” ಉಪನಯನ .. ಬ್ರಹ್ಮೋಪದೇಶ “
ಪ್ರಪಂಚದಲ್ಲಿ ಅತಿಕಷ್ಟವಾದದ್ದು .. ಆತ್ಮಾನುಭವ.ಅನಂತರ ಮಕ್ಕಳ ಶಿಕ್ಷಣ. ಮೆಟ್ಟಲನ್ನೇ ಹತ್ತಲಾರದವಳು ಸ್ವರ್ಗವನ್ನು ಬಯಸಿದಂತೆ, ತಾವು ಯಾರು ಎಂಬುದು ತಾವೇ ತಿಳಿಯದವರು, ತಮ್ಮ ಮಕ್ಕಳನ್ನು ಹೇಗೆ ಬೆಳೆಸಬಲ್ಲರು.
ತನ್ನನ್ನು ತಾನು ತಿಳಿದುಕೊಂಡ ನಂತರವೇ, ನಿಜಕ್ಕೂ ಮದುವೆ ಮಾಡಿಕೊಳ್ಳಬೇಕು. ಹಾಗೆ ತಿಳಿದುಕೊಂಡವರೇ ಮಕ್ಕಳನ್ನು ಹಡೆದು ಬೆಳೆಸಬೇಕು. ಆತ್ಮಜ್ಞಾನ ಇಲ್ಲದವರು ಮಕ್ಕಳನ್ನು ಹಡೆಯಬಹುದು; ಆದರೆ, ಅವರನ್ನು ಬೆಳೆಸುವ ಸಾಮರ್ಥ್ಯ ಮಾತ್ರ ಅವರಿಗೆ ಇರುವುದಿಲ್ಲ. ಹಿಂದಿನ ದಿನಗಳ ಗುರುಕುಲಗಳಲ್ಲಿ ಮಕ್ಕಳೆಲ್ಲಾ ಬೆಳೆದಂತೆ, ಈಗಲೂ ಸಹ ಗುರುಕುಲಗಳಲ್ಲಿ ಶಿಕ್ಷಣ ನಡೆಯಬೇಕು.
ಯಾವ ಪ್ರಾಣಿಯಾದರೂ ಮತ್ತೊಂದು ಪ್ರಾಣಿಗೆ ಜನ್ಮ ನೀಡುವುದು ಎನ್ನುವುದು ಆ ಪ್ರಾಣಿಯ ಹಿರಿತನವೇನಲ್ಲ. ಅದು ಪ್ರಕೃತಿ ಸಹಜವಾಗಿಯೇ ನಡೆಯುತ್ತಿರುತ್ತದೆ. ಆದರೇ, “ಮಕ್ಕಳ ಪೋಷಣೆ” ಎನ್ನುವುದು ಕೇವಲ ಶರೀರಗಳ ಪೋಷಣೆ ಅಲ್ಲ; ಮೇಧಾ ಸಂಪನ್ನತೆ ಎನ್ನುವುದು ಸಿದ್ಧಿಸಬೇಕು” ಅಂದರೆ ಅದು ಪರಿಪೂರ್ಣ ಆತ್ಮವಿಕಾಸವನ್ನು ಹೊಂದಿರುವ ತಂದೆತಾಯಿಗಳಿಂದಲೇ ಅಂಥ ಪೋಷಣೆ ಸಾಧ್ಯ.
ಮೇಧಸ್ಸಿನ ಪೂರ್ಣವಿಕಾಸ ಎನ್ನುವುದು ಆತ್ಮಾನುಭವದ ಮೂಲಕವೇ ಪ್ರಾರಂಭವಾಗುತ್ತದೆ. ಆತ್ಮವಿಜ್ಞಾನದಲ್ಲಿ ನಿಷ್ಣಾತರಾದಾಗಲೇ ಅದು ಪರಿಪೂರ್ಣವಾಗುತ್ತದೆ .. ಮತ್ತು ಈ ಸಿದ್ಧಾಂತವನ್ನು 2500 ವರ್ಷಗಳ ಹಿಂದೆಯೇ ಸಾಕ್ರೆಟೀಸ್ ಮಹಾತ್ಮರು ವಿಶೇಷವಾಗಿ ಬೋಧಿಸಿದರು. “ಮಕ್ಕಳ ಶಿಕ್ಷಣ” ಎನ್ನುವುದು ಅವರ ಅತಿ ಪ್ರಮುಖವಾದ ಅಂಶ.
ಬ್ರಹ್ಮಜ್ಞಾನದಲ್ಲಿ ಜೀವಿಸುವವರೇ ಬ್ರಹ್ಮಚಾರಿಗಳು. ಹಿಂದೂ ಧರ್ಮದಲ್ಲಿ “ಬ್ರಹ್ಮಚರ್ಯಾಶ್ರಮದ ಅನಂತರವೇ ಗೃಹಸ್ಥಾಶ್ರಮ” ಎನ್ನುವುದು ಧರ್ಮವಾಗಿ ನಿಯಮಿಸಲಾಗಿದೆ. ಇಂದಿನ ಮಕ್ಕಳೇ ನಾಳಿನ ಪೌರರು; ಶಿಶುತ್ವ ಹೋಗಿ ಬಾಲ್ಯತ್ವ ಬರುತ್ತಲೇ .. ಆ ಬಾಬಾಲಕಿಯರಿಗೆ ಉಪನಯನ ಕಾರ್ಯಕ್ರಮ ನಿರ್ವಹಿಸುವುದೇ ಹಿಂದೂ ಧರ್ಮದಲ್ಲಿ ಪ್ರಧಾನಾಂಶ.
“ಉಪನಯನ” ಅಂದರೆ, “ಮೂರನೆಯ ಕಣ್ಣು – Third eye” .. ದಿವ್ಯದೃಷ್ಟಿ, ದಿವ್ಯಶ್ರವಣ, ದಿವ್ಯಯಾನ ಮುಂತಾದೆಲ್ಲಾ ಇದರ ಕೆಳಗೆ ಬರುತ್ತದೆ.
ಅನಂತರ “ಬ್ರಹ್ಮೋಪದೇಶ” ಮಾಡುತ್ತಾರೆ. ಅಂದರೆ, “ತತ್ವಮಸಿ”, “ನೀನೇದೇವರು”, “ಅಹಂಬ್ರಹ್ಮಾಸ್ಮಿ” .. “ನಾನುದೇವರು” .. ಎನ್ನುವುದನ್ನು ಬೋಧಿಸುತ್ತಾರೆ. ಮೂರನೆಯ ಕಣ್ಣು ಎನ್ನುವುದು ಧ್ಯಾನಾಭ್ಯಾಸದಿಂದಲೇ ಅಂಕುರಿಸುತ್ತದೆ. ಧ್ಯಾನಯೋಗ ಅಂದರೆ, ಚಿತ್ತವೃತ್ತಿ ನಿರೋಧ. ಇದು ಕೇವಲ ಆನಾಪಾನಸತಿ ಅಥವಾ “ಶ್ವಾಸದ ಮೇಲೆ ಗಮನದ” ಮೂಲಕವೇ ಸಾಧ್ಯ.
ಶಿಶುತ್ವ ಹೋಗಿ ಬಾಲತ್ವ ಬರುತ್ತಲೇ ಬಾಲಬಾಲಕಿಯರೆಲ್ಲರೂ ಪ್ರಪ್ರಥಮವಾಗಿ ಬ್ರಹ್ಮೋಪದೇಶವನ್ನು ಮಾಡಿ ಧ್ಯಾನಾಭ್ಯಾಸದ ರೀತಿಯನ್ನು ಅವರ ಜೀವನದಲ್ಲಿ ಪ್ರವೇಶಗೊಳಿಸುತ್ತಾರೆ. ಈ ಏಳು ವರ್ಷಗಳಲ್ಲಿ ಅವರು ಪೂರ್ಣವಾಗಿ ಬ್ರಹ್ಮಜ್ಞಾನಿಗಳಾಗಿ ಪ್ರಕಾಶಿಸುತ್ತಾ ‘ಬ್ರಹ್ಮಚಾರಿ’/‘ಬ್ರಹ್ಮಚಾರಿಣಿ’ಗಳಾಗುತ್ತಾರೆ! ಯೌವನಾವಸ್ಥೆಯನ್ನು ಪ್ರವೇಶಿಸುತ್ತಲೇ ಶಕ್ತಿಸಾಮರ್ಥ್ಯಗಳು ಬರುತ್ತವೆ. ಆದ್ದರಿಂದ, ಗೃಹಸ್ಥಾಶ್ರಮಕ್ಕೆ ಹಾಯಾಗಿ ತಕ್ಷಣ ಹೋಗಬಹುದು. ಬಾಲತ್ಮಸ್ಥಿತಿಯ ಪ್ರಾರಂಭದಲ್ಲೇ .. ಬ್ರಹ್ಮೋಪದೇಶ, ಉಪನಯನ ಕಾರ್ಯಕ್ರಮದ ಮೂಲಕ ಧ್ಯಾನಾಭ್ಯಾಸದ ಜೊತೆ ಪ್ರಾಪಂಚಿಕ ಜ್ಞಾನಾಭ್ಯಾಸ ಕೂಡಾ ನಡೆದು, ಚಿಕ್ಕವಯಸ್ಸಿನ ಸಮಯದಲ್ಲಿ ಪೂರ್ಣ ಬ್ರಹ್ಮಚಾರಿಗಳಾಗಿ, ಬ್ರಹ್ಮಚಾರಿಣಿಗಳಾಗಿ ದೇಹ ಧಾರುಢ್ಯದೊಂದಿಗೆ, ಆತ್ಮಧಾರುಢ್ಯ ಕೂಡಾ ಸಂಪೂರ್ಣವಾಗಿ ಪಡೆದಿರುತ್ತಾರೆ.
ಅಂತವರು ತಕ್ಷಣ ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ನೂತನ ಶಿಶುಗಳನ್ನು ಪ್ರಕೃತಿಯ ಮಡಿಲಿನಿಂದ ಎಳೆದುಕೊಂಡು, ಅವರ ಶರೀರ ಪೋಷಣೆ ಸಕ್ರಮವಾಗಿ ನೋಡಿಕೊಳ್ಳುತ್ತಾ, ಅವರು ಬಾಲ್ಯ ವಯಸ್ಸಿಗೆ ಬಂದತಕ್ಷಣ ಅವರ ಆತ್ಮೋನ್ನತಿಗೆ ಕೂಡಾ ಕಾರಣಕರ್ತರಾಗುತ್ತಾರೆ. ಈ ರೀತಿಯಲ್ಲಿ “ಮಕ್ಕಳ ಶಿಕ್ಷಣ” ಎನ್ನುವುದು ಸರಿಯಾದ ರೀತಿಯಲ್ಲಿ ನಡೆಯುತ್ತದೆ.
ಆತ್ಮವಿದ್ಯೆಯನ್ನು ಗ್ರಹಿಸಿರುವವರೇ, ಆತ್ಮಾನುಭವ ಇರುವವರೇ, ಅನೇಕಾನೇಕ ಲೋಕ ವಿದ್ಯೆಗಳನ್ನು ಅತಿಸುಲಭವಾಗಿ ವಶ ಮಾಡಿಕೊಳ್ಳಬಲ್ಲರು! ಕಲಿತುಕೊಂಡ ಲೋಕ ವಿದ್ಯೆಗಳನ್ನು ತಮ್ಮ ತಮ್ಮ ಜೀವನ ಪ್ರೌಢಹಂತಗಳಲ್ಲಿ, ತಮ್ಮ ತಮ್ಮ ವೃದ್ಧಾಪ್ಯದಲ್ಲಿ ಲೋಕ ಕಲ್ಯಾಣಕ್ಕಾಗಿ ವಿನಿಯೋಗಿಸಬಲ್ಲರು. ಆತ್ಮವಿದ್ಯೆಯಲ್ಲಿ ಪ್ರವೇಶವಿಲ್ಲದ ಮೂರ್ಖರು ತಮ್ಮ ಪ್ರಾಪಂಚಿಕ ವಿದ್ಯೆಗಳನ್ನು ಲೋಕ ವಿನಾಶಕ್ಕಾಗಿಯೇ ವಿನಿಯೋಗಿಸುತ್ತಾರೆ.
ವಿಶ್ವವ್ಯಾಪೀ ಗತಕಾಲದಲ್ಲಿ ನಡೆದ ದೌರ್ಜನ್ಯಗಳು, ದರೋಡೆಗಳು, ಮಾರಣಹೋಮಗಳು .. ಪ್ರಸ್ತುತ ನಡೆಯುತ್ತಿರುವ ದೌರ್ಜನ್ಯಗಳು, ದರೋಡೆಗಳು, ಮಾರಣಹೋಮಗಳು .. ಭವಿಷ್ಯತ್ನಲ್ಲಿ ನಡೆಯಲಿರುವ ದೌರ್ಜನ್ಯಗಳು, ದರೋಡೆಗಳು, ಮಾರಣಹೋಮಗಳು .. ಇವೆಲ್ಲಾ ಸಹ “ಮಕ್ಕಳ ಶಿಕ್ಷಣ” ಎನ್ನುವುದು ಸರಿಯಾಗಿಲ್ಲದೆ ಇರುವುದರಿಂದಲೇ, ಹುಟ್ಟಿದಾಗಿನಿಂದಲೇ ಸ್ವಚ್ಛವಾಗಿರುವ ಮಕ್ಕಳು ನಂತರ ಅಧ್ವಾನವಾಗಿ ಬೆಳೆಸಲ್ಪಟ್ಟು ಸ್ವಾರ್ಥಿಗಳಾಗಿ ಬದಲಾಗಿರುವದರಿಂದಲೇ ಸಮಾಜ ಹೀಗಿದೆ.
ಪ್ರಕೃತಿ ಮಡಿಲಿನಿಂದ ಬಂದ ಪ್ರತಿ ಶಿಶುವು ಕೂಡಾ ಸ್ವಚ್ಛವಾದದ್ದೇ ಮತ್ತು ಅತ್ಯಂತ ಶುದ್ಧವಾದದ್ದೇ. ಆದರೆ, ಅವರು ಮೂರ್ಖ ತಂದೆ-ತಾಯಿಯರ ಕೈಗಳಲ್ಲಿ .. ಮೂರ್ಖ ಸಂಘದ ಅಜ್ಞಾನ ವಾತಾವರಣದಲ್ಲಿ .. ಬೆಳೆದು ತಮ್ಮ ತಂದೆ-ತಾಯಿಯರನ್ನು ಹೋಲುವ ಮೂರ್ಖರಂತೆ ತಾವು ತಯಾರಾಗುತ್ತಿದ್ದಾರೆ. ಆದ್ದರಿಂದ, ಮಕ್ಕಳು ಸರಿಯಾದ ಶಿಕ್ಷಣ ಕಾರ್ಯಕ್ರಮದಲ್ಲಿರುವ ಕೆಲವು ಅಂಶಗಳನ್ನು ಪರಿಶೀಲಿಸೋಣ :
* ಶಿಶು ಅವಸ್ಥೆಯಲ್ಲಿರುವಾಗ ಸರಿಯಾದ ಆಹಾರ ನೀಡಬೇಕು; ಅಂದರೆ, ಕೇವಲ ಸಸ್ಯಾಹಾರವನ್ನು ಮಾತ್ರವೇ ಅಭ್ಯಾಸವನ್ನಾಗಿ ಮಾಡಬೇಕು.
* ತಾಯಿ ಎಂದಿಗೂ ಮಗುವನ್ನು ಬಿಟ್ಟು ಇರಬಾರದು. ವಿಧಿಯಿಲ್ಲದ ಪರಿಸ್ಥಿತಿಗಳಲ್ಲಿ ಹೊರತಾಗಿ, ಶಿಶುವು ತಂದೆ ತಾಯಿಯರ ಹತ್ತಿರವೇ ಬೆಳೆಯಬೇಕು.
* ಬಾಲ್ಯಾವಸ್ಥೆಯನ್ನು ಪ್ರವೇಶಿಸುತ್ತಲೇ ನೂತನ ಬಾಲಬಾಲಕಿಯರಿಗೆ ಬ್ರಹ್ಮಜ್ಞಾನ ಬೋಧಿಸಬೇಕು. ಅವರಿಂದ ಧ್ಯಾನಾಭ್ಯಾಸ ಮಾಡಿಸಬೇಕು ಮತ್ತು ಅವರ ಧ್ಯಾನಾನುಭವಗಳನ್ನು ಶ್ರದ್ಧೆಯಿಂದ ಆಲಿಸಬೇಕು.
* ಬಾಲ್ಯಾವಸ್ಥೆಯಲ್ಲಿ ಬ್ರಹ್ಮಜ್ಞಾನದ ಜೊತೆ ಅನೇಕಾನೇಕ ಲೋಕವಿದ್ಯೆಗಳನ್ನು ಕೂಡಾ ಪ್ರಾರಂಭ ಮಾಡಿಸಬೇಕು.
* ಬಾಲಬಾಲಕಿಯರನ್ನು “ಬಾಲಬಾಲಕಿಯರಾಗಿ” ನೋಡಬಾರದು! ಅವರು ಸಹ ಅನೇಕ ಜನ್ಮಗಳಿಂದ ಅನೇಕ ಅನುಭವಗಳನ್ನು ಹೊಂದಿದ ಅನೇಕ ಮಹಾತ್ಮರಾಗಿರಬಹುದು. ಕೆಲವು ಬಾಲಬಾಲಕಿಯರು ಮಾತ್ರವೇ ಪ್ರಪ್ರಥಮ ಮಾನವ ಜನ್ಮಗಳಲ್ಲಿ ಇರುವವರಾಗಿರುತ್ತಾರೆ. ಆದ್ದರಿಂದ, ಚಿಕ್ಕ ಮಕ್ಕಳ ಜೊತೆ ವ್ಯವಹರಿಸುತ್ತಿರುವಾಗ, ಹಿರಿಯರ ಜೊತೆ ಹೇಗೆ ವ್ಯವಹರಿಸುತ್ತೇವೆಯೋ ಹಾಗೇ ವ್ಯವಹರಿಸಬೇಕು! ಅವರ ಇಷ್ಟಾನಿಷ್ಟಗಳನ್ನು ಪ್ರತ್ಯೇಕವಾಗಿ ತಿಳಿದುಕೊಳ್ಳಬೇಕು. ಆದರೆ, ನಮ್ಮ ಇಷ್ಟಾನಿಷ್ಟಗಳನ್ನು ಅವರ ಮೇಲೆ ಸ್ವಲ್ಪವೂ ಹೇರಬಾರದು.
* ಮಕ್ಕಳನ್ನು ನಿರ್ಭಯರನ್ನಾಗಿಸುವುದು ಹಿರಿಯರ ಪ್ರಥಮ ಕರ್ತವ್ಯ! ಅವರನ್ನು ಸರ್ವವಿದ್ಯಾ ಪಾರಂಗತರಾಗಿ, ಸಕಲ ಕಲಾಕೋವಿದರಾಗಿ ಮಾಡಿ, ಪರಿಪೂರ್ಣರ ನ್ನಾಗಿಸುವುದೇ ಉದ್ದೇಶ.
* ಇಂದಿನ ಪಾಠಶಾಲೆಗಳೆಲ್ಲಾ ಅಂದಿನ ಗುರುಕುಲಗಳಾಗಿ ಬದಲಾಗಬೇಕು! ಅಂದಿನ ಗುರುಕುಲಗಳಲ್ಲಿ ಧ್ಯಾನ, ಆತ್ಮಜ್ಞಾನ, ಗುರುಸೇವೆ .. ಎನ್ನುವುದು ಪ್ರಥಮ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಇಂದಿನ ಶಾಲೆಗಳಲ್ಲಿ ಕೂಡಾ ಅವೆಲ್ಲಾ ಪುನಃ ಆ ಸ್ಥಾನವನ್ನು ಆಕ್ರಮಿಸಬೇಕು.
* ಮಕ್ಕಳು ಅನೇಕಾನೇಕ ಪ್ರಶ್ನೆಗಳನ್ನು ಹಾಕುತ್ತಿರುತ್ತಾರೆ. ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದಿದ್ದರೆ ಹೇಳಬೇಕು; ತಿಳಿಯದಿದ್ದರೆ ತಿಳಿದವರ ಹತ್ತಿರ ಅವರನ್ನು ಕಳುಹಿಸಬೇಕು. ಅಷ್ಟೇ ಹೊರತು ಅವರ ಜ್ಞಾನದಾಹದ ಮೇಲೆ ಮೂರ್ಖರಂತೆ ತಣ್ಣೀರು ಎರಚಬಾರದು!
* ಮಕ್ಕಳಲ್ಲಿ “ಸ್ಪರ್ಧಾತತ್ವ”ದ ಜೊತೆ “ಸ್ಪರ್ಧೆ ಇಲ್ಲದ ತತ್ವ” ಕೂಡಾ ಸರಿಸಮಾನವಾಗಿ ವೃದ್ಧಿಗೊಳಿಸಬೇಕು!
* ಮಾನವ ಜೀವನ ಅಥವಾ ಯಾವ ಪ್ರಾಣಿ ಜೀವನವಾದರೂ ಎಂದಿಗೂ ಏಕಾಂತವೇ. ಆದ್ದರಿಂದ, ಆಗಾಗ ಮಕ್ಕಳನ್ನು ಏಕಾಂತವಾಗಿ ಬಿಟ್ಟುಬಿಡಬೇಕು.
ಮುಂಬರುವ ವಿಶ್ವ ಏಕತ್ವಕ್ಕೆ ಚಿಕ್ಕಮಕ್ಕಳಲ್ಲಿ ಬಾಲ್ಯದಲ್ಲೇ ಬೀಜ ಹಾಕಬೇಕಾದರೆ ಪ್ರತಿಯೊಬ್ಬ ತಂದೆ-ತಾಯಿ ಸಹ ಪ್ರಕೃತಿ ಪರವಾದ ನಿಜವಾದ ತಂದೆ-ತಾಯಿಯರಂತೆ ಬದಲಾದ ದಿನ ಈ ಭುವಿಯು ದಿವಿಯಾಗಿ ಬದಲಾಗುತ್ತದೆ!
Recent Comments