“ತಡ ಮಾಡುವುದರಿಂದ ಅಮೃತವೂ ವಿಷವಾಗಬಹುದು”
“ಬಾಲಸ್ತಾವತ್ಕ್ರೀಡಾಸಕ್ತಃ
ತರುಣಸ್ತಾವತ್ತರುಣೀಸಕಃ |
ವೃದ್ಧಸ್ತಾವಚ್ಚಿಂತಾ ಸಕ್ತಃ
ಪರಮೇ ಬ್ರಹ್ಮಣಿ ಕೋಪಿ ನ ಸಕ್ತಃ ||”
“ಬಾಲ್ಯವೆಲ್ಲಾ ಆಟಗಳಿಂದ ಕಳೆದುಹೋಗುತ್ತದೆ,
ಯೌವನದಲ್ಲಿ ಕಾಮ ಸಂಬಂಧವಾದ ವಿಷಯಾಸಕ್ತಿಯಲ್ಲಿ ಮುಳುಗಿರುತ್ತೇವೆ,
ಮುದಿತನದಲ್ಲಿ ಅನೇಕ ಚಿಂತೆಗಳಿಂದ ಕುಂದಿಹೋಗುವುದು ಸಹಜವೇ
ಪರಬ್ರಹ್ಮನ ಮೇಲೆ ಯಾರೂ ಆಸಕ್ತಿಯನ್ನು ತೋರಿಸುತ್ತಿಲ್ಲ!”
ಮನುಷ್ಯನ ಜೀವನದ ಹಂತಗಳು ಮುಖ್ಯವಾಗಿ ಮೂರು
ಬಾಲ್ಯ, ಯೌವನ, ವಾರ್ಧಕ್ಯ.
ಬಾಲ್ಯ, ಯೌವನದ ಹಂತದಲ್ಲಿರುವುದು “ಸರಸ ಸಲ್ಲಾಪದ ಸಂಭಾಷಣೆಗಳು”.
ಆದರೆ, ವಾರ್ಧಕ್ಯದಲ್ಲಿರುವುದು ಮುಖ್ಯವಾಗಿ “ಬಿಕ್ಕಟ್ಟುಗಳು”
ಸಂಭಾಷಣೆಯಲ್ಲಿ ಪೂರ್ತಿಯಾಗಿ ಮುಳುಗಿದರೆ, ಅನಂತರ
ಬಿಕ್ಕಟ್ಟುಗಳಲ್ಲಿ ಪೂರ್ತಿಯಾಗಿ ಕೊಚ್ಚಿಕೊಂಡು ಹೋಗುವುದು ತಪ್ಪುವುದಿಲ್ಲ.
ಎಷ್ಟೇ ಸಂಭಾಷಣೆಗಳಲ್ಲಿ ತೊಡಗಿದ್ದರೂ, ಸಂಭಾಷಣೆಗಳ ಜೊತೆಜೊತೆಯಲ್ಲಿ
ಆತ್ಮಜ್ಞಾನವನ್ನೂ ಸಹ ವೃದ್ಧಿಸಿಕೊಳ್ಳುತ್ತಾ ಹೋದರೆ, ಜೀವನದ
ಅಂತಿಮ ಹಂತದಲ್ಲಿ “ಬಿಕ್ಕಟ್ಟುಗಳು” ಎನ್ನುವುದು ಇರುವುದಿಲ್ಲ.
“ಶುಭಸ್ಯ ಶೀಘ್ರಂ”, “ತಡಮಾಡುವುದರಿಂದ ಅಮೃತವೂ ವಿಷವಾದೀತು”
ವಾರ್ಧಕ್ಯ ಹಂತವು ಬರುವುದಕ್ಕಿಂತಾ ಮುಂಚೆಯೇ, ಮರಣ
ಸಮಯ ಸನ್ನಿಹಿತವಾಗುವುದಕ್ಕಿಂತಾ ಮುಂಚೆಯೇ
ಬಾಲ್ಯದಲ್ಲೇ, ಯೌವನದಲ್ಲೇ
ಆತ್ಮಜ್ಞಾನ ಪ್ರಜ್ಞೆಯನ್ನು ಸಂಪಾದಿಸಿಕೊಳ್ಳಲೇಬೇಕು
ಯಾವ ರೀತಿಯಲ್ಲಿ ಬರುತ್ತದೆ ಆತ್ಮಜ್ಞಾನ?
ಕೇವಲ “ಧ್ಯಾನ ಸಾಧನೆಯ” ಮೂಲಕ.
“ಅನ್ಯಥಾ ಶರಣಂ ನಾಸ್ತಿ”
Recent Comments