ಳೆಯ ಕರ್ಮಗಳನ್ನು ಮಾಡಿದರೆ ಮಹಾಯೋಗಿಗಳಿರುವ ಪ್ರದೇಶಗಳಲ್ಲಿ ಮಹಾ ಆನಂದದಿಂದ ಜೀವಿಸುತ್ತೇವೆ; ಕೆಟ್ಟಕರ್ಮಗಳನ್ನು ಮಾಡಿದರೆ ಕೆಳದರ್ಜೆಯ ಭಾವನೆಗಳು ಇರುವ ಪ್ರದೇಶದಲ್ಲಿ ಇರುತ್ತೇವೆ”.
ಅಲ್ಲಿಂದ ಜನಾಲೋಕಕ್ಕೆ ಹೋಗುತ್ತೇವೆ. ಸಾಧಾರಣವಾಗಿ ಜನಾಲೋಕಗಳಲ್ಲಿರುವ ಅಂಶಾತ್ಮಗಳೆಲ್ಲವೂ ಕೂಡಾ .. ಸ್ವಂತ ಅಭಿವೃದ್ಧಿಗಾಗಿ ಸುಮಾರು ೪೦೦ ಜನ್ಮಗಳನ್ನು ಭೂಲೋಕದಲ್ಲಿ ಪಡೆಯುತ್ತಿರುತ್ತವೆ. ಧ್ಯಾನ, ಆತ್ಮಜ್ಞಾನ ಇಲ್ಲದಿದ್ದರೆ ಅದಕ್ಕಿಂತಾ ಉತ್ತಮ ಲೋಕಗಳಿಗೆ ನಾವು ಹೋಗಲಾರೆವು. ಭೂಲೋಕದಲ್ಲಿರುವಾಗ ಧ್ಯಾನಮಾಡಿ ಅಪಾರವಾದ ಧ್ಯಾನಶಕ್ತಿಯನ್ನು ಹೊಂದಿದರೇ .. ಅಪಾರವಾದ ಸಜ್ಜನ ಸಾಂಗತ್ಯ ಮಾಡಿದರೆ .. “ಮಹಾಲೋಕ”ದಲ್ಲಿ ಸಜ್ಜನರು ಇರುವ ಲೋಕಕ್ಕೆ ಹೋಗುತ್ತೇವೆ.
“ಇಲ್ಲಿ ಭೂಲೋಕದಲ್ಲೇ ಚೆನ್ನಾಗಿ ಧ್ಯಾನಮಾಡಿ ವಿಶೇಷವಾಗಿ ಆತ್ಮಜ್ಞಾನವನ್ನು ಹೊಂದಿದರೆ ತಪೋಲೋಕಕ್ಕೆ ಹೋಗುತ್ತೇವೆ. ಅಲ್ಲಿ ಸಹ ಆ ಲೋಕಕ್ಕೆ ಸಂಬಂಧಿಸಿದ ಆತ್ಮಜ್ಞಾನವನ್ನು ವಿಶೇಷವಾಗಿ ಹೊಂದಿ ಸದಾ ಸತ್ಯದಲ್ಲಿ ಜೀವಿಸುತ್ತಾ, ಸತ್ಯವನ್ನು ಮಾತನಾಡುತ್ತಾ ಎನ್ಲೈಟೆನ್ಮೆಂಟ್ ಸಾಧಿಸಿದರೇ .. ಒಬ್ಬ ಬುದ್ಧನಾಗಿ ಬದಲಾಗಿ ಸತ್ಯಲೋಕಕ್ಕೆ ಹೋಗುತ್ತೇವೆ” ಎನ್ನುತ್ತಾ ಪೂರ್ಣ ಆಧ್ಯಾತ್ಮಿಕ ಶಾಸ್ತ್ರ ಸಾರಾಂಶವನ್ನು ಸರಳ ರೀತಿಯಲ್ಲಿ ವಿವರಿಸಿದರು.
Recent Comments