“ನನ್ನ ಏಕೈಕ ಬಯಕೆ”
ಪತ್ರೀಜಿ ವಾಣಿ
ನನ್ನ ಏಕಮಾತ್ರ ಬಯಕೆ .. ನನ್ನ ಏಕೈಕ ಕೆಲಸ .. ನನ್ನ ಏಕಮಾತ್ರ ಗುರಿ .. ನನ್ನ ಏಕೈಕ ಕನಸು ..
ಅಹಿಂಸೆಯಿಂದ ಕೂಡಿದ ಭೂಮಾತೆಯ ಸಾಕ್ಷಾತ್ಕಾರವನ್ನು ಕಣ್ಣಾರೆ ನೋಡುವುದೇ.
ಕೇವಲ “ತಿಂಡಿ”ಗಾಗಿ ಪ್ರಾಣಿಕುಲವನ್ನು, ಪಕ್ಷಿಜಾತಿಯನ್ನು, ಮೀನುಗಳನ್ನು ಕ್ರೂರಾತಿಕ್ರೂರವಾಗಿ ಕೊಂದು ತಿನ್ನುತ್ತಿರುವ
ಮಾನವಕುಲದ ಆಟವಿಕ, ವಿಕೃತ, ಅನಾಗರಿಕ ನಡವಳಿಕೆಗಳನ್ನು ನೋಡಿ ಭೂಮಾತೆ ತುಂಬಾ ನೊಂದುಕೊಳ್ಳುತ್ತಿದ್ದಾಳೆ
ಪ್ರಸ್ತುತ ಸಮಯದಲ್ಲಿ ಭೂಮಂಡಲ ಒಂದು ಮಹಾನರಕಕೂಪದಂತಾಗಿದೆ
ಇದು ಒಂದು ಮಹಾಸ್ವರ್ಗಧಾಮದ ಹಾಗೆ ತಯಾರಾಗಬೇಕು
ಶೋಕತಾಳದ ಭೂಮಾತೆಯನ್ನು ಸಮಾಧಾನಗೊಳಿಸುವುದು
ಭೂಮಾತೆಯ ಮಕ್ಕಳಾದ ನಮ್ಮೆಲ್ಲರ ಹೊಣೆಗಾರಿಕೆಯೂ ಹೌದು
ಹಿಮಾಲಯದ ಗಾತ್ರದಷ್ಟು ಅಧಿಕವಾಗುತ್ತಿರುವ ಮಾನವಕುಲದ ಅಮಾನುಷ ರಾಕ್ಷಸ ನಡವಳಿಕೆಗಳಿಂದ
ಭೂಮಾತೆಯನ್ನು ರಕ್ಷಿಸುವುದೇ ನಮ್ಮ ಚಳವಳಿಯ ಗುರಿ
ಇದಕ್ಕಾಗಿ … ಧ್ಯಾನಪ್ರಚಾರವನ್ನು ತೀವ್ರಗೊಳಿಸಬೇಕು
ಏಕೆಂದರೆ
“ಧ್ಯಾನ”ದಿಂದ ಮಾತ್ರವೇ ಪ್ರತಿಯೊಬ್ಬರೂ ತಮ್ಮಲ್ಲಿರುವ ದಿವ್ಯತ್ವವನ್ನು ತಿಳಿದುಕೊಳ್ಳುತ್ತಾರೆ
ಮತ್ತು “ದಿವ್ಯಜ್ಞಾನ ಪ್ರಕಾಶ”ವನ್ನು ಪಡೆದವರೇ ಹಿಂಸಾತ್ಮಕ ಕ್ರೂರನಡವಳಿಕೆಗಳಿಂದ ಹೊರಬರುತ್ತಾರೆ
“ಸಕಲ ಪ್ರಾಣಿಕುಲ ಎಲ್ಲಾಕೂಡಾ ನಮ್ಮಂತೆ ಆತ್ಮಸ್ವರೂಪವಾದವುಗಳೇ” ಎಂದು ಮಾನವರು ತಿಳಿದುಕೊಳ್ಳಲೇಬೇಕು
“ತಮಗೆ ಸರಿಯಾದ, ಶಾಸ್ತ್ರೀಯವಾದ ಆಹಾರ .. ಸಸ್ಯಾಹಾರವೇ” ಎಂದು ಮಾನವರು ಗುರ್ತಿಸಲೇಬೇಕು
ಆತ್ಮಶಾಸ್ತ್ರ ಅವಗಾಹನೆಯ ಮೂಲಕ ತಮ್ಮ ಬುದ್ಧಿಯನ್ನು ಸರಿಮಾಡಿಕೊಂಡಿರುವಂತಹ ವಿಚಕ್ಷಣಾಜ್ಞಾನಪಡೆದವರು ಮಾತ್ರವೆ
ಕೇವಲ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಮೂರ್ಖರ ಬುದ್ಧಿಯನ್ನು ಸರಿಮಾಡಬಲ್ಲರು
ನೀವು “ಧ್ಯಾನಯೋಗಿಗಳು” ಆಗಿರಬಹುದು, ಆದರೆ .. ನೀವು ಸಸ್ಯಾಹಾರಿಗಳಾದರೆ ಮಾತ್ರವೇ ನಾನು ನಿಮಗೆ ನಮಸ್ಕರಿಸುತ್ತೇನೆ
ನೀವು “ದಿವ್ಯದೃಷ್ಟಿ ಇರುವವರು” ಆಗಿರಬಹುದು. ಆದರೆ .. ನೀವು ಸಸ್ಯಾಹಾರಿಗಳಾದರೆ ಮಾತ್ರವೇ ನಾನು ನಿಮಗೆ ನಮಸ್ಕರಿಸುತ್ತೇನೆ
ನಿಮ್ಮ ‘ಕುಂಡಲಿನಿ’ ಜಾಗೃತವಾಗಿರಬಹುದು. ಆದರೆ .. ನೀವು ಸಸ್ಯಾಹಾರಿಗಳಾದರೇನೆ ನಾನು ನಿಮಗೆ ನಮಸ್ಕರಿಸುತ್ತೇನೆ
ನಿಮ್ಮ ಹತ್ತಿರ ಕೋಟ್ಯಾಂತರ ಲೋಕಗಳ ಜ್ಞಾನವಿರಬಹುದು, ಆದರೆ .. ನೀವು ಸಸ್ಯಾಹಾರಿಗಳಾದರೇನೆ ನಾನು ನಿಮಗೆ ನಮಸ್ಕರಿಸುತ್ತೇನೆ
ನೀವು ಸೂಕ್ಷ್ಮಲೋಕವಿಹಾರ ಮಾಡಿರಬಹುದು, ಆದರೆ .. ನೀವು ಸಸ್ಯಾಹಾರಿಗಳಾದರೆ ಮಾತ್ರವೇ ನಾನು ನಿಮಗೆ ನಮಸ್ಕರಿಸುತ್ತೇನೆ
ನೀವು ಆತ್ಮಶಾಸ್ತ್ರಜ್ಞರಾಗಿರಬಹುದು, ಆದರೆ .. ನೀವು ಸಸ್ಯಾಹಾರಿಗಳಾದರೆ ಮಾತ್ರವೇ ನಾನು ನಿಮಗೆ ನಮಸ್ಕರಿಸುತ್ತೇನೆ
ನಿಜಕ್ಕೂ ನೀವು ಯಾರು ಎನ್ನುವುದು ನನಗೆ ಮುಖ್ಯವಲ್ಲ ..
“ನೀವು ಪ್ರಾಣಿಸೋದರರ ಜೊತೆ ದಯೆಯಿಂದ ಕೂಡಿದ ಮಿತ್ರರು, ಅವುಗಳ ಹಿತೈಷಿಗಳು ಹೌದಾ, ಅಲ್ಲವಾ?” ಎನ್ನುವುದೇ
ನನಗೆ ಮುಖ್ಯ
ಭೂಮಾತೆಯ ಮಕ್ಕಳಾದ ಪ್ರಾಣಿಗಳು ಭಯಂಕರವಾದ ಸಾವಿನ ರೋಧನೆಗಳಿಂದ ವಿಮುಕ್ತಿ ಹೊಂದಿ, ನಮ್ಮ ಭೂಮಾತೆಯು ತನ್ನ ಕಿರುನಗುವಿನಿಂದ ನಮ್ಮನ್ನು ಆಶೀರ್ವಾದ ನೀಡುವವರೆಗೂ ನಮ್ಮ “ಅಹಿಂಸಾಧರ್ಮ ಚಳವಳಿ”
ನಿಲ್ಲುವುದಿಲ್ಲ
ಈ ಭೂಮಿಯ ಮೇಲಿರುವ ಕಟ್ಟಕಡೆಯ (ಕೊನೆಯ) ವ್ಯಕ್ತಿಯು ಸಸ್ಯಾಹಾರಿಯಾಗಿ ಪರಿವತನೆ ಆಗುವ ತನಕ,
ನಾನು ಈ ಭೂಮಿಯ ಮೇಲೆ ಜೀವಿಸಿರುತ್ತೇನೆ
ಇದೇ ನನ್ನ ದೃಢವಾದ ನಿರ್ಣಯ
Recent Comments